ನಮ್ಮ ದೇಹದಲ್ಲಿ ಬಾಯಿ ಮತ್ತು ಹಲ್ಲುಗಳಿಗೆ ಹೆಚ್ಚಿನ ಪ್ರಾಮುಖ್ಯತೆಯನ್ನು ಕೊಡಬೇಕು ಏಕೆಂದರೆ ನಮ್ಮ ದೇಹಕ್ಕೆ ಬೇಕಾದಂತಹ ಸರಿಯಾದ ಪೋಷಕಾಂಶಗಳು ದೊರೆಯಬೇಕು ಎಂದರೆ ನಮ್ಮ ಬಾಯಲ್ಲಿ ಹಲ್ಲುಗಳ ಮುಖಾಂತರ ಆಹಾರವನ್ನು ಚೆನ್ನಾಗಿ ಜಗಿದು ತಿನ್ನಬೇಕು. ಆದ್ದರಿಂದ ನಮ್ಮ ದೇಹದ ಭಾಗಗಳಲ್ಲಿ ಬಾಯಿ ಮತ್ತು ಹಲ್ಲುಗಳು ಹೆಚ್ಚಿನ ಪ್ರಾಮುಖ್ಯತೆಯನ್ನು ವಹಿಸುತ್ತದೆ. ನಾವು ನಮ್ಮ ಬಾಯಿ ಮತ್ತು ಹಲ್ಲುಗಳನ್ನು ತುಂಬಾ ಸಂರಕ್ಷಣೆಯಿಂದ ಕೂಡಿರುವ ಹಾಗೆ ನೋಡಿಕೊಳ್ಳಬೇಕು. ನಮ್ಮ ದೇಹದ ಆರೋಗ್ಯವು ನಮ್ಮ ಬಾಯಿ ಮತ್ತು ಹಲ್ಲುಗಳಲ್ಲಿ ಅಡಗಿದೆ ಎಂದು ಹೇಳಿದರೆ ತಪ್ಪಾಗಲಾರದು. ಆದ್ದರಿಂದ ಆದಷ್ಟು ಸಂರಕ್ಷಣೆಯನ್ನು ಮಾಡಿಕೊಳ್ಳುವುದು ನಮ್ಮ ಕರ್ತವ್ಯ. ಕೆಲವೊಬ್ಬರು ಇದನ್ನು ನಿರ್ಲಕ್ಷ್ಯ ಮಾಡುತ್ತಾರೆ ಆದ್ದರಿಂದ ಅವರ ಹಲ್ಲುಗಳು ಹಾಗೆ ಬಾಯಿಯಲ್ಲಿ ಅನೇಕ ರೀತಿಯಾದಂತಹ ಸಮಸ್ಯೆಗಳು ಕಂಡುಬರುತ್ತದೆ.
ಸರಿಯಾಗಿ ಬ್ರಷ್ ಮಾಡದೆ ಇರುವುದು ಹಾಗೆಯೇ ಹೆಚ್ಚಾಗಿ ಬ್ರಷ್ ಮಾಡುವುದರಿಂದಲು ನಮ್ಮ ಬಾಯಿಯ ಮೇಲೆ ಅಡ್ಡ ಪರಿಣಾಮವನ್ನು ಬೀರುತ್ತದೆ ಇದು ನಮ್ಮ ಅನಾರೋಗ್ಯಕ್ಕೆ ಕಾರಣವಾಗುತ್ತದೆ. ನಾವು ಯಾವಾಗಲೂ ಬೆಳಗ್ಗೆ ಎದ್ದ ನಂತರ ಹಲ್ಲನ್ನು ಉಜ್ಜಬೇಕು ನಂತರದಲ್ಲಿ ನಮ್ಮ ನಾಲಿಗೆಯನ್ನು ಸಹ ಚೆನ್ನಾಗಿ ಸ್ವಚ್ಛ ಮಾಡಿಕೊಳ್ಳಬೇಕು ಅದಕ್ಕೆ ನಾವು ಪ್ಲಾಸ್ಟಿಕ್ ಟಂಗ್ ಕ್ಲೀನರ್ ಅನ್ನು ಬಳಸಬಾರದು ಬದಲಾಗಿ ಸ್ಟೀಲ್ ಟಂಗ್ ಕ್ಲೀನರ್ ಬಳಸುವುದು ತುಂಬಾ ಒಳ್ಳೆಯದು. ನಾಲಿಗೆ ಬುಡದಿಂದ ನಾವು ಟಂಕ ಕ್ಲೀನ್ ಮಾಡಿಕೊಳ್ಳಬೇಕು ಏಕೆಂದರೆ ಅಲ್ಲಿ ಹೆಚ್ಚು ಕೊಳೆ ಅಥವಾ ಕಲ್ಮಶ ಎನ್ನುವಂಥದ್ದು ಶೇಖರಣೆಯಾಗುತ್ತದೆ ಇದು ನಮ್ಮ ಬಾಯಿಯಲ್ಲಿ ವಾಸನೆ ಬರುವುದಕ್ಕೆ ಕಾರಣವಾಗುತ್ತದೆ ತುಂಬಾ ಜನರಿಗೆ ಈ ಸಮಸ್ಯೆ ಕಂಡು ಬರುತ್ತಿದೆ ಆದ್ದರಿಂದ ದಿನದಲ್ಲಿ ಒಮ್ಮೆ ನಮ್ಮ ನಾಲಿಗೆಯನ್ನು ಶುದ್ಧಿ ಮಾಡಿಕೊಳ್ಳಬೇಕು. ಹೀಗೆ ನಾವು ಟಂಗ್ ಕ್ಲೀನ್ ಮಾಡಿಕೊಳ್ಳುವುದರಿಂದ ನಮ್ಮ ಬಾಯಿಯ ವಾಸನೆ ಕಡಿಮೆಯಾಗುತ್ತದೆ ಹಾಗೆಯೇ ನಮ್ಮ ನಾಲಿಗೆಯ ರುಚಿಯೂ ಸಹ ಹೆಚ್ಚುತ್ತದೆ.
ಬೆಳಿಗ್ಗೆ ಎದ್ದ ನಂತರ ನಾವು ಆಯಿಲ್ ಪುಲ್ಲಿಂಗ್ ಮಾಡಿಕೊಳ್ಳಬೇಕು ಹೀಗೆ ಮಾಡುವುದರಿಂದ ನಮ್ಮ ಸ್ವರದ ಶಕ್ತಿ ಹೆಚ್ಚಾಗುತ್ತದೆ ಹಾಗಾಗಿ ತುಂಬಾ ಮಾತನಾಡುವಂತಹವರು ಟೀಚರ್ಸ್, ಯಕ್ಷಗಾನ ಕಲಾವಿದರು, ಹಾಡುಗಾರರು ಇಂತವರಿಗೆ ಇದು ತುಂಬಾ ಉಪಯೋಗಕಾರಿ. ನಾಲಿಗೆ ಶುದ್ದಿಯಾಗಿ ನಮ್ಮ ಬಾಯಿಯ ರುಚಿ ಹೆಚ್ಚುತ್ತದೆ. ಬಾಯಿ ಮತ್ತು ಗಂಟಲು ಒಣಗುವಂತಹ ಸಮಸ್ಯೆ ಯಾರಿಗೆಲ್ಲ ಇದೆ ಅಂತಹವರಿಗೆ ಈ ಒಂದು ಆಯಿಲ್ ಪುಲ್ಲಿಂಗ್ ತುಂಬಾ ಉತ್ತಮವಾದದ್ದು. ಅಷ್ಟೇ ಅಲ್ಲದೆ ನಮ್ಮ ಹಲ್ಲು, ದಂತಗಳು ಸದೃಢವಾಗುವಂತೆ ಈ ಒಂದು ಆಯಿಲ್ ಪುಲ್ಲಿಂಗ್ ಮಾಡುತ್ತದೆ ಆದ್ದರಿಂದ ಇದು ತುಂಬಾ ಪ್ರಯೋಜನಕಾರಿ. ಕೆಲವರಲ್ಲಿ ಹಲ್ಲು ಜುಮ್ ಅನ್ನುವಂತಹ ಸಮಸ್ಯೆ ಇರುತ್ತದೆ ಅಂತಹವರಿಗೆ ಈ ಆಯಿಲ್ ಪುಲ್ಲಿಂಗ್ ಎನ್ನುವಂತಹದ್ದು ಶಾಶ್ವತವಾದಂತಹ ಪರಿಸರವನ್ನು ನೀಡುತ್ತದೆ.
ಹಲ್ಲು ನೋವು ಬರುವಂತಹ ಚಾನ್ಸಸ್ ತುಂಬಾ ಕಡಿಮೆ ಆಗುತ್ತದೆ. ಆಯಿಲ್ ಪುಲ್ಲಿಂಗ್ ಹೇಗೆ ಮಾಡಬೇಕು ಎಂದರೆ ಶುದ್ಧವಾದಂತಹ ಕೊಬ್ಬರಿ ಎಣ್ಣೆಯನ್ನು ಒಂದು ಟೇಬಲ್ ಸ್ಪೂನ್ ತೆಗೆದುಕೊಂಡು ಅದನ್ನು ಬೆಳಿಗ್ಗೆ ಎದ್ದ ನಂತರ ಬಾಯಲ್ಲಿ ಹಾಕಿಕೊಂಡು ಬಾಯಿ ಮುಕ್ಕಳಿಸಬೇಕು ಈ ಒಂದು ಆಯಿಲ್ ಪುಲ್ಲಿಂಗನ್ನು ನಾವು 20 ನಿಮಿಷಗಳ ಕಾಲ ಮಾಡಬೇಕು ನಿಮಗೆ ಸಮಯ ಇಲ್ಲವಾದರೆ ನೀವು ಎಣ್ಣೆಯನ್ನು ಬಾಯಲ್ಲಿ ಹಾಕಿಕೊಂಡು ಬೇರೆ ಕೆಲಸಗಳನ್ನು ಮಾಡಿಕೊಳ್ಳಬಹುದು. ಹೀಗೆ 20 ನಿಮಿಷಗಳ ಕಾಲ ಮಾಡಿಕೊಳ್ಳಬೇಕು ನಂತರ ನೀವು ಬಾಯಿಯಲ್ಲಿ ಇರುವಂತಹ ಎಣ್ಣೆ ಅಂಶವನ್ನು ಉಗಿದು ಸ್ವಲ್ಪ ಬೆಚ್ಚಗಿನ ನೀರಿನಿಂದ ಬಾಯಿ ಮುಕ್ಕಳಿಸಿ ಉಗಿಯಬೇಕು.