ಉಚಿತ 200 ಯೂನಿಟ್ ವಿದ್ಯುತ್ ಯೋಜನೆಗೆ ಸರ್ಕಾರದ ಕಡೆಯಿಂದ ಒಂದೇ ಒಂದು ಕಂಡಿಷನ್.! ಏನದು ಗೊತ್ತ.?

 

WhatsApp Group Join Now
Telegram Group Join Now

ಕಾಂಗ್ರೆಸ್ ಪಕ್ಷವು ಗ್ಯಾರಂಟಿ ಕಾರ್ಡ್ ಯೋಜನೆಯನ್ನು ಚುನಾವಣೆ ಪ್ರಣಾಳಿಕೆಯಾಗಿ ಬಳಸಿ ಈಗ ಕರ್ನಾಟಕದಲ್ಲಿ ಸ್ಪಷ್ಟ ಬಹುಮತದೊಂದಿಗೆ ಗೆದ್ದಿದೆ. ಸರ್ಕಾರಕ್ಕೀಗ ತಾನು ಘೋಷಣೆ ಮಾಡಿದ ಗ್ಯಾರಂಟಿ ಕಾರ್ಡ್ ಯೋಜನೆಗಳನ್ನು ಜಾರಿಗೆ ತರುವ ಸಮಯ. ಜನಕ್ಕೆ ಕೊಟ್ಟ ಮಾತಿನಂತೆ ನಡೆದುಕೊಂಡು ಯಾವುದೇ ಬೆಲೆಯನ್ನಾದರೂ ತೆತ್ತು ಗ್ಯಾರಂಟಿಯಾಗಿ ಅವುಗಳನ್ನು ಜಾರಿಗೆ ತಂದೇ ತರುತ್ತೇವೆ ಎಂದು ಮಾನ್ಯ ಮುಖ್ಯಮಂತ್ರಿಗಳೇ ಭರವಸೆ ಕೊಟ್ಟಿದ್ದಾರೆ.

ಮೊದಲ ಸಚಿವ ಸಂಪುಟದಲ್ಲಿಯೇ ಇದರ ಬಗ್ಗೆ ತಾತ್ವಿಕ ಅನುಮೋದನೆ ನೀಡಿ ಆದೇಶಪತ್ರ ಹೊರಡಿಸಿರುವ ಮುಖ್ಯಮಂತ್ರಿಗಳು ಸಂಬಂಧಪಟ್ಟ ಇಲಾಖೆಯ ಸಚಿವರಿಗೆ ಹಾಗೂ ಅಧಿಕಾರಿಗಳಿಗೆ ಮಾಹಿತಿ ಕಲೆ ಹಾಕಲು ಸೂಚನೆ ಕೊಟ್ಟಿದ್ದಾರೆ. ಅಂತಿಮವಾಗಿ ಜೂನ್ 1ರಿಂದ ಈ ಗ್ಯಾರಂಟಿ ಕಾರ್ಡ್ ಯೋಜನೆಗಳು ಜಾರಿ ಆಗುವ ಬಗ್ಗೆ ಮುಖ್ಯಮಂತ್ರಿಗಳು ಘೋಷಣೆ ಮಾಡುವುದು ಬಾಕಿ ಇದೆ. ಅದಕ್ಕೂ ಮುನ್ನ ಈ ಗ್ಯಾರಂಟಿ ಕಾರ್ಡ್ ಘೋಷಣೆಗಳ ಬಗ್ಗೆ ಸಾಕಷ್ಟು ಗೊಂದಲಗಳು ಕೂಡ ಕಾಡುತ್ತಿದೆ.

ಅದರಲ್ಲೂ ಗೃಹಜ್ಯೋತಿ ಯೋಜನೆ ಅಡಿ ಪ್ರತಿ ಕುಟುಂಬಕ್ಕೂ 200 ಯೂನಿಟ್ ವಿದ್ಯುತ್ ಉಚಿತವಾಗಿ ಕೊಡುತ್ತೇವೆ ಎಂದು ಹೇಳಿರುವುದರಿಂದ ಈ ಯೋಜನೆ ಜಾರಿ ಮಾಡುವುದಕ್ಕೆ ಹಾಗೂ ಜಾರಿಯಾದ ಮೇಲೆ ಆಗುವ ಸಮಸ್ಯೆಗಳ ಬಗ್ಗೆ ಕೂಡ ಸರ್ಕಾರ ಗೊಂದಲಕ್ಕೀಡಗಿದೆ ಎಂಬ ಮಾಹಿತಿಗಳು ಕೇಳಿ ಬರುತ್ತಿವೆ. ಸರ್ಕಾರವು ಉಚಿತವಾಗಿ 200 ಯೂನಿಟ್ ವಿದ್ಯುತ್ ಅನ್ನು ಕೊಡುತ್ತೇವೆ ಎಂದು ಘೋಷಣೆ ಮಾಡಿತ್ತು ಹಾಗಾಗಿ ಎಲ್ಲಾ ಕುಟುಂಬಗಳಿಗೂ ಕೂಡ ನೀಡಬೇಕು ಎನ್ನುವುದನ್ನು ಜನಸಾಮಾನ್ಯರು ಕೇಳುತ್ತಿದ್ದಾರೆ.

ಹಾಗಾದರೆ 200 ಯೂನಿಟ್ ಉಚಿತವಾಗಿ ಕೊಟ್ಟು ಅದಕ್ಕಿಂತ ಹೆಚ್ಚಿನ ಬಳಕೆ ಮಾಡಿದವರಿಗೆ ಸಂಪೂರ್ಣ ಚಾರ್ಜ್ ಬರಿಸುವಂತೆ ಸರ್ಕಾರ ಆದೇಶ ಮಾಡುತ್ತದೆಯೇ ಎಂದು ನಿರೀಕ್ಷಿಸಲಾಗುತ್ತಿದೆ. ಆದರೆ ಸರ್ಕಾರವೇ ಇದಕೆಲ್ಲ ಸ್ಪಷ್ಟನೆ ಕೊಡಬೇಕಿದೆ. ಕೆಲವರು ಇದಕ್ಕೆ ಯಾವುದೇ ಕಂಡೀಶನ್ಗಳು ಇಲ್ಲ ಹೇಳಿಕೊಂಡಂತೆ ಎಲ್ಲರಿಗೂ 200 ಯೂನಿಟ್ ವಿದ್ಯುತ್ ಸಿಗಲಿದೆ ಎಂದರೆ, ಕೆಲವರು ಬಿಪಿಎಲ್ ಕಾರ್ಡ್ ಕುಟುಂಬಗಳಿಗೆ ಮಾತ್ರ ಉಚಿತ ಇರಬಹುದು ಎಂದು ಊಹಿಸುತ್ತಿದ್ದಾರೆ.

ಒಂದು ವೇಳೆ ಎಲ್ಲಾ ಕುಟುಂಬಗಳಿಗೂ ಕೂಡ ಉಚಿತವಾಗಿ ವಿದ್ಯುತ್ ನೀಡಿದರೆ ಕರ್ನಾಟಕದಲ್ಲಿ 2,14,000,00 ಲಕ್ಷಕ್ಕಿಂತ ಹೆಚ್ಚು ಕುಟುಂಬಗಳು ಇವೆ. ಇದರಲ್ಲಿ 200 ಯೂನಿಟ್ ವಿದ್ಯುತ್ ಕಿಂತಲೂ ಕೂಡ ಕಡಿಮೆ ಖರ್ಚು ಮಾಡುವ ಕುಟುಂಬಗಳು ಇವೆ. ಒಂದು ವೇಳೆ ಸರ್ಕಾರ 200 ಯೂನಿಟ್ ತನಕ ಉಚಿತವಾಗಿ ಘೋಷಣೆ ಮಾಡಿದರೆ ಜನ ಹೆಚ್ಚು ವಿದ್ಯುತ್ ಬಳಸಲು ಮುಂದಾಗಬಹುದು.

ಆಗ ವಿದ್ಯುತ್ ಕೊರತೆ ಉಂಟಾಗಿ ವಿದ್ಯುತ್ತನ್ನು ಖರೀದಿ ಮಾಡುವ ಅನಿವಾರ್ಯತೆ ಸರ್ಕಾರಕ್ಕೆ ಬರಬಹುದು. ಶುಲ್ಕಗಳು, ತೆರಿಗೆಗಳು ಎಲ್ಲಾ ಸೇರಿ ಪ್ರತಿ ಕುಟುಂಬಕ್ಕೂ 200 ಯೂನಿಟ್ ಉಚಿತ ಕೊಟ್ಟರೆ 12,038 ಕೋಟಿ ಹೊರೆ ಸರ್ಕಾರದ ಮೇಲೆ ಬೀಳಲಿದೆ. ಇದರ ಜೊತೆ ಕೆಲ ತಾಂತ್ರಿಕ ದೋಷಗಳ ಸಮಸ್ಯೆಗಳನ್ನು ಕೂಡ ಸರ್ಕಾರ ಎದುರಿಸಬೇಕಾಗುತ್ತದೆ.

ಈಗಾಗಲೇ ದೆಹಲಿ ಸರ್ಕಾರ ಇಂತಹದೊಂದು ಘೋಷಣೆ ಮಾಡಿ ಸಮಸ್ಯೆಗೆ ಸಿಲುಕಿರುವ ಪ್ರತ್ಯಕ್ಷ ಸಾಕ್ಷಿ ಇದೆ ಹಾಗೆ ಪಕ್ಕದ ತಮಿಳುನಾಡು ರಾಜ್ಯದಲ್ಲಿ ಎರಡು ತಿಂಗಳಿಗೆ 100 ಯೂನಿಟ್ ವಿದ್ಯುತ್ ಉಚಿತ ಎನ್ನುವ ಘೋಷಣೆ ಇದೆ, ಇದೆಲ್ಲವನ್ನು ಗಮನಿಸಿ ಸರಿಯಾದ ನಿರ್ಧಾರವನ್ನು ತೆಗೆದುಕೊಳ್ಳಬೇಕಾದ ಸ್ಥಾನದಲ್ಲಿ ಮಾನ್ಯ ಮುಖ್ಯಮಂತ್ರಿಗಳು ಇದ್ದಾರೆ. ಅಂತಿಮವಾಗಿ ಈ ಯೋಜನೆ ಘೋಷಣೆಗಳಿಗೆ ಕ್ಷಣಗಣನೆ ಆರಂಭವಾಗಿರುವುದರಿಂದ ಸರ್ಕಾರದಿಂದಲೇ ಅನೌನ್ಸ್ ಆಗುವವರೆಗೂ ಕೂಡ ಕಾದು ನೋಡೋಣ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now