LIC (Life Insurance Corporation Limited) ನಮ್ಮ ದೇಶದ ನಂಬಿಕಾರ್ಹ ವಿಮಾ ಸಂಸ್ಥೆಯಾಗಿದೆ. ಹಲವು ದಶಕಗಳಿಂದ ತನ್ನ ಗ್ರಾಹಕರಿಗಾಗಿ ವಿವಿಧ ಜೀವ ವಿಮಾ ಯೋಜನೆಯನ್ನು ನೀಡುತ್ತಿರುವ ಈ ಜೀವ ವಿಮಾ ಸಂಸ್ಥೆಯು ಈಗ ಜೀವ ವಿಮೆಯ (Life Insurance) ಜೊತೆ ಕೆಲ ಸಣ್ಣ ಉಳಿತಾಯ ಯೋಜನೆಗಳನ್ನು (Small Saving Schemes) ಪರಿಚಯಿಸುತ್ತಿದೆ.
ಬಹಳ ಕಡಿಮೆ ಹೂಡಿಕೆಯಲ್ಲಿ ಹೆಚ್ಚಿನ ಲಾಭವನ್ನು ಗಳಿಸುವಂತಹ ಹಲವು ಪಿಂಚಣಿ ಯೋಜನೆಗಳನ್ನು LIC ಪರಿಚಯಿಸಿದ್ದು ತಮ್ಮ ಭವಿಷ್ಯದ ಭದ್ರತೆಗಾಗಿ ಪಿಂಚಣಿ ಯೋಜನೆಯಲ್ಲಿ ಹೂಡಿಕೆ ಮಾಡಲು ಬಯಸುವ ಜನರು ಈಗ LIC ಯೋಜನೆಗಳನ್ನು ಆರಿಸಬಹುದಾಗಿದೆ. 60 ವರ್ಷದ ನಂತರದ ಜೀವನ ಆರಾಮದಾಯಕವಾಗಿರಬೇಕು ಎಂದರೆ ಆಗ ನಿತ್ಯ ಜೀವನ ನಿರ್ವಹಣೆಗೆ ಹಣಕಾಸಿನ ಅವಶ್ಯಕತೆ ಇದ್ದೇ ಇರುತ್ತದೆ.
ಅಂತಹ ಸಮಯದಲ್ಲಿ ಈ ಪಿಂಚಣಿ ಯೋಜನೆಗಳು (Pension Schemes) ಹೆಚ್ಚು ಅನುಕೂಲವಾಗುತ್ತದೆ. ಇವುಗಳಲ್ಲಿ LIC ನೂತನವಾಗಿ ಪರಿಚಯಿಸಿರುವ Saral Pension Scheme ಬಹಳಷ್ಟು ವೈಶಿಷ್ಟಗಳನ್ನು ಹೊಂದಿದ್ದು 60 ವರ್ಷ ಮೇಲ್ಪಟ್ಟ ನಂತರ ಪ್ರತಿ ತಿಂಗಳು ಪಿಂಚಣಿ ಪಡೆಯಲು ಪ್ಲಾನ್ ಮಾಡುವಂತ ಜನರಿಗೆ ಈ ಯೋಜನೆ ಉತ್ತಮವಾಗಿದೆ.
ಈ ಯೋಜನೆಯ ಮೂಲಕ ನೀವು ಸಿಂಗಲ್ ಪ್ರೀಮಿಯಂ ನಲ್ಲಿ ಪ್ರತಿ ತಿಂಗಳು ಪಿಂಚಣಿ ಪಡೆಯಬಹುದು, ನೀವು ಹೂಡಿಕೆ ಮಾಡುವ ಮೊತ್ತದ ಆಧಾರದ ಮೇಲೆ ನಿವೃತ್ತಿಯ ನಂತರ ಅಂದರೆ 60 ವರ್ಷ ತುಂಬಿದ ಬಳಿಕ ಪ್ರತಿ ತಿಂಗಳು ಕೂಡ ಪಿಂಚಣಿ ಬರುತ್ತದೆ. ಈ ಯೋಜನೆ ಕುರಿತು ಕೆಲ ಪ್ರಮುಖ ಅಂಶಗಳು ಹೀಗಿದೆ ನೋಡಿ.
ಯೋಜನೆಯ ಹೆಸರು:- LIC ಸರಳ ಪಿಂಚಣಿ ಯೋಜನೆ (LIC Saral Pension Scheme)
* LIC ಯ ಈ ಸರಳ ಪಿಂಚಣಿ ಯೋಜನೆಯನ್ನು 40 ವರ್ಷದಿಂದ 80 ವರ್ಷದ ವಯಸ್ಸಿನವರು ಈ ಸರಳ ಪಿಂಚಣಿ ಯೋಜನೆ ಖರೀದಿ ಮಾಡಬಹುದು
* ಇದು ಸಿಂಗಲ್ ಪ್ರೀಮಿಯಂ (Single Premium Policy) ಪಾಲಿಸಿ, ಅಂದರೆ ಈ ಪಾಲಿಸಿಯಲ್ಲಿ ಪ್ರೀಮಿಯಂ ನ್ನು ಯೋಜನೆ ಆರಂಭಿಸಿದ ಸಮಯದಲ್ಲಿಯೇ ಒಂದೇ ಬಾರಿಗೆ ಠೇವಣಿ ಮಾಡಬೇಕು.
* ಇತರೆ LIC ಯೋಜನೆಗಳಂತೆ, ನಾಮಿನಿ ಫೆಸಿಲಿಟಿ (Nominee Facility) ಕೂಡ ಲಭ್ಯವಿದ್ದು ಪಿಂಚಣಿದಾರರು ಮರಣ ಹೊಂದಿದರೆ, ಆ ಗ್ರಾಹಕನು ಸೂಚಿಸಿದ್ದ ನಾಮಿನಿ ಠೇವಣಿ ಮಾಡಿದ ಮೊತ್ತದ ಹಣವನ್ನು ಮರಳಿ ಪಡೆಯುತ್ತಾರೆ.
* LIC ಸರಳ ಪಿಂಚಣಿ ಯೋಜನೆಯ ಪಾಲಿಸಿದಾರರು 6 ತಿಂಗಳ ನಂತರ ಪಾಲಿಸಿಯನ್ನು ಯಾವುದೇ ಸಮಯದಲ್ಲಿ ಬೇಕಾದರೂ ಸರೆಂಡರ್ ಮಾಡಬಹುದು.
* ಪಾಲಿಸಿ ಪಡೆದ ನಂತರ ಪಾಲಿಸಿದಾರರು 60 ವರ್ಷ ತುಂಬಿದ ಬಳಿಕ ಜೀವನ ಪರ್ಯಂತ ಪಿಂಚಣಿಯ ಪ್ರಯೋಜನವನ್ನು ಪಡೆಯಬಹುದಾಗಿದೆ.
* LIC ಸರಳ ಪಿಂಚಣಿ ಯೋಜನೆಯ ಅಡಿಯಲ್ಲಿ ಮಾಸಿಕ, ತ್ರೈಮಾಸಿಕ, ಅರ್ಧವಾರ್ಷಿಕ ಮತ್ತು ವಾರ್ಷಿಕವಾಗಿ ಪಿಂಚಣಿಯನ್ನು ಪಡೆದುಕೊಳ್ಳುವ ಆಯ್ಕೆಯನ್ನು ಕೂಡ ಆರಿಸಿಕೊಳ್ಳಬಹುದು
* ಗ್ರಾಹಕನು ಯಾವ ಬ್ಯಾಂಕ್ ಖಾತೆ ಮಾಹಿತಿ ನೀಡಿ ನೋಂದಾಯಿಸಿಕೊಳ್ಳುತ್ತಾರೋ ಅದೇ ಖಾತೆಗೆ ಪಿಂಚಣಿ ಹಣವು ವರ್ಗಾವಣೆ ಆಗುತ್ತದೆ
* ಉದಾಹರಣೆಯೊಂದಿಗೆ ಪಿಂಚಣಿ ಮೊತ್ತವನ್ನು ಲೆಕ್ಕ ಹಾಕುವುದಾದರೆ 42 ವರ್ಷದ ವ್ಯಕ್ತಿಯು 30 ಲಕ್ಷ ರೂ. ಹಣವನ್ನು LIC ಸರಳ ಪಿಂಚಣಿ ಯೋಜನೆಯಲ್ಲಿ ಡೆಪಾಸಿಟ್ ಮಾಡಿದರೆ ಅವರು ಮಾಸಿಕ ಸುಮಾರು 12,388 ರೂ.ಗಳ ಪಿಂಚಣಿ ಪಡೆಯಬಹುದು.
* ಈ ಯೋಜನೆಯಡಿ ಮಾಸಿಕವಾಗಿ ಕನಿಷ್ಠ 1000 ರೂಪಾಯಿ ಪಿಂಚಣಿ ಪಡೆದಷ್ಟು ಮೊತ್ತಕ್ಕೆ ಹೂಡಿಕೆ ಮಾಡಬೇಕು, ಹೂಡಿಕೆಗೆ ಗರಿಷ್ಟ ಮಿತಿಯಿಲ್ಲ
* ಹೆಚ್ಚಿನ ಮಾಹಿತಿಗಾಗಿ ಹತ್ತಿರದಲ್ಲಿರುವ LIC ಶಾಖೆಗೆ ಭೇಟಿ ಕೊಡಿ ಅಥವಾ LIC ಅಧಿಕೃತ ವೆಬ್ಸೈಟ್ ಗಳಲ್ಲಿ ಮಾಹಿತಿ ಪಡೆಯಿರಿ.