ಕಟ್ಟಡ ಕಾರ್ಮಿಕರಿಗೆ 3000 ಪರಿಹಾರ ಧನ ಬಂದಿಲ್ಲ ಅಂದ್ರೆ ತಕ್ಷಣ ಈ ಕೆಲಸ ಮಾಡಿ ಇಂದೇ ಹಣ ಬರುತ್ತದೆ.!

 

WhatsApp Group Join Now
Telegram Group Join Now

ಕರ್ನಾಟಕ ಕಾರ್ಮಿಕ ಮಂಡಳಿಯಲ್ಲಿ ನೋಂದಾಯಿತರಾಗಿರುವ ಕರ್ನಾಟಕ ಕಟ್ಟಡ ಕಾರ್ಮಿಕ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಸರ್ಕಾರದಿಂದ ಸಾಕಷ್ಟು ಅನುಕೂಲತೆಗಳು ಸಿಗುತ್ತಿವೆ. ಕಟ್ಟಡ ಕಾರ್ಮಿಕರ ಸಹಾಯಧನವಾಗಿ ಸಿಗುತ್ತಿರುವ ಮೂರು ಸಾವಿರ ರೂಪಾಯಿಗಳು ಕಟ್ಟಡ ಕಾರ್ಮಿಕರ ಪಾಲಿಗಂತೂ ವರದಾನವಾಗಿದೆ. ನೀವು ಕೂಡ ಕಟ್ಟಡ ಕಾರ್ಮಿಕರಾಗಿದ್ದು ಈ ಯೋಜನೆಯ ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸಿದ್ದರೂ ಕೂಡ ನಿಮ್ಮ ಖಾತೆಗೆ ಸಹಾಯಧನದ ಹಣ ಬರುತ್ತಿಲ್ಲ ಎಂದರೆ ಸಾಕಷ್ಟು ಕಾರಣಗಳು ಇರಬಹುದು.

ಅದರಲ್ಲಿ ನಿಮ್ಮ ದಾಖಲೆಗಳಲ್ಲಿರುವ ಮಾಹಿತಿಯಲ್ಲಿ ವ್ಯತ್ಯಾಸವಾಗಿರುವುದು ಅಥವಾ ನೀಡಿರುವ ಬ್ಯಾಂಕ್ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗದೆ ಇರುವುದು ಮುಖ್ಯ ಕಾರಣವಾಗಿರಬಹುದು. ಒಂದು ವೇಳೆ ಇದೇ ಕಾರಣದಿಂದ ನಿಮ್ಮ ಖಾತೆಗೆ ಹಣ ಬರುತ್ತಿಲ್ಲ ಎಂದರೆ ಅದನ್ನು ತಿಳಿದುಕೊಳ್ಳಲು ನೀವು ನೀಡಿರುವ ಖಾತೆಗೆ ಆಧಾರ್ ಕಾರ್ಡ್ ಲಿಂಕ್ ಆಗಿದೆ ಎಂದು ತಿಳಿದುಕೊಳ್ಳಲು ಈ ಕ್ರಮಗಳನ್ನು ಅನುಸರಿಸಿ.

● ನಿಮ್ಮ ಗೂಗಲ್ ಬ್ರೌಸರ್ ಗೆ ಹೋಗಿ UIDAI ಬ್ಯಾಂಕ್ ಲಿಂಕ್ ಸ್ಟೇಟಸ್ ಎಂದು ಟೈಪ್ ಮಾಡಿ
ಆಧಾರ್ ಸರ್ವಿಸಸ್ ಕುರಿತಾದ ಮತ್ತೊಂದು ಲಿಂಕ್ ಓಪನ್ ಆಗುತ್ತದೆ ಅದನ್ನು ಕ್ಲಿಕ್ ಮಾಡಿ.
● ಆಧಾರ್ ಐಡೆಂಟಿಫಿಕೇಶನ್ ಅಥಾರಿಟಿ ಆಫ್ ಇಂಡಿಯಾದ ಅಧಿಕೃತ ವೆಬ್ಸೈಟ್ ಓಪನ್ ಆಗುತ್ತದೆ.
● ಇದರಲ್ಲಿ ಸಾಕಷ್ಟು ಆಪ್ಷನ್ಗಳು ಕೂಡ ಇರುತ್ತವೆ ವೆರಿಫೈ ಯುವರ್ ಆಧಾರ್ ನಂಬರ್, ವೆರಿಫೈ ಯುವರ್ ಮೊಬೈಲ್ ನಂಬರ್ ಇಮೇಲ್ ಐಡಿ, ವೆರಿಫೈ ಯುವರ್ ಬ್ಯಾಂಕ್ ಅಕೌಂಟ್ ಮುಂತಾದ ಸರ್ವೀಸಸ್ ಗಳು ಇರುತ್ತವೆ.

● ನಾವು ನಮ್ಮ ಖಾತೆಗೆ ಆಧಾರ್ ಲಿಂಕ್ ಆಗಿದೆಯಾ ಎಂದು ಚೆಕ್ ಮಾಡಬೇಕಾದ ಕಾರಣ ಲಿಂಕಿಂಗ್ ಆಧಾರ್ ಸ್ಟೇಟಸ್ ಎನ್ನುವಲ್ಲಿ ಆಪ್ಷನ್ ಮೇಲೆ ಕ್ಲಿಕ್ ಮಾಡಬೇಕು. ವಿವ್ಯೂ ಯುವರ್ ಆಧಾರ್ ಅಂಡ್ ಬ್ಯಾಂಕ್ ಅಕೌಂಟ್ ಲಿಂಕಿಂಗ್ ಡೀಟೇಲ್ಸ್ ಆಧಾರ್ ಲಿಂಕಿಂಗ್ ಸ್ಟೇಟಸ್ ಫೆಚ್ಡ್ ಇನ್ NCPI ಸರ್ವೀಸಸ್ ಎನ್ನುವಲ್ಲಿ ಕ್ಲಿಕ್ ಮಾಡಿ.
● ಆಟೋಮೆಟಿಕ್ ಆಗಿ ಹೊಸ ಪೇಜ್ ಓಪನ್ ಆಗುತ್ತದೆ, ಅದರಲ್ಲಿ ನಿಮ್ಮ ಆಧಾರ್ ನಂಬರ್ ಕೇಳುತ್ತದೆ, ನಿಮ್ಮ 12 ಅಂಕಿಯ ಆಧಾರ್ ಸಂಖ್ಯೆಯನ್ನು ಹಾಕಿ. ಹಾಗೆಯೇ ಕಾಣುವ ಕ್ಯಾಪ್ಚವನ್ನು ಕೂಡ ಹಾಕಿ. ಸೆಂಡ್ ಒಟಿಪಿ ಎನ್ನುವಲ್ಲೆ ಕ್ಲಿಕ್ ಮಾಡಿದರೆ ಆಧಾರ್ ಸಂಖ್ಯೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಒಂದು OTP ಬರುತ್ತದೆ. OTP ಎಂಟ್ರಿ ಮಾಡಿ ಸಬ್ಮಿಟ್ ಕೊಡಿ.

● ನಂತರ ಚೆಕ್ ಆಧಾರ್ ಬ್ಯಾಂಕ್ ಅಕೌಂಟ್ ಲಿಂಕಿಂಗ್ ಸ್ಟೇಟಸ್ ಎನ್ನುವ ಆಯ್ಕೆ ಬರುತ್ತದೆ ಅಥವಾ ಯಾವುದೇ ಅಕೌಂಟಿಗೆ ಲಿಂಕ್ ಆಗದೆ ಇದ್ದರೆ ಅದನ್ನು ಸಹ ತೋರಿಸಲಾಗುತ್ತದೆ.
● ನಿಮ್ಮ ಯಾವುದೇ ಬ್ಯಾಂಕ್ ಅಕೌಂಟಿಗೆ ಆಧಾರ್ ಕಾರ್ಡ್ ಲಿಂಕ್ ಆಗಿಲ್ಲ ಎಂದರೆ ನಿಮಗೆ ಸರ್ಕಾರದ ಈ ಸಹಾಯಧನ ಸಿಗುವುದಿಲ್ಲ. ನೀವು ಹತ್ತಿರದಲ್ಲಿರುವ ನಿಮ್ಮ ಬ್ಯಾಂಕ್ ಶಾಖೆಗೆ ಭೇಟಿ ಕೊಟ್ಟು, ಬ್ಯಾಂಕ್ ಅಕೌಂಟಿಗೆ ಆಧಾರ್ ಲಿಂಕ್ ಮಾಡಿಸಿದರೆ ಈ ಸಹಾಯಧನವು ನಿಮ್ಮ ಖಾತೆ ಸೇರುತ್ತದೆ.

● ಅಥವಾ ನೀವು ಸಹಾಯಧನಕ್ಕಾಗಿ ಅರ್ಜಿ ನೀಡಿದ ಸಮಯದಲ್ಲಿ ಕೊಟ್ಟಿದ್ದ ಖಾತೆ ಆಧಾರ್ ಲಿಂಕ್ ಆಗದೆ ಇದ್ದು ನಿಮ್ಮ ಇನ್ನೊಂದು ಬೇರೆ ಯಾವುದಾದರೂ ಬ್ಯಾಂಕ್ ಖಾತೆ ಆಧಾರ್ ಲಿಂಕ್ ಆಗಿದ್ದರೆ ಆ ಖಾತೆಗೆ ಹಣ ಹೋಗಿರುವ ಸಾಧ್ಯತೆಗಳು ಕೂಡ ಇರುತ್ತವೆ. ನಿಧಾನವಾಗಿ ಒಮ್ಮೆ ಪರಿಶೀಲಿಸಿ ನಂತರ ಕಾರ್ಮಿಕ ಇಲಾಖೆಯ ಕಚೇರಿಯನ್ನು ಸಂಪರ್ಕಿಸಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now