ಜೇನು ಎಂದ ತಕ್ಷಣ ಎಲ್ಲರ ಬಾಯಿಯಲ್ಲಿ ನೀರೂರುತ್ತದೆ, ಇದೊಂದು ಪರಿಶುದ್ಧವಾದ ಆಹಾರ ಮತ್ತು ಅತಿ ಹೆಚ್ಚಾಗಿ ಪೋಷಕಾಂಶಗಳನ್ನು ಹೊಂದಿದೆ. ನ್ಯಾಚುರಲ್ ಆಗಿ ಸಿಗುವ ಜೇನು ಮಾತ್ರವಲ್ಲದೇ ಜೇನು ಸಾಕಾಣಿಕೆಯಿಂದ ಕೂಡ ಇಷ್ಟೇ ನ್ಯಾಚುರಲ್ ಆದ ಆಹಾರವನ್ನು ಪಡೆಯಬಹುದು ಈಗ ರೈತರು ತಮ್ಮ ಜಮೀನಿನಲ್ಲಿ ಜೇನುಪೆಟ್ಟಿಗೆ ಮೂಲಕ ಜೇನು ಸಾಕಾಣಿಕೆ ಮಾಡುತ್ತಿದ್ದಾರೆ.
ಸಮಗ್ರ ಕೃಷಿಯೊಂದಿಗೆ ಹಲವರು ಜೇನು ಸಾಕಾಣಿಕೆ ಅಳವಡಿಸಿಕೊಂಡಿದ್ದರೆ, ಜೇನು ಸಾಕಾಣಿಕೆಯನ್ನೇ ಸಂಪೂರ್ಣವಾಗಿ ಅವಲಂಬಿಸಿರುವ ಕುಟುಂಬಗಳು ಕೂಡ ಇವೆ. ಇದರಿಂದ ಎಷ್ಟು ಲಾಭ ಇದೆ? ಜೇನು ಸಾಕಾಣಿಕೆ ಸವಾಲುಗಳೇನು? ಇದರ ಖರ್ಚು ಎಷ್ಟು? ಈ ಪ್ರೋಸೆಸ್ ಹೇಗೆ ನಡೆಯುತ್ತದೆ? ಇತ್ಯಾದಿ ಎಲ್ಲದರ ಬಗ್ಗೆ ಜೇನು ಸಾಕಾಣಿಕೆಯಲ್ಲಿ ಯಶಸ್ವಿಯಾಗಿರುವ ಕೃಷಿಕ ಮಹೇಶ್ ರವರು ತಿಳಿಸಿಕೊಟ್ಟ ಕೆಲ ಸಂಗತಿಗಳನ್ನು ಈ ಲೇಖನದ ಮೂಲಕ ಹಂಚಿಕೊಳ್ಳುತ್ತಿದ್ದೇವೆ.
ಒಟ್ಟಿಗೆ ಇವರ ತೋಟದಲ್ಲಿ 150 ಪೆಟ್ಟಿಗೆಗಳನ್ನು ಇಟ್ಟಿದ್ದಾರೆ. ಇದರಲ್ಲಿ 70 ಪೆಟ್ಟಿಗೆಗಳನ್ನು ಜೇನು ಸಂಗ್ರಹಿಸುವ ಉದ್ದೇಶದಿಂದ ಇಟ್ಟುಕೊಂಡು ಉಳಿದ ಪೆಟ್ಟಿಗೆಗಳನ್ನು ಕುಟುಂಬ ಬೆಳವಣಿಗೆಗಾಗಿ ಬಳಸುತ್ತಿದ್ದಾರೆ. ಇವರು ಹೇಳುವ ಪ್ರಕಾರವಾಗಿ ಹೆಚ್ಚಾಗಿ ಇವರು ISI 8 ಪೀಸ್ ಪೆಟ್ಟಿಗೆ ಗಳನ್ನು ಬಳಸುತ್ತಾರೆ.
ಈ ಸುದ್ದಿ ಓದಿ:- ನೀವು ಇರುವ ಜಾಗದಲ್ಲಿ ಕೆಲಸ, ತಿಂಗಳಿಗೆ 22,000 ಸಂಬಳ, ಯಾವುದೇ ಹಣ ಕಟ್ಟಬೇಕಾಗಿಲ್ಲ ಯಾರು ಬೇಕಾದರೂ ಸೇರಬಹುದು ಇಲ್ಲಿದೆ ನೋಡಿ ಡೀಟೇಲ್ಸ್.!
ಈ ಪೆಟ್ಟಿಗೆ ಪೂರ್ತಿ ಜೇನುಹುಳು ಕುಟುಂಬ ಅಭಿವೃದ್ಧಿ ಹೊಂದಿದ ಮೇಲೆ ಇದರ ಮೇಲೆ ಸೂಪರ್ ಎನ್ನುವ ಒಂದು ಪಟ್ಟಿ ನೀಡುತ್ತಾರೆ, ಅದರಲ್ಲಿ ಜೇನು ಸಂಗ್ರಹಣೆ ಆಗುತ್ತದೆ. ಈ ಸೂಪರ್ ನಲ್ಲಿ ಸಂಗ್ರಹಣೆಯಾದ ಜೇನನ್ನು ಮಾತ್ರ ರೈತರು ಬಳಸಬಹುದು, ಜೇನು ಪೆಟ್ಟಿಗೆಯಲ್ಲಿರುವ ಜೇನನ್ನು ಅವುಗಳಿಗೆ ಬಿಟ್ಟು ಬಿಡಬೇಕು.
ಪೂರ್ತಿ ಜೇನು ಸಾಕಾಣಿಕೆಯನ್ನು ಅನುಸರಿಸಿ ಯಾವ ರೈತರು ಬಂಡವಾಳ ಹೂಡಬಾರದು. ಮೊದಲು ಕೆಲವು ಪೆಟ್ಟಿಗೆಗಳಿಂದ ಆರಂಭಿಸಿ ಅದರ ಕಷ್ಟ ಸುಖ ಗೊತ್ತಾದ ಮೇಲೆ ನಿಧಾನವಾಗಿ ಜಾಸ್ತಿ ಮಾಡಿಕೊಳ್ಳಬೇಕು. ಜೇನುಗಳ ಜೀವನ ಬಹಳ ಶಿಸ್ತು ಬದ್ಧವಾದದ್ದು ಇದರಲ್ಲಿ ಮೇಣ ಕಟ್ಟಲು, ಮಕರಂದ ಹೀರಿ ತರಲು ಹೋಗುತ್ತವೆ.
ರಾಣಿ ಜೇನು ಇದರಲ್ಲಿ ಮೇನ್, ಇದು ಫೀಮೇಲ್ ಡಾಮಿನೇಟ್ ಸಿಸ್ಟಮ್ ಆಗಿರುತ್ತದೆ. ಗಂಡು ಜೇನು ಪರಾಗಸ್ಪರ್ಶಕ್ರಿಯೆಗೆ ಮಾತ್ರ ಉಪಯೋಗಕ್ಕೆ ಬರುತ್ತದೆ. ಒಂದು ರಾಣಿ ಜೇನು ವಾತಾವರಣ ಸೂಕ್ತವಾಗಿದ್ದರೆ ಒಂದೇ ಬಾರಿಗೆ 2000 ಮೊಟ್ಟೆ ಇಡುತ್ತದೆ. ಇದರಿಂದಲೇ ಕುಟುಂಬ ವರ್ತನೆ ಆಗುವುದು.
ಈ ಸುದ್ದಿ ಓದಿ:- ಊದುಬತ್ತಿ ಹಚ್ಚಿದರೆ ಕ್ಯಾನ್ಸರ್ ಬರುತ್ತಾ.? ಈ ಬಗ್ಗೆ ವೈದ್ಯರು ಹೇಳಿದೇನು ನೋಡಿ.?
ಮಹೇಶ್ ಎನ್ನುವ ರೈತರು ತಮ್ಮ ತೋಟದಲ್ಲಿ ತೊಡವೆ ಜೇನನ್ನು ಸಾಕುತ್ತಿದ್ದಾರಂತೆ. ಸುತ್ತಾಮುತ್ತಾ ಒಂದು ಕಿಲೋಮೀಟರ್ ವ್ಯಾಪ್ತಿಯು ಈ ಜೇನುಹುಳಗಳು ಓಡಾಡುವ ಜಾಗವಾಗಿರುತ್ತದೆ. ಹೀಗೆ ಸುತ್ತ ಒಳ್ಳೆಯ ಹೂವಿನ ತೋಟ ಗಿಡ ಮರಗಳು ಇದ್ದ ಪಕ್ಷದಲ್ಲಿ ಮಳೆ ಬೆಳೆ ಸಮೃದ್ಧವಾಗಿದ್ದರೆ 15KG ವರೆಗೂ ಜೇನುತುಪ್ಪ ಸಿಗುತ್ತದೆ ಎಂದು ಹೇಳುತ್ತಾರೆ.
ಒಂದು KG ಗೆ ಈಗ ಮಾರ್ಕೆಟ್ ನಲ್ಲಿ ಶುದ್ಧ ಜೇನುತುಪ್ಪ ರೂ.700 ರವರೆಗೂ ಕೂಡ ಮಾರಾಟ ಆಗುತ್ತಿದೆ. ಸಾಲದಕ್ಕೆ ಇವರು ಇವರೇ ತಯಾರಿಸಿದ ಒಂದು ಪೂರ್ತಿ ಪೆಟ್ಟಿಗೆಯನ್ನು ಸ್ಟ್ಯಾಂಡ್ ಸಮೇತ ರೂ.4500 ರೈತರಿಗೆ ಮಾರುತ್ತಿದ್ದಾರೆ ಇದರಿಂದಲೂ ಕೂಡ ಲಾಭವಾಗುತ್ತಿದೆ.
ಇವರಿಂದ ಜೇನು ಪೆಟ್ಟಿಗೆ ಖರೀದಿಸಿದವರ ಗ್ರೂಪ್ ಮಾಡಿ ಸಮಸ್ಯೆಗಳ ಬಗ್ಗೆ ಸಲಹೆಗಳ ಬಗ್ಗೆ ಚರ್ಚೆ ಕೂಡ ಮಾಡುತ್ತಾರೆ. ಒಟ್ಟಾರೆಯಾಗಿ ಜೇನು ಸಾಕಣೆಯನ್ನು ತಮ್ಮ ಕೃಷಿಯ ಒಂದು ಪ್ರತ್ಯೇಕ ಭಾಗವಾಗಿ ಮಾಡಿ ಒಂದು ಬಾರಿ ಸ್ಥಾಪನೆ ಮಾಡಿ ಪರ್ಮನೆಂಟ್ ಲಾಭ ಮಾಡಬಹುದು ಎನ್ನುವುದು ಇವರ ಸಲಹೆ ಆಗಿದೆ. ಈ ಬಗ್ಗೆ ಇನ್ನು ಹೆಚ್ಚಿನ ಡೀಟೇಲ್ ಗಾಗಿ ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.