ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಕೃಷಿ ಚಟುವಟಿಕೆ ಬೆಂಬಲಿಸುವುದಕ್ಕಾಗಿ ಹಾಗೂ ಅವರ ಸಮಸ್ಯೆ ಪರಿಹಾರ ಮಾಡುವುದಕ್ಕಾಗಿ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿವೆ. ಕೆಲವು ಯೋಜನೆಗಳಲ್ಲಿ ಪ್ರತ್ಯೇಕವಾಗಿ ಹಾಗೂ ಕೆಲವು ಯೋಜನೆಗಳಲ್ಲಿ ಒಟ್ಟಾಗಿ ಇದಕ್ಕಾಗಿ ಹಲವು ರೀತಿ ಶ್ರಮಿಸುತ್ತಿವೆ ಇಂತಹ ಉತ್ತಮವಾದ ಯೋಚನೆಗಳಲ್ಲಿ ಕಿಸಾನ್ ಸಮ್ಮಾನ್ ಯೋಜನೆಯೂ ಒಂದು. ಇದು ಕೇಂದ್ರ ಸರ್ಕಾರದ ಯೋಚನೆಯಾಗಿದ್ದು ದೇಶದಾದ್ಯಂತ ಎಲ್ಲಾ ರೈತರ ಖಾತೆಗೂ ವಾರ್ಷಿಕವಾಗಿ 6,000 ರೂ ಮೂರು ಕಂತುಗಳಲ್ಲಿ ಕೇಂದ್ರ ಸರ್ಕಾರದಿಂದ ಜಮೆ ಆಗಲಿದೆ.
ಈ ಯೋಜನೆ ಜಾರಿಗೆ ತಂದ ಖ್ಯಾತಿ ಮಾನ್ಯ ಪ್ರಧಾನ ಮಂತ್ರಿಯಾದ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ. ಇದರಂತೆ ರಾಜ್ಯ ಸರ್ಕಾರವೂ ಕೂಡ ಎರಡು ಕಂತುಗಳಲ್ಲಿ ನಾಲ್ಕು ಸಾವಿರ ರೂಗಳನ್ನು ರೈತರ ಖಾತೆಗಳಿಗೆ ಜಮೆ ಮಾಡುತ್ತಿದೆ. ಇದೇ ರೀತಿಯ ಇನ್ನೊಂದು ಕೇಂದ್ರ ಸರ್ಕಾರದ ಮಹತ್ವಪೂರ್ಣ ಯೋಜನೆ ಬೆಳೆ ಪರಿಹಾರ ಯೋಜನೆ.
ಕೃಷಿಯಲ್ಲಿ ರೈತರಿಗಾಗುತ್ತಿರುವ ಸಮಸ್ಯೆಗಳನ್ನು ಮನಗಂಡ ಸರ್ಕಾರ ರೈತರು ಬೆಳೆದ ಬೆಳಗಳಿಗೂ ಕೂಡ ವಿಮೆ ಇರಬೇಕೆಂದು ಪರಿಗಂಡು ಈ ರೀತಿ ಒಂದು ಯೋಜನೆಯನ್ನು ಜಾರಿಗೆ ತಂದಿದೆ. ಕಳೆದ ವರ್ಷದಿಂದಲೇ ಈ ಯೋಜನೆ ಬಗ್ಗೆ ಎಲ್ಲ ರೈತರಿಗೂ ಮಾಹಿತಿಯನ್ನು ಸಾಧ್ಯವಾದಷ್ಟು ಹಂಚಲು ಪ್ರಯತ್ನಪಟ್ಟಿದ್ದು, ಇದರ ಅರಿವು ಮೂಡಿಸಿಕೊಂಡ ರೈತರು ತಮ್ಮ ತಮ್ಮ ಬೆಳೆಗಳಿಗೆ ವಿಮೆ ಮಾಡಿಸಿದ್ದಾರೆ.
ಈ ರೀತಿ ವಿಮೆ ಮಾಡಿಸಿದವರಿಗೆ ಬೆಳೆ ಹಾನಿ ಆಗಿದ್ದಲ್ಲಿ ಸರ್ಕಾರ ಆ ವಿಮೆ ಹಣವನ್ನು ಭರಿಸಲಿದೆ. ಈಗ ಕಳೆದ ವರ್ಷ 2022ರ ಸಾಲಿನಲ್ಲಿ ಸಹ ಅನೇಕ ರೈತರುಗಳು ತಮ್ಮ ಬೆಳೆಗಳಿಗೆ ಪರಿಹಾರ ಪಡೆಯಲು ಅರ್ಜಿ ಸಲ್ಲಿಸಿದ್ದಾರೆ. ಈ ಹಣಕ್ಕಾಗಿ ನೀವು ಅಥವಾ ನಿಮ್ಮ ಕುಟುಂಬದವರು ಅರ್ಜಿ ಸಲ್ಲಿಸಿದ್ದರೆ ಈ ಮಾಹಿತಿ ಪೂರ್ತಿಯಾಗಿ ಓದಿ.
ಈಗಾಗಲೇ ಅರ್ಜಿ ಸಲ್ಲಿಕೆ ಆಗಿದ್ದು, ಅದರ ಪರಿಶೀಲನೆ ನಡೆದಿದೆ ಮುಂದಿನ ತಿಂಗಳಲ್ಲಿ ಇದರ ಪರಿಹಾರ ಹಣ ಕೂಡ ರೈತರ ಖಾತೆಗೆ ನೇರವಾಗಿ ಜಮೆ ಆಗಲಿದೆ. ಈಗ ಯಾವ ಯಾವ ಬೆಳೆಗಳಿಗೆ ಎಷ್ಟೆಷ್ಟು ಹಣ ಜಮೆ ಆಗಿದೆ ಎನ್ನುವ ಕುರಿತು ಜನರಿಗೆ ಆಸಕ್ತಿ ಆಗಿದೆ. ಕೆಲ ಮಾಹಿತಿ ಪ್ರಕಾರ ಕೆಲವು ಬೆಳೆಗಳ ಪರಿಹಾರ ಧನ ಇಷ್ಟಿರಲಿದೆ ಎನ್ನುವ ಅಂದಾಜು ಸಿಕ್ಕಿದೆ. ಅದರಂತೆ ತೊಗರಿ ಬೆಳೆಗೆ ಎಕರೆಗೆ ಏಳರಿಂದ ಹತ್ತು ಸಾವಿರ ರೂ, ಕಡಲೆ ಬೆಳೆಗೆ 2,000 ದಿಂದ 3500 ಗಳು, ದ್ರಾಕ್ಷಿ ಬೆಳಗ್ಗೆ ಎಕರೆಗೆ 75,000 ರೂಗಳು, ಮುಸುಕಿನ ಜೋಳ ಬೆಳಗ್ಗೆ 2000 ದಿಂದ 4000 ಗಳು ಈ ರೀತಿ ಬೆಳೆಗಳ ಆಧಾರದ ಮೇಲೆ ಅದರ ಪರಿಹಾರ ಧನವು ರೈತರ ಖಾತೆಗಳಿಗೆ ಜಮೆ ಆಗಲಿದೆ.
ಇದನ್ನು ಈ ರೀತಿ ರೈತರು ಗಣಿತ ಮಾಡಿಕೊಳ್ಳಬಹುದು. ಉದಾಹರಣೆಗೆ ತೊಗರಿ ಬೆಳೆಗೆ ಎಕರೆಗೆ 7,000 ಸಿಗುತ್ತದೆ ಎಂದರೆ ನೀವು ಮೂರು ಎಕರೆ ಹೊಂದಿರುವ ರೈತರಾಗಿದ್ದು ಅದಕ್ಕೆ ಸಂಬಂಧಪಟ್ಟ ಎಲ್ಲ ಮಾಹಿತಿ ಕೊಟ್ಟು ಅರ್ಜಿ ಹಾಕಿದ್ದರೆ 21,000ಗಳು ನಿಮ್ಮ ಕೈ ಸೇರಲಿದೆ. ಈ ಮಾಹಿತಿ ಬಗ್ಗೆ ಯಾವುದೇ ಗೊಂದಲ ಇದ್ದರೆ ಅಥವಾ ಈ ಯೋಜನೆ ಬಗ್ಗೆ ಹೆಚ್ಚಿನ ಮಾಹಿತಿ ಬೇಕಿದ್ದರೆ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಸಿಎಸ್‌ಸಿ ಕೇಂದ್ರಗಳಲ್ಲಿ ಭೇಟಿಯಾಗಿ ಇವುಗಳ ಬಗ್ಗೆ ಸಂಪೂರ್ಣ ಮಾಹಿತಿ ತಿಳಿದುಕೊಂಡು ಸದುಪಯೋಗ ಮಾಡಿಕೊಳ್ಳಿ.