ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಗ್ರಾಹಕರಿಗೆ 3 ಸಿಹಿ ಸುದ್ದಿ.!

 

WhatsApp Group Join Now
Telegram Group Join Now

ಸಾರ್ವಜನಿಕ ವಲಯದ ಬೃಹತ್ ಬ್ಯಾಂಕ್ ಎಂದು ಕರೆಸಿಕೊಂಡಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ತನ್ನ ಗ್ರಾಹಕರಿಗಾಗಿ ಆಗಾಗ ವಿಶೇಷ ಆಫರ್ ನೀಡುತ್ತಿರುತ್ತದೆ. ಸದಾ ತನ್ನ ಗ್ರಾಹಕರ ಆಸಕ್ತಿ ಹಾಗೂ ಅವಶ್ಯಕತೆಗಳನ್ನು ಅರಿತು ಅವರಿಗಾಗಿಯೇ ಅತ್ಯುತ್ತಮ ಅವಕಾಶಗಳನ್ನು ಕಲ್ಪಿಸಿ ಕೊಡುವಲ್ಲಿ ಯಾವಾಗಲೂ ಮುನ್ನಡೆಯಲ್ಲಿ ಇರುವ ಬ್ಯಾಂಕ್ ಈಗ ಮತ್ತೆ ಮೂರು ಹೊಸ ಸಿಹಿ ಸುದ್ದಿಯನ್ನು ನೀಡಿದೆ.

ಈಗಾಗಲೇ SBI ಬ್ಯಾಂಕ್ ನಲ್ಲಿ ಉಳಿದ ಬ್ಯಾಂಕ್ ಗಳಿಗೆ ಹೋಲಿಸಿದರೆ ಹೆಚ್ಚಿನ ಅನುಕೂಲತೆಗಳು ಸಿಗುತ್ತಿದ್ದು, ಮತ್ತೆ ಇದು ಮುಂದುವರೆದಿದ್ದು ಆ ಪಟ್ಟಿಗೆ ಇನ್ನಷ್ಟು ವಿಷಯಗಳು ಸೇರುತ್ತಿರುವ ವಿಚಾರದ ಬಗ್ಗೆ ಬ್ಯಾಂಕ್ ಅಪ್ಡೇಟ್ ಹಂಚಿಕೊಂಡಿದೆ. ಒಂದು ವೇಳೆ ನೀವು SBI ಖಾತೆ ಹೊಂದಿದ್ದರೆ ನಿಮಗೂ ಈ ಮೂರು ಗುಡ್ ನ್ಯೂಸ್ ಇವೆ.

ಈ ಸುದ್ದಿ ಓದಿ:- ರಾಜ್ಯದ ಮಹಿಳೆಯರಿಗೆ ಪ್ರಮುಖ ಅಪ್ಡೇಟ್ ಗೃಹಲಕ್ಷ್ಮಿ 7ನೇ ಕಂತಿನ ಹಣದ ಕುರಿತು ಮಾಹಿತಿ ನೀಡಿದ ಸಚಿವೆ.!

* ಅಪ್ಲಿಕೇಶನ್ ಅವಧಿಯ ವಿಸ್ತರಣೆ:-

SBI ಬ್ಯಾಂಕ್ ನಲ್ಲಿ ಲಭ್ಯವಿರುವ ಅಮೃತ್ ಕಳಶ್ ಯೋಜನೆ (Amruth Kalash Scheme) ಬಗ್ಗೆ ಬಹುತೇಕ ಎಲ್ಲರಿಗೂ ಗೊತ್ತೇ ಇದೆ. ಈ ಯೋಜನೆಯು ದೀರ್ಘಾವಧಿಯ ಹಣಕಾಸು ಹೂಡಿಕೆಗಳಿಗೆ ಅಂದರೆ ಫಿಕ್ಸೆಡ್ ಡೆಪಾಸಿಟ್ ಗಳಿಗೆ 7.10% ಬಡ್ಡಿ ದರವನ್ನು ನೀಡುತ್ತಿದೆ. ಬಹಳ ಅನುಕೂಲತೆಯ ಮತ್ತು ಗ್ರಾಹಕರ ಪ್ರಿಯವಾದ ಈ ಯೋಜನೆ ಅವಧಿಯು ಮುಕ್ತಾಯವಾಗುತ್ತಿತ್ತು, ಆದರೆ ಮತ್ತೊಮ್ಮೆ ಸಮಯ ಅವಕಾಶ ವಿಸ್ತರಿಸಿ ಅಮೃತ್ ಕಲಶ್ ಯೋಜನೆಗಾಗಿ ಅರ್ಜಿಯ ಅವಧಿಯನ್ನು ಮಾರ್ಚ್ 31 ರವರೆಗೆ ವಿಸ್ತರಿಸಿದೆ.

* ಕಡಿಮೆ ಬಡ್ಡಿಯ ಗೃಹ ಸಾಲಗಳು:-

ಮನೆ ನಿರ್ಮಾಣ ಮಾಡುವ ಪ್ರಯತ್ನದಲ್ಲಿರುವ ಗ್ರಾಹಕರಿಗೆ SBI ಗಣನೀಯವಾಗಿ ಕಡಿಮೆ ಬಡ್ಡಿದರದಲ್ಲಿ ಗೃಹ ಸಾಲಗಳನ್ನು ನೀಡುತ್ತಿದೆ. 750 ರಿಂದ 800 ರವರೆಗಿನ CIBIL ಸ್ಕೋರ್ ಹೊಂದಿರುವ ಗ್ರಾಹಕರು 8.60% ಬಡ್ಡಿ ದರದಲ್ಲಿ ಸಾಲಗಳಿಗೆ ಅರ್ಹರಾಗಿರುತ್ತಾರೆ ಮತ್ತು ಕಡಿಮೆ CIBIL ಅಂಕಗಳನ್ನು ಹೊಂದಿರುವ ವ್ಯಕ್ತಿಗಳಿಗೆ 9% ಬಡ್ಡಿದರದಲ್ಲಿ ಗೃಹ ಸಾಲ ಸಿಗುತ್ತಿದೆ. ಈ ಅವಕಾಶವನ್ನು ಕೂಡ ಮಾರ್ಚ್ 31 ರವರೆಗೆ ವಿಸ್ತರಿಸಿ ಅನುಕೂಲತೆ ಮಾಡಿಕೊಡಲಾಗಿದೆ.

* ಹಿರಿಯ ನಾಗರಿಕರಿಗೆ ಬಡ್ತಿ:-

SBI ಹಿರಿಯ ನಾಗರಿಕರ ಉಳಿತಾಯ ಯೋಜನೆಯ ಮೂಲಕ ಹಿರಿಯ ನಾಗರಿಕರಿಗೆ ಹೆಚ್ಚಿನ ಭದ್ರತೆಯನ್ನು ನೀಡಿ ನೆರವಾಗುತ್ತಿದೆ. FD ಕೇರ್ ಕಾರ್ಯಕ್ರಮದಡಿಯಲ್ಲಿ, ಹಿರಿಯ ನಾಗರಿಕರು 5 ರಿಂದ 10 ವರ್ಷಗಳವರೆಗೆ ಈ ಯೋಜನೆಗೆ ಹೂಡಿಕೆ ಮಾಡಬಹುದು ಮತ್ತು ಈ ಹೂಡಿಕೆಗಳಿಗೆ 7.50% ವರೆಗೆ ಬಡ್ಡಿದರವನ್ನು ಗಳಿಸುತ್ತಾರೆ. ಈ ಅನುಕೂಲತೆ ಪಡೆಯಲು ಹಿರಿಯ ನಾಗರಿಕರು ಇಚ್ಚಿಸಿದಲ್ಲಿ ಅವರಿಗೆ ಅರ್ಜಿ ಸಲ್ಲಿಸಲು ಮಾರ್ಚ್ 31, 2024 ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ.

ಈ ಸುದ್ದಿ ಓದಿ:-ಗೃಹಜ್ಯೋತಿ ಗ್ರಾಹಕರಿಗೆ ಶಾಕಿಂಗ್ ಸುದ್ದಿ.! ಉಚಿತ ವಿದ್ಯುತ್ ಯೋಜನೆಯ ನಿಯಮ ಬದಲಾವಣೆ, ಇಂದಿನಿಂದಲೇ ಹೊಸ ರೂಲ್ಸ್ ಜಾರಿ.!

ಈ ವಿಚಾರಗಳ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಬೇಕಿದ್ದರೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಧಿಕೃತ ವೆಬ್ಸೈಟ್ ಗಳಿಗೆ ಭೇಟಿ ನೀಡಿ ಹುಡುಕಾಡಿ ಹೆಚ್ಚಿನ ಮಾಹಿತಿ ಪಡೆಯಿರಿ ಮತ್ತು ಇದಕ್ಕಿಂತಲೂ ಉತ್ತಮ ಎಂದರೆ ತಮ್ಮ ಬ್ಯಾಂಕ್ ಶಾಖೆಗಳಿಗೆ ಭೇಟಿ ಕೊಟ್ಟರೆ ಬ್ಯಾಂಕ್ ನ ಸಿಬ್ಬಂದಿಗಳು ಈ ಅನುಕೂಲತೆಗಳ ಬಗ್ಗೆ ವಿವರವಾಗಿ ಮಾಹಿತಿ ನೀಡಲಿದ್ದಾರೆ. ಈ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರ ಹಾಗೂ ಸ್ನೇಹಿತರ ಜೊತೆಗೂ ಶೇರ್ ಮಾಡಿ ಅವಶ್ಯಕತೆ ಇರುವಂತಹ ಗ್ರಾಹಕರಿಗೆ SBI ನ ಈ ಅನುಕೂಲತೆಗಳು ಸಿಗುವಂತೆ ಮಾಡಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now