2023-24ನೇ ಸಾಲಿನ ಶೈಕ್ಷಣಿಕ ತರಗತಿಗಳಿಗೆ ಪಟ್ಟಣ ಅಥವಾ ನಗರ ಪ್ರದೇಶಗಳಲ್ಲಿ ಪ್ರವೇಶಾತಿ ಪಡೆದಿರುವ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಪ್ರವೇಶಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕರ್ನಾಟಕದ ಹಿಂದುಳಿದ ವರ್ಗಗಳ ಇಲಾಖೆ, ಅಲ್ಪಸಂಖ್ಯಾತರ ನಿರ್ದೇಶನಾಲಯ ಮತ್ತು ಸಮಾಜ ಕಲ್ಯಾಣ ಇಲಾಖೆ ಆಯಾ ವಿದ್ಯಾರ್ಥಿಗಳಿಂದ ಹಾಸ್ಟೆಲ್ ಪ್ರವೇಶಾತಿಗೆ ಅರ್ಜಿ ಆಹ್ವಾನ ಮಾಡಿದೆ.
2023-24ನೇ ಸಾಲಿನ ಶೈಕ್ಷಣಿಕ ತರಗತಿ ಆರಂಭಗೊಳ್ಳುತ್ತಿರುವುದರಿಂದ ವಿದ್ಯಾರ್ಥಿಗಳಿಗೆ ಅನಾನುಕೂಲತೆ ಆಗುವುದನ್ನು ತಪ್ಪಿಸಲು ಶೀಘ್ರವಾಗಿ ಈ ಪ್ರಕ್ರಿಯೆಯನ್ನು ಪೂರ್ತಿಗೊಳಿಸಲು ನಿರ್ಧರಿಸಿರುವುದರಿಂದ ವಿದ್ಯಾರ್ಥಿಗಳು ಈ ಕೂಡಲೇ ಸರ್ಕಾರ ಸೂಚಿಸಿರುವ ನಿಯಮಗಳ ಪ್ರಕಾರ ಅರ್ಜಿ ಸಲ್ಲಿಸಿ ಹಾಸ್ಟೆಲ್ ಗಳಲ್ಲಿ ಪ್ರವೇಶವನ್ನು ಪಡೆದುಕೊಳ್ಳಬಹುದು.
ಯಾವ ಯಾವ ಇಲಾಖೆಗಳಲ್ಲಿ ಯಾವ ವರ್ಗದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು ಮತ್ತು ಅರ್ಜಿ ಸಲ್ಲಿಸುವ ಪ್ರಕ್ರಿಯೆ ಹೇಗೆ ಎನ್ನುವುದರ ಕುರಿತು ಈ ಅಂಕಣದಲ್ಲಿ ತಿಳಿಸಿ ಕೊಡುತ್ತಿದ್ದೇವೆ. ಸರ್ಕಾರವು ಈ ಕುರಿತದಂತೆ ಅರ್ಜಿ ಆಹ್ವಾನ ಮಾಡಿರುವ ಅಧಿಸೂಚನೆಯನ್ನು ಹೊರಡಿಸಿದೆ. ಇದರ ಪ್ರಕಾರ ಹಿಂದುಗಳಿಗೆ ವರ್ಗಗಳ ಕಲ್ಯಾಣ ಇಲಾಖೆಗೆ ಹಿಂದುಳಿದ ವರ್ಗದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಸಮಾಜ ಕಲ್ಯಾಣ ಆಯುಕ್ತಾಲಯಕ್ಕೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ ಈ ಹಾಸ್ಟೆಲ್ ಗಳಲ್ಲಿ ಪ್ರವೇಶಾತಿ ಪಡೆದುಕೊಳ್ಳಬಹುದು.
ಹಾಗೆಯೇ ಅಲ್ಪಸಂಖ್ಯಾತರ ನಿರ್ದೇಶನಾಲಯಕ್ಕೆ ಸಂಬಂಧಿಸಿದಂತೆ ಅಲ್ಪಸಂಖ್ಯಾತರ ವರ್ಗಕ್ಕೆ ಸೇರಿದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿ ಅಲ್ಪಸಂಖ್ಯಾತರಿಗಾಗಿ ಇರುವ ಹಾಸ್ಟೆಲ್ ಗಳಲ್ಲಿ ವಸತಿ ಮತ್ತು ಊಟದ ವ್ಯವಸ್ಥೆ ಪಡೆದುಕೊಳ್ಳಬಹುದು. 2023-24ನೇ ಸಾಲಿನಲ್ಲಿ ಪ್ರೀ ಮೆಟ್ರಿಕ್ ವಿದ್ಯಾಭ್ಯಾಸ ಮಾಡುತ್ತಿರುವ ಅಂದರೆ ಐದನೇ ತರಗತಿಯಿಂದ 10ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ.
ಹಿಂದುಳಿದ ವರ್ಗಗಳ ಇಲಾಖೆ ಸಮಾಜ ಕಲ್ಯಾಣ ಆಯುಕ್ತಾಲಯ ಮತ್ತು ಅಲ್ಪಸಂಖ್ಯಾತರ ನಿರ್ದೇಶನಾಲಯದ ಹಾಸ್ಟೆಲ್ ಗಳಲ್ಲಿ ಪ್ರವೇಶ ಪಡೆದುಕೊಳ್ಳಲು ಅರ್ಜಿ ಸಲ್ಲಿಸುವ ವಿಧಾನ:-
● ಸರ್ಕಾರ ಸೂಚಿಸಿರುವ ಅಫೀಷಿಯಲ್ ವೆಬ್ಸೈಟ್ ಆದ ಸ್ಟೇಟ್ ಹಾಸ್ಟೆಲ್ ಪೋರ್ಟಲ್ SHP ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬೇಕು.
● SHP ಪೋರ್ಟಲ್ ಓಪನ್ ಮಾಡಿ ಸ್ಕ್ರೋಲ್ ಮಾಡಿದರೆ ಪ್ರಿ ಮೆಟ್ರಿಕ್ ಎನ್ನುವ ಆಕ್ಷನ್ ಕಾಣುತ್ತದೆ.
ಅದರಲ್ಲಿಯೇ ವಿವರವಾಗಿ ಅಪ್ಲೈ ಮಾಡುವುದಕ್ಕೂ ಮುನ್ನ ವಿಷಯವನ್ನು ತಿಳಿಸಲಾಗಿರುತ್ತದೆ. 5ನೇ ತರಗತಿಯಿಂದ 10ನೇ ತರಗತಿ ಒಳಗೆ ವ್ಯಾಸಂಗ ಮಾಡುತ್ತಿರುವ ಪಿ ಮೆಟ್ರಿಕ್ ವಿದ್ಯಾರ್ಥಿಗಳ ಮಾತ್ರ ಅರ್ಜಿ ಸಲ್ಲಿಸಬೇಕು ಎಂದು ಇರುತ್ತದೆ.
● ಅದರಲ್ಲಿರುವ ಅಪ್ಲೈ ಆಪ್ಷನ್ ಅನ್ನು ಕ್ಲಿಕ್ ಮಾಡಬೇಕು.
● ಇದಾದ ಬಳಿಕ ನೀವು SSP ಅಕೌಂಟ್ ಹೊಂದಿದ್ದೀರಾ ಎಂದು ಪ್ರಶ್ನೆ ಕೇಳಲಾಗುತ್ತದೆ. ಹೌದು ಎಂದಿದ್ದರೆ ಹೌದು ಎಂದು ಕ್ಲಿಕ್ ಮಾಡಿ, ಇಲ್ಲವಾದಲ್ಲಿ ಬ್ಯಾಕ್ ಗೆ ಹೋದರೆ ಅಲ್ಲಿ ವಿದ್ಯಾರ್ಥಿಗಳ ಹೊಸದಾಗಿ SSP ಅಕೌಂಟ್ ಕ್ರಿಯೇಟ್ ಮಾಡುವುದಕ್ಕೆ ಆಪ್ಷನ್ ಇರುತ್ತದೆ. ಇದನ್ನು ಬಳಸಿಕೊಂಡು SSP ಅಕೌಂಟ್ ತೆರೆದು SATS-ID ಪಡೆಯಿರಿ.
● ಒಂದು ವೇಳೆ ಈಗಾಗಲೇ SSP ಅಕೌಂಟ್ ಹೊಂದಿದ್ದರೆ ನಿಮ್ಮ ಬಳಿ SATS-ID ಇರುತ್ತದೆ. ಅದನ್ನು ಎಂಟ್ರಿ ಮಾಡುವ ಮೂಲಕ ಅಪ್ಲಿಕೇಶನ್ ಹಾಕಿ. ವಿಧ್ಯಾರ್ಥಿ, ಶಾಲೆಗೆ ದಾಖಲಾಗಿರುವ ಬಗ್ಗೆ ದಾಖಲೆಗಳು ವಿದ್ಯಾರ್ಥಿಗಳ ಆಧಾರ್ ಕಾರ್ಡ್ ಸೇರಿದಂತೆ ಕೆಲವು ಪ್ರಮುಖ ದಾಖಲೆಗಳನ್ನು ಕೇಳಲಾಗುತ್ತದೆ ಇವುಗಳನ್ನು ಅರ್ಜಿ ಫಾರಂ ಭರ್ತಿ ಮಾಡಿದ ಬಳಿಕ ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ ಅರ್ಜಿ ಸಲ್ಲಿಸಿ.