ಸಾಮಾನ್ಯವಾಗಿ ಹೆಣ್ಣು ಮಕ್ಕಳು ಉಳಿತಾಯ (Saving) ಮಾಡುವ ಗುಣವನ್ನು ಹೆಚ್ಚು ಹೊಂದಿರುತ್ತಾರೆ. ಮನೆಯಲ್ಲೇ ಇರುವ ಗೃಹಿಣಿ ಆದರೂ ಕೂಡ ಗಂಡ ಖರ್ಚಿಗೆ ಕೊಟ್ಟಿದ್ದರಲ್ಲಿ ಸ್ವಲ್ಪ ಹಣವನ್ನು, ಮಕ್ಕಳು ಕೊಟ್ಟಿದ್ದರಲ್ಲಿ ಅಥವಾ ತವರು ಮನೆಯಲ್ಲಿ ಕೊಟ್ಟಿದ್ದ ಉಡುಗೊರೆಯನ್ನು ಉಳಿಸಿ ಭವಿಷ್ಯಕ್ಕಾಗಿ ಇಟ್ಟುಕೊಳ್ಳಲು ಬಯಸುತ್ತಾರೆ.
ಈ ರೀತಿ ಹಣವನ್ನು ಮನೆಯ ಅಡುಗೆ ಡಬ್ಬದಲ್ಲಿ ಅಥವಾ ಬೀರುವಿನಲ್ಲಿ ಇಡುವುದರಿಂದ ಅದು ಹೆಚ್ಚಾಗುವುದಿಲ್ಲ ಬದಲಾಗಿ ಭದ್ರತೆ ಇರುತ್ತದೆ ನಿಜ. ಇದೇ ಹಣವನ್ನು ನೀವು ಅಂಚೆ ಕಚೇರಿಯ (Post Office Schemes) ವಿಶೇಷ ಯೋಜನೆಗಳಲ್ಲಿ ಇಟ್ಟರೆ ನಿಮ್ಮ ಹಣಕ್ಕೆ 100% ಸರ್ಕಾರವೇ ಗ್ಯಾರಂಟಿ ಕೊಡುವುದರ ಜೊತೆಗೆ ನೀವು ಬಯಸಿದರೆ ಪ್ರತಿ ತಿಂಗಳು ಅಥವಾ ವರ್ಷ ಅಥವಾ ನೀವು ನಿರ್ಧರಿಸುವ ವರ್ಷಕ್ಕೆ ಬಡ್ಡಿ ಸಮೇತ ಒಟ್ಟಿಗೆ ದೊಡ್ಡ ಮೊತ್ತದ ಹಣವನ್ನು ವಿತ್ ಡ್ರಾ ಮಾಡಿಕೊಳ್ಳಬಹುದು.
ಸದ್ಯಕ್ಕೆ ಈಗ ಅಂಚೆ ಕಚೇರಿಯಲ್ಲಿ ಈ ರೀತಿಯ ವಿವಿಧ ಬಗೆಯ 13ಕ್ಕೂ ಹೆಚ್ಚು ಯೋಚನೆಗಳಿದ್ದು ಮಹಿಳೆಯರಿಗಾಗಿಯೇ ವಿಶೇಷವಾಗಿ 2023-24ನೇ ಕೇಂದ್ರ ಸರ್ಕಾರದ ಬಜೆಟ್ ಸಮಯದಲ್ಲಿ ಮಾನ್ಯ ವಿತ್ತ ಸಚಿವೆಯಾದ ನಿರ್ಮಲ ಸೀತಾರಾಮನ್ (Finance Minister Nirmala Sitharaman) ಅವರು ಮತ್ತೊಂದು ಯೋಜನೆಯನ್ನು ಪರಿಚಯಿಸಿದ್ದಾರೆ.
ಈ ಸುದ್ದಿ ಓದಿ:- ರೈತರಿಗೆ ಗುಡ್ ನ್ಯೂಸ್.! ಪ್ರತಿ ಎಕರೆಗೆ ಸಿಗಲಿದೆ 10 ಸಾವಿರ.!
ಈ ಯೋಜನೆ ಹೆಸರು ಮಹಿಳಾ ಸಮ್ಮಾನ್ ಯೋಜನೆ ಅಥವಾ ಮಹಿಳಾ ಸಮ್ಮಾನ್ ಸೇವಿಂಗ್ ಸರ್ಟಿಫಿಕೇಟ್ (MSSC) ಎಂದು ಈ ಯೋಜನೆಯನ್ನು ಕರೆಯಲಾಗುತ್ತದೆ. ಈ ಯೋಜನೆಯಲ್ಲಿ ನೀವೇನಾದರೂ ಹೂಡಿಕೆ ಮಾಡಿದರೆ ಇದುವರೆಗೆ ಅಂಚೆ ಕಚೇರಿಯಲ್ಲಿ ಇರುವ ಇನ್ನಿತರ ಹೂಡಿಕೆ ಯೋಜನೆಗಳಿಗಿಂತ ಹೆಚ್ಚು ಬಡ್ಡಿ ದರವನ್ನು ಪಡೆಯಬಹುದು.
ಬಹಳ ಕಡಿಮೆ ಅವಧಿಗೆ ಸರ್ಕಾರ ಸಮಯಾವಕಾಶ ಮಾಡಿಕೊಟ್ಟಿದ್ದು ಆ ಸಮಯದಲ್ಲಿ ಹೂಡಿಕೆ ಮಾಡಿದವರಿಗಷ್ಟೇ ಯೋಜನೆಯ ಲಾಭ ಸಿಗುತ್ತದೆ. ಅಂಚೆ ಕಚೇರಿಯಲ್ಲಿ 10 ವರ್ಷದ ಒಳಗಿನ ಹೆಣ್ಣುಮಕ್ಕಳ ಹೆಸರಿನಲ್ಲಿ ಸುಕನ್ಯಾ ಸಮೃದ್ಧಿ ಯೋಜನೆ ಖಾತೆ ತೆರೆಯಬಹುದು, ಅಸಲಿಯಾಗಿ ಈ ಯೋಜನೆಗೆ ಅತಿಹೆಚ್ಚಿನ 8% ಪರ್ಸೆಂಟ್ ಬಡ್ಡಿದರವಿದೆ ಮತ್ತು ಈ ಯೋಜನೆಯು ಶಾಶ್ವತ ಯೋಜನೆಯಾಗಿದೆ.
ಅದನ್ನು ಹೊರತುಪಡಿಸಿ ಮಹಿಳೆಯರಿಗಾಗಿಯೇ ಇರುವ ಇನ್ನೊಂದು ವಿಶೇಷ ಯೋಜನೆ ಈ MSSC ಯೋಜನೆ. ಇದರಲ್ಲಿ 7.50% ಬಡ್ಡಿದರ ಅನ್ವಯವಾಗುತ್ತದೆ. ಗರಿಷ್ಠ ಎರಡು ಲಕ್ಷದವರೆಗೆ ಹೂಡಿಕೆ ಮಾಡಬಹುದಾಗಿದ್ದು ಈ ಯೋಜನೆ ಮೆಚುರಿಟಿ ಅವಧಿ ಎರಡು ವರ್ಷಗಳು ಇರುತ್ತದೆ.
ಈ ಸುದ್ದಿ ಓದಿ:- ಪ್ಯಾನ್ ಕಾರ್ಡ್ ಕುರಿತು ಹೊಸ ನಿಯಮ.! ಈ ತಪ್ಪು ಮಾಡಿದರೆ ಬೀಳುತ್ತದೆ 10,000 ದಂಡ.!
ನೀವು RD ಯೋಜನೆ ಅಥವಾ FD ಯೋಜನೆಗಳಲ್ಲಿ ಹೂಡಿಕೆ ಮಾಡಲು ಬಯಸದೆ ಇದ್ದರೆ ಈ MSSC ಯೋಜನೆಯಲ್ಲಿ ಹೂಡಿಕೆ ಮಾಡಬಹುದು. ಭಾರತದ ನಾಗರಿಕರು ಆಗಿರುವಂತಹ ಯಾವುದೇ ಮಹಿಳೆಯು ಯಾವುದೇ ವಯಸ್ಸಿನ ಮಿತಿ ಇಲ್ಲದೆ ಈ ಯೋಜನೆಯಡಿ ಹೂಡಿಕೆ ಮಾಡಬಹುದು.
ಆದರೆ ನೆನಪಿರಲಿ ನೀವು ಎರಡು ಲಕ್ಷಕ್ಕಿಂತ ಹೆಚ್ಚಿಗೆ ಈ ಯೋಜನೆಯಲ್ಲಿ ಹೂಡಿಕೆ ಮಾಡಲು ಸಾಧ್ಯವಿಲ್ಲ ಒಂದು ವೇಳೆ ಹೂಡಿಕೆ ಮಾಡಿದರು 2 ಲಕ್ಷದವರೆಗಿನ ಹಣಕ್ಕೆ ಮಾತ್ರ ಈ ಬಡ್ಡಿದರ ಸಿಗುತ್ತದೆ. ಅಂಚೆ ಕಚೇರಿಯ ಇನ್ನಿತರ ಯೋಚನೆಗಳಂತೆ ನಾಮಿನಿ ಫೆಸಿಲಿಟಿ ಒಂದು ಅಂಚೆ ಕಛೇರಿಯಿಂದ ಮತ್ತೊಂದು ಅಂಚೆ ಕಚೇರಿಗೆ ವರ್ಗಾಯಿಸುವುದು ಸೇರಿದಂತೆ ಎಲ್ಲ ರೀತಿಯ ಅನುಕೂಲತೆಗಳು ಕೂಡ ಇರುತ್ತವೆ.
ಈಗಾಗಲೇ ಯೋಜನೆ ಪರಿಚಯವಾಗಿ ಒಂದು ವರ್ಷ ಕಳೆದಿದ್ದು ಇನ್ನೂ ಒಂದು ವರ್ಷದ ಒಳಗಡೆ ನೀವು ಯೋಜನೆ ಖರೀದಿಸಿದರೆ ನಿಮ್ಮ 2 ಲಕ್ಷ ಹೂಡಿಕೆಗೆ ರೂ.32,044 ಬಡ್ಡಿದರ ಸಿಗುತ್ತದೆ. ಈ ವಿಶೇಷ ಯೋಜನೆ ಬಗ್ಗೆ ಇನ್ನಷ್ಟು ಮಾಹಿತಿಯನ್ನು ಹೆಚ್ಚಿನ ವಿವರದೊಂದಿಗೆ ತಿಳಿದುಕೊಳ್ಳಲು ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ.