ಕರ್ನಾಟಕ ವಿಧಾನಸಭಾ ಚುನಾವಣೆ-2023ರಲ್ಲಿ ಕಾಂಗ್ರೆಸ್ ಪಕ್ಷವು (Corgress) ನೀಡಿದ್ದ ಭರವಸೆಗಳಂತೆ ಗೆದ್ದು ಗದ್ದುಗೆ ಏರಿದ ಮೇಲೆ ತಾನು ನೀಡಿದ ಗ್ಯಾರಂಟಿ ಯೋಜನೆಗಳ (Guarantee Schemes) ಆಶ್ವಾಸನೆಯ ನೆರವೇರಿಸೋ ಮೂಲಕ ನುಡಿದಂತೆ ನಡೆದಿದೆ.
ಆ ಪ್ರಕಾರವಾಗಿ ರಾಜ್ಯದ ಜನತೆಗೆ ಮೊದಲ ಗ್ಯಾರಂಟಿ ಯೋಜನೆಗಾಗಿ ರಾಜ್ಯದ ಎಲ್ಲಾ ಮಹಿಳೆಯರು ರಾಜ್ಯದ ಗಡಿಯೊಳಗೆ ಶಕ್ತಿ ಯೋಜನೆ (Shakthi Yojane) ಮೂಲಕ ಕರ್ನಾಟಕ ಸರ್ಕಾರದ ಎಲ್ಲಾ ಸಾರಿಗೆ ಬಸ್ ಗಳಲ್ಲಿ ಉಚಿತ ಪ್ರಯಾಣ ಮಾಡುತ್ತಿದ್ದಾರೆ.
ಗೃಹ ಜ್ಯೋತಿ ಯೋಜನೆ (Gruhajyothi Scheme) ಮೂಲಕ ಗರಿಷ್ಠ 200ಯೂನಿಟ್ ವರೆಗೆ ಪ್ರತಿ ಕುಟುಂಬಕ್ಕೂ ಉಚಿತ ವಿದ್ಯುತ್ ಸಿಗುತ್ತದೆ, ಅನ್ನಭಾಗ್ಯ ಯೋಜನೆ (Annabhagya Scheme) ಮೂಲಕ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ 10Kg ಪಡಿತರ ನೀಡಬೇಕಿತ್ತು.
ಈ ಸುದ್ದಿ ಓದಿ:- ಕೋಳಿ ಸಾಕಾಣಿಕೆ ಮಾಡುವವರಿಗೆ ಸರ್ಕಾರದಿಂದ ಸಿಗಲಿದೆ 25 ಲಕ್ಷ.! ಆಸಕ್ತರು ಅರ್ಜಿ ಸಲ್ಲಿಸಿ.!
ಆದರೆ ದಾಸ್ತಾನು ಲಭ್ಯವಾಗದ ಕಾರಣ ಪ್ರತಿ ಸದಸ್ಯನಿಗೆ 5Kg ಅಕ್ಕಿ ಹಾಗೂ ಉಳಿದ ಹೆಚ್ಚುವರಿ 5Kg ಅಕ್ಕಿಗೆ ಬದಲಾಗಿ 170 ಹಣವನ್ನು ಕುಟುಂಬದ ಮುಖ್ಯಸ್ಥರ ಖಾತೆಗೆ DBT ಮೂಲಕ ವರ್ಗಾವಣೆ ಮಾಡುತ್ತಿದೆ. ಗೃಹಲಕ್ಷ್ಮಿ ಯೋಜನೆಯಡಿ (Gruhalakshmi Scheme) ರೇಷನ್ ಕಾರ್ಡ್ ಹೊಂದಿರುವ ಎಲ್ಲಾ ಕುಟುಂಬಗಳ ಮುಖ್ಯಸ್ಥೆಯರಿಗೂ ಪ್ರತಿ ತಿಂಗಳು ರೂ.2,000 ಸಹಾಯಧನ ಸಿಗುತ್ತಿದೆ.
ಮತ್ತು ಯುವನಿಧಿ ಯೋಜನೆ (Yuvanidhi Yojane) ಮೂಲಕ ಡಿಪ್ಲೋಮೋ ಮಾಡಿರುವ ನಿರುದ್ಯೋಗಿಗಳಿಗೆ ರೂ.1,500 ಹಾಗೂ ಪದವಿ ಪೂರೈಸಿ ಉದ್ಯೋಗ ಸಿಗದಿರುವ ನಿರುದ್ಯೋಗಿಗಳಿಗೆ ರೂ.3,000 ಪ್ರತಿ ತಿಂಗಳು ನಿರುದ್ಯೋಗ ಭತ್ಯೆ ಸಿಗುತ್ತಿದೆ. ಈಗ ಮತ್ತೊಮ್ಮೆ ಸಹಕಾರವು ಗೃಹಜ್ಯೋತಿ ಬಳಕೆದಾರರಿಗೆ ಸಿಹಿ ಸುದ್ದಿ ನೀಡಿದೆ.
ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯರವರೇ (CM Siddaramaih) ತಮ್ಮ ಟ್ವಿಟರ್ ಖಾತೆಯಲ್ಲಿ ಈ ವಿಷಯವನ್ನು ಫೆಬ್ರವರಿ 1ನೇ ತಾರೀಖಿನಂದು ಹಂಚಿಕೊಳ್ಳುವ ಮೂಲಕ ಸುದ್ದಿ ಅಧಿಕೃತಗೊಳಿಸಿದ್ದಾರೆ. ಪ್ರತಿ ಮನೆಗೆ ಭರವಸೆಯ ಬೆಳಕು ಹರಿಸುವ ಸರ್ಕಾರದ ಕಾರ್ಯಕ್ರಮ ಈಗ ಇನ್ನಷ್ಟು ಜನಸ್ನೇಹಿ ಎನ್ನುವ ಅಡಿಬರಹದೊಂದಿಗೆ ಗೃಹಜ್ಯೋತಿ ಯೋಜನೆಯ ಕೆಲ ಅಂಕಿ ಅಂಶಗಳನ್ನು ಕೂಡ ಹಂಚಿಕೊಂಡಿದ್ದಾರೆ.
ಈ ಸುದ್ದಿ ಓದಿ:- ಇ-ಸ್ವತ್ತು ಮಾಡಿಸಲು ಅಕ್ಕ-ಪಕ್ಕದವರು ಕೂಡ ಸಹಿ ಹಾಕಲೇಬೇಕಾ.? ಸಹಿ ಹಾಕಲು ನಿರಾಕರಿಸಿದರೆ ಏನು ಮಾಡಬೇಕು.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!
ರಾಜ್ಯದಲ್ಲಿ ಜುಲೈ ತಿಂಗಳಿನಿಂದ ಗೃಹಜ್ಯೋತಿ ಯೋಜನೆ ಜಾರಿಯಲ್ಲಿದೆ, ವಾರ್ಷಿಕ ಸರಾಸರಿ ಬಳಕೆಯ ಮೇಲೆ 10 ಯೂನಿಟ್ ವರೆಗೂ ಫಲಾನುಭವಿಗಳು ಪ್ರತಿ ತಿಂಗಳ ಉಚಿತ ವಿದ್ಯುತ್ ಪಡೆಯುತ್ತಿದ್ದಾರೆ ಈಗ ಈ ಮಿತಿಯನ್ನು ಹೆಚ್ಚಿಸುವುದರ ಕುರಿತು ಮುಖ್ಯಮಂತ್ರಿಗಳು ಮಾಹಿತಿ ಹಂಚಿಕೊಂಡಿದ್ದಾರೆ. ಅದರ ಪ್ರಮುಖ ಅಂಶಗಳು ಈ ರೀತಿ ಇವೆ.
* ಇದುವರೆಗೂ ಗೃಹಲಕ್ಷ್ಮಿ ಯೋಜನೆಗೆ 1.65 ಗ್ರಾಹಕರ ನೋಂದಣಿಯಾಗಿದ್ದಾರೆ ಇದರಲ್ಲಿ 1.59 ಕೋಟಿ ಕುಟುಂಬಗಳು 200 ಯೂನಿಟ್ ಕಿಂತ ಕಡಿಮೆ ಬಳಕೆ ಮಾಡಿ ಯೋಜನೆ ಪ್ರಯೋಜನ ಪಡೆಯುತ್ತಿವೆ
* ಸರ್ಕಾರದಿಂದ ಇದುವರೆಗೂ 3,578 ಕೋಟಿ ಸಬ್ಸಿಡಿ ನೀಡಲಾಗಿದೆ, ಮತ್ತು ಯೋಜನೆಗೆ ನೋಂದಣಿ ಮಾಡಿಕೊಳ್ಳುವುದಕ್ಕೆ ಯಾವುದೇ ಕಡೆಯ ದಿನಾಂಕ ಇಲ್ಲ.
* ಗೃಹಜ್ಯೋತಿ ಯೋಜನೆಯಡಿ ಮಾಸಿಕ 48 ಯುನಿಟ್ಗಿಂತ ಕಡಿಮೆ ವಿದ್ಯುತ್ ಬಳಕೆ ಮಾಡುವ 70 ಲಕ್ಷ ಗ್ರಾಹಕರಿಗೆ ಇನ್ನುಮುಂದೆ ಮಾಸಿಕ 10% ಹೆಚ್ಚುವರಿ ವಿದ್ಯುತ್ ಬದಲಾಗಿ 10 ಯುನಿಟ್ ಹೆಚ್ಚುವರಿ ಉಚಿತ ವಿದ್ಯುತ್.
* ಸರಾಸರಿ 48 ಯೂನಿಟ್ ಗಿಂತ ಕಡಿಮೆ ಬಳಸುವ ಸುಮಾರು 70ಲಕ್ಷ ಗ್ರಾಹಕರ ಇದ್ದಾರೆ ಅವರಿಗೆ ಇದರ ಪ್ರಯೋಜನ ಸಿಗಲಿದೆ.
ಈ ಸುದ್ದಿ ಓದಿ:- ಅಂಗನವಾಡಿ ಟೀಚರ್ ಹುದ್ದೆಗೆ ಅರ್ಜಿ ಆಹ್ವಾನ.! 10th ಪಾಸ್ ಆಗಿರುವವರು ಅರ್ಜಿ ಸಲ್ಲಿಸಬಹುದು.!
* ರಾಜ್ಯ ಸರ್ಕಾರದ ಈ ನಿರ್ಧಾರದಿಂದ ಅನಾವಶ್ಯಕವಾಗಿ ವಿದ್ಯುತ್ ಪೋಲಾಗುವಿಕೆಗೆ ಕಡಿವಾಣ ಹಾಕಿದಂತಾಗುತ್ತದೆ ಮತ್ತು ಅತ್ಯಂತ ಕಡಿಮೆ ವಿದ್ಯುತ್ ಬಳಸುವವರಿಗೆ ಸಂಪೂರ್ಣ ಶೂನ್ಯ ದರ ಬಿಲ್ ಸಿಗುತ್ತದೆ
* ರಾಜ್ಯ ಸರ್ಕಾರ ಇದಕ್ಕೆ ವಾರ್ಷಿಕ ರೂ.398 ಕೋಟಿ ಹೆಚ್ಚುವರಿ ಸಹಾಯಧನ ನೀಡಲಿದೆ.