ಸೀಬೆ ಹಣ್ಣಿಗೆ ಮಾರ್ಕೆಟ್ ನಲ್ಲಿ ಯಾವಾಗಲು ಬೇಡಿಕೆ ಕಡಿಮೆಯಾಗುವುದಿಲ್ಲ ಅದರಲ್ಲೂ ಈ ವಿಶೇಷವಾದ ಜಪಾನೀಸ್ ರೆಡ್ ಎನ್ನುವ ತಳಿಗಂತೂ ಭಾರಿ ಡಿಮ್ಯಾಂಡ್. ಏಕೆಂದರೆ ಈ ತಳಿಯಲ್ಲಿರುವ ವಿಶೇಷತೆಯೇ ಈ ರೀತಿ ಇದೆ. ಕಡಿಮೆ ಬೀಜಗಳನ್ನು ಹೊಂದಿದೆ (4-5 ಬೀಜ ಅಷ್ಟೇ), ಕೆಂಪು ಬಣ್ಣದ ಈ ಹಣ್ಣು ತಿನ್ನಲು ಕೂಡ ಬಹಳ ಕ್ರಿಸ್ಪಿ ಆಗಿರುತ್ತದೆ ಮತ್ತು ಟೇಸ್ಟ್ ಕೂಡ ಚೆನ್ನಾಗಿರುತ್ತದೆ.
ಹಾಗಾಗಿ ಈ ಹಣ್ಣಿಗೆ ಕನಿಷ್ಠ 150 per Kg ಇದ್ದೇ ಇರುತ್ತದೆ. ಸೀಬೆ ಹಣ್ಣಿನ ಕೃಷಿ ಮಾಡಲು ಬಯಸುವವರು ಈ ತಳಿಯನ್ನು ಆರಿಸುವುದರಿಂದ ಒಂದು ಹಣ್ಣಿಗೆ ರೂ.15 ಖರ್ಚಿನಲ್ಲಿ ಎಕ್ಕರೆಗೆ 30 ಲಕ್ಷ ಆದಾಯ ಖಂಡಿತ ಗಳಿಸಬಹುದು ಎನ್ನುತ್ತಾರೆ ಈಗಾಗಲೇ ಕೃಷಿಯಲ್ಲಿ ಯಶಸ್ಸು ಕಂಡಿರುವ ರೈತರು.
ಬೆಂಗಳೂರಿನ ಹೊರವಲಯದ ದೇವನಹಳ್ಳಿ ಸಮೀಪದ ಗ್ರಾಮ ಒಂದರಲ್ಲಿ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡಿದ್ದರು ಕೆಲಸ ಬಿಟ್ಟು ಕೃಷಿಯಲ್ಲಿ ತೊಡಗಿರುವ ಯುವ ರೈತರೊಬ್ಬರು ಸೀಬೆ ಕೃಷಿಯಲ್ಲಿ ಬಹಳ ಲಾಭದಲಿದ್ದಾರೆ. ಅವರು ನೀಡಿರುವ ಮಾಹಿತಿಯ ಪ್ರಕಾರವಾಗಿ ಒಂದು ಎಕರೆಗೆ 600 – 750 ಸೀಬೆ ಗಿಡಗಳನ್ನು ನೆಡಬಹುದು.
ಈ ಸುದ್ದಿ ಓದಿ:- ವಿದ್ಯಾಸಿರಿ ಸ್ಕಾಲರ್ ಶಿಪ್ ಗೆ ಅರ್ಜಿ ಆಹ್ವಾನ ಆಸಕ್ತರು ಅರ್ಜಿ ಸಲ್ಲಿಸಿ ಪ್ರತಿ ತಿಂಗಳು ಸ್ಕಾಲರ್ಷಿಪ್ ಪಡೆಯಿರಿ.!
ಈ ಗಿಡಕ್ಕೆ ವರ್ಷಕ್ಕೊಮ್ಮೆ ಕೊಟ್ಟಿಗೆ ಗೊಬ್ಬರ ಹಾಗೂ ವರ್ಷಕ್ಕೆ ಎರಡು ಬಾರಿ ಬೇವಿನ ಹಿಂಡಿ ಮತ್ತು ಮೂರು ತಿಂಗಳಿಗೊಮ್ಮೆ ಅದಕ್ಕೆ ಅವಶ್ಯಕತೆ ಇರುವ ನ್ಯೂಟ್ರಿಯೆಂಟ್ಸ್ ಗಳಾದ ಅಮೋನಿಯ ಮತ್ತಿತರ ರಸಗೊಬ್ಬರಗಳನ್ನು ನೀಡಬೇಕು. ಈ ರೀತಿ ಸಪ್ಲಿಮೆಂಟ್ ನೀಡಿದರೆ ಹಣ್ಣಿನ ಗಾತ್ರ, ಬಣ್ಣ, ರುಚಿ ಮತ್ತು ಇಳುವರಿ ಕೂಡ ಹೆಚ್ಚಾಗುತ್ತದೆ ಎನ್ನುವುದು ರೈತರ ಅಭಿಪ್ರಾಯ.
ಸೀಬೆ ಕೃಷಿಗೆ ಅತಿ ಮುಖ್ಯವಾಗಿ ಬೇಕಾಗಿರುವುದು ನೀರು. ವರ್ಷಪೂರ್ತಿ ಅತಿ ಹೆಚ್ಚಾಗಿ ನೀರಿನ ಅವಶ್ಯಕತೆ ಇರುತ್ತದೆ, ಹಾಗಾಗಿ ನೀರಿನ ವ್ಯವಸ್ಥೆ ಮಾಡಿಕೊಂಡೆ ಸೀಬೆ ಗಿಡಗಳನ್ನು ಹಾಕುವ ಪ್ಲಾನ್ ಮಾಡುವುದು ಒಳ್ಳೆಯದು. ಕೆಂಪು ಮಣ್ಣು ಅಥವಾ ಕಪ್ಪು ಮಣ್ಣು ಯಾವುದೇ ಮಣ್ಣು ಇದ್ದರೂ ಕೂಡ ಹೊಂದಿಕೊಳ್ಳುತ್ತದೆ.
ಒಂದು ಹಣ್ಣು 250 ಗ್ರಾಂ ನಿಂದ 500 ಗ್ರಾಂ ವರೆಗೂ ಕೂಡ ತೂಗುತ್ತದೆ ಸಾಮಾನ್ಯವಾಗಿ ಹಣ್ಣುಗಳ ಬೆಳೆಗೆ ಇರುವ ಹಕ್ಕಿಗಳ ಕಾಟ ತಪ್ಪಿಸಿಕೊಳ್ಳಲು ನಿಂಬೆ ಗಾತ್ರಕ್ಕೆ ಬಂದಾಗ ಬ್ಯಾಗಿಂಗ್ ಕೂಡ ಮಾಡುವುದು ಒಳ್ಳೆಯದು. ಸ್ಪಂಜ್ ಬ್ಯಾಗಿಂಗ್ ಮಾಡಿದರೆ ಒಳಗೆ ಇರುವ ಮಾಯಿಶ್ಚರ್ ಕಾರಣದಿಂದಾಗಿ ಹಣ್ಣಿನ ಹೊಳಪು ಹೆಚ್ಚಾಗುತ್ತದೆ ಮತ್ತು ಆಗಲೇ ಬ್ಯಾಗಿಂಗ್ ಮಾಡುವುದರಿಂದ ಹಣ್ಣುಗಳು ಡ್ಯಾಮೇಜ್ ಆಗುವುದಿಲ್ಲ ಎನ್ನುತ್ತಾರೆ ಇವರು.
ಈ ಸುದ್ದಿ ಓದಿ:- ಗೃಹ ಜ್ಯೋತಿ ಉಚಿತ ಕರೆಂಟ್ ಬಳಸುತ್ತಿರುವವರಿಗೆ ಬಿಗ್ ಅಪ್ಡೇಟ್.!
7 ಅಡಿಗಿಂತ ಎತ್ತರ ಹೋದರೆ ಹಣ್ಣಿಗೆ ಬ್ಯಾಗಿಂಗ್ ಮಾಡುವುದು ಮತ್ತು ಅದನ್ನು ಕೊಯ್ಲು ಮಾಡುವುದು ಕಷ್ಟ ಹಾಗಾಗಿ ಒಂದು ಎತ್ತರಕ್ಕೆ ಬಂದ ನಂತರ ಅದನ್ನು ವರ್ಷಕ್ಕೊಮ್ಮೆ ಕಟಾವು ಮಾಡಿ ಎನ್ನುವ ಸಲಹೆ ನೀಡುತ್ತಾರಿವರು. ಸೀಬೆ ಕೃಷಿ ಮಾಡಲು ಆಸಕ್ತಿ ಇರುವ ರೈತರಿಗೆ ಈ ತಳಿಯ ಕಸಿ ಸಸಿಗಳನ್ನು ಕೂಡ ನಾವೇ ಸಪ್ಲೈ ಮಾಡುತ್ತೇವೆ ಎಂದು ಹೇಳುತ್ತಾರೆ.
ಇವರು ಗುಜರಾತ್ ನಿಂದ ಈ ತಳಿಯನ್ನು ತಂದು ಈಗ ಇದರಿಂದ ಕೈ ತುಂಬಾ ಹಣ ಸಂಪಾದನೆ ಮಾಡುತ್ತಿದ್ದಾರೆ ಮತ್ತು ರಾಜ್ಯದ ಯಾವುದೇ ಮೂಲೆಗೆ ಬೇಕಿದ್ದರೂ ಸಸಿಗಳನ್ನು ಕಳುಹಿಸಿಕೊಡುತ್ತಾರೆ. ಬೇಸಿಗೆ ಹಾಗೂ ಮಳೆಗಾಲದಲ್ಲಿ ವರ್ಷಕ್ಕೆ ಎರಡು ಬಾರಿ ಮಾತ್ರ ಇವರಿಂದ ಸಸಿ ಪಡೆಯಬಹುದು ಇವರದೇ ವಾಹನಗಳಲ್ಲಿ ಸಾರಿಗೆ ವ್ಯವಸ್ಥೆ ಮಾಡಿಕೊಡುತ್ತಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.!