ರಾಜ್ಯದಾದ್ಯಂತ ಇರುವ ಎಲ್ಲಾ ಉದ್ಯೋಗ ಆಸಕ್ತರಿಗೂ ಒಂದು ಸಿಹಿ ಸುದ್ದಿಯನ್ನು ಈ ಲೇಖನದ ಮೂಲಕ ಹಂಚಿಕೊಳ್ಳುತ್ತಿದ್ದೇವೆ. ನೀವು ಬಹಳ ವರ್ಷಗಳಿಂದ ಕೆಲಸಕ್ಕಾಗಿ ಅಲೆದಾಡುತ್ತಿದ್ದರೆ, ನಿಮಗೆ ಯಾವುದೇ ಸ್ಕಿಲ್ ಗೊತ್ತಿಲ್ಲ ಅಥವಾ ಕೆಲಸದ ಅನುಭವ ಇಲ್ಲ ಎಂದು ನಿಮಗೆ ಕೆಲಸ ಕೊಡದೆ ಇದ್ದರೆ ಅಥವಾ ಈಗಷ್ಟೇ ವಿದ್ಯಾಭ್ಯಾಸ ಮುಗಿಸಿ ಕೆಲಸಕ್ಕಾಗಿ ಹುಡುಕುತ್ತಿದ್ದರೆ ಒಂದು ಒಳ್ಳೆ ಕಡೆ ಸೇರಬಹುದಾದ ಅದ್ಭುತ ಅವಕಾಶದ ಬಗ್ಗೆ ತಿಳಿಸಿಕೊಡುತ್ತಿದ್ದೇವೆ.
ತರಬೇತಿಯ ಜೊತೆಗೆ ನೀವು ಕೇಳಿದ ಸ್ಥಳದಲ್ಲಿ ನಿಮಗೆ ಭಾರತದಾದ್ಯಂತ ಯಾವುದೇ ಭಾಗದಲ್ಲಿ ಬೇಕಾದರೂ ನೇಮಕ ಮಾಡಲಾಗುತ್ತದೆ. ಯಾವ ಕೆಲಸ? ಹೇಗೆ ಜಾಯಿನ್ ಆಗುವುದು? ಏನೆಲ್ಲಾ ಅರ್ಹತೆಗಳು ಬೇಕು? ಇಲ್ಲಿದೆ ನೋಡಿ ಕಂಪ್ಲೀಟ್ ವಿವರ…
ಸಂಭವ್ ಫೌಂಡೇಶನ್ ಹಾಗೂ ola ಎಲೆಕ್ಟ್ರಾನಿಕ್ಸ್ ಸಹಯೋಗದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದುವರೆಗೂ ಭಾರತದಾದ್ಯಂತ ಒಟ್ಟು 10 ಲಕ್ಷಕ್ಕೂ ಹೆಚ್ಚು ಯುವ ಜನತೆಗೆ ಸಂಭವ್ ಫೌಂಡೇಶನ್ ಉದ್ಯೋಗಾವಕಾಶ ದೊರಕಿಸಿಕೊಟ್ಟಿದೆ. ಈಗ ಮುಂದುವರೆದು ಓಲಾ ಎಲೆಕ್ಟ್ರಾನಿಕ್ ವೆಹಿಕಲ್ (Ola Electronics) ಕಂಪನಿಯ ಟೆಕ್ನಿಷಿಯನ್ ಹುದ್ದೆಗಳಿಗಾಗಿ (technician posts) ಈ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.
ಈ ಸುದ್ದಿ ಓದಿ:- ಊದುಬತ್ತಿ ಹಚ್ಚಿದರೆ ಕ್ಯಾನ್ಸರ್ ಬರುತ್ತಾ.? ಈ ಬಗ್ಗೆ ವೈದ್ಯರು ಹೇಳಿದೇನು ನೋಡಿ.?
ರಾಜ್ಯದಾದ್ಯಂತ ಇರುವ ಯಾವುದೇ ಪುರುಷ ಅಥವಾ ಮಹಿಳಾ ಅಭ್ಯರ್ಥಿಯು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು. ಈ ಮೇಲೆ ತಿಳಿಸಿದಂತೆ ಕರ್ನಾಟಕ ರಾಜ್ಯದ ಯಾವುದೇ ಭಾಗದಲ್ಲಿ ಅಥವಾ ಭಾರತದ ಯಾವುದೇ ರಾಜ್ಯಕ್ಕೆ ನೀವು ನೇಮಕವಾಗಲು ಬಯಸಿದರೆ ಅದೇ ಸ್ಥಳಕ್ಕೆ ಅಪಾಯಿಂಟ್ ಮಾಡಿಕೊಡುತ್ತಾರೆ. ಅರ್ಜಿ ಸಲ್ಲಿಸಿದವರಿಗೆ 15 ದಿನಗಳ ಕಾಲ ತರಬೇತಿ ಇರುತ್ತದೆ.
ಈ ತರಬೇತಿಯು 10 ದಿನಗಳ ಕಾಲ ಬೆಂಗಳೂರಿನ ಶಿವಾಜಿನಗರ ಸಮೀಪ ಇರುವ ಸಂಭವ್ ಫೌಂಡೇಷನ್, ಜಯ ಮಹಲ್ ನಲ್ಲಿ ಮತ್ತು ಓಲಾ ಕಂಪನಿಯ ಆನೇಕಲ್ ಬ್ರಾಂಚ್ ನಲ್ಲಿ 5 ದಿನಗಳ ತರಬೇತಿ ಇರುತ್ತದೆ. ಉಚಿತ ಊಟ ವಸತಿ ಸೌಲಭ್ಯದೊಂದಿಗೆ ಹುದ್ದೆಗೆ ಸಂಬಂಧಿಸಿದ ತರಬೇತಿ ನೀಡಿ 16ನೇ ದಿನದಿಂದಲೇ ನೇಮಕ ಮಾಡಿಕೊಳ್ಳಲಾಗುತ್ತದೆ.
ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು PUC / ITI / ಡಿಪ್ಲೋಮೋ / ಪದವಿ ಅಥವಾ ಇದಕ್ಕೆ ತತ್ಸಮನವಾದ ವಿದ್ಯಾರ್ಹತೆಯನ್ನು ಪಡೆದಿದ್ದರೂ ಸಾಕು. ಈ ಹುದ್ದೆಗಳಿಗೆ ಮಾಸಿಕವಾಗಿ ಆರಂಭದಲ್ಲಿಯೇ ರೂ.17,000 ವೇತನ ಮತ್ತು ರೂ.5,000 ಇನ್ಸೆಂಟಿವ್ ನೀಡುತ್ತಾರೆ.
ಈ ಸುದ್ದಿ ಓದಿ:- ಕೇವಲ 21 ವರ್ಷಕ್ಕೆ IAS ಅಧಿಕಾರಿಯಾದ ಛಲಗಾತಿ, ಭಾರತದ ಅತ್ಯಂತ ಕಿರಿಯ IAS ಆಫೀಸರ್ ಈ ಬೆಡಗಿ.!
6 ತಿಂಗಳಾದ ನಂತರ ರೂ.20,000 ವೇತನ ಮತ್ತು ರೂ.7,000 ಇನ್ಸೆಂಟಿವ್ ಒಟ್ಟು ರೂ.27,000 ವೇತನ ದೊರೆತ ರೀತಿ ಆಗುತ್ತದೆ. 18 ವರ್ಷ ಮೇಲ್ಪಟ್ಟ 35 ವರ್ಷದ ಒಳಗಿನ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು.
ಈ ತರಬೇತಿ ಪಡೆದುಕೊಳ್ಳಲು ಯಾವುದೇ ರೀತಿ ಶುಲ್ಕ ಪಾವತಿ ಮಾಡಬೇಕಾದ ಅವಶ್ಯಕತೆ ಇಲ್ಲ ಸಂಪೂರ್ಣ ಉಚಿತವಾದ ತರಬೇತಿ ಆಗಿರುತ್ತದೆ. ಆಸಕ್ತರು ಈ ಕೆಳಗೆ ನೀಡಿರುವ ಮೊಬೈಲ್ ಸಂಖ್ಯೆಗಳಿಗೆ ಸಂಪರ್ಕಿಸಿದರೆ ವಾಟ್ಸಪ್ ಮೂಲಕ ಅವರು ನಿಮ್ಮ ಜೊತೆ ಸಂಪರ್ಕದಲ್ಲಿ ಇರುತ್ತಾರೆ ಮತ್ತು ಈ ತರಬೇತಿಗೆ ಸಂಬಂಧಪಟ್ಟ ಇನ್ನೂ ಹೆಚ್ಚಿನ ಮಾರ್ಗದರ್ಶನವನ್ನು ನೀಡುತ್ತಾರೆ ಹಾಗೂ ಇದಕ್ಕೆ ಅರ್ಜಿ ಸಲ್ಲಿಸುವ ಬಗ್ಗೆ ಕೂಡ ತಿಳಿಸಿಕೊಡುತ್ತಾರೆ, ಹೆಚ್ಚಿನ ಆಸಕ್ತಿಗಾಗಿ ಕೆಳಕಂಡಗಳಿಗೆ ಕರೆ ಮಾಡಿ.
* ತುಮಕೂರು ಭಾಗದ ಅಭ್ಯರ್ಥಿಗಳಿಗಾಗಿ 9035588254
* ಬೆಂಗಳೂರು ಭಾಗದ ಅಭ್ಯರ್ಥಿಗಳಿಗಾಗಿ 7483459910
* ಇತರ ಜಿಲ್ಲೆಗಳ ಅಭ್ಯರ್ಥಿಗಳಿಗಾಗಿ 9880424194
* ಒಂದು ವೇಳೆ ಈ ಸಂಖ್ಯೆಗಳಿಗೆ ಸಂಪರ್ಕಿಸಲು ಸಾಧ್ಯವಾಗದೆ ಹೋದರೆ 8884936111 ಕರೆ ಮಾಡಿ.