ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು (PM Narendra Modi) 2018ನೇ ಇಸವಿಯಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ (PMKSY) ಎನ್ನುವ ಯೋಜನೆಯೊಂನ್ನು ದೇಶದ ರೈತರಿಗಾಗಿ ಪರಿಚಯಿಸಿದರು. ಇದುವರೆಗೂ ಕೂಡ ರೈತರಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತರಲಾಗಿದ್ದರಾದರೂ ಮೊಟ್ಟ ಮೊದಲ ಬಾರಿಗೆ ರೈತರಿಗೂ ಕೂಡ ಸಹಾಯಧನವನ್ನು ನೀಡುವಂತಹ ಯೋಜನೆ ಇದಾಗಿತ್ತು.
ಒಂದು ಆರ್ಥಿಕ ವರ್ಷದಲ್ಲಿ ಮೂರು ಕಂತುಗಳಲ್ಲಿ ಒಟ್ಟು ರೂ.6,000 ರೂಪಾಯಿಯನ್ನು ರೈತರ ಖಾತೆಗೆ DBT ಮೂಲಕ ವರ್ಗಾವಣೆ ಮಾಡುವ ಗುರಿ ಹೊಂದಿದ್ದ ಈ ಯೋಜನೆಯು ಇದುವರೆಗೂ ಯಶಸ್ವಿಯಾಗಿ ಹದಿನಾರು ಕಂತುಗಳನ್ನು ಪೂರೈಸಿದೆ. ಮಹಾರಾಷ್ಟ್ರದ ಯವತ್ನಾಲ್ ನಲ್ಲಿ (Yavathmal, Maharastra) ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿಗಳು ದೇಶದ ರೈತರ ಪರವಾಗಿ ಮಾತನಾಡಿ ಡಿಸೆಂಬರ್ ಮತ್ತು ಮಾರ್ಚ್ ನಡುವಿನ ಕಂತಿನ ಹಣವನ್ನು ಬಿಡುಗಡೆ ಮಾಡಿದ್ದಾರೆ.
ಈ ಸುದ್ದಿ ಓದಿ:-ಮೇವು ಕತ್ತರಿಸುವ ಯಂತ್ರ ಖರೀದಿಸಲು ಸರ್ಕಾರದಿಂದ 50% ಸಬ್ಸಿಡಿ ಸಮೇತ ಸಾಲ ಲಭ್ಯ, ಆಸಕ್ತರು ಅರ್ಜಿ ಸಲ್ಲಿಸಿ.!
ಈ ಬಾರಿ 9 ಕೋಟಿ ಗಿಂತ ಹೆಚ್ಚು ರೈತರ ಖಾತೆಗೆ DBT ಮೂಲಕ ಯಾವುದೇ ಮಧ್ಯವರ್ತಿ ಕಾಟ ಇಲ್ಲದೆ ಹಣ ಬಿಡುಗಡೆಯಾಗಿದೆ ಮತ್ತು ಏಷ್ಯಾದಲ್ಲಿ ಅತಿ ದೊಡ್ಡ DBT ಮೂಲಕ ಹಣ ಬಿಡುಗಡೆಯಾಗುತ್ತಿರುವ ಯೋಜನೆ ಎನ್ನುವ ಖ್ಯಾತಿಗೂ ಒಳಗಾಗಿದೆ. ಆರಂಭದಲ್ಲಿ ಇನ್ನು ಹೆಚ್ಚಿನ ರೈತರ ಖಾತೆಗೆ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಹಣ ಹೋಗುತ್ತಿತ್ತು.
ಈ ಸುದ್ದಿ ಓದಿ:- ಅಡಿಕೆ ತೋಟ ಮಾಡುವವರು ಯಾವುದೇ ಕಾರಣಕ್ಕೂ ಈ ತಪ್ಪನ್ನು ಮಾತ್ರ ಮಾಡಬೇಡಿ.!
ಯೋಜನೆ ಆರಂಭವಾದಾಗ ಈ ಯೋಜನೆಯ ಪ್ರಯೋಜನ ಪಡೆಯಲೇ ಅರ್ಹತಾ ಮಾನದಂಡಗಳನ್ನು ವಿಧಿಸಲಾಗಿತ್ತು ಅದನ್ನು ಮೀರಿಯೂ ಕೂಡ ಅನೇಕ ಅನರ್ಹರು ಸುಳ್ಳು ದಾಖಲೆಗಳನ್ನು ಸೃಷ್ಟಿಸಿ / ಸತ್ಯಾಂಶ ಮರೆ ಮಾಚಿ ಯೋಜನೆಗೆ ನೋಂದಾಯಿಸಿಕೊಂಡು ಸರ್ಕಾರಕ್ಕೆ ವಂ’ಚಿ’ಸುತ್ತಿದ್ದರು. ಈಗ ಇ-ಕೆವೈಸಿ ಮುಂತಾದ ವ್ಯವಸ್ಥೆಗಳನ್ನು ಕೈಕೊಂಡು ಪ್ರತಿ ವರ್ಷವೂ ಕೂಡ ಅನರ್ಹರ ರೈತರ ಹೆಸರನ್ನು ಪಟ್ಟಿಯಿಂದ ಕೈ ಬಿಡಲಾಗುತ್ತಿದೆ.
ನೀವು ಕೂಡ ಕಿಸಾನ್ ಸಮ್ಮಾನ್ ನಿಧಿ ಯೋಜನೆ :-
ಫಲಾನುಭವಿಗಳಾಗಿದ್ದು (beneficiary) 15 ಕಂತುಗಳ ಹಣ ಪಡೆದು 16ನೇ ಹಣ ಪಡೆಯಲು ಕಾತುರರಾಗಿದ್ದರೆ ಅಥವಾ ನಿಮ್ಮ ಖಾತೆಗೆ ಈಗಾಗಲೇ ಹಣ ಬಂದಿದೆ ಎನ್ನುವ ಕುತೂಹಲ ಹೊಂದಿದ್ದರೆ ನಾವು ಹೇಳುವ ಈ ವಿಧಾನದ ಮೂಲಕ ನಿಮ್ಮ ಖಾತೆಗೂ ಹಣ ತಲುಪಲಿದೆಯೇ ನಿಮ್ಮ ಹೆಸರು ಕೂಡ ಹಣ ಬಿಡುಗಡೆ ಆಗಿರುವ ರೈತರ ಲಿಸ್ಟ್ ನಲ್ಲಿ ಇದೆಯೇ ಎನ್ನುವುದನ್ನು ಈ ವಿಧಾನದ ಮೂಲಕ ಪರಿಶೀಲಿಸಿಕೊಳ್ಳಿ. ಕಿಸಾನ್ ಸಮ್ಮಾನ್ ನಿಧಿ ಹಣ ಪಡೆದಿರುವ ರೈತರ ಲಿಸ್ಟ್ ಬಿಡುಗಡೆ ಆಗಿದೆ ಇದನ್ನು ಪರಿಶೀಲಿಸುವ ವಿಧಾನ ಈ ರೀತಿ ಇದೆ.
https://www.pmkisan.gov.in/Rpt_BeneficiaryStatus_pub.aspx ಈ ಲಿಂಕ್ ಕ್ಲಿಕ್ ಮಾಡಿ PM-Kisan ವೆಬ್ಸೈಟ್ ತಲುಪುತ್ತೀರಿ
* Beneficiary list ಪಡೆಯಲು ನೀಡಿರುವ ಸೂಚನೆಗಳಂತೆ ಮೊದಲಿಗೆ ನಿಮ್ಮ ರಾಜ್ಯವನ್ನು ಸೆಲೆಕ್ಟ್ ಮಾಡಿ.
ಈ ಸುದ್ದಿ ಓದಿ:-ಬಾಡಿಗೆ ಮನೆಯಲ್ಲಿ ಇರುವವರಿಗೆ ಸಿಹಿ ಸುದ್ದಿ ಇನ್ಮುಂದೆ ಅಡ್ವಾನ್ಸ್ ಕೊಡುವ ಹಾಗಿಲ್ಲ.!
* ನಂತರ ನಿಮ್ಮ ಜಿಲ್ಲೆ, ತಾಲೂಕು, ಬ್ಲಾಕ್ ಮತ್ತು ನಿಮ್ಮ ಗ್ರಾಮವನ್ನು ಸೆಲೆಕ್ಟ್ ಮಾಡಿ ಗೇಟ್ ರಿಪೋರ್ಟ್ (get report) ಮೇಲೆ ಕ್ಲಿಕ್ ಮಾಡಿದರೆ ನಿಮ್ಮ ಗ್ರಾಮದಲ್ಲಿ ಯಾರೆಲ್ಲಾ 16ನೇ ಕಂತಿನ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಹಣ ಪಡೆಯಲು ಅರ್ಹರಾಗಿದ್ದಾರೆ ಯಾರ ಖಾತೆಗಳಿಗೆ ಹಣ ಬಿಡುಗಡೆಯಾಗಿದೆ ಲಿಸ್ಟ್ ತೆರೆಯುತ್ತದೆ.
* ಅದರಲ್ಲಿ ನಿಮ್ಮ ಹೆಸರು ಇದೆಯೇ ಎನ್ನುವುದನ್ನು ಅಲ್ಫಬೆಟ್ ಪ್ರಕಾರ ಚೆಕ್ ಮಾಡಿಕೊಳ್ಳುವ ಮೂಲಕ ನೀವು ಖಚಿತ ಪಡಿಸಿಕೊಳ್ಳಬಹುದು.