2006-07 ರ ಸಮಯದಲ್ಲಿ ಕರ್ನಾಟಕ ರಾಜ್ಯದಲ್ಲಿ ಆಡಳಿತದಲ್ಲಿದ್ದ BJP-JDS ಸಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿಗಳಾಗಿದ್ದ ಯಡಿಯೂರಪ್ಪನವರು (CM Yeddurappa) ಭಾಗ್ಯಲಕ್ಷ್ಮಿ ಯೋಜನೆ (Bhagyalakshmi Scheme) ಎನ್ನುವ ಯೋಜನೆಯನ್ನು ಬಡ ಕುಟುಂಬದ ಜನಿಸುವ ಹೆಣ್ಣು ಮಕ್ಕಳಿಗಾಗಿ ಜಾರಿಗೆ ತಂದರು.
BPL ರೇಷನ್ ಕಾರ್ಡ್ ಹೊಂದಿರುವ ಕುಟುಂಬಗಳಲ್ಲಿ ಜನಿಸುವ ಮೊದಲ ಎರಡು ಹೆಣ್ಣು ಮಕ್ಕಳ ಹೆಸರಿನಲ್ಲಿ ಸರ್ಕಾರವು ಸ್ವಲ್ಪ ಮೊತ್ತದ ಹಣವನ್ನು ಡಿಪೋಸಿಟ್ ಮಾಡುತ್ತಿತ್ತು. 18 ವರ್ಷ ತುಂಬಿ ಯೋಜನೆ ಮೆಚ್ಯೂರ್ ಆಗುವ ವೇಳೆಗೆ ಶೈಕ್ಷಣಿಕ ವಿದ್ಯಾಭ್ಯಾಸ ಅಥವಾ ವಿವಾಹದ ಖರ್ಚಿಗೆ ಆ ಹಣವು ಅನುಕೂಲವಾಗಲಿ ಎನ್ನುವುದು ಈ ಯೋಜನೆಯ ಮುಖ್ಯ ಉದ್ದೇಶ ಆಗಿತ್ತು.
ಅಂತೆಯೇ ಈಗ 2006ರಲ್ಲಿ ಭಾಗ್ಯಲಕ್ಷ್ಮಿ ಬಾಂಡ್ ಪಡೆದವರಿಗೆ 2024ರಲ್ಲಿ ಬ್ಯಾಂಡ್ ಮೆಚೂರ್ ಆಗಿ ಹಣ ಸಿಗುತ್ತಿದೆ 2008 ಆಗಸ್ಟ್ ಗೂ ಮೊದಲು ಭಾಗ್ಯಲಕ್ಷ್ಮಿ ಯೋಜನೆಯಲ್ಲಿ ಮೊದಲ ಹೆಣ್ಣು ಮಗುವಿನ ಹೆಸರಿನಲ್ಲಿ ಸರ್ಕಾರವು ರೂ.10,000 ಹಣವನ್ನು ಡೆಪಾಸಿಟ್ ಇಡುತ್ತಿತ್ತು. 18 ವರ್ಷ ತುಂಬಿದ ಬಳಿಕ ಮೊದಲ ಮಗುವಿಗೆ ರೂ.34.561, ಎರಡನೇ ಮಗುವಿಗೆ ರೂ.40,619 ಸಿಗುತ್ತಿತ್ತು.
ಆದರೆ 2008ರ ನಂತರ ಈ ಹಣವನ್ನು ಮತ್ತಷ್ಟು ಏರಿಕೆ ಮಾಡಲಾಯಿತು. 2008ರ ಆಗಸ್ಟ್ ನಂತರ ಭಾಗ್ಯಲಕ್ಷ್ಮಿ ಯೋಜನೆಯಲ್ಲಿ ನೋಂದಣಿ ಆದ ಮಕ್ಕಳಿಗೆ ಮೊದಲ ಮಗುವಿನ ಹೆಸರಲ್ಲಿ ರೂ.19,300 ಗಳನ್ನು ಸರ್ಕಾರ ಠೇವಣಿ ಇಟ್ಟಿದೆ, ಆ ಮಗುವಿಗೆ 18 ವರ್ಷ ತುಂಬಿದ ಬಳಿಕ ರೂ.1,00,052 ಹಣವನ್ನು ವಾಪಸ್ ಪಡೆಯಬಹುದು.
ಎರಡನೇ ಮಗುವಿನ 18,957 ಗಳನ್ನು ಡಿಪೋಸಿಟ್ ಇಟ್ಟಿತ್ತು ರೂ.1,00,097 ಗಳನ್ನು ಆ ಹೆಣ್ಣು ಮಕ್ಕಳು ಈಗ ಯೋಜನೆ ಮೆಚ್ಯುರಿಟಿ ವೇಳೆ ಪಡೆಯುತ್ತಿದ್ದಾರೆ. ಈ ಹಿಂದೆ ಭಾಗ್ಯಲಕ್ಷ್ಮಿ ಯೋಜನೆ ಜವಾಬ್ದಾರಿಯನ್ನು ಭಾರತೀಯ ಜೀವವಿಮಾ ನಿಗಮಕ್ಕೆ (LIC) ನೀಡಲಾಗಿತ್ತು, ಈಗ ಅದನ್ನು ಅಂಚೆ ಇಲಾಖೆ ಮೂಲಕ ಸುಕನ್ಯಾ ಸಮೃದ್ಧಿ ಯೋಜನೆ (Sukanya Samruddhi Scheme) ಎಂದು ವಿನ್ಯಾಸಗೊಳಿಸಲಾಗಿದೆ.
2020-21 ರಿಂದ ಸುಕನ್ಯ ಸಮೃದ್ಧಿ ಯೋಜನೆಯಾಗಿ ಬದಲಾದ ಮೇಲೆ ಈ ಯೋಜನೆಯಲ್ಲಿ ಕೆಲವು ಗಮನಾರ್ಹ ಬದಲಾವಣೆಗಳು ಕೂಡ ಆಗಿವೆ. ಆ ಪ್ರಕಾರವಾಗಿ BPL ರೇಷನ್ ಕಾರ್ಡ್ ಹೊಂದಿರುವ ಕುಟುಂಬದ ಮೊದಲೇ ಎರಡು ಹೆಣ್ಣು ಮಕ್ಕಳ ಹೆಸರಿನಲ್ಲಿ ಪೋಷಕರು ಸುಕನ್ಯಾ ಸಮೃದ್ಧಿ ಯೋಜನೆ ಖಾತೆ ತೆರೆದು 15 ವರ್ಷಗಳವರೆಗೆ ವಾರ್ಷಿಕವಾಗಿ 3,000 ರೂಗಳನ್ನು ಠೇವಣಿ ಇಡಬೇಕು.
ಕನಿಷ್ಠ ಈ ಮೊತ್ತದ ಹಣವನ್ನು ಠೇವಣಿ ಇಟ್ಟಾಗ ಯೋಜನೆ ಮೆಚುರಿಟಿ ವೇಳೆಗೆ ರೂ.1.27.571 ರಿಟರ್ನ್ ಸಿಗುತ್ತದೆ ಮತ್ತು ಗರಿಷ್ಠ ಹೂಡಿಕೆಗೆ ಯಾವುದೇ ಮಿತಿ ಇಲ್ಲ. ಆದಾಯ ತೆರಿಗೆ ವಿನಾಯಿತಿಯೊಂದಿಗೆ ಈ ಯೋಜನೆಯಡಿ ಹೆಣ್ಣು ಮಕ್ಕಳ ಹೆಸರಿನಲ್ಲಿ ಎಷ್ಟು ಹಣವನ್ನು ಬೇಕಾದರೂ ಹೂಡಿಕೆ ಮಾಡಬಹುದು.
ಆ ಮಗುವಿಗೆ 18 ವರ್ಷ ತುಂಬಿದ ಬಳಿಕ ಆಕೆ ಸೂಕ್ತ ದಾಖಲೆಗಳನ್ನು ಕೊಡುವ ಮೂಲಕ ತಾನೇ ಸ್ವತಃ ನಿರ್ವಹಿಸಬಹುದು, 21 ವರ್ಷ ತುಂಬಿದ ಬಳಿಕ ಸಂಪೂರ್ಣವಾಗಿ ಹಣವನ್ನು ಆ ಹೆಣ್ಣು ಮಗು ಹಿಂಪಡೆಯಬಹುದು. 18 ವರ್ಷ ತುಂಬಿದ ಬಳಿಕ 21 ವರ್ಷದ ಮೊದಲೇ ಆಕೆಯ ಮದುವೆ ಅಥವಾ ವಿದ್ಯಾಭ್ಯಾಸದ ಅವಶ್ಯಕತೆ ಇದ್ದಾಗ ಕೂಡ ಖಾತೆ ರದ್ದು ಮಾಡಿ ಹಣ ಪಡೆಯಬಹುದು.
ಯಾರೆಲ್ಲಾ ಭಾಗ್ಯಲಕ್ಷ್ಮಿ ಬಾಂಡ್ ಪಡೆದಿದ್ದರು ಆ ಹೆಣ್ಣುಮಕ್ಕಳಲ್ಲಿ 18 ವರ್ಷ ತುಂಬಿರುವವರು ಅಂಚೆ ಕಚೇರಿ ಅಥವಾ ನಿಮ್ಮ ವ್ಯಾಪ್ತಿಗೆ ಬರುವ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿಗೆ ಭಾಗ್ಯಲಕ್ಷ್ಮಿ ಬಾಂಡ್ ಹಾಗೂ ಇನ್ನಿತರ ದಾಖಲೆಗಳನ್ನು ಸಲ್ಲಿಸುವ ಮೂಲಕ ಭಾಗ್ಯಲಕ್ಷ್ಮಿ ಬಾಂಡ್ ಹಣವನ್ನು ಕ್ಲೇಮ್ ಮಾಡಿಕೊಳ್ಳಬಹುದು ಮತ್ತು ಈ ಬಗ್ಗೆ ಯಾವುದೇ ಹೆಚ್ಚಿನ ಮಾಹಿತಿ ಬೇಕಾಗಿದ್ದರು ಪಡೆಯಬಹುದು.