ತಾಯಿ ಮಕ್ಕಳ ಬಾಂಧವ್ಯ ಈ ರೀತಿ ಇರುತ್ತದೆ. ತನ್ನ ಮಗು ಹೊಟ್ಟೆಯಲ್ಲಿ ಇರುವಾಗಲೇ ಆ ಮಗುವಿನ ಬಗ್ಗೆ ತಾಯಿಯ ಮನಸ್ಸಿನಲ್ಲಿ ಆಸೆ ಮೂಡಿರುತ್ತದೆ. ಈ ಪ್ರಪಂಚದ ಎಲ್ಲರಿಗಿಂತಲೂ ಅತಿ ಹೆಚ್ಚಿನ ಬಾಂಧವ್ಯವನ್ನು ತಾಯಿ ತನ್ನ ಕಂದನ ಜೊತೆ ಹೊಂದಿರುತ್ತಾಳೆ. ಮಗುವನ್ನು ಹೆತ್ತ ಬಳಿಕವೂ ಕೂಡ ಮಕ್ಕಳ ಲಾಲನೆ ಪಾಲನೆ ಪೋಷಣೆ ವಿದ್ಯಾಭ್ಯಾಸ ಅವರ ಮದುವೆ ಅವರ ಮಕ್ಕಳು ಹೀಗೆ ತನ್ನ ಜೀವನ ಪೂರ್ತಿ ಮಕ್ಕಳಿಗಾಗಿ ಕಳೆದುಬಿಡುತ್ತಾಳೆ.
ಪ್ರಪಂಚದಲ್ಲಿ ಕೆಟ್ಟ ಮಕ್ಕಳು ಇರಬಹುದು ಆದರೆ ಎಂದು ಕೂಡ ಕೆಟ್ಟ ತಾಯಿ ಇರುವುದಿಲ್ಲ. ತಾಯಿಗಿಂತ ಬೇರೆ ದೇವರೇ ಇಲ್ಲ ಎನ್ನುವುದು ಅಕ್ಷರಶಃ ಸತ್ಯವಾದ ಮಾತು. ಇದುವರೆಗೆ ಒಬ್ಬ ತಾಯಿ ತನ್ನ ಮಕ್ಕಳಿಗಾಗಿ ಏನೆಲ್ಲಾ ತ್ಯಾಗ ಮಾಡಿರುತ್ತಾಳೆ, ಎಷ್ಟೆಲ್ಲಾ ಕಷ್ಟ ಪಟ್ಟಿರುತ್ತಾಳೆ, ಏನೆಲ್ಲಾ ಎದುರಿಸಿರುತ್ತಾಳೆ ಎನ್ನುವುದರ ಬಗ್ಗೆ ಸಾಕಷ್ಟು ಸ್ಟೋರಿಗಳನ್ನು ಕೇಳಿ ತಿಳಿದುಕೊಂಡಿದ್ದೇವೆ, ನೋಡಿ ತಿಳಿದು ಕೊಂಡಿದ್ದೇವೆ.
ಆದರೆ ಈಗ ಇನ್ನೊಂದು ಘಟನೆ ಜರುಗಿದೆ ಇದು ಇದೆಲ್ಲದಕ್ಕಿಂತ ಸ್ವಲ್ಪ ವಿಚಿತ್ರವಾಗಿದೆ ಆದರೆ ಇಲ್ಲಿ ಈ ತಾಯಿ ಮಾಡಿರುವ ಈ ಕೆಲಸದಿಂದಾಗಿ ನಿಮ್ಮ ಕರುಳು ಚುರುಕ್ ಎನ್ನದೇ ಇರದು. ಯಾಕೆಂದರೆ ಎಲ್ಲಾ ತಾಯಿಯಂತೆ ರಾಜಶ್ರೀ ಎನ್ನುವ ಈ ತಾಯಿ ಕೂಡ ಒಬ್ಬ ಗಂಡು ಮಗುವಿಗೆ ಜನ್ಮ ಕೊಟ್ಟಿರುತ್ತಾಳೆ. ಆ ಮಗು ಹುಟ್ಟಿದಾಗಲಿಂದ ಅದರ ವಿದ್ಯಾಭ್ಯಾಸದ ತನಕ ತನ್ನ ಕಣ್ಣಲ್ಲಿ ಕಣ್ಣಿಟ್ಟು ಮಗನನ್ನು ನೋಡಿಕೊಂಡು ಸಾಕಿರುತ್ತಾಳೆ.
ಪ್ರಥಮೇಶ್ ಎನ್ನುವ ಹೆಸರಿನ ಈ ಮಗ ತಾಯಿಗೆ ತಕ್ಕ ಮಗನಾಗಿ ವಿಧ್ಯಾಭ್ಯಾಸದಲ್ಲಿ ಬಹಳ ಮುಂದಿದ್ದ ಜೊತೆಗೆ ವಿದೇಶದಲ್ಲಿ ಕೂಡ ಕೆಲಸ ಗಿಟ್ಟಿಸಿಕೊಂಡಿದ್ದ. ಜರ್ಮನಿಗೆ ಹೋಗಿದ್ದ ಮಗ ಜೀವನದಲ್ಲಿ ಸಂತೋಷವಾಗಿ ಇದ್ದ ಆದರೆ ಇದ್ದಕ್ಕಿದ್ದ ಹಾಗೆ ಈ ತಾಯಿ ಮಗನ ಬದುಕಿನಲ್ಲಿ ವಿಧಿ ಆಟ ಆಡಿದೆ. ಮಗನಿಗೆ ಕ್ಯಾನ್ಸರ್ ಗಂಟೆಗಳು ಇರುವುದು ಮತ್ತು ಅವನ ಕ್ಯಾನ್ಸರ್ ಕೊನೆಯ ಸ್ಟೇಜ್ ಅಲ್ಲಿ ಇರುವುದು ತಿಳಿದು ಬಂದಿದೆ.
ಎಷ್ಟೇ ಪ್ರಯತ್ನ ಪಟ್ಟರು ಮಗ ಕ್ಯಾನ್ಸರ್ ವಿರುದ್ಧ ಹೋರಾಡಲು ಆಗುವುದಿಲ್ಲ. ಕ್ಯಾನ್ಸರ್ ಎನ್ನುವ ಮಹಾಮರಿಯೂ ಮಗನನ್ನು ನುಂಗುವುದಲ್ಲದೇ ಆ ತಾಯಿಯ ಸಂತೋಷವನ್ನು ನುಂಗಿಬಿಟ್ಟಿತ್ತು. ಮಗನು ಇಲ್ಲ ಎನ್ನುವ ಸತ್ಯವನ್ನು ಅರಿತ ತಾಯಿ, ಈಗ ಆ ಮಗನನ್ನು ಬದುಕಿಸಿಕೊಳ್ಳುವ ಕೆಲಸವನ್ನು ಬೇರೆ ರೀತಿಯಲ್ಲಿ ಮಾಡಿದ್ದಾಳೆ. ಅದೇನೆಂದರೆ ಅ-ಗ-ಲಿ-ದ ಮಗನ ವೀರ್ಯಾಣವನ್ನು ತೆಗೆದು ಬಾಡಿಗೆ ತಾಯ್ತನದ ಮೂಲಕ ಮತ್ತೆ ಮಕ್ಕಳನ್ನು ಪಡೆದಿದ್ದಾರೆ.
ಮೊದಲಿಗೆ ಕ್ಯಾನ್ಸರಿಂದ ಸ-ತ್ತ ವ್ಯಕ್ತಿಯ ವೀರ್ಯಗಳನ್ನು ತಮ್ಮ ದೇಹಕ್ಕೆ ಇಂಜೆಕ್ಟ್ ಮಾಡಿಸಿಕೊಳ್ಳಲು ಯಾರು ಕೂಡ ಒಪ್ಪದೆ ಹೋದರು 19 ವರ್ಷಗಳ ಒಬ್ಬ ಯುವತಿ ಇದಕ್ಕೆ ಮುಂದೆ ಬಂದು ಈ ತಾಯಿಯ ಕಷ್ಟವನ್ನು ನೋಡಲಾಗದೆ ಆಕೆಯ ಸಹಾಯಕ ನಿಲ್ಲುವ ಕೆಲಸ ಮಾಡಿದ್ದಾಳೆ. ಇದೀಗ ಆ ಹುಡುಗಿ ಒಂದು ಮುದ್ದಾದ ಹೆಣ್ಣು ಮಗು ಹಾಗೂ ಒಂದು ಗಂಡು ಮಗುವಿಗೆ ಜನ್ಮ ನೀಡಿದ್ದು ಮೂವರು ಸಹ ಆರೋಗ್ಯವಾಗಿದ್ದಾರೆ.
ಈಗ ರಾಜಶ್ರೀ ಅವರಿಗೆ ತನ್ನ ಮಗ ಮರಳಿ ದೊರೆತಷ್ಟು ಖುಷಿಯಾಗಿದ್ದು ಮಗನ ಜೊತೆ ಮಗಳು ಕೂಡ ಬಂದಿದ್ದಾಳೆ ಎಂದು ಸಂಭ್ರಮಿಸುತಿದ್ದಾರೆ. ಈ ಪ್ರಪಂಚದಲ್ಲಿ ನಾವೆಷ್ಟೇ ಬುದ್ಧಿವಂತ ಮನುಷ್ಯ ಪ್ರಾಣಿಗಳಾಗಿದ್ದರು ಪ್ರಕೃತಿಯ ಮುಂದೆ ನಾವೇನು ಅಲ್ಲವೇ ಅಲ್ಲ. ಆದರೆ ಪ್ರಕೃತಿಗೂ ಕೂಡ ಸವಾಲು ಹಾಕುವ ಕೆಲಸವನ್ನು ವಿಜ್ಞಾನ ಮಾತ್ರ ಮಾಡಬಲ್ಲದು. ಕೆಲವೊಮ್ಮೆ ವಿಜ್ಞಾನ ಮತ್ತು ಪ್ರಕೃತಿಯ ಹೋರಾಟದಲ್ಲಿ ಪ್ರಕೃತಿಯದೇ ಮೇಲುಗೈ ಆದರೂ ಕೂಡ ಒಮ್ಮೊಮ್ಮೆ ಈ ರೀತಿ ತಾಯಿ ಪ್ರೀತಿ ಮುಂದೆ ಅದು ಸೋತು ಬಿಡುತ್ತದೆ ಎನಿಸುತ್ತದೆ.