ಆತ್ಮನಿರ್ಭರ ಭಾರತ ವನ್ನಾಗಿ ಮಾಡುವ ಪರಿಕಲ್ಪನೆಯಲ್ಲಿ ಕೇಂದ್ರ ಸರ್ಕಾರದ ಆಹಾರ ಸಂಸ್ಕರಣಾ ಕೈಗಾರಿಕೆಗಳ ಮಂತ್ರಾಲಯ (MOFPI) ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಪಾಲುದಾರಿಕೆಯೊಂದಿಗೆ, ಹಾಲಿ ಕಾರ್ಯನಿರ್ವಹಿಸುತ್ತಿರುವ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ವಿಸ್ತರಿಸುವಿಕೆ ಹಾಗೂ ಹೊಸದಾಗಿ ಕಿರು ಆಹಾರ ಸಂಸ್ಕರಣ ಉದ್ಯಮಿ ಆರಂಭಿಸುವವರಿಗೆ ಹಣಕಾಸಿನ ನೆರವು, ತಾಂತ್ರಿಕ ಹಾಗೂ ವ್ಯಾಪಾರ ಬೆಂಬಲವನ್ನು ಒದಗಿಸಲು ನಿರ್ಧರಿಸಿದೆ.
ಪ್ರಧಾನ ಮಂತ್ರಿಗಳ ಕೇಂದ್ರ ಪ್ರಾಯೋಜಿತ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ (PM FEP) ಯೋಜನೆ ಜಾರಿಗೆ ತರಲಾಗಿದೆ. ಈ ಯೋಜನೆ ಮೂಲಕ ಸಬ್ಸಿಡಿ ರೂಪದ ಸಾಲ ಸೌಲಭ್ಯವು ಲಭ್ಯವಿದ್ದು ರಾಜ್ಯದ ರೈತರು ಹಾಗೂ ರೈತ ಮಹಿಳೆಯರು ಈ ಸದಾವಕಾಶವನ್ನು ಸದುಪಯೋಗ ಪಡಿಸಿಕೊಳ್ಳಬಹುದು. ಹಾಗಾಗಿ ಯೋಜನೆ ಕುರಿತ ಹೆಚ್ಚಿನ ಮಾಹಿತಿ ಹೀಗಿದೆ ನೋಡಿ.
ಯೋಜನೆಯ ಹೆಸರು:- ಪ್ರಧಾನಮಂತ್ರಿ ಕಿರು ಆಹಾರ ಸಂಸ್ಕರಣೆ ಘಟಕಗಳ ಸ್ಥಾಪನೆ (PM Micro Food Processing Scheme
ಸಿಗುವ ಸಹಾಯಧನ:-
ಈ ಯೋಜನೆ ಮೂಲಕ ರಾಜ್ಯದ ರೈತರು ಹಾಗೂ ರೈತ ಮಹಿಳೆಯರು ಕಿರು ಆಹಾರ ಸಂಸ್ಕರಣ ಘಟಕ ಉದ್ದಿಮೆ ಸ್ಥಾಪನೆ ಅಥವಾ ವಿಸ್ತರಣೆಗೆ 50%ರಷ್ಟು ಸಬ್ಸಿಡಿಯಲ್ಲಿ ಗರಿಷ್ಠ 15 ಲಕ್ಷ ದವರೆಗೆ ಸಾಲ ಪಡೆಯಬಹುದು.
ಯಾರಿಗೆಲ್ಲ ಪ್ರಯೋಜನ ಸಿಗಲಿದೆ:-
* ಹಣ್ಣು ಮತ್ತು ತರಕಾರಿ ಸಂಸ್ಕರಣಾ ಉದ್ಯಮ, ಆಹಾರ ಧಾನ್ಯ ಮಿಲ್ಲಿಂಗ್ ಉದ್ಯಮ, ಹಾಲಿನ ಉತ್ಪನ್ನಗಳು, ಕೋಳಿ ಮತ್ತು ಮೊಟ್ಟೆ, ಮಾಂಸ ಉತ್ಪನ್ನಗಳ ಸಂಸ್ಕರಣೆ, ಮೀನು ಸಂಸ್ಕರಣೆ, ಬ್ರೆಡ್, ಎಣ್ಣೆಕಾಳುಗಳು, ಊಟ, ಉಪಹಾರ ಆಹಾರಗಳು, ಬಿಸ್ಕತ್ತುಗಳು, ಮಿಠಾಯಿಗಳು, ಇತರ ಆಹಾರ ಉತ್ಪನ್ನಗಳನ್ನು ತಂಪು ಪಾನೀಯಗಳು ಮತ್ತು ಇತರ ಸಂಸ್ಕರಿಸಿದ ಆಹಾರಗಳು, ಮುಂತಾದ ಆಹಾರ ಸಂಸ್ಕರಣಾ ಉದ್ಯಮಗಳಿಗೆ ಈ ಸಹಾಯಧನದ ನೆರವು ಸಿಗಲಿದೆ.
* ವೈಯುಕ್ತಿಕ ಉದ್ಯಮಿಗಳಿಗೆ, ಮಾಲಿಕತ್ವದ ಸಂಸ್ಥೆಗಳಿಗೆ, ರೈತ ಉತ್ಪಾದಕ ಸಂಸ್ಥೆಗಳಿಗೆ, ಸರ್ಕಾರೇತರ ಹಾಗೂ ಸ್ವ ಸಹಾಯಕ ಸಂಘಗಳಿಗೆ ಈ ಯೋಜನೆಯ ನೆರವು ಸಿಗುತ್ತಿದೆ.
* 15 ಲಕ್ಷ ಸಾಲ ಸೌಲಭ್ಯದಲ್ಲಿ ಪೂರ್ತಿ 7.5 ಲಕ್ಷ ಅನುದಾನವಾಗಿತ್ತು ಕೇಂದ್ರ ಸರ್ಕಾರದಿಂದ 35% ಹಾಗೂ ರಾಜ್ಯ ಸರ್ಕಾರದಿಂದ 15% ಸಬ್ಸಿಡಿ ನೀಡುವ ಮೂಲಕ ಉದ್ದಿಮೆಯನ್ನು ಪ್ರೋತ್ಸಾಹಿಸಲಾಗುತ್ತಿದೆ
*ಯಂತ್ರಗಳ ಖರೀದಿಗೆ 20 % ಬಂಡವಾಳ ಹೂಡಲು ತಯಾರಾಗಿರಬೇಕು ಮತ್ತು ಬ್ಯಾಂಕ್ ಸಿಬಿಲ್ ಸ್ಕೂಲ್ ಉತ್ತಮವಾಗಿರಬೇಕು
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:-
* ಆಧಾರ್ ಕಾರ್ಡ್
* ಪ್ಯಾನ್ ಕಾರ್ಡ್
* ಬ್ಯಾಂಕ್ ಪಾಸ್ ಬುಕ್
* ಕರೆಂಟ್ ಬಿಲ್
* ಉದ್ಯೋಗ ಸ್ಥಳದ ಉತಾರ
* ಬಾಡಿಗೆ ಕರಾರು ಪತ್ರ
* MSME ಲೈಸೆನ್ಸ್
* ಸೈಟ್ ಬಳಿ ನಿಂತಿರುವ ಅರ್ಜಿದಾರರ ಭಾವಚಿತ್ರ
* ಪಂಚಾಯಿತಿ ಅಥವಾ ಮುನ್ಸಿಪಾಲಿಟಿ ಲೈಸೆನ್ಸ್ ಮತ್ತು NOC
* ಉದ್ಯಮಶೀಲತೆ ತರಬೇತಿ ಪತ್ರ
* ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ ಮತ್ತು ಇಮೇಲ್ ಐಡಿ
ಅರ್ಜಿ ಸಲ್ಲಿಸುವ ವಿಧಾನ:-
* ಆಸಕ್ತರು ನೇರವಾಗಿ https://pmfme.mofpi.gov.in ಈ ವೆಬ್ ಸೈಟ್ ಲಿಂಕ್ ಕ್ಲಿಕ್ ಮಾಡಿ
* ಕೇಳಲಾಗುವ ಎಲ್ಲಾ ವೈಯಕ್ತಿಕ ವಿವರಗಳಲ್ಲಿ ಸರಿಯಾದ ಮಾಹಿತಿಯನ್ನು ತುಂಬಿಸಿರಿ
* ಪೂರಕ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ
* ಅರ್ಜಿ ಸಲ್ಲಿಕೆ ಯಶಸ್ವಿಯಾದ ಬಳಿಕ ತಪ್ಪದೆ ಅರ್ಜಿ ಸ್ವೀಕೃತಿಯನ್ನು ಪಡೆದುಕೊಳ್ಳಿ.
* ನಿಮ್ಮ ಅರ್ಜಿ ಪರಿಶೀಲನೆಯಾಗಿ ನಿಮಗೆ ಸಾಲ ಸೌಲಭ್ಯ ಅನುಮೋದನೆಯಾದರೆ ಇದರ ಸಂಬಂಧಿತ ಮಾಹಿತಿಯು SMS ಅಥವಾ ಇಮೇಲ್ ಮೂಲಕ ನಿಮಗೆ ತಲುಪುತ್ತದೆ.
ಹೆಚ್ಚಿನ ಮಾಹಿತಿಗಾಗಿ:-
ಸಹಾಯವಾಣಿ: 8277215712