Deprecated: strtolower(): Passing null to parameter #1 ($string) of type string is deprecated in /home/u302298408/domains/rishithepower.com/public_html/wp-content/plugins/taboola/simple_html_dom.php on line 712
LIC ಸಂಸ್ಥೆಯು ತನ್ನ ಗ್ರಾಹಕರಿಗಾಗಿ ಈಗಾಗಲೇ ಹಲವಾರು ರೀತಿಯ ಯೋಜನೆಗಳನ್ನು ಜಾರಿಗೆ ತಂದಿದೆ. ತನ್ನ ಗ್ರಾಹಕರ ಅವಶ್ಯಕತೆ ಹಾಗೂ ಅನುಕೂಲತೆಗೆ ತಕ್ಕಹಾಗೆ ಕಾಲಕಾಲಕ್ಕೆ ಆಗಾಗ ಹೊಸ ಹೊಸ ಪಾಲಿಸಿಗಳನ್ನು ಜಾರಿಗೆ ತರುತ್ತಲೇ ಇರುತ್ತದೆ. LIC ಯಲ್ಲಿ ಸಾಮಾನ್ಯವಾಗಿ ಪ್ರೀಮಿಯಂಗಳನ್ನು ಮಾಸಿಕವಾಗಿ ಅಥವಾ ತ್ರೈಮಾಸಿಕವಾಗಿ ಅಥವಾ ಅರ್ಧ ವಾರ್ಷಿಕವಾಗಿ ಇಲ್ಲ ವಾರ್ಷಿಕವಾಗಿ ಪಾವತಿಸುವ ಆಯ್ಕೆ ಇರುತ್ತದೆ.
ಆದರೆ LIC ಯ ಈ ಒಂದು ಪಾಲಿಸಿಯಲ್ಲಿ ಮಾತ್ರ ಒಮ್ಮೆ ಪ್ರೀಮಿಯಂ ಪಾವತಿಸಿದರೆ ಸಾಕು, ಒಮ್ಮೆ ನೀವು ಹಣ ಡೆಪಾಸಿಟ್ ಮಾಡಿದರೆ ನಿಮಗೆ ನೀವು ಇರುವ ತನಕವೂ ಕೂಡ ಪೆನ್ಷನ್ ಬರುತ್ತಲೇ ಇರುತ್ತದೆ. LIC ತಂದಿರುವ ಈ ಹೊಸ LIC ಜೀವನ್ ಅಕ್ಷಯ್ ಪಾಲಿಸಿ 7 ಬಗ್ಗೆ ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
LIC ಜೀವನ್ ಅಕ್ಷಯ್ ಪಾಲಿಸಿ 7 ಲೈಫ್ ಟೈಮ್ ಪಾಲಿಸಿ ಆಗಿರುತ್ತದೆ. ಈ ಪಾಲಿಸಿಯಲ್ಲಿ ಒಂದು ಬಾರಿ ಡೆಪಾಸಿಟ್ ಮಾಡಿದರೆ ಅವರ ಜೀವಿತಾವಧಿವರೆಗೂ ಕೂಡ ಪೆನ್ಷನ್ ಬರುತ್ತಾ ಇರುತ್ತದೆ. ಒಂದು ವೇಳೆ ವ್ಯಕ್ತಿಯು ಪಾಲಿಸಿ ಖರೀದಿಸಿ ಮೃತಪಟ್ಟ ವೇಳೆಯಲ್ಲಿ ಅವರ ನಾಮಿನಿಗೆ ಡೆಪೂಸಿಟ್ ಮಾಡಿದ ಮೊತ್ತವು ಸೇರುತ್ತದೆ. LIC ಜೀವನ್ ಅಕ್ಷಯ್ 7 ಪಾಲಿಸಿ ಖರೀದಿಸಲು ವ್ಯಕ್ತಿಗೆ ಕನಿಷ್ಠ ವಯಸ್ಸು 30 ವರ್ಷ ಆಗಿರಬೇಕು.
ಗರಿಷ್ಠ ವಯೋಮಿತಿ 85 ವರ್ಷಗಳು ಆಗಿದ್ದು ಒಂದು ವೇಳೆ ನೀವು ಪಾಲಿಸಿ ಖರೀದಿ ಮಾಡುವಾಗ F&J ಆಪ್ಷನ್ ಅನ್ನು ಸೆಲೆಕ್ಟ್ ಮಾಡಿದರೆ 100 ವರ್ಷದ ವಯಸ್ಸಿನವರೂ ಕೂಡ ಈ ಪಾಲಿಸಿಯನ್ನು ಖರೀದಿ ಮಾಡಬಹುದು. ಜೀವನ್ ಅಕ್ಷಯ್ 7 ಪಾಲಿಸಿ ಖರೀದಿದಾರರಿಗೆ ಪೆನ್ಷನ್ ಫೆಸಿಲಿಟಿ ಯು ಇವರು ಪಾಲಿಸಿಯನ್ನು ಖರೀದಿ ಮಾಡಿದ ತಕ್ಷಣವೇ ಅಪ್ಲೈ ಆಗುತ್ತದೆ.
ಜಾಯಿಂಟ್ ಆಪ್ಶನ್ ಕೂಡ ಇದ್ದು, ನೀವು ನಿಮ್ಮ ವೈಫ್ ಅಥವಾ ಮಕ್ಕಳು ಯಾರನ್ನಾದರೂ ಕೂಡ ಇದರಲ್ಲೇ ಆಡ್ ಮಾಡಿಕೊಳ್ಳಬಹುದು. ಯೋಜನೆ ಖರೀದಿಸಿದವರಿಗೆ ಅವರ ಪಾಲಿಸಿ ಮೇಲೆ ಸಾಲ ತೆಗೆದುಕೊಳ್ಳುವ ಸೌಲಭ್ಯ ಈ ಯೋಜನೆಯನ್ನು ಖರೀದಿಸಿದ ಮೂರು ತಿಂಗಳಿಗೇ ಸಿಗುತ್ತದೆ. ಮತ್ತೊಂದು ಮುಖ್ಯವಾದ ಅಂಶ ಏನು ಎಂದರೆ ಈ ಪಾಲಿಸಿ ಖರೀದಿಸುವ ಮುನ್ನ ಜೀವನ್ ಅಕ್ಷಯ್ 7 ಪಾಲಿಸಿಯಲ್ಲಿ 10 ಆಪ್ಷನ್ ಗಳು ಇರುವುದನ್ನು ತಿಳಿದುಕೊಂಡಿರಬೇಕು.
ಆ 10 ಆಪ್ಷನ್ಗಳಲ್ಲಿ ನಿಮಗೆ ಯಾವುದು ಸೂಕ್ತ ಯಾವುದು ಹೆಚ್ಚು ಲಾಭ ಕೊಡುತ್ತದೆ ಎಂದು ಯೋಚಿಸಿ ನಂತರ ಪಾಲಿಸಿಯನ್ನು ಆರಿಸಿಕೊಳ್ಳಬೇಕು. ಒಮ್ಮೆ ಒಂದು ಆಪ್ಷನ್ ಸೆಲೆಕ್ಟ್ ಮಾಡಿದ ಮೇಲೆ ಮತ್ತೆ ಬದಲಾಯಿಸಿಕೊಳ್ಳಲು ಅವಕಾಶ ಸಿಗುವುದಿಲ್ಲ. ಒಂದು ವೇಳೆ ಪಾಲಿಸಿ ಖರೀದಿಸಿದ ನಂತರ ನೀವು ಅದನ್ನು ರದ್ದು ಮಾಡಬೇಕು ಎಂದರೆ ಜೀವನ್ ಅಕ್ಷಯ್ 7 ಪಾಲಿಸಿಯನ್ನು ಖರೀದಿಸಿ ಮೂರು ತಿಂಗಳು ಆದ ನಂತರ ನೀವು ಅದನ್ನು ವಾಪಸ್ ಮಾಡಬಹುದು.
ಆಗ ನೀವು ಡೆಪಾಸಿಟ್ ಮಾಡಿದ ಮೊತ್ತವು ನಿಮಗೆ ವಾಪಸ್ ಸಿಗುತ್ತದೆ. ಜೀವನ್ ಅಕ್ಷಯ್ 7 ಪಾಲಿಸಿಯಲ್ಲಿ ಇರುವ ಹತ್ತು ಆಯ್ಕೆಗಳಲ್ಲಿ ನೀವು ಯಾವ ಆಯ್ಕೆಯನ್ನು ಸೆಲೆಕ್ಟ್ ಮಾಡುತ್ತೀರಾ ಎನ್ನುವುದರ ಆಧಾರದ ಮೇಲೆ ಖಲೀದಿದಾರರ ಮರಣದ ನಂತರ ಆ ಹಣ ನಾಮಿನಿಗೆ ಹೇಗೆ ಹೋಗಬೇಕು ಎನ್ನುವುದು ನಿರ್ಧಾರ ಆಗುತ್ತದೆ. 5 ಲಕ್ಷ ನೀವು ಡಿಪೋಸಿಟ್ ಮಾಡಿದರೆ ಪ್ರತಿ ವರ್ಷವೂ 26,225 ರೂಗಳನ್ನು ಪೆನ್ಷನ್ ಆಗಿ ಪಡೆಯುತ್ತೀರಿ. ಈ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ ವಿಡಿಯೋವನ್ನು ಪೂರ್ತಿಯಾಗಿ ನೋಡಿ.