ಕುರಿ ಕೋಳಿ ಸಾಕಾಣಿಕೆ ಎನ್ನುವುದು ಕೃಷಿಗೆ ಪೂರಕವಾದ ಕಸಬುಗಳಾಗಿವೆ. ಸಾಮಾನ್ಯವಾಗಿ ಹಳ್ಳಿಗಳಲ್ಲಿ ರೈತರು ಕೃಷಿ ಚಟುವಟಿಕೆ ಜೊತೆಗೆ ತಮ್ಮ ಕೃಷಿಗೆ ಅನುಕೂಲವಾಗಲಿ ಮತ್ತು ದೈನಂದಿಕ ಖರ್ಚು ವೆಚ್ಚಗಳಿಗೆ ತಕ್ಷಣಕ್ಕೆ ಹಣ ಸಿಗಲಿ ಎನ್ನುವ ಕಾರಣಕ್ಕಾಗಿ ಕುರಿ ಕೋಳಿ ಮೇಕೆ ಮತ್ತು ದನಕರು, ಎಮ್ಮೆ ಸಾಕಾಣಿಕೆ ಮಾಡಿಕೊಂಡಿರುತ್ತಾರೆ. ಇತ್ತೀಚೆಗೆ ಜೇನು ಸಾಕಾಣಿಕೆ ಮಾಡುವತ್ತ ಕೂಡ ರೈತರು ಗಮನ ಹರಿಸುತ್ತಿದ್ದಾರೆ.
ದಿನ ಕಳೆದಂತೆ ಹಳ್ಳಿಗಳಿಂದ ನಗರ ಪ್ರದೇಶಗಳಿಂದ ವಲಸೆ ಹೋಗುವವರ ಸಂಖ್ಯೆ ಹೆಚ್ಚಾಗುತ್ತಿದೆ. ಕೃಷಿಯಲ್ಲಿ ಹೆಚ್ಚಿನ ಆದಾಯ ಇಲ್ಲದೆ ಇರುವುದು ಇದಕ್ಕೆ ಕಾರಣವಾಗಿದೆ. ಹಾಗಾಗಿ ಸರ್ಕಾರವು ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದು ರೈತನ ಆರ್ಥಿಕ ಪರಿಸ್ಥಿತಿ ಸುಧಾರಿಸುವುದಕ್ಕಾಗಿ ಅನೇಕ ಯೋಜನೆಗಳ ಮೂಲಕ ಕ್ರಮ ಕೈಗೊಂಡಿದೆ. ದೇಶದಲ್ಲಿ ಸಾಕಷ್ಟು ಕೃಷಿಗೆ ಪೂರಕವಾದ ಯೋಜನೆಗಳು ಇರುವುದನ್ನು ನಾವು ಉದಾಹರಿಸಬಹುದು.
ಈ ಸುದ್ದಿ ಓದಿ:- ವಾಹನ ಪ್ರಿಯರಿಗೆ ಸಿಹಿ ಸುದ್ದಿ, ಮಾರುಕಟ್ಟೆಗೆ ಭರ್ಜರಿ ಎಂಟ್ರಿ ಕೊಟ್ಟ ಹೋಂಡಾ ಆಕ್ಟಿವಾ-ಇ ಸ್ಕೂಟಿ.!
ಸಾಲದಕ್ಕೆ ಈ ರೀತಿ ಕುರಿ ಕೋಳಿ ಸಾಕಾಣಿಕೆ, ಪಶುಸಂಗೋಪನೆ, ಹೈನುಗಾರಿಕೆ, ರೇಷ್ಮೆ ಸಾಕಾಣಿಕೆ, ಜೇನು ಸಾಕಾಣಿಕೆ ಮಾಡುವ ರೈತರನ್ನು ಕೂಡ ಪ್ರೋತ್ಸಾಹಿಸಿ ಸಾಂಪ್ರದಾಯಿಕ ಈ ಪದ್ಧತಿಗಳನ್ನು ಉಳಿಸುವ ಉದ್ದೇಶದಿಂದ ಇವುಗಳಿಗೆ ವಿಶೇಷ ಯೋಜನೆಗಳನ್ನು ಕೂಡ ಆರಂಭಿಸಿದೆ.
ಈ ರೀತಿ ಮಾಡಲು ಇಚ್ಛಿಸುವ ರೈತರಿಗೆ ಘಟಕ ವೆಚ್ಚಕ್ಕೆ ಸಬ್ಸಿಡಿ ರೂಪದ ಸಹಾಯಧನ ಅಥವಾ ಕಡಿಮೆ ಬಡ್ಡಿ ದರದಲ್ಲಿ ಸಹಾಯಧನ, ಕುರಿ ಕೋಳಿ ಪಶು ಖರೀದಿಗೂ ಕೂಡ ಕಡಿಮೆ ಬಡ್ಡಿಯ ಅಥವಾ ಸಬ್ಸಿಡಿ ರೂಪದ ಸಾಲ ಮತ್ತು ವಿಮೆಗಳನ್ನು ಮಾಡಿಕೊಡಲಾಗುತ್ತಿದೆ.
ಇಷ್ಟೆಲ್ಲಾ ಅನುಕೂಲತೆ ಮಾಡಿಕೊಳ್ಳುತ್ತಿರುವ ಈ ಯೋಜನೆಗಳನ್ನು ಸರಿಯಾಗಿ ಉಪಯೋಗಿಸಿಕೊಂಡಿದ್ದೆ ಆದಲ್ಲಿ ರೈತರು ತಾವಿರುವ ಸ್ಥಳದಲ್ಲಿಯೇ ದೊಡ್ಡ ಉದ್ಯಮಿಗಳಾಗುವುದರಲ್ಲಿ ಅನುಮಾನವೇ ಇಲ್ಲ ಸಣ್ಣ ಪ್ರಮಾಣದಲ್ಲಿ ಮಾತ್ರವಲ್ಲದೆ ದೊಡ್ಡ ಪ್ರಮಾಣದಲ್ಲಿ ಕೂಡ ಇದನ್ನು ಮಾಡಲು ಇಚ್ಚಿಸುವ ರೈತರಿಗೆ ಸರ್ಕಾರದ ಸಂಪೂರ್ಣ ಬೆಂಬಲ ಇರುತ್ತದೆ.
ಈ ಸುದ್ದಿ ಓದಿ:- ಪಶುಪಾಲನಾ ಇಲಾಖೆಯಲ್ಲಿ 1,100ಕ್ಕೂ ಹೆಚ್ಚು ಹುದ್ದೆಗಳಿಗೆ ಅವಕಾಶ, SSLC / PUC ಆದವರು ಅರ್ಜಿ ಸಲ್ಲಿಸಿ.! ವೇತನ 25,000
ನೀವು ಕೂಡ ಈ ಕುರಿತಾಗಿ ಆಸಕ್ತಿ ಹೊಂದಿದ್ದು ನೀವೇನಾದರೂ ಹಳ್ಳಿಯಲ್ಲಿ ಇದ್ದುಕೊಂಡು ಈ ರೀತಿ ದೊಡ್ಡ ಪ್ರಮಾಣದಲ್ಲಿ ಕುರಿಗಳ ಸಾಕಾಣಿಕೆ ಕೋಳಿ ಸಾಕಾಣಿಕೆ ಹೈನುಗಾರಿಕೆ ಮಾಡಬೇಕು ಮತ್ತು ಈ ಕ್ಷೇತ್ರದಲ್ಲಿ ಅಭಿವೃದ್ಧಿಯಾಗಬೇಕು ಎಂದು ಬಯಸಿದ್ದರೆ ಸರ್ಕಾರ ಸಹಾಯ ಮಾಡಲು ಅರ್ಜಿ ಆಹ್ವಾನ ಮಾಡಿದೆ.
ಈ ಕೂಡಲೇ ನಾವು ಹೇಳುವ ದಾಖಲೆಗಳನ್ನು ತೆಗೆದುಕೊಂಡು ಸರಿಯಾದ ರೀತಿಯಲ್ಲಿ ಅರ್ಜಿ ಸಲ್ಲಿಸಿದರೆ ನಿಮಗೆ ಸರ್ಕಾರದ Natinal Livestock Mission ಸಹಾಯಧನ ನೇರವಾಗಿ ನಿಮ್ಮ ಖಾತೆಗೆ ಸೇರುತ್ತದೆ. ನಿಮ್ಮ ಯೋಜನೆಯ ಗಾತ್ರದ ಆಧಾರವಾಗಿ ನಿಮಗೆ ಗರಿಷ್ಟ ರೂ.50 ಲಕ್ಷದವರೆಗೂ ಕೂಡ ಸರ್ಕಾರದಿಂದ ನೆರವು ಸಿಗುತ್ತದೆ.
ಎಲ್ಲಿ ಮತ್ತೆ ಹೇಗೆ ಸಲ್ಲಿಸಬೇಕು :-
* 18 ವರ್ಷ ಮೇಲ್ಪಟ್ಟಿರುವ ಯಾವುದೇ ರೈತರು ಈ ಯೋಜನೆಗಳಿಗೆ ಅರ್ಜಿ ಸಲ್ಲಿಸಬಹುದು ಇದಕ್ಕಾಗಿ ಕೇಳಲಾಗುವ ಕೆಲ ದಾಖಲೆಗಳನ್ನು ಸಿದ್ಧಗೊಳಿಸಿಕೊಳ್ಳಬೇಕಾದದ್ದು ರೈತನ ಜವಾಬ್ದಾರಿ ಇವುಗಳ ಪರಿಶೀಲನೆಯಾಗಿ ಅನುಮೋದನೆಯಾದರೆ ಮಾತ್ರ ಸರ್ಕಾರದಿಂದ ಸಹಾಯಧನ ಸಿಗುವುದು.
* ನೀವು ಹತ್ತಿರದ ಸೈಬರ್ ಸೆಂಟರ್ (cyber centre) ಗೆ ಹೋಗಿ ಅಗತ್ಯ ದಾಖಲೆಗಳನ್ನು ನೀಡಿ ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಬಹುದು ಅಥವಾ ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ಗಳಲ್ಲಿ ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಬಹುದು.
* ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ಪಶುಪಾಲನ ಇಲಾಖೆ ಅಥವಾ ಪಶು ವೈದ್ಯರನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಯಿರಿ
* ಅರ್ಜಿ ಸಲ್ಲಿಸಲು ಮತ್ತು ಹೆಚ್ಚಿನ ವಿವರಕ್ಕಾಗಿ ಈ ವೆಬ್ ಸೈಟ್ ಗೆ ಭೇಟಿ ಕೊಡಿ
https://nlm.udyamimitra.in/
ಬೇಕಾಗುವ ದಾಖಲೆಗಳು:-
* ಭೂ ದಾಖಲೆ ಅಥವಾ ಪಹಣಿ ಪತ್ರ
* ಆಧಾರ್ ಕಾರ್ಡ್
* ಪ್ಯಾನ್ ಕಾರ್ಡ್
* ರೈತರ ಹೊಲದ GPS ಫೋಟೋ
* ಸ್ವಂತ ಭೂಮಿ ಇಲ್ಲದೆ ಇರುವವರು ಬಾಡಿಗೆ ಭೂಮಿ ಪಡೆದಿದ್ದರೆ ಅದರ ಅಗ್ರಿಮೆಂಟ್ ಪೇಪರ್
* ತರಬೇತಿ ಪತ್ರ ಅಥವಾ ಅನುಭವ ಹೊಂದಿರುವ ಸ್ವಯಂ ಘೋಷಣ ಪತ್ರ.