ಈ ಪ್ರಪಂಚದಲ್ಲಿ ಅತಿ ಹೆಚ್ಚು ಜನರು ಉಪಯೋಗಿಸುತ್ತಿರುವ ಆಪ್ ಗಳಲ್ಲಿ ವಾಟ್ಸಪ್ ಕೂಡ ಒಂದು. ವಾಟ್ಸಾಪ್ ಸ್ಮಾರ್ಟ್ಫೋನ್ ಬಳಕೆದಾರರಿಗೆ ಪರಿಚಯವಾದಗಳಿಂದ ಹಿಡಿದು ಇಲ್ಲಿಯವರೆಗೂ ಕೂಡ ತನ್ನ ಸ್ಥಾನವನ್ನು ಬೇರೊಂದು ಆಪ್ ಗಳಿಗೆ ಚಾನ್ಸ್ ಕೊಡದಂತೆ ಉಳಿಸಿಕೊಂಡಿದೆ.
ಕೇವಲ ಪರ್ಸನಲ್ ಸಂದೇಶಗಳು ಮಾತ್ರವಲ್ಲದೆ ವಿಡಿಯೋ ಹಂಚಿಕೆ, ಆಡಿಯೋ ಹಂಚಿಕೆ ಇತ್ತೀಚೆಗೆ ಹಣವನ್ನು ಕೂಡ ಕಳಿಸುವುದಕ್ಕೆ ಅನುಕೂಲತೆ ಇರುವುದರಿಂದ ಮತ್ತು ಸದಾಕಾಲ ಗ್ರಾಹಕರ ಆಸಕ್ತಿಗಳಿಗೆ ತಕ್ಕಂತಹ ಫೀಚರ್ಸ್ ಗಳನ್ನು ಅಪ್ಡೇಟ್ ಮಾಡುವುದರಿಂದ ವೈಯಕ್ತಿಕ ಉಪಯೋಗಕ್ಕೆ ಮಾತ್ರವಲ್ಲದೇ ಔದ್ಯೋಗಿಕವಾಗಿ ಮತ್ತು ವಾಣಿಜ್ಯ ಕಾರಣಕ್ಕಾಗಿ ಕೂಡ ವಾಟ್ಸಪ್ ಬಳಕೆ ಆಗುತ್ತಿದೆ.
ಈ ರೀತಿ ಯಾರೆಲ್ಲ ವಾಟ್ಸಾಪ್ ಬಳಸುತ್ತಿದ್ದೀರಾ ಇವರಿಗೆಲ್ಲಾ ಮೆಟಾ CEO ಮತ್ತೊಂದು ಗುಡ್ ನ್ಯೂಸ್ ನೀಡಿದ್ದಾರೆ. ಇನ್ನು ಮುಂದೆ ನಿಮ್ಮ ಪರ್ಸನಲ್ ಚಾಟ್ ಗಳಿಗೆ ಸೀಕ್ರೆಟ್ ಕೋಡ್ ಹಾಕಿ ಲಾಕ್ ಮಾಡಬಹುದು.
ಈಗಾಗಲೇ ವಾಟ್ಸಪ್ ಚಾಟ್ ಲಾಕ್ ಮಾಡುವ ಅವಕಾಶ ಇದ್ದರು ಅದನ್ನು ಫಿಂಗರ್ ಪ್ರಿಂಟ್ ಇಂದ ಮಾಡಬೇಕಿದೆ. ಇದರಿಂದ ಆಗುವ ಅನಾನುಕೂಲತೆ ಏನೆಂದರೆ ಈಗಾಗಲೇ ಯಾರದಾದರೂ ಫಿಂಗರ್ ಪ್ರಿಂಟ್ ಸೇವ್ ಆಗಿದ್ದರೆ ಅವರು ಆರಾಮಾಗಿ ಓಪನ್ ಮಾಡಿ ಇದನ್ನು ನೋಡಬಹುದು.
ಹಾಗಾಗಿ ಹೆಚ್ಚಿನವರು ಇದನ್ನು ಲಾಕ್ ಎಂದು ಪರಿಗಣಿಸಲಿಲ್ಲ ಹಾಗಾಗಿ ಈಗ ಮತ್ತೊಂದು ಹೆಜ್ಜೆ ಮುಂದೆ ಹೋಗಿ ವಾಟ್ಸಾಪ್ ಚಾಟ್ ಗಳಿಗೆ ಅದರಲ್ಲೂ ಯಾವ ಚಾಟ್ ಗಳಿಗೆ ಸೀಕ್ರೆಟ್ ಕೋಡ್ ಇಡಬೇಕು ಎನಿಸುತ್ತದೆ ಅದನ್ನು ಪದಗಳ ಅಥವಾ ಸಂಖ್ಯೆಗಳ ಮೂಲಕ ಇಮೋಜಿ ಮೂಲಕ ಬ್ಲಾಕ್ ಮಾಡಿ ಇಟ್ಟುಕೊಳ್ಳುವಂತಹ ಅನುಕೂಲತೆ ಕೊಡಲು ನಿರ್ಧರಿಸಲಾಗಿದೆ.
ಸರ್ಚ್ ಬಾರ್ ನಲ್ಲಿ ಸೀಕ್ರೆಟ್ ಕೋಡ್ ಟೈಪ್ ಮಾಡಿದರೆ ಆ ಚಾಟ್ ಕಾಣುವ ರೀತಿ ಕೂಡ ಇದನ್ನು ಸಿದ್ಧಪಡಿಸಲಾಗುತ್ತಿದೆ, ಸೀಕ್ರೆಟ್ ಕೋಡ್ ನಿಮ್ಮನ್ನು ಹೊರತುಪಡಿಸಿ ಬೇರೆಯವರಿಗೆ ತಿಳಿಯದ ಕಾರಣ ಅವರಿಗೆ ಈ ಮೆಸೇಜ್ ಗಳು ಕಾಣುವುದಿಲ್ಲ.
ಹೊಸ ಫೀಚರ್ನ ಪ್ರಕಾರ, ಚಾಟ್ನ್ನು ಲಾಕ್ ಮಾಡಲು ನೀವು ವೈಯಕ್ತಿಕ ಚಾಟ್ ಸೆಟ್ಟಿಂಗ್ಗೆ ಹೋಗಬೇಕಾದ ಅವಶ್ಯಕತೆ ಇಲ್ಲ ಇದರ ಬದಲಿಗೆ ನೀವು ಯಾವ ಚಾಟ್ ಲಾಕ್ ಮಾಡಬೇಕು ಆ ಚಾಟ್ ನ್ನು ಲಾಂಗ್ ಪ್ರೆಸ್ ಮಾಡಿದರೆ ಸಾಕು ಲಾಕ್ ಆಗುತ್ತದೆ.
WhatsAppನಲ್ಲಿ ನಿಮ್ಮ ಚಾಟ್ಗಳನ್ನು ಖಾಸಗಿಯಾಗಿ ಇರಿಸಲು, ನೀವು ಲಾಕ್ ಮಾಡಿದ ಚಾಟ್ಗಳ ಲಿಸ್ಟ್ ತೆರೆದು ಅದರ ಮೇಲ್ಭಾಗದಲ್ಲಿ ಇರುವ ಮೂರು ಡಾಟ್ ಟ್ಯಾಪ್ ಮಾಡಿ ನಂತರ, ಚಾಟ್ ಲಾಕ್ ಸೆಟ್ಟಿಂಗ್ಗಳಿಗೆ ಹೋಗಿ, ಲಾಕ್ ಮಾಡಿದ ಚಾಟ್ಗಳನ್ನು ಮರೆಮಾಡಿ ಎನ್ನುವ ಆಪ್ಷನ್ ಆನ್ ಮಾಡಿ, ನಿಮ್ಮ ಇಚ್ಛೆಯ ಸೀಕ್ರೇಟ್ ಕೋಡ್ ಎಂಟರ್ ಮಾಡಿದರೆ ಮುಗಿಯಿತು.
ಇದಾದ ನಂತರ, ನಿಮ್ಮ ಲಾಕ್ ಮಾಡಿದ ಚಾಟ್ಗಳು ಮುಖ್ಯ ಚಾಟ್ ವಿಂಡೋದಲ್ಲಿ ಕಾಣಿಸುವುದೇ ಇಲ್ಲ, ಆ ಚಾಟ್ ಸ್ಕ್ರೀನ್ನಲ್ಲಿ ಕೆಳಗೆ ಸ್ವೈಪ್ ಮಾಡುವಾಗ ಲಾಕ್ ಮಾಡಿದ ಚಾಟ್ಗಳಿಗೆ ಶಾರ್ಟ್ ಕಟ್ ಅನ್ನು ಪ್ರದರ್ಶಿಸುವ ಈಗ ಇರುವ ವಾಟ್ಸಾಪ್ ವಿನ್ಯಾಸಕ್ಕಿಂತ ಹೆಚ್ಚಿನ ಸೀಕ್ರೆಟ್ ನ್ನು ಈ ಹೊಸ ಫೀಚರ್ ಒದಗಿಸುತ್ತದೆ.
ನಿಮ್ಮ ಲಾಕ್ ಆಗಿರುವ ಚಾಟ್ಗಳನ್ನು ನೋಡಲು ನೀವು ಬಯಸಿದರೆ, ಸರ್ಚ್ ಬಾರ್ನಲ್ಲಿ ರಹಸ್ಯ ಕೋಡ್ ಅನ್ನು ನಮೂದಿಸದರೆ ಮಾತ್ರ ಸಾಧ್ಯ. ಇಂದಿನಿಂದಲೇ ಈ ವಿಶೇಷವಾದ ವೈಶಿಷ್ಟ್ಯವನ್ನು ಆರಂಭಿಸಿದರೆ ಸಾಕು ಎನ್ನುವ ಉತ್ಸಾಹದಲ್ಲಿ ಎಲ್ಲರೂ ಇದ್ದಾರೆ. ಆದರೆ ಇದು ಎಲ್ಲಾ ಬಳಕೆದಾರರನ್ನು ತಲುಪಲು ಇನ್ನಷ್ಟು ಸಮಯ ತೆಗೆದುಕೊಳ್ಳುತ್ತದೆ. ಈ ಸ್ಪೆಷಲ್ ಫೀಚರ್ ತಮ್ಮ ಮೊಬೈಲ್ನಲ್ಲಿ ಲಭ್ಯವಾಗಲು ಕನಿಷ್ಠ ತಿಂಗಳುಗಳವರೆಗೆ ವಾಟ್ಸಪ್ ಬಳಕೆದಾರರು ಕಾಯಲೇಬೇಕು.