ನಮ್ಮ ದಕ್ಷಿಣ ಭಾರತದ ಆಹಾರಗಳು ವಿಭಿನ್ನ ಮತ್ತು ಪಾಕ ಪದ್ದತಿಯನ್ನು ಹೊಂದಿರುತ್ತದೆ ಬೇರೆ ಬೇರೆ ಮಸಾಲ ಪದಾರ್ಥಗಳ ಮಿಶ್ರಣವನ್ನು ಬಳಸಿಕೊಂಡು ಮಾಡಲಾಗುತ್ತದೆ ಆದ್ದರಿಂದ ಈ ಆಹಾರಗಳ ರುಚಿಯೇ ಬೇರೆ ಆಗಿರುತ್ತದೆ. ಇಲ್ಲಿ ಅನೇಕ ಆಹಾರಗಳು ತುಂಬಾನೇ ಬೇಗವಾಗಿ ಮತ್ತು ಸುಲಭವಾಗಿ ತಯಾರು ಮಾಡಿಕೊಳ್ಳಬಹುದಾಗಿದೆ ನಮ್ಮ ದಕ್ಷಿಣ ಭಾರತದ ಸಂಸ್ಕೃತಿಯೇ ಅಷ್ಟು ಶ್ರೀಮಂತವಾಗಿರುವ ಈ ಆಹಾರ ಪದ್ಧತಿಯು ಒಳ್ಳೆಯ ಘಮ ಮತ್ತು ರುಚಿಯನ್ನು ಹೆಚ್ಚಾಗಿ ಒಳಗೊಂಡಿರುತ್ತದೆ. ನಾವು ದಿನಾಲು ಸಹ ಬೇರೆ ಬೇರೆ ಹೊಸದಾದಂತಹ ತಿಂಡಿಯನ್ನು ಮಾಡಬೇಕು ಎಂದುಕೊಳ್ಳುವುದೇನೋ ನಿಜ ಮನೆಯಲ್ಲಿರುವಂತಹ ಎಲ್ಲರೂ ಸಹ ದಿನವು ಒಂದೇ ತರಹನಾದ ತಿಂಡಿಯನ್ನು ತಿನ್ನುವುದಿಲ್ಲ ಅದಕ್ಕಾಗಿ ವಿವಿಧ ರೀತಿಯಾದಂತಹ ತಿಂಡಿಗಳನ್ನು ನಾವು ಬೆಳಗಿನ ಸಮಯದಲ್ಲಿ ಮಾಡುತ್ತೇವೆ.
ಸಾಮಾನ್ಯವಾಗಿ ಎಲ್ಲರೂ ಸಹ ರೈಸ್ ಐಟಂಗಳನ್ನು ಮಾಡುತ್ತಾರೆ ಟೊಮೆಟೊ ರೈಸ್, ಪಲಾವ್, ರೈಸ್ ಬಾತ್, ಜೀರಾ ರೈಸ್, ಪಾಲಕ್ ರೈಸ್, ಘೀ ರೈಸ್ ಈ ರೀತಿಯಾಗಿ ಹಲವಾರು ರೀತಿಯಾದಂತಹ ರೈಸ್ ಪದಾರ್ಥಗಳಿಂದ ತಿಂಡಿಗಳನ್ನು ರೆಡಿ ಮಾಡುತ್ತಾರೆ. ಅಂತಹದ್ದೇ ಒಂದು ತಿಂಡಿಯನ್ನು ನಾವಿಲ್ಲಿ ತಿಳಿಸುತ್ತಿದ್ದೇವೆ ಆರೋಗ್ಯಕ್ಕೆ ಉತ್ತಮವಾಗಿರುವಂತಹ ಹಾಗೆಯೆ ಅತಿ ವೇಗವಾಗಿ ಮಾಡಬಹುದಾದಂತಹ ತರಕಾರಿ ಚಿತ್ರಾನ್ನ ಮಾಡುವಂತಹ ವಿಧಾನವನ್ನು ತಿಳಿಸುತ್ತೇವೆ. ಈ ಒಂದು ಚಿತ್ರಾನ್ನವನ್ನು ಮಾಡಲು ಮೊದಲಿಗೆ ನಾವು ಒಂದು ಬಾಣಲೆಯಲ್ಲಿ ನಾಲ್ಕರಿಂದ ಐದು ಟೇಬಲ್ ಸ್ಪೂನ್ ನಷ್ಟು ಎಣ್ಣೆಯನ್ನು ಹಾಕಿ ನಂತರ ಒಂದು ಟೇಬಲ್ ಸ್ಪೂನ್ ನಷ್ಟು ಸಾಸಿವೆ ಹಾಕಿ ಅದು ಸಿಡಿದ ನಂತರ ಎರಡು ಟೇಬಲ್ ಸ್ಪೂನ್ ಕಡಲೆ ಬೀಜವನ್ನು ಸೇರಿಸಿ, ನಿಮಗೆ ಕಡಲೆ ಬೀಜ ಕ್ರಿಸ್ಪಿಯಾಗಿ ಬೇಕು ಎಂದರೆ ಮೊದಲೇ ಎಣ್ಣೆಯಲ್ಲಿ ಕರಿದು ಸಪರೇಟ್ ಆಗಿ ತೆಗೆದು ಇಟ್ಟುಕೊಳ್ಳಬಹುದು.
ಕಡಲೆ ಬೀಜ ಫ್ರೈ ಆದ ನಂತರ ಒಂದು ಟೇಬಲ್ ಸ್ಪೂನ್ ನಷ್ಟು ಕಡಲೆಬೇಳೆ ಒಂದು ಟೇಬಲ್ ಸ್ಪೂನ್ ಉದ್ದಿನಬೇಳೆಯನ್ನು ಸೇರಿಸಿ ಫ್ರೈ ಮಾಡಿ ಹಾಗೆ ಅರ್ಧ ಇಂಚಿನಷ್ಟು ಶುಂಠಿಯನ್ನು ಚೆನ್ನಾಗಿ ಜಜ್ಜಿ ಸೇರಿಸಿ ಶುಂಠಿ ಸೇರಿಸುವುದರಿಂದ ಚಿತ್ರಾನ್ನದ ಫ್ಲೇವರ್ ತುಂಬಾ ಚೆನ್ನಾಗಿರುತ್ತೆ, ನಂತರ ಒಂದು ಮೀಡಿಯಂ ಗಾತ್ರದ ಈರುಳ್ಳಿಯನ್ನು ಸಣ್ಣದಾಗಿ ಕಟ್ ಮಾಡಿ ಸೇರಿಸಿ ಈರುಳ್ಳಿಯ ಜೊತೆಗೆ ಆರು ಹಸಿರುಣಸಿನಕಾಯಿಯನ್ನು ಕಟ್ ಮಾಡಿ ಹಾಕಿ ಈರುಳ್ಳಿ ಸ್ವಲ್ಪ ಫ್ರೈ ಆದ ನಂತರ ಸಣ್ಣ ಸಣ್ಣದಾಗಿ ಕಟ್ ಮಾಡಿರುವಂತಹ ಕಾಲು ಕಪ್ ನಷ್ಟು ಬೀನ್ಸ್ ಮತ್ತು ಕಾಲು ಕಪ್ ನಷ್ಟು ಕ್ಯಾರೆಟ್ ಅನ್ನು ಸೇರಿಸಿ ಚೆನ್ನಾಗಿ ಫ್ರೈ ಮಾಡಿ.
ಇದಕ್ಕೆ ನೀವು ಸ್ವಲ್ಪ ಉಪ್ಪನ್ನು ಸೇರಿಸಿದರೆ ತರಕಾರಿಗಳು ತುಂಬಾ ಬೇಗನೆ ಬೇಯುತ್ತದೆ. ನಂತರ ಇದಕ್ಕೆ ಕಾಲು ಕಪ್ ನಷ್ಟು ಕ್ಯಾಪ್ಸಿಕಂ ಹಾಗೆಯೇ ಸ್ವಲ್ಪ ಕರಿಬೇವಿನ ಸೊಪ್ಪನ್ನು ಸೇರಿಸಿ ಇದು ಫ್ರೈ ಆದ ನಂತರ ಅರ್ಧ ಟೇಬಲ್ ಸ್ಪೂನ್ ನಷ್ಟು ಅರಿಶಿಣ ಪುಡಿಯನ್ನು ಸೇರಿಸಿ ಕೊನೆಯದಾಗಿ ನೀವು ಕೊತ್ತಂಬರಿ ಸೊಪ್ಪನ್ನು ಸೇರಿಸಿ ಸ್ಟೌ ಆಫ್ ಮಾಡಿ ಚಿತ್ರಾನ್ನದ ಗೊಜ್ಜು ರೆಡಿಯಾಗುತ್ತದೆ. ಸ್ವಲ್ಪ ತಣಿದ ಮೇಲೆ ರೆಡಿ ಇರುವಂತಹ ಬಿಳಿ ಅನ್ನವನ್ನು ಸೇರಿಸಿ ಮಿಕ್ಸ್ ಮಾಡಿದರೆ ರುಚಿಕರವಾದಂತಹ ತರಕಾರಿ ಚಿತ್ರಾನ್ನ ರೆಡಿಯಾಗುತ್ತದೆ. ಈ ಚಿತ್ರಾನ್ನದ ವಿಧಾನ ನಿಮಗೆ ಇಷ್ಟವಾದರೆ ತಪ್ಪದೆ ನಮಗೆ ಕಾಮೆಂಟ್ಸ್ ಮೂಲಕ ತಿಳಿಸಿ.