ಇತ್ತೀಚಿಗೆ ಜನರು ಇಕೋ ಫ್ರೆಂಡ್ಲಿಯಾಗಿ (eco – friendly) ಬದುಕಲು ಇಚ್ಛಿಸುತ್ತಿದ್ದಾರೆ. ವಾಯು ಮಾಲಿನ್ಯದ ಮೇಲೆ ಗಂಭೀರ ಪರಿಣಾಮ ಬೀರುವ ಸಂಗತಿಗಳಲ್ಲಿ ವಾಹನಗಳಿಂದ ಉಂಟಾಗುತ್ತಿರುವ ಹೊಗೆ ಕೂಡ ಬಹುದೊಡ್ಡ ಪಾಲು ಹೊಂದಿದೆ.
ಇದೀಗ ಈ ಬಗ್ಗೆ ಎಚ್ಚೆತ್ತುಕೊಂಡಿರುವ ಸರ್ಕಾರಗಳು ಅನೇಕ ಪರಿಸರ ಸ್ನೇಹಿ ಜಾರಿಗೆ ತಂದು ಇದನ್ನಕ್ಕೆ ನಿಯಂತ್ರಣದಲ್ಲಿ ತರಲು ಪ್ರಯತ್ನಿಸುತ್ತಿದ್ದಾರೆ ಮತ್ತು ಜನರಲ್ಲಿ ಎಲೆಕ್ಟ್ರಿಕಲ್ ವಾಹನಗಳ ಬಳಕೆಯನ್ನು ಉತ್ತೇಜಿಸಲು ವಿಶೇಷ ಕ್ರಮಗಳನ್ನು ಕೈಕೊಂಡು ಗುರಿ ಹೊಂದಿದ್ದಾರೆ.
ಅದೇ ಸಮಯದಲ್ಲಿ ಗ್ರಾಹಕರ ಇಚ್ಛೆಯನ್ನು ಅರಿತ ವಾಹನ ತಯಾರಿಕ ಕಂಪನಿಗಳು ಕೂಡ ಇತ್ತೀಚಿಗೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮತ್ತು ವಿಶಿಷ್ಟತೆಯಲ್ಲಿ ಎಲೆಕ್ಟ್ರಿಕಲ್ ವಾಹನಗಳನ್ನು (Electrical Vehicle) ಪರಿಚಯಿಸುತ್ತಿವೆ. ಪ್ರತಿಷ್ಠಿತ ಕಂಪನಿಗಳು ಹಾಗೂ ಸ್ಟಾರ್ಟ್ ಅಪ್(Start up) ಕಂಪನಿಗಳು ಹೊಸ ಹೊಸ ಟೆಕ್ನಾಲಜಿಯನ್ನು ಬಳಸಿಕೊಂಡು ಹೊಸ ಹೊಸ ರೀತಿಯ ಆವಿಷ್ಕಾರ ನಡೆಸಿ ಎಲೆಕ್ಟ್ರಿಕ್ ಸ್ಕೂಟರ್ ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿವೆ.
ಈ ಸುದ್ದಿ ಓದಿ:- ಸ್ಕೂಟರ್ ಖರೀದಿಗೆ ಸರ್ಕಾರದಿಂದ ಸಿಗಲಿದೆ 40,000 ಸಹಾಯಧನ.!
ಬೆಲೆ ಮತ್ತು ಫೀಚರ್ಸ್ ವಿಷಯದಲ್ಲಿ ಈಗಾಗಲೇ ಮಾರುಕಟ್ಟೆಯಲ್ಲಿ ಎಲೆಕ್ಟ್ರಿಕಲ್ ಸ್ಕೂಟರ್ ಗಳ ವಿಷಯದಲ್ಲಿ ಹೆವಿ ಕಾಂಪಿಟೇಶನ್ ಇದ್ದು ಈಗ ಹೋಂಡಾ ಆಕ್ಟಿವಾ-ಇ(Honda Activa-E) ಕೂಡ ಬಿಡುಗಡೆಯಾಗಿ ಸೆಡ್ಡು ಹೊಡೆಯಲು ಸಿದ್ಧವಾಗಿದೆ. ಪ್ರಭಾವಶಾಲಿ ವೈಶಿಷ್ಟ್ಯಗಳು ಮತ್ತು ಬಜೆಟ್ – ಸ್ನೇಹಿ ಬೆಲೆಯಲ್ಲಿರುವ(Budget -friendly prices), ಈ ಸ್ಕೂಟರ್ ದಿನನಿತ್ಯದ ಬಳಕೆಗೆ ಮತ್ತು ದೀರ್ಘ ಪ್ರಯಾಣಗಳಿಗೆ ಅತ್ಯಂತ ಅನುಕೂಲಕರ ನೂತನ Honda Activa – E ಎಲೆಕ್ಟ್ರಿಕಲ್ ಬೈಕ್ ವೈಶಿಷ್ಟತೆಗಳೇನು? ಯಾವುದರಲ್ಲಿ ಬೆಸ್ಟ್? ಇತ್ಯಾದಿ ವಿವರ ಹೀಗಿದೆ ನೋಡಿ.
* ಈ ಬೈಕ್ ಒಂದೇ ಚಾರ್ಜ್ನಲ್ಲಿ 200 ಕಿಲೋಮೀಟರ್ಗಳ ಮೈಲೇಜ್ ಕೊಡುತ್ತದೆ ಹಾಗಾಗಿ ಯಾವುದೇ ಅಡ್ಡ ತಡೆಯಿಲ್ಲದೆ ನಿಮ್ಮ ಪ್ರಯಾಣದ ನಿರ್ದಿಷ್ಟ ಗುರಿ ತಲುಪಬಹುದು
* ಶಕ್ತಿಯುತ 36Ah ಲಿಥಿಯಂ- ಐಯಾನ್ ಬ್ಯಾಟರಿ(Lithium-ion battery) 3-4 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದಾದ ಬ್ಯಾಟರಿ ಚಾರ್ಜ್ ಆಗುವುದಕ್ಕೆ ಸಹಾಯ ಮಾಡುತ್ತದೆ.
* ಮುಖ್ಯವಾಗಿ Honda Activa-E ಯಾವುದೇ ಹೊಗೆ ಅಥವಾ ಶಬ್ದ ಮಾಲಿನ್ಯವನ್ನು ಉಂಟುಮಾಡದೇ ಇರುವುದೇ ಮೊದಲ ಆದ್ಯತೆ ಎನ್ನಬಹುದು.
* 250-ವ್ಯಾಟ್ PMSM ಎಂಜಿನ್ 80 km/h ವೇಗವನ್ನು ನೀಡುತ್ತದೆ, ಇದು ಇಳಿಜಾರಾದ ರಸ್ತೆಗಳಲ್ಲಿಯೂ ಸಹ ಪ್ರಯತ್ನವಿಲ್ಲದ ವೇಗವರ್ಧನೆ ಮತ್ತು ಸುಗಮ ಸವಾರಿ ಅನುಭವವನ್ನು ಖಚಿತಪಡಿಸುತ್ತದೆ.
ಈ ಸುದ್ದಿ ಓದಿ:-ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆಯ ಎಲ್ಲಾ ಪೆಂಡಿಂಗ್ ಹಣ ಜಮೆ ಹೀಗೆ ಚೆಕ್ ಮಾಡಿ.!
* ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ವೇಗ, ಬ್ಯಾಟರಿ ಮಟ್ಟ ಮತ್ತು ಟ್ರಿಪ್ ಓಡೋಮೀಟರ್ನ ಪ್ರಾಮುಖ್ಯತೆಯನ್ನು ತೋರುತ್ತದೆ.
* LED ಹೆಡ್ಲ್ಯಾಂಪ್ಗಳು ಮತ್ತು ಟೈಲ್ಲೈಟ್ಗಳು ಇದ್ದು, ಅಟ್ರಾಕ್ಷನ್ ಲುಕ್ ಮತ್ತು ಬೆಳಕಿನ ಸ್ಪಷ್ಟತೆಯನ್ನು ಬೆಂಬಲಿಸುತ್ತದೆ.
* ಸೀಟಿನ ಕೆಳಗಿನ ವಿಶಾಲವಾದ ಸ್ಪೇಸ್ ಇದ್ದು, ನಿಮ್ಮ ಹೆಲ್ಮೆಟ್ ಮತ್ತು ಇನ್ನಿತರ ಅಗತ್ಯ ವಸ್ತುಗಳನ್ನು ಇಟ್ಟುಕೊಳ್ಳಬಹುದು.
* ಎಲ್ಲದ್ದಕ್ಕಿಂತ ಮುಖ್ಯವಾದ ವಿಚಾರ ಬೆಲೆ ವಿಚಾರವೇ ಆಗಿದೆ. ಈ ವಿಚಾರವಾಗಿ ಕೂಡ ಗ್ರಾಹಕರಿಗೆ ಬಜೆಟ್ ಪ್ರಿಯವಾಗಿದೆ ಯಾಕೆಂದರೆ ಶೋರೂಮ್ ಆರಂಭಿಕ ಬೆಲೆಯೇ ರೂ.80,000 ಕ್ಕೆ ಸಿಗುತ್ತಿದ್ದು ಬಹಳ ಸುಲಭವಾದ EMI ಸೌಲಭ್ಯವು ಕೂಡ ಲಭ್ಯವಿದೆ. ವಾಹನ ಪ್ರಿಯರಿಗೆ ಹಾಗೂ ಎಲೆಕ್ಟ್ರಿಕಲ್ ವಾಹನ ಖರೀದಿಸಬೇಕು ಎಂದು ಆಸಕ್ತಿ ಇದ್ದವರಿಗೆ ಬಹಳ ಉತ್ತಮ ಅವಕಾಶವಾಗಿದ್ದು ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಶೋರೂಮ್ ಗೆ ಭೇಟಿ ಕೊಡಿ.