Deprecated: strtolower(): Passing null to parameter #1 ($string) of type string is deprecated in /home/u302298408/domains/rishithepower.com/public_html/wp-content/plugins/taboola/simple_html_dom.php on line 712
ವಿದ್ಯಾಭ್ಯಾಸ ಮುಗಿದ ತಕ್ಷಣವೇ ಎದುರಾಗುವ ಸವಾಲೆಂದರೆ ಉದ್ಯೋಗವಕಾಶ. ಪದವಿ ಮಾಡಿದ ಎಲ್ಲರಿಗೂ ಉದ್ಯೋಗ ಸಿಗುತ್ತದೆ ಎನ್ನುವ ಭರವಸೆಯನ್ನು ಯಾರು ನೀಡಿಲ್ಲ ಆದರೆ ತಮಗಿರುವ ಅವಕಾಶ ಹಾಗೂ ಆಸಕ್ತಿಯಿಂದ ಕೆಲವರು ಉನ್ನತ ಹುದ್ದೆಗಳನ್ನು ಇರುತ್ತಾರೆ, ಕೆಲವರು ನಗರಗಳತ್ತ ಮುಖ ಮಾಡಿ IT-BT ಕಛೇರಿಗಳಲ್ಲಿ ಕೆಲಸಕ್ಕೆ ಸೇರಿದರೆ ಕೆಲವರು ಸರ್ಕಾರಿ ಹುದ್ದೆಗಳಿಗೆ ಸೇರಿ ಸೇವೆ ಮಾಡಲು ಇಚ್ಛಿಸುತ್ತಾರೆ.
ಇನ್ನು ಕೆಲವರಿಗೆ ಹಳ್ಳಿಯಲ್ಲಿ ಉಳಿದುಕೊಂಡು ಸ್ವಂತ ಉದ್ದಿಮೆ ಆರಂಭಿಸುವ ಕನಸಿರುತ್ತದೆ. ಇಂತಹ ಆಸಕ್ತಿ ಇರುವವರಿಗೆ ಈಗ ಅವಕಾಶಗಳಿಗೇನು ಕಡಿಮೆ ಇಲ್ಲ, ಯಾಕೆಂದರೆ ಹಳ್ಳಿಗಳು ಕೂಡ ಈಗ ಬಹಳಷ್ಟು ಅಭಿವೃದ್ಧಿ ಹೊಂದುತ್ತಿವೆ ಇರುವ ಸವಲತ್ತುಗಳನ್ನು ಸರಿಯಾಗಿ ಉಪಯೋಗಿಸಿಕೊಂಡು ಲಾಭದಾಯಕ ಉದ್ದಿಮೆ ಆರಂಭಿಸುವುದಕ್ಕೆ ಬಹಳಷ್ಟು ಅನುಕೂಲತೆ, ಗ್ರಾಮೀಣ ಪ್ರದೇಶಗಳಲ್ಲಿಯೂ ಸಿಗುತ್ತಿದೆ.
ಈ ಸುದ್ದಿ ನೋಡಿ:- ಇ-ಸ್ವತ್ತು ಮಾಡಿಸಲು ಅಕ್ಕ-ಪಕ್ಕದವರು ಕೂಡ ಸಹಿ ಹಾಕಲೇಬೇಕಾ.? ಸಹಿ ಹಾಕಲು ನಿರಾಕರಿಸಿದರೆ ಏನು ಮಾಡಬೇಕು.? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.!
ಈಗ ಅಂತಹದ್ದೇ ಒಂದು ಸಂತೋಷದ ಸುದ್ದಿಯನ್ನು ಈ ಅಂಕಣದಲ್ಲಿ ತಿಳಿಸಲು ಇಚ್ಛಿಸುತ್ತಿದ್ದೇವೆ ಅದೇನೆಂದರೆ, ಹಳ್ಳಿಗಳಲ್ಲಿ ಕೃಷಿ ಮಾತ್ರವಲ್ಲದೇ ಕೃಷಿಗೆ ಹೊಂದಿಕೊಂಡಂತೆ ಇರುವ ಕಸುಬುಗಳಾದ ಕುರಿ-ಕೋಳಿ ಸಾಕಾಣಿಕೆ, ಹೈನುಗಾರಿಕೆ, ಮೀನು ಸಾಕಾಣಿಕೆ ಮುಂತಾದ ಉದ್ಯಮಗಳನ್ನು ಕೂಡ ಆರಂಭಿಸಿ ಕೈತುಂಬ ಹಣ ಸಂಪಾದನೆ ಮಾಡಬಹುದು ಮತ್ತು ಸಂಪೂರ್ಣವಾಗಿ ಇವುಗಳನ್ನು ತೊಡಗಿಕೊಂಡರೆ ಬೃಹತ್ ಉದ್ದಿಮೆಯನ್ನು ಆರಂಭಿಸಬಹುದು.
ನಿಮ್ಮಲ್ಲಿ ಈ ಆಸಕ್ತಿ ಮತ್ತು ಅನುಭವ ಇದ್ದು, ಈ ಉದ್ದಿಮಿ ಆರಂಭಿಸುವುದಕ್ಕೆ ಹಣಕಾಸಿನ ಕೊರತೆ ಇದ್ದರೆ ಸರ್ಕಾರಗಳು ಕೂಡ ನಿಮ್ಮ ಕನಸುಗಳಿಗೆ ಕೈಜೋಡಿಸುತ್ತಿವೆ. ಹೈನುಗಾರಿಕೆ, ಪಶುಸಂಗೋಪನೆ, ಮೀನು ಸಾಕಾಣಿಕೆ, ಕುರಿ ಸಾಕಾಣಿಕೆ ಎಲ್ಲದಕ್ಕೂ ಕೂಡ ಸರ್ಕಾರದಿಂದ ಸಬ್ಸಿಡಿ ರೂಪದ ಸಾಲ ಸೌಲಭ್ಯ ಸಿಗುತ್ತಿದೆ, ಇದಕ್ಕಾಗಿ ವಿವಿಧ ಬಗೆಯ ಅನೇಕ ಯೋಜನೆಗಳನ್ನು ಸರ್ಕಾರಗಳು ಆರಂಭಿಸಿವೆ.
ಈ ಸುದ್ದಿ ನೋಡಿ:- ಅಂಗನವಾಡಿ ಟೀಚರ್ ಹುದ್ದೆಗೆ ಅರ್ಜಿ ಆಹ್ವಾನ.! 10th ಪಾಸ್ ಆಗಿರುವವರು ಅರ್ಜಿ ಸಲ್ಲಿಸಬಹುದು.!
ಕೋಳಿ ಸಾಕಾಣಿಕೆಯಿಂದ ಹಳ್ಳಿಗಳಲ್ಲಿ ಉದ್ಯೋಗಾವಕಾಶ ಹೆಚ್ಚಾಗುವುದರ ಜೊತೆಗೆ ಹಳ್ಳಿಗಾಡಿನ ಯುವ ಜನತೆಗೆ ಆದಾಯಕ್ಕೆ ದಾರಿ ಆಗುತ್ತದೆ ಮತ್ತು ಕೋಳಿ ಮಾಂಸ ಹಾಗೂ ಮೊಟ್ಟೆಗೂ ಮಾರುಕಟ್ಟೆಯಲ್ಲಿ ಬಹಳ ಡಿಮ್ಯಾಂಡ್ ಆಗಿರುವುದರಿಂದ ಆಹಾರ ಪೂರೈಕೆ ಮಾಡಿದ ರೀತಿಯು ಆಗುತ್ತದೆ.
ಹಾಗಾಗಿ ಸಾಕಷ್ಟು ಪ್ರೋತ್ಸಾಹವು ಕೋಳಿ ಸಾಕಾಣಿಕೆಗೆ ದೊರೆಯುತ್ತಿದೆ ನೀವು ಇದನ್ನು ಆರಂಭಿಸಲು ಇಚ್ಛಿಸಿದರೆ ಜಾನುವಾರು ಅಭಿಯಾನದಡಿಯಲ್ಲಿ ಕೋಳಿ ಸಾಕಾಣಿಕೆ ಮಾಡುವವರಿಗೆ 5೦%ರ ಸಹಾಯಧನದಲ್ಲಿ ಸರ್ಕಾರದಿಂದ ಸಾಲ ಸಿಗುತ್ತದೆ ಸರ್ಕಾರ ಮಾತ್ರವಲ್ಲದೆ ನಬಾರ್ಡ್ ನಿಂದ ಕೂಡ ಸಾಲ ದೊರೆಯುತ್ತದೆ.
ಈ ಸುದ್ದಿ ನೋಡಿ:- ಹೊಸ ಡಿಜಿಟಲ್ ವೋಟರ್ ಕಾರ್ಡ್ ಪಡೆಯುವ ವಿಧಾನ.!
ನೀವು ದೊಡ್ಡ ಪ್ರಮಾಣದಲ್ಲಿ ಕೋಳಿ ಸಾಕಾಣಿಕೆ ಮಾಡಬೇಕು ಎಂದುಕೊಂಡಿದ್ದರೆ ನೀವು ಜಾನುವಾರು ಮಿಷನ್ ಅಡಿಯಲ್ಲಿ ಅರ್ಜಿ ಸಲ್ಲಿಸಿದರೆ 5೦% ಸಹಾಯಧನದಲ್ಲಿ ಸಾಲ ಸೌಲಭ್ಯ ಪಡೆಯುವುದು ಅನುಕೂಲಕರ.
ಈ ಯೋಜನೆಗಳಿಗೆ ನೀವು ಆನ್ಲೈನ್ ಮೂಲಕ https://nlm.udyamimitra.in/ ಪೋರ್ಟಲ್ ಗೆ ಹೋಗಿ ಅರ್ಜಿ ಸಲ್ಲಿಸಬೇಕು, ಮತ್ತು ಇದೇ ಪೋರ್ಟಲ್ ನಲ್ಲಿ ಹೆಚ್ಚಿನ ಮಾಹಿತಿಯನ್ನು ಕೂಡ ಪಡೆಯಬಹುದು ಅಥವಾ ರೈತರು ಹತ್ತಿರದ ಪಶುಸಂಗೋಪನ ಇಲಾಖೆ ಕಚೇರಿಗಳಿಗೆ ಭೇಟಿ ಕೊಟ್ಟು ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.
ಈ ಸುದ್ದಿ ನೋಡಿ:- ರೆಡಿ ಮನೆ ಅಥವಾ ಕಟ್ಟಿಸಿರುವ ಮನೆ ಎರಡರಲ್ಲಿ ಯಾವುದು ಬೆಸ್ಟ್ ಗೊತ್ತಾ.? ಸ್ವಂತ ಮನೆ ಆಸೆ ಇರುವವರು ತಪ್ಪದೆ ನೋಡಿ.!
ಇಲಾಖೆ ಅಧಿಕಾರಿಗಳು ಕೋಳಿ ತಳಿ, ಸಾಕಣೆ ವೆಚ್ಚ ಮತ್ತು ಕೋಳಿ ಫಾರಂ ನಿರ್ವಹಣೆ ಮಾಡುವ ವಿಧಾನದಿಂದ ಹಿಡಿದು ಪ್ರತಿಯೊಂದು ವಿಚಾರದ ಬಗ್ಗೆ ಸರಿಯಾದ ಮಾರ್ಗದರ್ಶನ ನೀಡಿ ನೆರವಾಗಲಿದ್ದಾರೆ. ಬಹಳಷ್ಟು ಯುವ ಜನತೆಗೆ ಅನುಕೂಲವಾಗುವ ಮಾಹಿತಿ ಇದಾಗಿದೆ ಹಾಗಾಗಿ ತಪ್ಪದೆ ಈ ಮಾಹಿತಿಯನ್ನು ಹೆಚ್ಚಿನ ರೈತ ಬಾಂಧವರೊಂದಿಗೆ ಹಂಚಿಕೊಳ್ಳಿ.