ಆಧಾರ್ (Aadhar) ಕುರಿತಂತೆ ಕಳೆದ ವರ್ಷ ಒಂದು ಆದೇಶ ಹೊರಡಿಸಲಾಗಿತ್ತು, ದೇಶದ ನಾಗರಿಕರಿಗೆ ಆಧಾರ್ ಕಾರ್ಡ್ ಗುರುತಿನ ಚೀಟಿಯನ್ನು ನೀಡುವ ಭಾರತದ ಸಂಸ್ಥೆಯಾದ ಭಾರತೀಯ ವಿಶಿಷ್ಟ ಗುರುತಿನ ಪ್ರಾಧಿಕಾರವು (UIDAI) ಕಳೆದ ಹತ್ತು ವರ್ಷಗಳಿಂದ ಯಾರು ಒಮ್ಮೆ ಕೂಡ ಆಧಾರ್ ಕಾರ್ಡ್ ರಿನೀವಲ್ (Aadhar renewal) ಮಾಡಿಲ್ಲ ಅವರಿಗೆ ಆಧಾರ್ ಅಪ್ಡೇಟ್ (Aadhar Update Compulsory) ಮಾಡಿಸುವುದು ಕಡ್ಡಾಯಗೊಳಿಸಿ ಆನ್ಲೈನ್ನಲ್ಲಿ ಮತ್ತು ಆಫ್ಲೈನ್ ನಲ್ಲಿ ಸರಳವಾಗಿ ಇದನ್ನು ಹಾಗೂ ಉಚಿತವಾಗಿ ಮಾಡಿಕೊಳ್ಳಲು ಅವಕಾಶ ಕೂಡ ನೀಡಿತ್ತು.
ಆಧಾರ್ ಕಾರ್ಡ್ ನಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ವಿಭಿನ್ನವಾದ 12 ಅಂಕಿಗಳ ಆಧಾರ್ ಗುರುತಿನ ಸಂಖ್ಯೆ, ಆ ವ್ಯಕ್ತಿಯ ಹೆಸರು, ಲಿಂಗ, ಹುಟ್ಟಿದ ದಿನಾಂಕ, ಮೊಬೈಲ್ ಸಂಖ್ಯೆ, ಇಮೇಲ್ ಐಡಿ, ಪ್ರಸ್ತುತ ವಿಳಾಸ ಶಾಶ್ವತ ವಿಳಾಸ, ಭಾವಚಿತ್ರ ಮತ್ತು ಆತನ ಐರಿಸ್ ಫಿಂಗರ್ಪ್ರಿಟ್ ಸೇರಿದಂತೆ ಸ್ವ ವಿವರಗಳು ಇರುತ್ತದೆ. ಆದರೆ ಕಳೆದ ಹತ್ತು ವರ್ಷಗಳಲ್ಲಿ ಸಾಕಷ್ಟು ಜನರ ದಾಖಲೆಗಳಲ್ಲಿ ಇವು ಬದಲಾಗಿರುತ್ತದೆ ಮತ್ತು ನಾಗರಿಕರು ಅದನ್ನು ಬದಲಾಯಿಕೊಳ್ಳದೇ ಬಳಸುತ್ತಿರುತ್ತಾರೆ.
ಈ ಸುದ್ದಿ ಓದಿ:- KSRLPS ನೇಮಕಾತಿ 2024, ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ ಆಸಕ್ತರು ಅರ್ಜಿ ಸಲ್ಲಿಸಿ
ಇದರಿಂದ ಸರಿಯಾದ ಡಾಟಾ ಸಂಗ್ರಹಣೆ ಆಗುವುದಿಲ್ಲ ಹಾಗೆಯೇ ಅವರ ಮುಖ ಚಹರೆ ಬಯೋಮೆಟ್ರಿಕ್ ಎಲ್ಲವೂ ಬದಲಾಗಿರುತ್ತದೆ. ಆದ್ದರಿಂದ ಇದನ್ನು ಅಪ್ಡೇಟ್ ಮಾಡುವುದು ಅನಿವಾರ್ಯ ಎಂದು ಇಂತಹದೊಂದು ನಿಯಮವನ್ನು ತರಲಾಗಿದೆ. ಜೂನ್ 14 2023 ರವರೆಗೆ ಮೊದಲ ಬಾರಿಗೆ ಉಚಿತವಾಗಿ ಅಪ್ಡೇಟ್ ಮಾಡಲು ಅವಕಾಶ ನೀಡಿ ನಂತರ ಅದನ್ನು ಡಿಸೆಂಬರ್ 14, 2023 ರವರೆಗೆ ವಿಸ್ತೀರಿಸಲಾಗಿತ್ತು.
ನಂತರ ಕಂಡುಬಂದ ಸ್ಪಂದನೆ ನೋಡಿ ಮಾರ್ಚ್ 14, 2024 ರವರೆಗೂ ಕೂಡ ಮತ್ತೊಮ್ಮೆ ಈ ಕಾಲಾವಕಾಶವನ್ನು ನೀಡಲಾಯಿತು ಈಗ ಇನ್ನೂ ಅನೇಕರು ಮಾಹಿತಿ ಕೊರತೆಯಿಂದ ಹಾಗೂ ತಾಂತ್ರಿಕ ದೋಷಗಳಿಂದಾಗಿ ಅಪ್ಡೇಟ್ ಮಾಡಿಸಲು ಸಾಧ್ಯವಾಗದೇ ಇದ್ದಿದ್ದರಿಂದ ಮತ್ತೊಂದು ಬಾರಿ ಜೂನ್ 14, 2024ರವರೆಗೆ ಕೊನೆಯ ಬಾರಿಗೆ ಈ ಅವಕಾಶವನ್ನು ವಿಸ್ತರಿಸಲಾಗುತ್ತಿದೆ.
ಈ ಸುದ್ದಿ ಓದಿ:- ಸ್ಕೂಟರ್ ಖರೀದಿಗೆ ಸರ್ಕಾರದಿಂದ ಸಿಗಲಿದೆ 40,000 ಸಹಾಯಧನ.!
ಒಂದು ವೇಳೆ ಈಗ ನೀಡಿರುವ ಕಾಲಾವಕಾಶ ಒಳಗಡೆ ಆಧಾರ್ ರಿನೀವಲ್ ಮಾಡಿಸದೆ ಇದ್ದವರು ಮುಂದಿನ ಬಾರಿ ಹೆಚ್ಚಿಗೆ ಶುಲ್ಕವನ್ನು ಪಾವತಿ ಅಪ್ಡೇಟ್ ಮಾಡಿಸಿಕೊಳ್ಳುವ ಪರಿಸ್ಥಿತಿ ಎದುರಾಗಬಹುದು ಮತ್ತು ಅಲ್ಲಿಯವರೆಗೂ ಆಧಾರ್ ಕಾರ್ಡ್ ಸ್ಥಗಿತಗೊಳ್ಳುವುದರಿಂದ ಆಧಾರ್ ಕಾರ್ಡ್ ಗೆ ಸಂಬಂಧಿತವಾಗಿ ನಿಮ್ಮ ಯಾವುದೇ ಕೆಲಸ ಕಾರ್ಯಗಳು ಕೂಡ ನಡೆಯುವುದಿಲ್ಲ.
ಈಗಿನ ಕಾಲದಲ್ಲಂತೂ ಬ್ಯಾಂಕ್ ಅಕೌಂಟ್ ತೆರೆಯುವುದರಿಂದ ಹಿಡಿದು ಪ್ರತಿಯೊಂದು ವಿಚಾರದಲ್ಲೂ ಕೂಡ ಆಧಾರ್ ಕಾರ್ಡ್ ಬಹಳ ಮುಖ್ಯ. ನಾವು ನಮ್ಮ ಆಧಾರ್ ಕಾರ್ಡ್ ಅನ್ನು ರೇಷನ್ ಕಾರ್ಡ್, ಬ್ಯಾಂಕ್ ಅಕೌಂಟ್, ಪ್ಯಾನ್ ಕಾರ್ಡ್, ಮಾರ್ಕ್ಸ್ ಕಾರ್ಡ್ ಇಲ್ಲದಕ್ಕೂ ಲಿಂಕ್ ಮಾಡಿರುತ್ತೇವೆ ಈಗ ಆದರೆ ನೀವು ಹೊಸ ನಿಯಮದಂತೆ ರಿನಿವಲ್ ಮಾಡದೇ ಇದ್ದರೆ ಆಧಾರ್ ಕಾರ್ಡ್ ಲಿಂಕ್ ಆಗಿರುವ ಮತ್ಯಾವುದೆ ಪ್ರಮುಖ ಡಾಕ್ಯುಮೆಂಟ್ ಕೂಡ ಬಳಸಲು ಸಾಧ್ಯವಾಗದೆ ಹೋಗಬಹುದು ಹಾಗಾಗಿ ಕೂಡಲೇ ಈ ಪ್ರಕ್ರಿಯೆ ಪೂರ್ತಿಗೊಳಿಸಿ.
ಈ ಸುದ್ದಿ ಓದಿ:- ಅಂಗನವಾಡಿ ಟೀಚರ್ ಹುದ್ದೆ ನೇರ ನೇಮಕಾತಿ, SSLC ಆದವರೂ ಅರ್ಜಿ ಹಾಕಿ..
* ಆಫ್ಲೈನ್ನಲ್ಲಿ ಹತ್ತಿರದಲ್ಲಿರುವ ಆಧಾರ್ ಸೇವಾ ಕೇಂದ್ರಗಳಿಗೆ ಪೂರಕ ದಾಖಲೆಗಳೊಂದಿಗೆ ಹೋಗಿ ಉಚಿತವಾಗಿ ನೀವು ನಿಮ್ಮ ಆಧಾರ್ ಅಪ್ಡೇಟ್ ಮಾಡಿಸಿಕೊಳ್ಳಬಹುದು
* ಆನ್ಲೈನ್ ನಲ್ಲಿ ನೇರವಾಗಿ https://myaadhaar.uidai.gov.in/ ವೆಬ್ ಸೈಟ್ ಗೆ ಭೇಟಿ ಕೊಟ್ಟು ಆಧಾರ್ ಅಪ್ಡೇಟ್ ಎನ್ನುವ ಆಪ್ಷನ್ ಕ್ಲಿಕ್ ಮಾಡಿ ನಂತರ ಸೂಚಿಸಲಾಗುವ ಸರಳ ವಿಧಾನಗಳನ್ನು ಅನುಸರಿಸುವ ಮೂಲಕ ಕೂಡ ನೀವು ಮನೆಯಲ್ಲಿ ಮೊಬೈಲ್ ಅಥವಾ ಕಂಪ್ಯೂಟರ್ ಮೂಲಕ ಅದರ ಅಪ್ಡೇಟ್ ಮಾಡಿಕೊಳ್ಳಬಹುದು.
ಈ ಸುದ್ದಿ ಓದಿ:- ಗೃಹಲಕ್ಷ್ಮಿ ಮತ್ತು ಅನ್ನಭಾಗ್ಯ ಯೋಜನೆಯ ಎಲ್ಲಾ ಪೆಂಡಿಂಗ್ ಹಣ ಜಮೆ ಹೀಗೆ ಚೆಕ್ ಮಾಡಿ.!
* ಯಾವುದೇ ಕಾಮನ್ ಸರ್ವಿಸ್ ಸೆಂಟರ್ ಗಳಲ್ಲೂ (CSC) ಕೂಡ ಅಧಾರ್ ಅಪ್ಡೇಟ್ ಮಾಡಿಸಬಹುದು ಆದರೆ ಇಲ್ಲಿ ಮಾತ್ರ ನೀವು ರೂ.50 ಶುಲ್ಕವನ್ನು ನೀಡಬೇಕಾಗುತ್ತದೆ.
ಆಧಾರ್ ಅಪ್ಡೇಟ್ ಮಾಡಲು ಬೇಕಾಗುವ ದಾಖಲೆಗಳು:-
* ಗುರುತಿನ ಪುರಾವೆಯಾಗಿ ಶಾಲಾ ವರ್ಗಾವಣೆ ಪತ್ರ / ಪಾನ್ ಕಾರ್ಡ್ / ಡ್ರೈವಿಂಗ್ ಲೈಸೆನ್ಸ್ / ವೋಟರ್ ಐಡಿ ಇತ್ಯಾದಿಗಳಲ್ಲಿ ಒಂದು
* ವಿಳಾಸದ ಪುರಾವೆಯಾಗಿ ರೇಷನ್ ಕಾರ್ಡ್ / ಪ್ಯಾನ್ ಕಾರ್ಡ್ / ಡ್ರೈವಿಂಗ್ ಲೈಸೆನ್ಸ್ / ವೋಟರ್ ಐಡಿ ಇತ್ಯಾದಿಗಳಲ್ಲಿ ಯಾವುದಾದರೂ ಒಂದು
* ಮೊಬೈಲ್ ಸಂಖ್ಯೆ