Deprecated: strtolower(): Passing null to parameter #1 ($string) of type string is deprecated in /home/u302298408/domains/rishithepower.com/public_html/wp-content/plugins/taboola/simple_html_dom.php on line 712
ರೈಲಿನಲ್ಲಿ ಪ್ರಯಾಣ (Railway) ಬಹಳ ಅನುಕೂಲಕರ ಹೀಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ತಮ್ಮ ದಿನನಿತ್ಯದ ಪ್ರಯಾಣದಿಂದ ಹಿಡಿದು ತೀರ್ಥಯಾತ್ರೆ ಹೋಗುವವರೆಗೂ ಕೂಡ ರೈಲು ಪ್ರಯಾಣವನ್ನೇ (travel) ಅವಲಂಬಿಸುತ್ತಾರೆ. ಮನೆಯಲ್ಲಿ ಇದ್ದ ಪ್ರಯಾಣದ ಅನುಭವದ ಜೊತೆಗೆ ಕುಟುಂಬ ಪೂರ್ತಿಯಾಗಿ ವಿಶ್ರಾಂತಿ ತೆಗೆದುಕೊಂಡು ಹಾಗೂ ಹೆಚ್ಚಿನ ಭದ್ರತೆಯೊಂದಿಗೆ ಪ್ರಯಾಣಿಸಬಹುದು ಎನ್ನುವ ಮತ್ತು ಇನ್ನಿತರ ಕಾರಣದಿಂದಾಗಿ ರೈಲು ಪ್ರಯಾಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿದೆ.
ಹೀಗೆ ದಿನದಿಂದ ದಿನಕ್ಕೆ ರೈಲು ಪ್ರಯಾಣ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ರೈಲ್ವೆ ಇಲಾಖೆಯೂ (Railway Department) ಕೂಡ ದೇಶದ ನಾಗರಿಕರಿಗೆ ಅನುಕೂಲವಾಗುವಂತಹ ಕಾನೂನು ಮತ್ತು ನಿಯಮಗಳನ್ನು ಮಾಡಿ ಇನ್ನು ಹತ್ತಿರವಾಗುತ್ತಿದೆ. ಸದ್ಯಕ್ಕೆ ನಮ್ಮ ಭಾರತೀಯ ರೈಲ್ವೆ ಇಲಾಖೆ ಕಡೆಯಿಂದ ದೇಶದ ಮಹಿಳೆಯರಿಗಾಗಿ (facilities for Womens) ವಿಶೇಷ ಸವಲತ್ತುಗಳು ಇದ್ದು ಪ್ರತಿಯೊಬ್ಬ ಮಹಿಳೆಯು ಕೂಡ ಇದನ್ನು ತಿಳಿದುಕೊಂಡಿರಲೇಬೇಕು ಹಾಗಾಗಿ ಈ ಅಂಕಣದಲ್ಲಿ ಇದರ ಬಗ್ಗೆ ಪ್ರಸ್ತಾಪಿಸುತ್ತಿದ್ದೇವೆ.
ಈ ಸುದ್ದಿ ಓದಿ:- ಹೊಸ ಮನೆ ಕಟ್ಟುವವರಿಗೆ ಸಿಹಿ ಸುದ್ದಿ.! ಈ ಬ್ಯಾಂಕ್’ಗಳಲ್ಲಿ ಸಿಗಲಿದೆ ಅತೀ ಕಡಿಮೆ ಬಡ್ಡಿಗೆ ಸಾಲ.!
ಮಹಿಳಾ ಸಬಲೀಕರಣವನ್ನು (Women Empowerment) ಉತ್ತೇಜಿಸಲು ಪ್ರತಿ ವರ್ಷ ಮಾರ್ಚ್ 8 ರಂದು ಅಂತರರಾಷ್ಟ್ರೀಯ ಮಹಿಳಾ ದಿನವನ್ನು (Internation Womens day) ಆಚರಿಸಲಾಗುತ್ತದೆ. ಈ ಸಮಯದಲ್ಲಿ ರೈಲಿನಲ್ಲಿ ಮಹಿಳೆಯರಿಗೆ ಸುರಕ್ಷಿತ ವಾತಾವರಣ ನಿರ್ಮಿಸಲು ಭಾರತ ಸರ್ಕಾರ ಕೆಲವು ಹೊಸ ಕ್ರಮಗಳನ್ನು ಕೈಗೊಳ್ಳುತ್ತಿದೆ, ಇದೆಲ್ಲದರ ಬಗ್ಗೆ ವಿವರ ಹೀಗಿದೆ ನೋಡಿ.
ರೈಲ್ವೆ ಇಲಾಖೆಯಲ್ಲಿ ಮಹಿಳಾ ಪ್ರಯಾಣಿಕರಿಗೆ ಇರುವ ವಿಶೇಷ ಸೌಲಭ್ಯಗಳು:-
* ಟಿಕೆಟ್ ಇಲ್ಲದೆ ರೈಲಿನಲ್ಲಿ ಪ್ರಯಾಣಿಸುವುದು ಕಾನೂನುಬಾಹಿರ, ಇದಕ್ಕೆ ದಂಡ ವಿಧಿಸಲಾಗುತ್ತದೆ ಆದರೂ ಯಾವುದಾದರೂ ಸಮಯದಲ್ಲಿ ಕೆಲವು ಕಾರಣಗಳಿಂದ ಮಹಿಳೆ ಏನಾದರೂ ಟಿಕೆಟ್ ಇಲ್ಲದೆ ರೈಲಿನಲ್ಲಿ ಪ್ರಯಾಣಿಸುತ್ತಿದ್ದರೆ TC ಅಂತಹ ಮಹಿಳೆಯರನ್ನು ರೈಲಿನಿಂದ ಇಳಿಸುವಂತಿಲ್ಲ, ಒಂದು ವೇಳೆ ರೈಲಿನಿಂದ ಕೆಳಗೆ ಇಳಿಸಿದರೆ RPF / GRP ಸುಪರ್ಧಿಗೆ ಒಪ್ಪಿಸಬೇಕು, ಅವರು ಆಕೆಯ ಸುರಕ್ಷತೆಯ ಜವಾಬ್ದಾರಿಯನ್ನು ಹೊಂದಿರುತ್ತದೆ. TC ಏನಾದರೂ ಹೀಗೆ ಮಾಡಿದರೆ ಮಹಿಳೆಯು ಆ TC ವಿರುದ್ಧ ರೈಲ್ವೆ ಪ್ರಾಧಿಕಾರಕ್ಕೆ ದೂರು ನೀಡಿ ನ್ಯಾಯ ಪಡೆಯಬಹುದು.
* ಗರ್ಭಿಣಿಯರು, ಹಿರಿಯ ನಾಗರಿಕರು, 45 ವರ್ಷ ಮೇಲ್ಪಟ್ಟ ಮಹಿಳೆಯರು ರೈಲಿನಲ್ಲಿ ಪ್ರಯಾಣ ಮಾಡುವಾಗ ವಿಶೇಷ ಕೋಟಾದಡಿ ಸೀಟು ಹಂಚಿಕೆ ಮಾಡಲಾಗಿದೆ. ಪ್ರತಿ ಸ್ಲೀಪರ್ ಕೋಚ್ನಲ್ಲಿ ಲೋವರ್ ಬರ್ತ್ ಮಹಿಳೆಯರಿಗೆ ಮೀಸಲಾಗಿದೆ. ಉಪನಗರ ಅಥವಾ ಸ್ಥಳೀಯ ರೈಲುಗಳಲ್ಲಿ ಮಹಿಳೆಯರಿಗಾಗಿಯೇ ಪ್ರತ್ಯೇಕ ಕೋಚ್ ಮೀಸಲಿಟ್ಟು ಹಲವು ರೈಲುಗಳನ್ನು ಓಡಿಸಲಾಗುತ್ತಿದೆ. ದೇಶದ ಎಲ್ಲ ಮಹಿಳೆಯರು ಇದರ ಪ್ರಯೋಜನ ಪಡೆಯಬಹುದು. ಈ ರೈಲುಗಳ ಬಗ್ಗೆ ರೈಲ್ವೇ ಕಚೇರಿಗೆ ಭೇಟಿ ನೀಡಿ ಮಾಹಿತಿ ತಿಳಿಯಬಹುದು.
ಈ ಸುದ್ದಿ ಓದಿ:-ಅಂಗನವಾಡಿ ಟೀಚರ್ ಹುದ್ದೆ ನೇರ ನೇಮಕಾತಿ, SSLC ಆದವರೂ ಅರ್ಜಿ ಹಾಕಿ..
* ಹಲವು ರೈಲು ನಿಲ್ದಾಣಗಳಲ್ಲಿ ಮಹಿಳೆಯರಿಗೆಂದೇ ಪ್ರತ್ಯೇಕ ಕಾಯುವ ಕೊಠಡಿಗಳು ಕೂಡ ಇವೆ.
* ರೈಲು ನಿಲ್ದಾಣದಲ್ಲಿ ಯಾವುದೇ ರೀತಿಯ ಸಮಸ್ಯೆ ಎದುರಾದಾಗ ಮಹಿಳಾ ಪ್ರಯಾಣಿಕರು 182ಕ್ಕೆ ಕರೆ ಮಾಡುವ ಮೂಲಕ ಭದ್ರತಾ ನೆರವು ಪಡೆಯಬಹುದು.
* ಮಹಿಳಾ ಸುರಕ್ಷತೆ ಮತ್ತು ಲಿಂಗ ಸಂವೇದನೆ ಮತ್ತು ಅಖಿಲ ಭಾರತ ಭದ್ರತಾ ಸಹಾಯವಾಣಿಯನ್ನು ಮೇಲ್ದರ್ಜೆಗೆ ಏರಿಸುವುದರೊಂದಿಗೆ ರೈಲ್ವೆ ಇಲಾಖೆಯ ತಿಂಗಳವಾರು ಚಟುವಟಿಕೆಗಳ ಕ್ಯಾಲೆಂಡರ್ ಪರಿಚಯಿಸಲಿದ್ದೇವೆ. ಸಬ್ ಅರ್ಬನ್ ರೈಲುಗಳ ಮಹಿಳಾ ಬೋಗಿಗಳಲ್ಲಿ ಸಾಧ್ಯವಾದರೆ ಲೈವ್ ಫೀಡ್ನೊಂದಿಗೆ ಸಿಸಿಟಿವಿ ಕ್ಯಾಮೆರಾಗಳು.
ಈ ಸುದ್ದಿ ಓದಿ:-ಸ್ಕೂಟರ್ ಖರೀದಿಗೆ ಸರ್ಕಾರದಿಂದ ಸಿಗಲಿದೆ 40,000 ಸಹಾಯಧನ.!
ರೈಲು ನಿಲುಗಡೆ ಸಮಯದಲ್ಲಿ ಮಹಿಳಾ ಕೋಚ್ಗಳನ್ನು ಮುಚ್ಚಲು ಪ್ಲಾಟ್ಫಾರ್ಮ್ಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳು, ಮಹಿಳೆಯರಿಗೆ ಸಂಬಂಧಿಸಿದ ಅಪರಾಧಗಳಿಗೆ ವರ್ಧಿತ ಶಿಕ್ಷೆಯನ್ನು ಖಚಿತಪಡಿಸಿಕೊಳ್ಳಲು ರೈಲ್ವೇ ಕಾಯ್ದೆಯಲ್ಲಿ ತಿದ್ದುಪಡಿಯನ್ನು ಸಹ ತರುವ ಬಗ್ಗೆ ಚಿಂತನೆ ನಡೆಯುತ್ತದೆ. ಈ ಬಗ್ಗೆ ಇಲಾಖೆ ಉನ್ನತ ಅಧಿಕಾರಿಗಳೊಬ್ಬರು ಮಾಹಿತಿ ನೀಡಿದ್ದಾರೆ.