ಹಲವು ವರ್ಷದ ನಂತರ ಶುಭ ಸುದ್ದಿ ಹಂಚಿಕೊಂಡ ನಟಿ ಸುಧಾರಾಣಿ, ವಿಚಾರ ಕೇಳಿ ಸಂತಸ ಪಟ್ಟ ಅಭಿಮಾನಿಗಳು. ಏನದು ಗೊತ್ತ.?

ಹಲವು ವರ್ಷದ ನಂತರ ಸಿಹಿ ಸುದ್ದಿ ನೀಡಿದ ನಟಿ ಸುಧಾರಾಣಿ ವಿಷಯ ತಿಳಿದ್ರೆ ನೀವು ಸಹ ಖುಷಿ ಪಡುತ್ತೀರಾ ನಟಿ ಸುಧಾರಾಣಿ ಅವರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ ಈಗಲೂ ಸಹ ಚಿಕ್ಕ ವಯಸ್ಸಿನ ಹುಡುಗಿಯಂತೆ ಕಂಗೊಳಿಸುವಂತಹ ನಟಿ ಸುಧಾರಾಣಿ ಅವರು ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ರೀತಿಯಾದಂತಹ ಸಿನಿಮಾಗಳಲ್ಲಿ ನಟಿಸಿದ್ದಾರೆ. ಬಾಲ ನಟಿಯಾಗಿ ಹಾಗೆ ಪೋಷಕ ನಟಿಯಾಗಿ ತಾಯಿ ಪಾತ್ರದಲ್ಲಿ ಇನ್ನೂ ಅನೇಕ ರೀತಿಯಾದಂತಹ ಪಾತ್ರಗಳಿಗೆ ಜೀವ ತುಂಬಿಸುವಂತಹ ಕೆಲಸವನ್ನು ನಟಿ ಸುಧಾರಾಣಿ ಅವರು ಮಾಡಿದ್ದಾರೆ. ಸುಧಾರಾಣಿ ಅವರಿಗೆ 51 ವರ್ಷ ವಯಸ್ಸಾಗಿದ್ದರು ಸಹ ಅವರು ಇನ್ನೂ ಚಿಕ್ಕ ಹುಡುಗಿಯಂತೆ ಕಾಣುತ್ತಾರೆ ಅಷ್ಟೇ ಎನರ್ಜಿಯನ್ನು ಅವರು ಈಗಲೂ ಸಹ ಇಟ್ಟುಕೊಂಡಿದ್ದಾರೆ.

WhatsApp Group Join Now
Telegram Group Join Now

ಕನ್ನಡ ಚಿತ್ರರಂಗಕ್ಕೆ ಪಾದರ್ಪಣೆಯನ್ನು ಮಾಡಿದಂತಹ ಸುಧಾರಾಣಿ ಅವರು ಪ್ರಾರಂಭದಲ್ಲಿ ಬಾಲ ನಟಿಯಾಗಿ ನಟಿಸಿದರು ನಂತರ ಅವರು ಆನಂದ್ ಎನ್ನುವಂತಹ ಸಿನಿಮಾದ ಮೂಲಕ ಹೀರೋಯಿನ್ ಆಗಿ ಪರಿಚಿತರಾದರು. ಇವರು ಆನಂದ್ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಮತ್ತು ಸುಧಾರಾಣಿ ಜೋಡಿಯನ್ನು ಎಲ್ಲರೂ ಸಹ ಇಷ್ಟಪಟ್ಟು ಇವರ ಅಭಿನಯವನ್ನು ಮೆಚ್ಚಿಕೊಂಡಿದ್ದರು. ಆನಂದ್ ಸಿನಿಮಾದ ಮೂಲಕ ಪ್ರಖ್ಯಾತಿಯನ್ನು ಪಡೆದಂತಹ ಇವರು ಅನಂತರದಲ್ಲಿ ಸಾಕಷ್ಟು ಸಿನಿಮಾ ಆಫರ್ ಗಳು ಇವರಿಗೆ ಒದಗಿ ಬಂದವು. ಆಗಿನ ಕಾಲದಲ್ಲಿ ಸಾಕಷ್ಟು ಹೀರೋಗಳ ಜೊತೆಯಲ್ಲಿ ನಟಿಸಿರುವಂತಹ ಇವರು ಇದೀಗ ಕಿರುತೆರೆಯಲ್ಲೂ ಸಹ ಕಾಣಿಸಿಕೊಳ್ಳಲಿದ್ದಾರೆ.

ಸಿನಿಮಾಗಳಲ್ಲಿ ನಟಿಸಿರುವಂತಹ ಸುಧಾರಾಣಿ ಸೀರಿಯಲ್ ಗಳಲ್ಲಿ ಯಾವುದೇ ರೀತಿಯಾದಂತಹ ಪಾತ್ರಗಳಲ್ಲಿ ಮುಖ್ಯ ಪಾತ್ರಗಳಲ್ಲಿ ನಟಿಸಿರಲಿಲ್ಲ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದಂತಹ ಜೊತೆ ಜೊತೆಯಲಿ ಧಾರವಾಹಿಯಲ್ಲಿ ಗೆಸ್ಟ್ ರೋಲ್ ಮಾಡಿದ್ದರು ತದನಂತರದಲ್ಲಿ ಯಾವುದೇ ರೀತಿಯಲ್ಲಿ ಧಾರಾವಾಹಿಗಳಲ್ಲಿ ನಟಿಸಿರಲಿಲ್ಲ. ಇದೀಗ ಶ್ರೀರಸ್ತು ಶುಭಮಸ್ತು ಎನ್ನುವಂತಹ ಧಾರವಾಹಿಯಲ್ಲಿ ಮುಖ್ಯ ಪಾತ್ರ ಒಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ರೀತಿಯಾದಂತಹ ಧಾರಾವಾಹಿಗಳು ಸದ್ದು ಮಾಡುತ್ತಿವೆ.

ಈ ಎಲ್ಲಾ ಧಾರವಾಹಿ ಗಳಲ್ಲಿಯೂ ಸಹ ಲವ್ ಸ್ಟೋರಿ ಹಾಗೆಯೇ ಫ್ಯಾಮಿಲಿ ಗೆ ಸಂಬಂಧ ಪಟ್ಟಂತಹ ಕೆಲವೊಂದು ಮಾಹಿತಿಗಳು ಇರುತ್ತದೆ ಆದರೆ ಶ್ರೀರಸ್ತು ಶುಭಮಸ್ತು ಎನ್ನುವಂತಹ ಧಾರಾವಾಹಿಯಲ್ಲಿ ಮಹಿಳಾ ಪ್ರಧಾನವಾದ ಕಥೆಯನ್ನು ಒಳಗೊಂಡಿದೆ ಸದ್ಯದಲ್ಲೇ ಪ್ರಸಾರವಾಗಲು ಸಜ್ಜಾಗುತ್ತಿದೆ. ಈ ಒಂದು ಧಾರಾವಾಹಿಯಲ್ಲಿ ಸುಧಾರಾಣಿ ಅವರು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾಗಳಲ್ಲಿ ನಟಿಸಿ ಸೈನಿಸಿಕೊಂಡಿರುವಂತಹ ಇವರು ಧಾರವಾಹಿ ಲೋಕದಲ್ಲಿಯೂ ಸಹ ತಮ್ಮ ಛಾಪನ್ನು ಮೂಡಿಸುತ್ತಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ, ಜೀ ಕನ್ನಡದಲ್ಲಿ ಪ್ರಸಾರವಾಗುತ್ತಾ ಇರುವಂತಹ ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಸುಧಾರಾಣಿ ಅವರು ತುಳಸಿ ಎಂಬುವಂತಹ ಪಾತ್ರವನ್ನು ನಿಭಾಯಿಸಲಿದ್ದಾರೆ.

ಸೀರಿಯಲ್ ನಲ್ಲಿ ಇವರು ಇಬ್ಬರು ಮಕ್ಕಳ ತಾಯಿಯಾಗಿದ್ದು ಕುಟುಂಬಕ್ಕಾಗಿ ಎಲ್ಲವನ್ನು ತ್ಯಾಗ ಮಾಡುವಂತಹ ಒಂದು ಪಾತ್ರ ಇವರದ್ದಾಗಿದೆ ಸಾಮಾನ್ಯವಾಗಿ ಅತ್ತೆ ಸೊಸೆ ನಡುವಿನ ಕಿತ್ತಾಟದ ಕಥೆ ಧಾರವಾಹಿಯಲ್ಲಿ ಇರುತ್ತದೆ ಆದರೆ ಈ ಧಾರಾವಾಹಿಯಲ್ಲಿ ಅತ್ತೆ ಪಾತ್ರಕ್ಕೆ ಬೆನ್ನೆಲುಬಾಗಿ ಸೊಸೆಯು ನಿಲ್ಲುತ್ತಾಳೆ. ಹೊರ ಜಗತ್ತಿಗೆ ತುಳಸಿಯನ್ನು ಪರಿಚಯಿಸುವವಳೆ ಆಕೆಯ ಸೊಸೆ. ಕಥೆ ವಿಭಿನ್ನವಾಗಿದೆ ಎಂದು ಸುಧಾರಾಣಿಯವರು ಸ್ವತಹ ತಿಳಿಸಿದ್ದಾರೆ. ಕಳೆದ ನಾಲ್ಕು ದಶಕಗಳಿಂದಲೂ ಕನ್ನಡ ಚಿತ್ರರಂಗದಲ್ಲಿ ಸಕ್ರಿಯ ರಾಗಿರುವಂತಹ ಸುಧಾರಣೆ ಅವರು ಬಾಲ ನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟರು ನಂತರದಲ್ಲಿ ಆನಂದ್, ಮನೆವಚಿದ ಹುಡುಗಿ, ದೇವತಾ ಮನುಷ್ಯ, ರಣರಂಗ, ಪಂಚಮವೇದ, ಆಸೆಗೊಬ್ಬ ಮೀಸೆಗೊಬ್ಬ, ಸ್ವಾತಿ, ಕಾವ್ಯ, ಸ್ಪರ್ಶ, ಪ್ರೀತಿ ಪ್ರೇಮ ಪ್ರಣಯ ಮುಂತಾದ ಅನೇಕ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ ಕಿರುತೆಯಲ್ಲೂ ಸಹ ಮಿಂಚಲು ರೆಡಿಯಾಗಿದ್ದಾರೆ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now