ಕರ್ನಾಟಕ ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರವು (Congress Government) ತಮ್ಮ ಸರ್ಕಾರವು ಅಧಿಕಾರಕ್ಕೆ ಬಂದರೆ ರಾಜ್ಯದ ಜನತೆಗಾಗಿ ಐದು ಗ್ಯಾರಂಟಿ ಯೋಜನೆಗಳನ್ನು (Gyaranty Scheme) ನೀಡುವುದಾಗಿ ಕರ್ನಾಟಕ ವಿಧಾನಸಭಾ ಚುನಾವಣೆ – 2023ರ ವೇಳೆ ಭರವಸೆ ನೀಡಿತ್ತು.
ಅಂತೆಯೇ ಈಗ ಅಧಿಕಾರ ಸ್ಥಾಪನೆಯಾಗಿ ಆರು ತಿಂಗಳ ತುಂಬುವುದರ ಒಳಗೆ ನೀಡಿದ್ದ ಭರವಸೆಯಂತೆ ಐದು ಯೋಜನೆಗಳನ್ನು ಕೂಡ ಜಾರಿಗೆ ತಂದಿದೆ. ರಾಜ್ಯದ ನಾಗರಿಕರು ಗೃಹ ಜ್ಯೋತಿ, ಅನ್ನಭಾಗ್ಯ, ಗೃಹಲಕ್ಷ್ಮಿ, ಶಕ್ತಿ ಯೋಜನೆ ಮತ್ತು ಯುವನಿಧಿ ಯೋಜನೆಗಳ ಪ್ರಯೋಜನ ಪಡೆಯುತ್ತಿದ್ದಾರೆ.
ಇವುಗಳಲ್ಲಿ ಗೃಹಲಕ್ಷ್ಮಿ ಯೋಜನೆಯನ್ನು (Gruhalakshmi Scheme) ಹೈ ಬಜೆಟ್ ಯೋಜನೆ ಎಂದು ಗುರುತಿಸಲಾಗಿದ್ದು, ಗೃಹಲಕ್ಷ್ಮಿ ಯೋಜನೆಯು ರಾಜ್ಯದಲ್ಲಿ ರೇಷನ್ ಕಾರ್ಡ್ ಹೊಂದಿರುವ ಕುಟುಂಬದ ಮುಖ್ಯಸ್ಥೆಯರಿಗೆ ಪ್ರತಿ ತಿಂಗಳು ಕುಟುಂಬ ನಿರ್ವಹಣೆಗಾಗಿ ರೂ.2000 ಸಹಾಯಧನವನ್ನು ನೀಡುವ ಯೋಜನೆಯಾಗಿದೆ.
ಈ ಸುದ್ದಿ ನೋಡಿ:- ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನೇಮಕಾತಿ…
ಆದಾಯ ತೆರಿಗೆ ಪಾವತಿದಾರರು ಮತ್ತು ಸರ್ಕಾರಿ ಉದ್ಯೋಗಸ್ಥರನ್ನು ಹೊಂದಿರುವ ಕುಟುಂಬದ ಮುಖ್ಯಸ್ಥೆ ಹೊರತುಪಡಿಸಿ APL ರೇಷನ್ ಕಾರ್ಡ್ ಸೇರಿದಂತೆ ರಾಜ್ಯದ 1.20 ಕೋಟಿ ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ 90% ಗಿಂತ ಹೆಚ್ಚು ಮಹಿಳೆಯರು ಕಳೆದ ಆರು ತಿಂಗಳಿನಿಂದ ಪ್ರತಿ ತಿಂಗಳು ರೂ.2000 ಪಡೆಯುತ್ತಿದ್ದಾರೆ.
ಆದರೆ ಯೋಜನೆ ಆರಂಭವಾದ ದಿನದಿಂದಲೂ ಕೂಡ ಒಂದಲ್ಲ ಒಂದು ರೀತಿಯ ತೊಂದರೆಗಳು ಎದುರಾಗುತ್ತಿದ್ದೆ. ಸಂಪೂರ್ಣವಾಗಿ ಯೋಜನೆಯನ್ನು ಯಶಸ್ವಿಯನ್ನಾಗಿಸಲು ಸರ್ಕಾರವು ಕೂಡ ಗೃಹಲಕ್ಷ್ಮಿ ಕ್ಯಾಂಪ್ ಗೃಹಲಕ್ಷ್ಮಿ ಪ್ರಗತಿ ಪರಿಶೀಲದ ಸಭೆ ಮತ್ತಿತರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸಮಸ್ಯೆ ಪರಿಹರಿಸಿ ಯೋಜನೆ ಹಣ ತಲುಪಿಸಬೇಕು ಎನ್ನುವ ಗುರಿಯನ್ನು ಹಾಕಿಕೊಂಡಿದೆ.
ಈಗ ಇದೇ ಗೃಹಲಕ್ಷ್ಮಿ ಯೋಜನೆ ಕುರಿತು ಸರ್ಕಾರದಿಂದ ಮತ್ತೊಂದು ಅಪ್ಡೇಟ್ ಇದೆ ಅದೇನೆಂದರೆ, ಗೃಹಲಕ್ಷ್ಮಿ ಯೋಜನೆಯ ಹಣವನ್ನು ಪ್ರತಿ ತಿಂಗಳ 20ನೇ ತಾರೀಖಿನ ಒಳಗಡೆ ಮಹಿಳೆಯರ ಖಾತೆಗೆ ವರ್ಗಾವಣೆ ಮಾಡಬೇಕು ಎನ್ನುವುದು ಸರ್ಕಾರದ ಆಶಯ ಅದರಂತೆ ಇತ್ತೀಚಿನ ತಿಂಗಳುಗಳಲ್ಲಿ ಪ್ರಯತ್ನವನ್ನು ಪಟ್ಟಿದೆ.
ಈ ಸುದ್ದಿ ನೋಡಿ:- ಇಂಜಿನಿಯರಿಂಗ್ ಓದಿ ಕೊಬ್ಬರಿ ಬಿಜಿನೆಸ್ ಮಾಡಿ, ಕೋಟಿ ದುಡಿದ 28 ವರ್ಷದ ಯುವಕ.!
ಈಗ 7ನೇ ಕಂತಿನ ಹಣವು (7th Month Installment) ಕೂಡ ಅದೇ ಸಮಯದೊಳಗೆ ಬಿಡುಗಡೆ ಆಗಲಿದೆಯೇ ಎಂದು ಫಲಾನುಭವಿಗಳು ಎದುರು ನೋಡುತ್ತಿದ್ದಾರೆ. ಇದಕ್ಕೆ ಸರ್ಕಾರ ಈ ಬಾರಿ ಸ್ವಲ್ಪ ಬದಲಾವಣೆ ಮಾಡಿ ಮಾರ್ಚ್ ತಿಂಗಳ ಎರಡು ಅಥವಾ ಮೂರನೇ ವಾರದಲ್ಲಿ ಗೃಹಲಕ್ಷ್ಮಿ ಹಣ ವರ್ಗಾವಣೆ ಮಾಡುವುದಾಗಿ ತಿಳಿಸಿದೆ.
ಮತ್ತು ಈ ವೇಳೆ ಹಣ ಪಡೆಯಲಾಗದ ಮಹಿಳೆಯರು ಮಾರ್ಚ್ ತಿಂಗಳ ಕೊನೆಯ ದಿನದವರೆಗೂ ಕಾಯಬೇಕು ಅಷ್ಟರ ಒಳಗೆ ಖಂಡಿತವಾಗಿಯೂ ಹಣ ಜಮೆ ಆಗುತ್ತದೆ ಎಂದು ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಇದರೊಂದಿಗೆ ತಾಂತ್ರಿಕ ಸಮಸ್ಯೆಗಳಿಂದಾಗಿ ಅಥವಾ ದಾಖಲೆಗಳಲ್ಲಿ ವ್ಯತ್ಯಾಸ ಇರುವ ಕಾರಣದಿಂದಾಗಿ ಈ ಹಿಂದಿನ ಕಂತಿನ ಹಣಗಳು ವರ್ಗಾವಣೆಯಾಗದೆ ಇದ್ದರೆ ಎಲ್ಲಾ ಹಣವು ಕೂಡ ಒಟ್ಟಿಗೆ ಏಳನೇ ಕಂತಿನ ಹಣದ ವರ್ಗಾವಣೆ ಸಮಯದಲ್ಲಿ ಸಿಗಲಿದೆ ಎಂದು ಕೂಡ ಇಲಾಖೆ ಭರವಸೆ ನೀಡಿದೆ. DBT ಮೂಲಕ ಹಣ ವರ್ಗಾವಣೆ ಯಾಗುತ್ತಿದ್ದು, ರೇಷನ್ ಕಾರ್ಡ್ ಇ-ಕೆವೈಸಿ, ಮತ್ತು ಬ್ಯಾಂಕ್ ಖಾತೆಗಳಿಗೆ ಆಧಾರ್ ಸೀಡಿಂಗ್ NPCI ಮ್ಯಾಪಿಂಗ್ ಆಗಿದೆಯೇ ಎನ್ನುವುದನ್ನು ಫಲಾನುಭವಿಗಳು ಪರಿಶೀಲಿಸಿಕೊಳ್ಳಬೇಕು.
ಈ ಸುದ್ದಿ ನೋಡಿ:- ಕೇವಲ 600 ರೂಪಾಯಿಗೆ ಸಿಗಲಿದೆ ಗ್ಯಾಸ್ ಸಿಲಿಂಡರ್.!
ಇದಾಗಿಯೂ ಹಣ ಪಡೆಯಲು ಸಮಸ್ಯೆ ಆಗಿದ್ದರೆ ಕೂಡಲೇ ಆಧಾರ್ ಕಾರ್ಡ್, ರೇಷನ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್ ಮತ್ತು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದಾಗ ಪಡೆದ ಅರ್ಜಿ ಸ್ವೀಕೃತಿ ಪ್ರತಿ ಜೊತೆ ಹೋಗಿ ತಾಲೂಕಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕಚೇರಿಯ CDPO ಅಧಿಕಾರಿಗಳನ್ನು ಭೇಟಿಯಾಗಿ ಸಮಸ್ಯೆ ಪರಿಹರಿಸಿಕೊಳ್ಳಬೇಕು ಎಂದು ಇಲಾಖೆ ಸೂಚನೆ ನೀಡಿದೆ.