ಸ್ನೇಹಿತರೆ ನಮ್ಮ ಮನೆಯಲ್ಲಿ ಯಾವುದಾದರೂ ಸಂಭ್ರಮವಿದ್ದರೆ ಮದುವೆಯ ಸಮಾರಂಭ ನಾಮಕರಣ ಗೃಹಪ್ರವೇಶ ಯಾವುದೇ ಒಂದು ವಿಶೇಷ ಕಾರ್ಯಕ್ರಮವಿದ್ದರೂ ಕೂಡ ನಾವು ಮೊದಲು ಸಿಹಿಯನ್ನು ಅಂಚುತ್ತೇವೆ ಇನ್ನು ಮಕ್ಕಳಿಗೂ ಇಷ್ಟವಾದ ಸಿಹಿ ಪದಾರ್ಥಗಳು ದೊಡ್ಡವರಿಗೂ ಕೂಡ ಇಷ್ಟವಾಗುತ್ತದೆ ಸಂಭ್ರಮವೆಂದರೆ ಸಿಹಿ ಮನಸ್ಸಿಗೂ ಹಾಗೂ ನಾಲಿಗೆ ಕೂಡ ಹೌದು.
ಇನ್ನು ಇಂಥ ಸಿಹಿ ತಿಂಡಿಗಳನ್ನು ವಿವಿಧವಾಗಿ ಮಾಡುವುದು ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಒಂದು ಸ್ನೇಹಿತರೆ ಇಂದಿನ ಪುಟದಲ್ಲಿ ವಿಶೇಷವಾದ ಸಿಹಿ ತಿಂಡಿ ಎಂದರೆ ರೆಸಿಪಿಯ ಕುರಿತು ವಿವರವಾಗಿ ಇಲ್ಲಿ ವಿವರಿಸಿದ್ದೇವೆ ಸಾಮಾನ್ಯವಾಗಿ ಕೇಸರಿಬಾತ್ ಯಾರಿಗೆ ಇಷ್ಟ ಇಲ್ಲ ಎಲ್ಲರಿಗೂ ಇಷ್ಟ ಅದರಲ್ಲೂ ಪೈನಾಪಲ್ ಕೇಸರಿಬಾತ್ ಎಲ್ಲರಿಗೂ ಪ್ರಿಯ ಇನ್ನು ಪೈನಾಪಲ್ ಕೇಸರಿ ಬಾತ್ ಅನ್ನು ಮಾಡುವುದು ಹೇಗೆ ಯಾವ ಯಾವ ಪದಾರ್ಥಗಳನ್ನು ಎಷ್ಟು ಅಳತೆಯಲ್ಲಿ ಯಾವಾಗ ಹಾಕಬೇಕೆಂಬುವುದು ಇಂದಿನ ವಿಶೇಷವಾದ ಪುಟವಾಗಿದೆ.
ಈ ವಿಭಿನ್ನವಾದ ರುಚಿ ಹೊಂದಿರುವ ಪೈನಾಪಲ್ನ ಕೇಸರಿಬಾತ್ನ ಸವಿರುಚಿಯನ್ನು ಮಾಡಿಕೊಟ್ಟಲ್ಲಿ ಮನಸ್ಸಿಗೆ ಕೂಡ ಸಂತೃಪ್ತಿಯಾಗಿ ಕೂಡ ಉತ್ತಮವಾದ ರುಚಿಯನ್ನು ನೀಡುತ್ತದೆ ಮೊದಲಿಗೆ ಈ ಕೇಸರಿ ಬಾತ್ ಮಾಡಲು ದಟ್ಟ ತಳವಿರುವ ಪಾತ್ರೆಗೆ ಅರ್ಧ ಲೋಟ ಎಣ್ಣೆಯನ್ನು ಹಾಕಿಕೊಳ್ಳಬೇಕು ನಂತರ ಅರ್ಧ ಲೋಟ ತುಪ್ಪವನ್ನು ಬೆರೆಸಬೇಕು ಸ್ವಲ್ಪ ಸಮಯದ ಕಾಲ ಕಡಿಮೆ ಉರಿಯಲ್ಲಿ ಬಿಸಿ ಮಾಡಿಕೊಳ್ಳಬೇಕು. ಬಿಸಿ ಮಾಡಿಕೊಂಡ ಎಣ್ಣೆ ತುಪ್ಪದ ಮಿಶ್ರಣವನ್ನು ಅರ್ಧ ಭಾಗದಷ್ಟು ಎತ್ತಿ ಇಡಬೇಕು. ಈಗ ಆ ಪಾತ್ರೆಯಲ್ಲಿ ಅರ್ಧದಷ್ಟು ಎಣ್ಣೆ ಇದೆ ಮತ್ತು ತುಪ್ಪವಿದೆ ಅದಕ್ಕೆ 20ರಷ್ಟು ಗೋಡಂಬಿಯನ್ನು ಹುರಿದುಕೊಳ್ಳಬೇಕು ಇನ್ನೇನು ಗೋಡಂಬಿ ಬಣ್ಣ ಬದಲಾಗುತ್ತಿದೆ ಎನ್ನುವಾಗ ದ್ರಾಕ್ಷಿಯನ್ನು ಸೇರಿಸಿಕೊಳ್ಳಬೇಕು.
ಇವೆರಡು ಚೆನ್ನಾಗಿ ಉರಿದುಕೊಂಡ ನಂತರ ಒಂದು ಲೋಟ ರವೆ ಯಾವ ರವೆ ಎಂದರೆ ಬಾಂಬೆ ರವೆ ಅಥವಾ ಉಪ್ಪಿಟ್ಟಿನ ರವೆ ಎಂದು ಕೂಡ ಕರೆಯುತ್ತಾರೆ ರವೆಯನ್ನು ನಾಲ್ಕರಿಂದ ಐದು ನಿಮಿಷಗಳ ಕಾಲ ಚೆನ್ನಾಗಿ ಉರಿದುಕೊಂಡ ನಂತರp ಇನ್ನು ಅದೇ ರವೆಗೆ ಪೈನಾಪಲ್ ನನ್ನು ಸಣ್ಣದಾಗಿ ಹಚ್ಚಿಕೊಂಡಿರಬೇಕು ಅದು ಸಿಹಿ ಆದರೆ ಉತ್ತಮವಾಗಿರುತ್ತದೆ ಹುಳಿ ಆದರೆ ರುಚಿಯು ಅಷ್ಟು ಚೆನ್ನಾಗಿ ಇರುವುದಿಲ್ಲ ಹಾಗಾಗಿ ಸಿಹಿ ಇರುವ ಪೈನಾಪಲ್ ಅನ್ನು ಒಂದು ಲೋಟ ಪಾತ್ರೆಗೆ ಹಾಕಿಕೊಳ್ಳಬೇಕು. ಇನ್ನು ಇದನ್ನು ಕೂಡ ಕಡಿಮೆ ಉರಿಯಲ್ಲಿ ಹುರಿದುಕೊಳ್ಳಬೇಕು ಹುರಿದು ಕೊಂಡಾಗ ಇವೆಲ್ಲರ ಮಿಶ್ರಣವು ತುಂಬಾ ಮೆತ್ತಗೆ ಆಗುತ್ತದೆ.
ನಂತರ ಇದಕ್ಕೆ ಮುಕ್ಕಾಲು ಲೋಟದಷ್ಟು ಸಕ್ಕರೆಯನ್ನು ಬೆರೆಸಬೇಕು ಸಿಹಿಗೆ ತಕ್ಕಂತೆ ಸಕ್ಕರೆಯನ್ನು ಸೇರಿಸಬಹುದು, ಇನ್ನು ಇದಕ್ಕೆ ಸ್ವಲ್ಪ ಕೇಸರಿಯನ್ನು ನೆನೆಸಿಕೊಂಡು ಹಾಕಬಹುದು ಕೇಸರಿಯು ಇಲ್ಲದಿದ್ದಲ್ಲಿ ಅರಿಶಿಣವನ್ನು ಬಳಸಬಹುದು ಇದೆಲ್ಲ ಆದ ನಂತರ ಕೊನೆಯದಾಗಿ ಮುಖ್ಯವಾದ ಅಂಶವೆಂದರೆ ಎರಡುವರೆ ಲೋಟದಷ್ಟು ನೀರನ್ನು ಕುದಿಸಿಕೊಂಡು ಆ ಕುದಿಯುತ್ತಿರುವ ನೀರನ್ನು ಕೇಸರಿ ಬಾತ್ ಮಾಡಲು ಹೊರಟಿರುವ ಪಾತ್ರಗೆ ಹಾಕಿಕೊಳ್ಳಬೇಕು ಇನ್ನು ಕಡಿಮೆ ಉರಿಯಲ್ಲಿ ಸಂಪೂರ್ಣ ಕೇಸರಿ ಬಾತ್ ಅನ್ನು ಮಾಡಬೇಕು.
ಇನ್ನು ಇದಕ್ಕೆ ಕಾಲು ಚಮಚ ಏಲಕ್ಕಿ ಪುಡಿಯನ್ನು ಬೆರೆಸಿ ಒಂದು ಚಿಟಿಕೆ ಉಪ್ಪನ್ನು ಬೆರೆಸಬೇಕು, ಇವೆಲ್ಲವನ್ನು ತಿರುವತ್ತ ಇರುವಾಗ ಈ ಕೇಸರಿಬಾತ್ ಸ್ವಲ್ಪ ಗಟ್ಟಿಗೆ ಆಗುವ ಮೊದಲು ತೆಗೆದಿಟ್ಟಿರುವ ತುಪ್ಪದ ಹಾಗೂ ಎಣ್ಣೆಯ ಮಿಶ್ರಣವನ್ನು ಹಾಕಬೇಕು ಹಾಕಿದ ನಂತರ ಅಡುಗೆಯನ್ನು ತಿರುವುದೇ ತಟ್ಟೆಯನ್ನು ಮುಚ್ಚಿ ಸಣ್ಣ ಉರಿಯಲ್ಲಿ ಒಂದರಿಂದ ಎರಡು ನಿಮಿಷಗಳ ಕಾಲ ಬಿಡಬೇಕು ನಂತರ ಅಲ್ಲಿ ನಮಗೆ ಪೈನಾಪಲ್ ನ ಕೇಸರಿಬಾತ್ ಸಿದ್ಧವಾಗಿರುತ್ತದೆ.