ರಾಜ್ಯದಲ್ಲಿ ಈ ಬಾರಿ ಮುಂಗಾರು ಮಳೆ ಕುಸಿತ ಕಂಡಿದೆ. ಮುಂಗಾರು ಮಳೆಯ ವೈಫಲ್ಯದಿಂದ ರೈತರ ಪರಿಸ್ಥಿತಿ ದಯಾಹೀನವಾಗಿದೆ. ಕಳೆದ 125 ವರ್ಷಗಳಲ್ಲಿ ಅತಿ ಕಡಿಮೆ ಮಳೆ ಬಿದ್ದಿದ್ದು ಈಗಾಗಲೇ ರಾಜ್ಯದ 235 ತಾಲ್ಲೂಕುಗಳಲ್ಲಿ ಪೈಕಿ ಕೇಂದ್ರ ಸರ್ಕಾರದ ಕೈಪಿಡಿ ಅನ್ವಯ (CDRF) 216 ತಾಲ್ಲೂಕುಗಳನ್ನು ಬರಪೀಡಿತ ತಾಲೂಕುಗಳನ್ನಾಗಿ (Drought) ಘೋಷಣೆ ಮಾಡಲಾಗಿದೆ.
ಕೆಲವು ಕಡೆ ಮಳೆ ಬೀಳದೆ ಬೆಳೆ ಬಿತ್ತಲು ಸಾಧ್ಯವಾಗದ ಪರಿಸ್ಥಿತಿ ಎದುರಾಗಿದ್ದರೆ ಇನ್ನೂ ಕೆಲವು ಕಡೆ ಬಿದ್ದ ಕೆಲ ಹನಿಗೆ ಭೂಮಿಗೆ ಬೀಜ ಬಿತ್ತನೆ ಮಾಡಿದ ರೈತನಿಗೆ ಸಕಾಲದಲ್ಲಿ ಮಳೆ ಆಗದ ಕಾರಣ ಸಂಪೂರ್ಣ ಬೆಳೆ ಹಾನಿಯಾಗಿದೆ. ಬೆಳೆ ನಷ್ಟದ ಜೊತೆಗೆ ಸಾಲದ ಹೊರೆಯಲ್ಲಿ ರೈತ ಸಿಲುಕಿದ್ದಾನೆ. ಜಾನುವಾರುಗಳಿಗೆ ಮೇವಿನ ಕೊರತೆ, ಕೆಲವು ಭಾಗದಲ್ಲಿ ಕುಡಿಯುವ ನೀರಿಗೆ ಕೂಡ ಸಂಕಷ್ಟ ಎದುರಾಗಿದೆ.
ರಾಜ್ಯದಲ್ಲಿ ಕಂಡು ಕೇಳರಿಯಾದ ಈ ಪರಿಸ್ಥಿತಿಯಿಂದ ರೈತರು ತಾವಿರುವ ಜಾಗವನ್ನು ಬಿಟ್ಟು ಆಹಾರ ನೀರು ಅರಸಿ ಬೇರೆ ಪ್ರದೇಶಗಳಿಗೆ ಗುಳೆ ಹೋಗುತ್ತಿದ್ದಾರೆ. ಇಂತಹ ಪರಿಸ್ಥಿತಿಯನ್ನು ತಡೆಗಟ್ಟುವ ಉದ್ದೇಶದಿಂದ ರಾಜ್ಯ ಸರ್ಕಾರ ಅನೇಕ ಕಾರ್ಯಕ್ರಮಗಳನ್ನು ಕೈಗೊಂಡಿದೆ.
ರೋಜಗಾರ್ ಅಭಿಯಾನ ಕೂಡ ಆರಂಭಿಸಿ ನರೇಗಾ ಯೋಜನೆ (Narega) ಮೂಲಕ ಪ್ರತಿ ಅರ್ಹ ವ್ಯಕ್ತಿಗೂ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ (RDPR) ವತಿಯಿಂದ ಉದ್ಯೋಗ ಕಲ್ಪಿಸಿಕೊಡುವ ಪ್ರಯತ್ನ ಮಾಡುತ್ತಿದೆ. ಇದರ ಜೊತೆಗೆ ಇದೇ ಮಾದರಿಯ ಇನ್ನೂ ಅನೇಕ ಕಾರ್ಯಗಳನ್ನು ಕೈಕೊಂಡು ಪರಿಸ್ಥಿತಿ ಸುಧಾರಿಸಲು ಪ್ರಯತ್ನಿಸುತ್ತಿದೆ.
ರೈತನಿಗಾಗಿರುವ ಈ ನ’ಷ್ಟಕ್ಕೆ ಪರಿಹಾರ ನೀಡಲು (Drought releif ) ಕೇಂದ್ರ ಸರ್ಕಾರಕ್ಕೆ (Central Government) 17 ಸಾವಿರ ಕೋಟಿ ಅನುದಾನ (CDRF) ಬಿಡುಗಡೆ ಮಾಡುವಂತೆ ಮನವಿ ಮಾಡಿಕೊಟ್ಟು ಅದರ ಸಂಬಂಧಿತ ದಾಖಲೆಗಳನ್ನು ಸಲ್ಲಿಸಿದೆ. ವರದಿ ಸಲ್ಲಿಸಿ ಸಾಕಷ್ಟು ಸಮಯ ಕಳೆದಿದ್ದರೂ ಇನ್ನೂ ಬರ ಪರಿಹಾರದ ಹಣ ಬಿಡುಗಡೆ ಮಾಡದ ಕಾರಣ ರಾಜ್ಯದ ಮುಖ್ಯಮಂತ್ರಿಗಳ ಸಮೇತ, ಶಾಸಕರು ಹಾಗೂ ಸಚಿವರು ಕೇಂದ್ರ ಸರ್ಕಾರವನ್ನು ದೂರುತ್ತಿದ್ದಾರೆ.
ಇದರ ನಡುವೆ ರಾಜ್ಯ ಸರ್ಕಾರ ತನ್ನ ಜವಾಬ್ದಾರಿಯನ್ನು ಮೆರೆದಿದ್ದು 31 ಜಿಲ್ಲೆಗಳಿಗೆ 324 ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಿದೆ. SDRF ಅಡಿ ಅನುದಾನ ಬಿಡುಗಡೆ ಮಾಡಿ ಅಧಿಕೃತ ಆದೇಶ ಹೊರಡಿಸಿದೆ. ಯಾವ ಯಾವ ಜಿಲ್ಲೆಗೆ ಎಷ್ಟು ಅನುದಾನ ಸಿಗುತ್ತದೆ ಎನ್ನುವುದರ ಪಟ್ಟಿ ಸಹ ನೀಡಿದೆ, ಅದರ ವಿವರ ಹೀಗಿದೆ ನೋಡಿ.
* ಬೆಂಗಳೂರು ನಗರ – 7.50 ಕೋಟಿ.
* ಬೆಂಗಳೂರು ಗ್ರಾಮಾಂತರ – 6 ಕೋಟಿ.
* ರಾಮನಗರ -7.50 ಕೋಟಿ.
* ಕೋಲಾರ – 9 ಕೋಟಿ.
* ಚಿಕ್ಕಬಳ್ಳಾಪುರ – 9 ಕೋಟಿ.
* ತುಮಕೂರು – 15 ಕೋಟಿ.
* ಚಿತ್ರದುರ್ಗ – 9 ಕೋಟಿ.
* ದಾವಣಗೆರೆ – 9 ಕೋಟಿ.
* ಚಾಮರಾಜನಗರ – 7.50 ಕೋಟಿ
* ಮೈಸೂರು – 13.50 ಕೋಟಿ.
* ಮಂಡ್ಯ- 10.50 ಕೋಟಿ.
* ಬಳ್ಳಾರಿ- 7.50 ಕೋಟಿ.
* ಕೊಪ್ಪಳ – 10.50 ಕೋಟಿ.
* ರಾಯಚೂರು – 9 ಕೋಟಿ.
* ಕಲಬುರ್ಗಿ – 16.50 ಕೋಟಿ.
* ಬೀದರ್ – 4.50 ಕೋಟಿ.
* ಬೆಳಗಾವಿ – 22.50 ಕೋಟಿ.
* ಬಾಗಲಕೋಟೆ – 13.50 ಕೋಟಿ.
* ವಿಜಯಪುರ – 18 ಕೋಟಿ.
* ಗದಗ – 10.50 ಕೋಟಿ.
* ಹಾವೇರಿ – 12 ಕೋಟಿ.
* ಧಾರವಾಡ – 12 ಕೋಟಿ.
* ಶಿವಮೊಗ್ಗ – 10.50 ಕೋಟಿ.
* ಹಾಸನ – 12 ಕೋಟಿ.
* ಚಿಕ್ಕಮಗಳೂರು – 12 ಕೋಟಿ.
* ಕೊಡಗು – 7.50 ಕೋಟಿ.
* ದಕ್ಷಿಣ ಕನ್ನಡ – 3 ಕೋಟಿ.
* ಉಡುಪಿ – 4.50 ಕೋಟಿ.
* ಉತ್ತರ ಕನ್ನಡ – 16.50 ಕೋಟಿ.
* ಯಾದಗಿರಿ – 9 ಕೋಟಿ.
* ವಿಜಯನಗರ – 9 ಕೋಟಿ.