ಗೂಗಲ್ ಪೇ ಒಂದು UPI ಆಧಾರಿತ ಮೊಬೈಲ್ ಬ್ಯಾಂಕಿಂಗ್ ಸೇವೆಯಾಗಿದೆ. ಗೂಗಲ್ ಪೇ ಮೂಲಕ ನೀವು ನಿಮ್ಮ ಮೊಬೈಲ್ ರೀಚಾರ್ಜ್ ಮಾಡಿಕೊಳ್ಳಬಹುದು, ನಿಮ್ಮ ಮನೆಯ ಕರೆಂಟ್ ಬಿಲ್ ಕಟ್ಟಬಹುದು, ಟಿವಿ ರಿಚಾರ್ಜ್ ಮಾಡಬಹುದು, ನಿಮ್ಮ ಸ್ನೇಹಿತರಿಗೆ ಹಣ ಕಳುಹಿಸಬಹುದು ಮತ್ತು ಸ್ಪೆಷಲ್ ಅವಾರ್ಡ್ ಗಳನ್ನು ಪಡೆದು ಹಣ ಉಳಿಸಲೂಬಹುದು.
ಈಗ ಮತ್ತೊಂದು ಸೇವೆಯನ್ನು ತನ ಗ್ರಾಹಕರಿಗೆ ನೀಡಲು ಮುಂದಾಗಿರುವ ಗೂಗಲ್ ಪೇ ಇನ್ನು ಮುಂದೆ ಸಾಲ ಕೂಡ ನೀಡುವ ಕಾರ್ಯಕ್ಕೂ ಮುಂದಾಗಿದೆ. ಹೀಗೆ ಸದಾ ಗ್ರಾಹಕ ಸ್ನೇಹಿಯಾದ ಹತ್ತು ಅನೇಕ ಅನುಕೂಲತೆಗಳನ್ನು ಮಾಡಿಕೊಡುತ್ತಿದೆ. ಈಗ ಇದೇ ಸಾಲಿಗೆ ಮತ್ತೊಂದು ಆಪ್ಷನ್ ಕೂಡ ಸೇರುತ್ತಿದ್ದು ಇದೇ ದೀಪಾವಳಿ ವಿಶೇಷವಾಗಿ ತನ್ನ ಗ್ರಾಹಕರಿಗೆ ಗೂಗಲ್ ಪೇ 501 ರೂಗಳ ಕಾಣಿಕೆಗಳನ್ನು ಕೊಡುತ್ತಿದೆ.
ಆದರೆ ಇದನ್ನು ಎಲ್ಲರೂ ಪಡೆಯಲು ಸಾಧ್ಯವಾಗುವುದಿಲ್ಲ ನೀತಿ ನಿಬಂಧನೆಗಳೊಂದಿಗೆ ಈ ರೀತಿ ಒಂದು ಆಫರ್ ನೀಡಿದೆ ಇದನ್ನು ಪಡೆಯಲು ಏನು ಮಾಡಬೇಕು ಎನ್ನುವುದರ ವಿವರ ಇಲ್ಲಿದೆ ನೋಡಿ. ದೇಶದಾದ್ಯಂತ ಕೋಟ್ಯಾಂತರ ಜನರು ಗೂಗಲ್ ಪೇ ಬಳಸುತ್ತಾರೆ ಈಗ ಸಣ್ಣ ತಳ್ಳುಗಾರಿ ವ್ಯಾಪಾರಿಗಳಿಂದ ಹಿಡಿದು ದೊಡ್ಡ ದೊಡ್ಡಮಾಲ್ ಗಳವರೆಗೆ ಎಲ್ಲೆಡೆ ಡಿಜಿಟಲ್ ವ್ಯವಹಾರ ನಡೆಯುತ್ತಿರುವುದರಿಂದ ಇದಕ್ಕೆ ಸಹಾಯವಾಗಿರುವ ಗೂಗಲ್ ಪೇ ಬಳಸುವವರ ಸಂಖ್ಯೆ ಕೋಟಿಯಲ್ಲಿದೆ.
ಗೂಗಲ್ ಪೇ ಗೆ ಕಾಂಪಿಟೇಶನ್ ಕೊಡಲು ಭಾರತದಲ್ಲಿ ಫೋನ್ ಪೇ, ಪೇಟಿಎಂ, ಅಮೆಜಾನ್ ಪೇ ಇನ್ನಿತರ ಆಪ್ಷನ್ ಗಳು ಇವೆ. ಆದರೆ ಇದೆಲ್ಲವನ್ನು ಮೀರಿ ತನ್ನ ಗ್ರಾಹಕರನ್ನು ಸದಾ ತನ್ನ ಬಳಿ ಹಿಡಿದಿಟ್ಟುಕೊಳ್ಳಲು ಪ್ರಯತ್ನಿಸುವ ಗೂಗಲ್ ಪೇ ಈಗ ಗ್ರಾಹಕರಿಗೆ ಬಂಪರ್ ಆಫರ್ ನೀಡುತ್ತಿದೆ.
ಈ ಬಾರಿಯ ದೀಪಾವಳಿ ವಿಶೇಷವಾಗ ಮಾಡಲಃ ತನ್ನ ಗ್ರಾಹಕರಿಗೆ ಇಂತಹದೊಂದು ವಿಶೇಷ ಗಿಫ್ಟ್ ನೀಡ ಬಯಸಿದೆ. ಆದರೆ ಅದನ್ನು ಪಡೆದುಕೊಳ್ಳುವುದಕ್ಕೆ ಕಂಡಿಷನ್ ಗಳಿದ್ದು ನೀವು ಯಾವ ರೀತಿ ಇದನ್ನು ಪಡೆಯಬಹುದು ಎನ್ನುವುದರ ವಿವರ ಹೇಗಿದೆ.
* ಮೊದಲಿಗೆ ನಿಮ್ಮ ಫೋನ್ ನಲ್ಲಿ Google Pay ಅಪ್ಲಿಕೇಶನ್ ಡೌನ್ಲೋಡ್ ಮಾಡಿ ವಿವರಗಳನ್ನು ತುಂಬಿಸಿ ಅದನ್ನು ಓಪನ್ ಮಾಡಿ.
* ಗೂಗಲ್ ಪೇ ನಲ್ಲಿ ಈ ಬಾರಿ ಸ್ಪೆಷಲ್ ಆಗಿ ಫೆಸ್ಟಿವಲ್ ಸಿಟಿ ಅನ್ನು ಆಯ್ಕೆ ನೀಡಲಾಗಿದೆ. ಇದು ಈ ಮೇಲೆ ತಿಳಿಸಿದ ಗಿಫ್ಟ್ ಗೆ ಸಂಬಂಧಿಸಿದಂತೆ ಅದನ್ನು ಸೆಲೆಕ್ಟ್ ಮಾಡಿ.
* ಪ್ರತಿಯೊಂದು ಹಂತದಲ್ಲೂ ಹೊಸ ಹೊಸ ಆಟಗಳು ಹಾಗೂ ಚಾಲೆಂಜ್ ಗಳು ಇರುತ್ತವೆ.
* ನವೆಂಬರ್ 20 ರ ವರೆಗೂ ಈ ಮಾದರಿಯ ಹೊಸ ಹೊಸ ಆಟಗಳು ಹಾಗೂ ಸವಾಲುಗಳು ಬರುತ್ತಲೇ ಇರುತ್ತವೆ.
* ನೀವು ಮೊದಲ ಹಂತಗಳನ್ನುಪೂರೈಸಿದ ಆಧಾರದ ಮೇಲೆ ನಿಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಹೊಸ ಹೊಸ ಟಾಸ್ಕ್ ಗಳನ್ನು ನಿಯಮಗಳನ್ನು ಸಹ ನೀಡಲಾಗುತ್ತದೆ.
* ಇದಾದ ಮೇಲೆ ಸ್ವಾಗತ ಶಗುನ್ ಗೆ 1 ರೂಪಾಯಿ ಪಾವತಿಸಬೇಕಾಗುತ್ತದೆ, ನೀವು ಎಷ್ಟು ಆಟವನ್ನು ಪೂರ್ತಿಗೊಳಿಸುತ್ತೇನೆ ಹಾಗೂ ಹೇಗೆ ಕೇಳುತ್ತೀರಿ ಎನ್ನುವುದರ ಆಧಾರದ ಮೇಲೆ ನಿಮಗೆ ಹಣ ಸಿಗುತ್ತದೆ
* ಕೊನೆಯ ಹಂತದವರೆಗೂ ಕೂಡ ಈ ರೀತಿ ಎಚ್ಚರಿಕೆಯಿಂದ ಪಾಲಿಸಿದರೆ ನೀವು ಈ ಹಣವನ್ನು ಪಡೆಯಬಹುದು.