ಕೇವಲ 5 ನಿಮಿಷದಲ್ಲಿ ಗೂಗಲ್ ಪೇ ನಿಂದ 15,000 ಲೋನ್ ಪಡೆಯಬಹುದು.! EMI ಕೇವಲ 111 ರೂ. ಮಾತ್ರ.!

ಕಳೆದ ತಿಂಗಳು ನವದೆಹಲಿಯಲ್ಲಿ ನಡೆದ  ಗೂಗಲ್‌ನ ವಾರ್ಷಿಕ ಗೂಗಲ್ ಫಾರ್ ಇಂಡಿಯಾ ಈವೆಂಟ್ ಸಂದರ್ಭದಲ್ಲಿ, ಗೂಗಲ್ ಕಂಪನಿಯು ಭಾರತದಲ್ಲಿ ವ್ಯಾಪಾರಿಗಳು ಮತ್ತು ಗ್ರಾಹಕರಿಗೆ ಸ್ಯಾಚೆಟ್ ಲೋನ್‌ಗಳನ್ನು  ಗೂಗಲ್ ಪೇ UPI ಆಪ್ ನಲ್ಲಿಯೇ ನೀಡುವುದಾಗಿ ಹೇಳಿದೆ.

WhatsApp Group Join Now
Telegram Group Join Now

ಭಾರತದಲ್ಲಿರುವ UPI ಆಧಾರಿತ ಬ್ಯಾಂಕ್  ಸೇವೆಗಳಲ್ಲಿ ಗೂಗಲ್ ಪೇ ಕೂಡ ಒಂದಾಗಿದ್ದು, ಅತಿ ಹೆಚ್ಚಿನ ಸಂಖ್ಯೆಯ ಗ್ರಾಹಕರನ್ನು ಹೊಂದಿರುವ ಈ ಸೇವೆಯು ಸಾಕಷ್ಟು ವೈಶಿಷ್ಟತೆಗಳಿಂದ ಈ ಮಟ್ಟ ತಲುಪಿದೆ. ಈಗ ಇದೇ ಹಾದಿಯಲ್ಲಿ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಗೂಗಲ್ ಪರ್ಸನಲ್ ಲೋನ್ ಗಳನ್ನು ನೀಡಲು ಮುಂದಾಗಿದೆ.

ವ್ಯಾಪಾರಿಗಳು ಹಾಗೂ ಗೂಗಲ್ ಪೇ ಗ್ರಾಹಕರಿಗೆ ಇದನ್ನು ಡಿಸೈನ್ ಮಾಡಲಾಗಿದ್ದು ಇದರ ಕುರಿತ ಮಾಹಿತಿ ಹೀಗಿದೆ ನೋಡಿ ಡಿಜಿಟಲ್ ಹಣಕಾಸಿನ ವಹಿವಾಟಿಗಾಗಿ ಬಳಸಲ್ಪಡುತ್ತಿದ್ದ UPI ಆಧಾರಿತ ಗೂಗಲ್ ಪೇ ಆಪ್ ಮೂಲಕ ನೀವು ಇನ್ನೂ ಮುಂದೆ ವೈಯಕ್ತಿಕ ಲೋನ್ ಪಡೆಯಬಹುದಾಗಿದೆ.

ಫೈನಾನ್ಸ್ ಸಹಯೋಗದೊಂದಿಗೆ ಭಾರತದಲ್ಲಿ ವ್ಯಾಪಾರಿಗಳು ಮತ್ತು ಗ್ರಾಹಕರಿಗೆ ಸ್ಯಾಚೆಟ್ ಲೋನ್‌ಗಳನ್ನು ನೀಡುವುದಾಗಿ ಗೂಗಲ್ ಕಂಪೆನಿಯು ಅನೌನ್ಸ್  ಮಾಡಿದೆ. ಈ ಸಂಬಂಧ Google Pay ಅನೇಕ ಭಾರತೀಯ ಬ್ಯಾಂಕುಗಳು ಮತ್ತು ಹಣಕಾಸು ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಂಡಿದ್ದು, Google ಗೆ ಸಾಲ ನೀಡಲು ICICI, HDFC, Kotak Mahindra ಮತ್ತು ಫೆಡರಲ್ ಬ್ಯಾಂಕ್‌ಗಳು ಒಪ್ಪಿ  ಒಪ್ಪಂದ ಮಾಡಿಕೊಂಡಿವೆ.

ಪ್ರತಿದಿನ ವ್ಯಾಪಾರ ಮಾಡುವ ವರ್ಗಕ್ಕೆ ಮತ್ತು ದಿನನಿತ್ಯದ ಸಾಲವನ್ನು ಪಾವತಿಸಲು ಬಯಸುವವರಿಗೆ Google pay ನ ಈ ಸೇವೆಯು ತುಂಬಾ ಪ್ರಯೋಜನಕಾರಿಯಾಗಿದೆ. google pay ನಲ್ಲಿ ಸಿಗುವ ಸ್ಯಾಚೆಟ್ ಲೋನ್‌ಗಳು ರೂ.10,000 ರಿಂದ ರೂ 1 ಲಕ್ಷದವರೆಗಿನ ಸಣ್ಣ-ಟಿಕೆಟ್ ಸಾಲಗಳಾಗಿವೆ, ಇದರ ಮರುಪಾವತಿ ಅವಧಿಯು 7 ದಿನಗಳಿಂದ  12 ತಿಂಗಳುಗಳವರೆಗೂ ಇರುತ್ತದೆ.

Google Pay ವ್ಯಾಪಾರಿಗಳಿಗೆ ಕ್ರೆಡಿಟ್ ಲೈನ್ ಅನ್ನು ಸಹ ಸಕ್ರಿಯಗೊಳಿಸಿದೆ. ಇವುಗಳು ರೂ. 15,000 ದಿಂದ ಪ್ರಾರಂಭವಾಗುತ್ತದೆ ಇದಕ್ಕೆ ರೂ.111  EMI ಪಾವತಿ ಮಾಡಿದರೆ ಸಾಕು.ಸಣ್ಣಪುಟ್ಟ ವ್ಯಾಪಾರ ಮಾಡುವ ಜನರಿಗೆ ಈ ಲೋನ್ ಬಹಳ ಸಹಕಾರಿ ಆಗಲಿದೆ ಎಂದು ಹೇಳಿದರೆ ತಪ್ಪಾಗಲ್ಲ.

ನಮ್ಮ  ದೇಶದಲ್ಲಿ ಈಗಾಗಲೇ Paytm ಮುಂತಾದ ಆಪ್ ಗಳ ಸಹಾಯದಿಂದ ಜನರು ಕಡಿಮೆ EMI ಕಂತಿಗೆ ಲೋನ್ ಪಡೆದುಕೊಳ್ಳುತ್ತಿದ್ದಾರೆ. ಇನ್ನು ಇದೇ ರೀತಿಯಾಗಿ ಗೂಗಲ್ ಪೇ ಗ್ರಾಹಕರು ಕೂಡ ಸ್ಯಾಚೆಟ್ ಲೋನ್ ಪಡೆದುಕೊಳ್ಳಬಹುದು.

ಗೂಗಲ್ ಪೇ ನಿಂದ ಈ ಗೂಗಲ್ ಪೇ ಸ್ಯಾಚೆಟ್ ಲೋನ್ ಪಡೆಯುವ ವಿಧಾನ:-

● ಮೊದಲು Google Pay  ಇನ್ಸ್ಟಾಲ್ ಮಾಡಿ ಗೂಗಲ್ ಪೇ ಬಳಕೆದಾರರಾಗಬೇಕು. ಸ್ಯಾಚೆಟ್ ಲೋನ್ ಗಾಗಿ ಆಪ್ ನಲ್ಲಿ ಇರುವ Business  ಎನ್ನುವ ಆಪ್ಷನ್ ಕ್ಲಿಕ್ ಮಾಡಬೇಕು.
● Loan ವಿಭಾಗದಲ್ಲಿ ಇರುವ ಆಫರ್‌ಗಳ ಮೇಲೆ ಕ್ಲಿಕ್ ಮಾಡಬೇಕು
● ನಿಮಗೆ ಅವಶ್ಯಕತೆ ಇರುವ ಸಾಲದ ಮೊತ್ತವನ್ನು ನಮೂದಿಸಬೇಕು.
● ಆಗ ನಿಮ್ಮನ್ನು ಲ್ಯಾಂಡಿಂಗ್ ಪಾಲುದಾರರ ಸೈಟ್‌ಗೆ ಮರು ನಿರ್ದೇಶಿಸಲಾಗುತ್ತದೆ.
● ಈ ಸೈಟ್ ನಲ್ಲಿ ನೀವು KYC ಸೇರಿದಂತೆ ಕೆಲವು ಸುಲಭ ಹಂತಗಳನ್ನು ಪೂರ್ಣಗೊಳಿಸಬೇಕು, ಆ ನಂತರವಷ್ಟೇ ನೀವು ಸಾಲವನ್ನು ಪಡೆಯಬಹುದು.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now