ಮನೆಯಲ್ಲಿ ಮಹಿಳೆಯರು ದಿನನಿತ್ಯ ಬೆಳಗಿನ ತಿಂಡಿ ಏನು ಮಾಡಬೇಕು ಎನ್ನುವುದೇ ಒಂದು ಯೋಚನೆಯಾಗಿ ಇರುತ್ತದೆ ಆದರೆ ಈ ದಿನ ನಾವು ಹೇಳಲು ಹೊರಟಿರುವಂತಹ ಈ ಒಂದು ಪ್ಲೇನ್ ಕುಷ್ಕ ರೈಸ್ ಇದನ್ನು ಮಾಡುವುದರಿಂದ ಹೊಸ ರೀತಿಯಾದಂತಹ ತಿಂಡಿ ಆಗುತ್ತದೆ ಮತ್ತು ಇದು ಎಲ್ಲರಿಗೂ ಕೂಡ ಇಷ್ಟ ಆಗುತ್ತದೆ ಹಾಗಾದರೆ ಇದನ್ನು ಹೇಗೆ ಮಾಡಬೇಕು ಮತ್ತು ಯಾವುದೆಲ್ಲಾ ಪದಾರ್ಥಗಳು ಬೇಕಾಗುತ್ತದೆ ಎನ್ನುವುದರ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳುತ್ತಾ ಹೋಗೋಣ ಕೆಲವೊಬ್ಬರು ಕುಷ್ಕ ಎಂದರೆ ಇದು ಮಾಂಸ ಹಾರಿ ತಿಂಡಿ ಎಂದು ಭಾವಿಸುತ್ತಾರೆ ಆದರೆ ಈ ದಿನ ನಾವು ಹೇಳಲು ಹೊರಟಿರುವಂಥದ್ದು ಕೇವಲ ಮಸಾಲೆ ಬಳಸಿಕೊಂಡು ಅತಿ ಸುಲಭವಾಗಿ ಮತ್ತು ಬೇಗ ತಯಾರಿಸಬಹುದಾದಂತಹ ಕುಷ್ಕದ ಬಗ್ಗೆ.
ಆದ್ದರಿಂದ ಈ ಒಂದು ತಿಂಡಿಯನ್ನು ಪ್ರತಿಯೊಬ್ಬರು ಅಂದರೆ ಸಸ್ಯಹಾರಿಗಳು ಮತ್ತು ಮಾಂಸಹಾರಿಗಳು ಇಬ್ಬರೂ ಕೂಡ ಈ ಒಂದು ತಿಂಡಿಯನ್ನು ತಯಾರಿಸಿ ನಿಮ್ಮ ಮಕ್ಕಳಿಗೆ ಮನೆ ಮಂದಿಗೆ ಪ್ರತಿಯೊಬ್ಬರಿಗೂ ಕೂಡ ಕೊಟ್ಟು ಒಂದು ಮೆಚ್ಚುಗೆಯನ್ನು ಪಡೆದುಕೊಳ್ಳಿ ಕುಷ್ಕ ಮಾಡಲು ಬೇಕಾದಂತ ಪದಾರ್ಥಗಳು ಯಾವು ಎಂದರೆ ಈ ಕೆಳಕಂಡಂತಿದೆ ಮೊದಲನೆಯದಾಗಿ
1) ಬುಲೆಟ್ ಅಕ್ಕಿ ಎರಡು ಲೋಟ
2) ಎಣ್ಣೆ
3) ಲವಂಗ
4) ಚಕ್ಕೆ
5) ಬೆಳ್ಳುಳ್ಳಿ 10 ರಿಂದ 15 ಎಸಳು
6) ಶುಂಠಿ ಒಂದು ಇಂಚು
7) ಈರುಳ್ಳಿ ಎರಡು
8) ಪುದಿನ ಸೊಪ್ಪು ಕೊತ್ತಂಬರಿ ಸೊಪ್ಪು
9) ಟೊಮೆಟೊ ಎರಡು
10) ಹಸಿಮೆಣಸಿನಕಾಯಿ
ಮಾಡುವ ವಿಧಾನ ಅಕ್ಕಿಯನ್ನು ಚೆನ್ನಾಗಿ ತೊಳೆದು ಐದು ನಿಮಿಷಗಳ ಕಾಲ ನೆನೆಹಾಕಲು ಬಿಡಬೇಕು ನಂತರ ಒಂದು ಪ್ಯಾನ್ ಗೆ ಎಣ್ಣೆಯನ್ನು ಹಾಕಿ ಅದಕ್ಕೆ ಲವಂಗ ಚಕ್ಕೆ ಬೆಳ್ಳುಳ್ಳಿ ಒಂದು ಈರುಳ್ಳಿಯನ್ನು ಇದಕ್ಕೆ ಹಾಕಬೇಕು ಸ್ವಲ್ಪ ಕೊತ್ತಂಬರಿ ಸೊಪ್ಪು ಮತ್ತು ಸ್ವಲ್ಪ ಪುದಿನ ಸೊಪ್ಪು ಇಷ್ಟನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು ನಂತರ ಒಂದು ಟೊಮೇಟೊ ಹಾಕಿ ಚೆನ್ನಾಗಿ ಹೊಂದಿಸಿಕೊಳ್ಳಬೇಕು ನಂತರ ಇದಕ್ಕೆ ನಾಲ್ಕರಿಂದ ಐದು ಹಸಿ ಮೆಣಸಿನಕಾಯಿಯನ್ನು ಹಾಕಿ ಚೆನ್ನಾಗಿ ಹುರಿದುಕೊಳ್ಳಬೇಕು ನಂತರ ಇದನ್ನು ತಣ್ಣಗಾಗಲು ಬಿಟ್ಟು ಒಂದು ಮಿಕ್ಸಿ ಜಾರಿಗೆ ಹಾಕಿ ನುಣ್ಣನೆ ರುಬ್ಬಿಕೊಳ್ಳಬೇಕು ನಂತರ ಕುಷ್ಕ ಮಾಡುವ ಪಾತ್ರೆಗೆ ನಾಲ್ಕು ಚಮಚ ಎಣ್ಣೆಯನ್ನು ಹಾಕಿ ಅದು ಕಾದ ನಂತರ ಅದಕ್ಕೆ ಎರಡು ಬಿರಿಯಾನಿ ಎಲೆ ಎರಡು ಏಲಕ್ಕಿ ನಾಲ್ಕು ಲವಂಗ ಕಾಲು ಇಂಚು ಚಕ್ಕೆ ಅರ್ಧ ಚಮಚ ಸೋಂಪು ಒಂದು ಸ್ಟೋನ್ ಹೋ ಇಷ್ಟನ್ನು ಚೆನ್ನಾಗಿ ಎಣ್ಣೆಯಲ್ಲಿ ಕರೆದುಕೊಳ್ಳಬೇಕು.
ನಂತರ ಈ ಮಿಶ್ರಣಕ್ಕೆ ಒಂದು ಈರುಳ್ಳಿಯನ್ನು ಹಾಕಿ ಚೆನ್ನಾಗಿ ಬೇಯಿಸಬೇಕು ನಂತರ ಮಿಕ್ಕಿದ್ದಂತಹ ಪುದಿನ ಸೊಪ್ಪು ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು ನಂತರ ಬೇಯಿಸಿ ಕೊಳ್ಳಬೇಕು ನಂತರ ಈ ಮಿಶ್ರಣಕ್ಕೆ ರುಬ್ಬಿದಂತಹ ಮಸಾಲೆಯನ್ನು ಹಾಕಿ ಹಸಿ ವಾಸನೆ ಹೋಗುವ ತನಕ ಬೇಯಿಸಿಕೊಳ್ಳ ಬೇಕು ನಂತರ ಅದಕ್ಕೆ ಅರ್ಧ ಚಮಚ ಕೆಂಪು ಮೆಣಸಿನ ಕಾಯಿ ಪುಡಿ ಮತ್ತು ಅರ್ಧ ಚಮಚ ಅರಿಶಿನ ಪುಡಿ ಅರ್ಧ ಚಮಚ ಗರಂ ಮಸಾಲೆ ಇಷ್ಟನ್ನು ಹಾಕಿ ಹಸಿ ವಾಸನೆ ಹೋಗುವ ತನಕ ಬೇಯಿಸಿಕೊಳ್ಳಬೇಕು ನಂತರ ಅದಕ್ಕೆ ಅಕ್ಕಿಯನ್ನು ಹಾಕಿ ಸ್ವಲ್ಪ ಪ್ರಮಾಣದಲ್ಲಿ ಬೇಯಿಸಿಕೊಳ್ಳಬೇಕು ನಂತರ ಕೊನೆಗೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಶ್ರಣ ಮಾಡಿಕೊಳ್ಳಬೇಕು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.