ಈ ಪ್ರಪಂಚಧಲ್ಲಿ ನಡೆಯುತ್ತಿರುವುದೆಲ್ಲವು ಸಂಖ್ಯೆಗಳನ್ನು ಆಧರಿಸಿ ಎಂದು ಹೇಳಬಹುದು. ಪುರಾಣ, ಇತಿಹಾಸ, ಆರ್ಥಿಕತೆ ರಾಜಕೀಯ ಎಲ್ಲವೂ ಕೂಡ ಸಂಖ್ಯೆಗಳನ್ನೇ ಆಧರಿಸಿದೆ. ಉದಾಹರಣೆಗೆ ಹೇಳಬೇಕು ಎಂದರೆ ನಾವು ಸಮಯ ಎಷ್ಟಾಯ್ತು ಎಂದು ಕೇಳಿದಾಗಲೂ ಸಂಖ್ಯೆಗಳ ಆಧಾರದ ಮೇಲೆ ಹೇಳಬೇಕು, ಯಾವುದೇ ವಸ್ತು ಖರೀದಿಸಿದರೆ ಅದಕ್ಕೆ ಸಂಖ್ಯೆಗಳ ಆಧಾರದ ಮೇಲೆ ಬೆಲೆ ತೆರುವುದು.
ಹೀಗೆ ಜೀವನದ ಬಹು ಮುಖ್ಯಪಾತ್ರವನ್ನು ಸಂಖ್ಯೆಗಳು ಆಧರಿಸಿದೆ. ಸಂಖ್ಯಾಶಾಸ್ತ್ರ, ಜ್ಯೋತಿಷ್ಯ ಶಾಸ್ತ್ರ ಅಥವಾ ಸಂಪ್ರದಾಯಗಳು ಕೂಡ ಇದನ್ನೇ ಹೇಳುತ್ತಾ ಬಂದಿವೆ. ಈ ನಂಬರ್ ಗಳ ಜೊತೆ ಯೂನಿವರ್ಸ್ ಕೂಡ ಕನೆಕ್ಟ್ ಆಗಿರುತ್ತದೆ ನಾವು ಸಂಖ್ಯೆಗಳನ್ನು ಪಾಲಿಸಿದರೆ ಯೂನಿವರ್ಸ್ ಗೆ ಕನೆಕ್ಟ್ ಆದ ರೀತಿ. ಹೀಗೆ ಒಮ್ಮೆ ಯುನಿವರ್ಸಿಗೆ ಕನೆಕ್ಟ್ ಆಗಿ ಹೋದರೆ ಎಲ್ಲವೂ ನಮ್ಮಿಚ್ಛೆಯಂತೆ ನಡೆಯುತ್ತಾ ಹೋಗುತ್ತದೆ ಅಥವಾ ನಡೆದದ್ದೆಲ್ಲವೂ ಕೂಡ ನಮಗೆ ಒಳ್ಳೆಯದೇ ಆಗುತ್ತದೆ.
ಹಣ ಬಹಳ ಮುಖ್ಯವಾದುದು. ಪ್ರತಿಯೊಬ್ಬನ ಸಮಸ್ಯೆಯನ್ನು ಪರಿಹಾರ ಮಾಡುವ ಶಕ್ತಿ ಹಣಕ್ಕೆ ಇದೆ. ಹಾಗಾಗಿ ನಮ್ಮ ಬಳಿ ಹೆಚ್ಚು ಹಣ ಬರಬೇಕು ಎಂದು ಪ್ರತಿಯೊಬ್ಬರು ಆಸೆ ಪಡುತ್ತಾರೆ. ನಿಮ್ಮ ಈ ಇಚ್ಚೆ ಯೂನಿವರ್ಸಿಗೆ ತಲುಪಿ ಅದು ಆಶೀರ್ವದಿಸಿದರೆ ಇನ್ನು ಕೆಲವೇ ದಿನದಲ್ಲಿ ನಿಮ್ಮ ಕೋರಿಕೆ ಈಡೇರಿ ನೀವು ಶ್ರೀಮಂತರಾಗುತ್ತೀರಿ ಎನ್ನುವುದಕ್ಕೆ ಕೆಲ ಲಕ್ಷಣ ಕೂಡ ಕಾಣಿಸಿಕೊಳ್ಳುತ್ತದೆ.
ಅದು ಕೂಡ ನಂಬರ್ ಮೂಲಕ ಅದೇಗೆಂದರೆ ಡಿವೈನ್ ನಂಬರ್ ಎಂದು ಕರೆಸಿಕೊಳ್ಳಲಾದ ಸಂಖ್ಯೆ 786 ನಿಮ್ಮ ಬಳಿ ಬರುತ್ತದೆ. 786 ಪವರ್ಫುಲ್ ನಂಬರ್ ಆಗಿದ್ದು, ಮುಸ್ಲಿಂ ಜನಾಂಗದಶರು ಇದನ್ನು ಪವಿತ್ರವಾಗಿ ಕಾಣುತ್ತಾರೆ. ಹಿಂದೂಗಳು ಕೂಡ ಸಂಖ್ಯೆ 7 ಲಕ್ಕಿ ನಂಬರ್, 8 ಎನ್ನುವ ಸಂಖ್ಯೆಯು ಹಣವನ್ನು ಹಿಡಿದಿಡುವ ಶಕ್ತಿ ಹಾಗೂ 6 ಎನ್ನುವುದು ಶುಕ್ರ ಗ್ರಹ ಹಣ ಐಶ್ವರ್ಯವನ್ನು ನಮ್ಮೆಡೆಗೆ ಬರುವಂತೆ ಮಾಡುವ ಸಂಖ್ಯೆ ಎಂದು ಹೇಳಲಾಗುತ್ತದೆ.
ಈ ಮೂರನ್ನು ಕೂಡಿಸಿದಾಗ 21 ಆಗುತ್ತದೆ, ಇದು ಕೂಡ 2+1=3 ಎಂದರೆ ಗುರು ಎನ್ನುವ ಅರ್ಥ ಕೊಡುತ್ತದೆ. ಗುರುವಿನ ಬಲವಿಲ್ಲದೆ ಯಾವುದೇ ಕಾರ್ಯ ಕೂಡ ನಡೆಯುವುದಿಲ್ಲ ಹಾಗಾಗಿ ಇಷ್ಟು ಪವಿತ್ರವಾಗಿರುವ ಈ ಸಂಖ್ಯೆಯು ನಿಮ್ಮನ್ನು ತಲುಪಿದರೆ ನೀವು ಶೀಘ್ರದಲ್ಲಿ ಕೋಟ್ಯಾಧಿಪತಿಗಳಾಗುತ್ತಿರಿ ಎಂದು ಅರ್ಥ.
ಇದು ಹೇಗೆ ಬರುತ್ತದೆ ಎಂದರೆ ನೀವು ದಿನನಿತ್ಯ ಹಣದ ವ್ಯವಹಾರ ಮಾಡುವಾಗ ನಿಮಗೆ ಸಿಗುವ 10ರೂ. ನೋಟಿನಿಂದ 500ರೂ. ನೋಟಿನ ಒಳಗಡೆ ಯಾವುದಾದರೂ ಒಂದು ನೋಟಿನ ಸೀರಿಯಲ್ ನಂಬರ್ ನಲ್ಲಿ ಈ ಸಂಖ್ಯೆ ಮೊದಲ ಮೂರು ಸಂಖ್ಯೆ ಆಗಿ ಅಥವಾ ಕೊನೆಯ ಮೂರು ಸಂಖ್ಯೆಯಾಗಿ ಬರುತ್ತದೆ.
ಅದು ನಿಮಗೆ ಅನಿರೀಕ್ಷಿತವಾಗಿ ಸಿಗಬೇಕು ನಿಮಗೆ ಈಗ ಈ ಗುಟ್ಟು ಗೊತ್ತಾಗಿದೆ ಎಂದು ನೀವು ಇದನ್ನು ಖರೀದಿಸಿದರೆ ಅಥವಾ ನೀವು ಯಾರ ಬಳಿಯಾದರು ಕೇಳಿ ಪಡೆದುಕೊಂಡರೆ ಆಗ ಆ ಲಕ್ ಫ್ಯಾಕ್ಟರ್ ವರ್ಕ್ ಆಗುವುದು ಬಹಳ ಕಡಿಮೆ. ನಿಮ್ಮ ಬಳಿ ಬರುವ ಈ ನೋಟ್ ಗಳನ್ನು ಗಮನಿಸುತ್ತಾ ಇರಿ ಯಾವುದಾದರೂ ಒಂದು ದಿನ ಈ ಮೇಲೆ ಹೇಳಿದಂತೆ 786 ಮೊದಲಾಗಿ ಅಥವಾ ಕೊನೆಯಲ್ಲಿರುವ ನೋಟ್ ನಿಮ್ಮ ಬಳಿ ಬಂದರೆ ನೀವು ಯೂನಿವರ್ಸಿಗೆ ಕನೆಕ್ಟ್ ಆಗಿದ್ದೀರಾ ಎಂದು ಅರ್ಥ.
ಈ ರೀತಿ ಸಿಕ್ಕ ತಕ್ಷಣವೇ ಒಂದು ದಿನ ನೀವು ಮುಂಜಾನೆ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಸ್ವಚ್ಛವಾಗಿ ಎಡಗೈನಲ್ಲಿ ಈ ನೋಟನ್ನು ಇಟ್ಟು ಬಲಗೈನಿಂದ ಅದನ್ನು ಮುಚ್ಚಿ 15 ನಿಮಿಷಗಳಾದರೂ ನಿಮ್ಮ ಒಂದು ಇಚ್ಛೆಯನ್ನು ಕೇಳಿಕೊಳ್ಳಿ ಖಂಡಿತ ಅದು ನೆರವೇರುತ್ತದೆ ನಂತರ ನಿಮ್ಮ ಬದುಕು ಬದಲಾಗಿ ಹೋಗುತ್ತದೆ. ಪ್ರತಿದಿನ ಬೆಳಿಗ್ಗೆ 786 ಎನ್ನುವ ಈ ನಂಬರ್ ಅನ್ನು ನೋಡುವುದು ನಮಸ್ಕರಿಸುವುದು ಮತ್ತು ಇದನ್ನು ಭಕ್ತಿಯಿಂದ ಕಾಣುವುದು ಮಾಡಿದರೆ ಆಗಲೂ ಕೂಡ ನೀವು ಯುನಿವರ್ಸಿಗೆ ಕನೆಕ್ಟ್ ಆಗುತ್ತೀರಿ.