SSLC ಪ್ರತಿಯೊಬ್ಬ ವಿದ್ಯಾರ್ಥಿಯ ಜೀವನದ ಪ್ರಮುಖ ಘಟ್ಟ. SSLC ಸದ್ಯಕ್ಕೆ ಈಗಿನ ವ್ಯವಸ್ಥೆಯಲ್ಲಿ ಕನಿಷ್ಠ ವಿದ್ಯಾರ್ಹತೆ ಎಂದು ಹೇಳಬಹುದು. ಮೊದಲ ಬಾರಿಗೆ ಪಬ್ಲಿಕ್ ಪರೀಕ್ಷೆ ಎದುರಿಸಲು ಹತ್ತನೇ ತರಗತಿಯನ್ನು ಆರಿಸಿರುವುದರಿಂದ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯು 10ನೇ ತರಗತಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಿಗೆ ಅಂಕ ಪಟ್ಟಿಯನ್ನು ನೀಡುತ್ತದೆ ಈ ಅಂಕ ಪಟ್ಟಿಯ ಮೂಲಕವೇ ವಿದ್ಯಾರ್ಥಿ ಬದುಕಿನ ಭವಿಷ್ಯ ಬದಲಾಗುತ್ತದೆ.
ಮುಂದಿನ ಹಂತದಲ್ಲಿ ವಿದ್ಯಾಭ್ಯಾಸ ಪಡೆಯುವ ಸಲುವಾಗಿ ತಾಂತ್ರಿಕ ಮತ್ತು ತಾಂತ್ರಿಕೇತರ ಕೋರ್ಸ್ ಗಳಿಗೆ ಕಾಲೇಜು ಶಿಕ್ಷಣ ಪಡೆಯಲು ದಾಖಲಾಗುವ ಸಮಯದಲ್ಲಿ ಹಾಗೂ ಉದ್ಯೋಗ ಪಡೆಯಬೇಕು ಎಂದರು ಕೂಡ 10ನೇ ತರಗತಿ ಅಂಕಪಟ್ಟಿ ಕಡ್ಡಾಯವಾಗಿ ಬೇಕೇ ಬೇಕು. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಅನೇಕ ಹುದ್ದೆಗಳಿಗೆ 10ನೇ ತರಗತಿಯನ್ನು ಉತ್ತೀರ್ಣರಾಗಿದ್ದರು ಸಾಕು ,ಅರ್ಜಿ ಸಲ್ಲಿಸಿ ಅರ್ಹತೆ ಇದ್ದರೆ ಸರಕಾರಿ ಹುದ್ದೆಗಳನ್ನೇ ಪಡೆಯಬಹುದಾಗಿದೆ.
ಇಷ್ಟೊಂದು ಪ್ರಮುಖ ದಾಖಲೆ ಆಗಿದ್ದರೂ ಕೂಡ ಕೆಲವೊಮ್ಮೆ ನಮ್ಮ ನಿರ್ಲಕ್ಷ್ಯದಿಂದ ಅಥವಾ ಯಾವುದೋ ಅನಾಹುತದಿಂದ SSLC ಅಂಕಪಟ್ಟಿಯನ್ನು ನಾವು ಕಳೆದುಕೊಳ್ಳುತ್ತೇವೆ, ಕೆಲವೊಮ್ಮೆ ಅದು ಕಳುವಾಗಬಹುದು ಅಥವಾ ನಾವೇ ಬಸ್ಸಿನಲ್ಲಿ, ರೈಲಿನಲ್ಲಿ ಮಿಸ್ ಮಾಡಿಕೊಳ್ಳಬಹುದು. ಅಥವಾ ಮನೆಯಲ್ಲೇ ಇದ್ದರೂ ಯಾವುದಾದರೂ ಒಂದು ಕಾರಣದಿಂದ ಅದು ಹಾಳಾಗಿ ಬಿಡಬಹುದು.
ಈ ರೀತಿ ಯಾವುದೇ ಕಾರಣಗಳಿಂದ SSLC ಅಂಕಪಟ್ಟಿಯನ್ನು ಕಳೆದುಕೊಂಡರೆ ಅದನ್ನು ಮತ್ತೆ ಮರಳಿ ಪಡೆಯುವ ಅವಕಾಶಗಳು ಇದೆಯಾ ಅಥವಾ ಇದ್ದರೂ ಅದನ್ನು ಹೇಗೆ ಪಡೆಯಬೇಕು ಎನ್ನುವ ಅಗತ್ಯ ಮಾಹಿತಿಯು ಅನೇಕರಿಗೆ ತಿಳಿದಿಲ್ಲ. ಅದಕ್ಕಾಗಿ ಈ ಅಂಕಣದಲ್ಲಿ ಇದರ ಬಗ್ಗೆ ಮುಖ್ಯ ಮಾಹಿತಿ ತಿಳಿಸಿಕೊಡುವ ಪ್ರಯತ್ನವನ್ನು ಮಾಡುತ್ತಿದ್ದೇವೆ.
ನೀವೇನಾದರೂ SSLC ಅಂಕಪಟ್ಟಿಯನ್ನು ಕಳೆದುಕೊಂಡಿದ್ದರೆ ಅದನ್ನು ನಾಲ್ಕು ಬಾರಿ ಅರ್ಜಿ ಸಲ್ಲಿಸಿ ವಾಪಸ್ ಪಡೆಯಬಹುದು. ಈ ಅವಕಾಶವನ್ನು ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯು ನೀಡಿದೆ. ಇದುವರೆಗೂ ನೀವು ವ್ಯಾಸಂಗ ಮಾಡಿದ್ದ ಶಾಲೆಯಲ್ಲಿ ಹೋಗಿ ಇದಕ್ಕೆ ಅರ್ಜಿ ಸಲ್ಲಿಸಿ ಪಡೆಯಬೇಕಿತ್ತು, ಅದಕ್ಕೂ ಮುಂಚೆ ನೀವು ಪೊಲೀಸ್ ಸ್ಟೇಷನ್ ಹೋಗಿ ನಿಮ್ಮ ಅಂಕಪಟ್ಟಿ ಕಳೆದು ಹೋಗಿರುವ ಬಗ್ಗೆ ಅರ್ಜಿ ಸಲ್ಲಿಸಬೇಕಾಗಿತ್ತು.
ಈಗ ಇದನ್ನು ಸಹ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ ಪಡೆಯುವ ಅವಕಾಶವನ್ನು ಪ್ರೌಢಶಿಕ್ಷಣ ಮಂಡಳಿ ಮಾಡಿಕೊಟ್ಟಿದೆ. ಇತ್ತೀಚಿಗೆ ಎಲ್ಲಾ ವ್ಯವಹಾರಗಳು ಆನ್ಲೈನ್ ಮೂಲಕವೇ ನಡೆಯುತ್ತಿರುವುದರಿಂದ ಇದಕ್ಕೂ ಸಹ ಆನ್ಲೈನಲ್ಲಿ ಅವಕಾಶ ಮಾಡಿಕೊಡಲಾಗಿದೆ. ಆನ್ಲೈನ್ ನಲ್ಲಿ ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿಯ ಅಧಿಕೃತ ವೆಬ್ಸೈಟ್ ಗೆ ಭೇಟಿ ಕೊಟ್ಟು, ಅದರಲ್ಲಿ ಅಂಕಪಟ್ಟಿ ಮರಳಿ ಪಡೆಯುವ ಆಪ್ಶನ್ ಕ್ಲಿಕ್ ಮಾಡಿ, ಕೇಳಲಾಗುವ ಅಗತ್ಯ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ.
ವಿಧಿಸಲಾದ ಅರ್ಜಿ ಶುಲ್ಕವನ್ನು ಪಾವತಿ ಮಾಡಿ, ನಂತರ ನಿಮ್ಮ ವಿವರವನ್ನು ತುಂಬಿಸಿ ಸಬ್ಮಿಟ್ ಮಾಡಿದರೆ ನಿಮ್ಮ ಮನೆಯ ವಿಳಾಸಕ್ಕೆ ನಿಮ್ಮ SSLC ಅಂಕಪಟ್ಟಿ ನಕಲಿ ಪ್ರತಿ ಸಿಗುತ್ತದೆ. ಈ ಪ್ರಕ್ರಿಯೆಯಲ್ಲಿ ಆಧಾರ್ ಕಾರ್ಡ್ ಪ್ರಮುಖವಾಗುತ್ತದೆ. ನೀವು ನಿಮ್ಮ ಆಧಾರ್ ಕಾರ್ಡ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ. ಈ ಉಪಯುಕ್ತ ಮಾಹಿತಿ ಹೆಚ್ಚಿನ ಜನರಿಗೆ ಅನುಕೂಲವಾಗಬಹುದು, ಆದ್ದರಿಂದ ನಿಮ್ಮ ಸ್ನೇಹಿತರು ಹಾಗೂ ಕುಟುಂಬದವರ ಜೊತೆ ಈ ವಿಷಯವನ್ನು ಹಂಚಿಕೊಳ್ಳಿ.