ನಮ್ಮ ದೇಶದಲ್ಲಿ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಸೇರಿದ ವರ್ಗದ ಜನತೆ ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಬಹಳ ಹಿಂದುಳಿದಿದ್ದಾರೆ ಎನ್ನುವ ಕಾರಣದಿಂದಾಗಿ ಅವರಿಗೆ ಹಲವು ಕ್ಷೇತ್ರಗಳಲ್ಲಿ ಮೀಸಲಾತಿಯನ್ನು ನೀಡಲಾಗಿದೆ.
ಸರ್ಕಾರಿ ಉದ್ಯೋಗದಲ್ಲೂ ಕೂಡ ಹೆಚ್ಚಿನ ವಯೋಮಿತಿ ಸಡಿಲಿಕೆ ಹೊಂದಿರುವ ಇವರು ಸರ್ಕಾರಿ ಉದ್ಯೋಗಗಳಲ್ಲಿ ಮಾತ್ರವಲ್ಲದೆ ಖಾಸಗಿ ಕ್ಷೇತ್ರದಲ್ಲೂ ಕೂಡ ಇವರು ತೊಡಗಿಕೊಳ್ಳಬೇಕು ಎನುವ್ನ ಕನಸುಗಳಿದ್ದು ಅವರ ಬಳಿ ಐಡಿಯಾಗಳು ಇದ್ದರೂ ಬಂಡವಾಳ ಕೊರತೆ ಕಾರಣದಿಂದಾಗಿ ಅವರು ವಂಚಿತರಾಗಬಾರದು ಎನ್ನುವ ಕಾರಣಕ್ಕಾಗಿ ಸರ್ಕಾರ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡಕ್ಕೆ ಹಲವು ಯೋಜನೆಗಳ ಮೂಲಕ ನೆರವಾಗುತ್ತಿದೆ.
ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮವು ಕೂಡ ಇದ್ದು ಈ ನಿಗಮವು ಪ್ರತಿ ಆರ್ಥಿಕ ವರ್ಷದಲ್ಲಿ ಹೊಸ ಹೊಸ ಕಲ್ಯಾಣ ಯೋಜನೆಗಳನ್ನು ಜಾರಿಗೆ ತರುತ್ತದೆ. ಅಂತೆಯೇ 2023-24 ನೇ ಸಾಲಿನಲ್ಲಿ ಹಲವು ಯೋಜನೆಗಳನ್ನು ಘೋಷಿಸಿದೆ.
ಈ ಬಾರಿ ವಿವಿಧ ನಿಗಮಗಳು ಆ ವರ್ಗಕ್ಕೆ ಸೇರಿದವರಿಗಾಗಿ ಗಂಗಾ ಕಲ್ಯಾಣ, ವೈಯುಕ್ತಿಕ ಸಾಲ ಯೋಜನೆ, ಹೋಟೆಲ್ ಉದ್ಯಮಕ್ಕೆ ಸಾಲ ಯೋಜನೆ ಮುಂತಾದ ಯೋಜನೆಗಳನ್ನು ರೂಪಿಸಿದೆ. ಅಂತೆಯೇ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮ ಕೂಡ ಕೆಲ ಕಲ್ಯಾಣ ಯೋಜನೆಗಳನ್ನು ಜಾರಿಗೆ ತಂದಿದ್ದು.
ಯಾವೆಲ್ಲ ಯೋಜನೆಗಳನ್ನು ಜಾರಿಗೆ ತಂದಿದೆ ಮತ್ತು ಯಾರು ಇದರ ಪ್ರಯೋಜನ ಪಡೆದುಕೊಳ್ಳಬಹುದು ಅರ್ಜಿ ಸಲ್ಲಿಸುವುದು ಹೇಗೆ ಮತ್ತು ಕಡೆಯ ದಿನಾಂಕ ಯಾವುದು ಎನ್ನುವುದರ ಬಗ್ಗೆ ವಿವರವನ್ನು ಈ ಅಂಕಣದಲ್ಲಿ ತಿಳಿಸುತ್ತೇವೆ.
1. ಸ್ವಯಂ ಉದ್ಯೋಗ ನೇರ ಸಾಲ ಯೋಜನೆ:-
* ಸಣ್ಣ ಮಟ್ಟದ ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವವರರು ಘಟಕ ವೆಚ್ಚ 1 ಲಕ್ಷದವರೆಗೆ ಈ ಯೋಜನೆ ಮೂಲಕ ಸಾಲ ಪಡೆದುಕೊಳ್ಳಬಹುದು.
ಘಟಕ ವೆಚ್ಚ: ರೂ. 1.00 ಲಕ್ಷ
ಸಹಾಯಧನ: ರೂ. 50,000
ಸಾಲ: ರೂ. 50,000 (4% ಬಡ್ಡಿದರದಲ್ಲಿ)
2. ಉದ್ಯಮಶೀಲತಾ ಅಭಿವೃದ್ಧಿ ಯೋಜನೆ:-
* ಈ ಯೋಜನೆ ಮೂಲಕ ವ್ಯಾಪಾರ ಹಾಗೂ ಇನ್ನಿತರ ಚಟುವಟಿಕೆಗಳಲ್ಲಿ ತೊಡಗಿಕೊಳ್ಳುವವರಿಗೆ ನಿಗಮದ ವತಿಯಿಂದ ಸಬ್ಸಿಡಿ ರೂಪದ ಬ್ಯಾಂಕ್ ಸಾಲದ ನೆರವು ಕೂಡ ನೀಡಲಾಗುತ್ತದೆ.
* ಘಟಕ ವೆಚ್ಚ 2 ಲಕ್ಷದವರೆಗೂ ಶೇಕಡ 70% ಸಬ್ಸಿಡಿ ಯೊಂದಿಗೆ ನೆರವು ನೀಡಲಾಗುತ್ತದೆ ಉಳಿದ ಮೊತ್ತವು ಬ್ಯಾಂಕ್ ಸಾಲವಾಗಿರುತ್ತದೆ.
3. ಸ್ವಾವಲಂಬಿ ಸಾರಥಿ ಯೋಜನೆ:-
* ಹಳದಿ ಬೋರ್ಡ್ ವಾಹನಗಳನ್ನು ವಾಣಿಜ್ಯ ಉದ್ದೇಶದಿಂದ ಖರೀದಿಸುವವರು ಈ ಯೋಜನೆ ನೆರವು ಪಡೆಯಬಹುದು.
* ಘಟಕ ವೆಚ್ಚದ 75 % ರಷ್ಟು ಸಬ್ಸಿಡಿ ಯೊಂದಿಗೆ ಗರಿಷ್ಟ ರೂ. 4.00 ಲಕ್ಷ ಸಾಲ ಪಡೆಯಬಹುದು.
4. ಮೈಕ್ರೋಕ್ರೆಡಿಟ್ ಸಾಲ ಅಥವಾ ಪ್ರೇರಣಾ ಯೋಜನೆ :
* ಈ ಯೋಜನೆಯಲ್ಲಿ ಕನಿಷ್ಟ 10 ಸದಸ್ಯರಿರುವ ಮಹಿಳಾ ಸ್ವಸಹಾಯ ಸಂಘಗಳ ಗುಂಪು ಸಣ್ಣ ಆರ್ಥಿಕ ಚಟುವಟಿಕೆಗಳಿಗೆ ಸಾಲ ಮತ್ತು ಸಹಾಯಧನ ಸೌಲಭ್ಯ ಪಡೆದುಕೊಳ್ಳಬಹುದು. ಘಟಕ ವೆಚ್ಚ: ರೂ. 2.50 ಲಕ್ಷ
ಸಹಾಯಧನ: ರೂ.1.50 ಲಕ್ಷ
ಸಾಲ: ರೂ. 1,00 ಲಕ್ಷ (4% ಬಡ್ಡಿದರದಲ್ಲಿ)
5. ಭೂ ಒಡೆತನ ಯೋಜನೆ:- ಭೂರಹಿತ SC/ST ವರ್ಗದ ಮಹಿಳಾ ಕೃಷಿ ಕಾರ್ಮಿಕರಿಗೆ ಈ ಯೋಜನೆ ಮೂಲಕ ಕೃಷಿ ಜಮೀನು ಖರೀದಿಗೆ ನೆರವು ನೀಡಲಾಗುವುದು.
ಘಟಕ ವೆಚ್ಚ: ರೂ. 25,00 ಲಕ್ಷ / ರೂ. 20.00 ಲಕ್ಷ ಸಹಾಯಧನ: ಶೇ. 50%
ಸಾಲ: ಶೇ. 50% (6% ಬಡ್ಡಿದರದಲ್ಲಿ)
6. ಗಂಗಾ ಕಲ್ಯಾಣ ಯೋಜನೆ:-
ಈ ಯೋಜನೆಗೆ ಸಣ್ಣ ಮತ್ತು ಅತಿ ಸಣ್ಣ ರೈತರು ಅರ್ಹರಾಗಿದ್ದು ಗರಿಷ್ಠ 5 ಎಕರೆ ಒಳಗೆ ಕೃಷಿ ಭೂಮಿ ಹೊಂದಿರುವ ರೈತರು ತಮ್ಮ ಜಮೀನಿಗೆ ಬೋರ್ ವೆಲ್ ಕೊರೆಸುವ ಘಟಕ ವೆಚ್ಚಕ್ಕೆ 1 1.5 ಲಕ್ಷದವರೆಗೂ ಕೂಡ ಸಹಾಯಧನ ಪಡೆಯಬಹುದು ಮತ್ತು ಅತಿ ಕಡಿಮೆ ಬಡ್ಡಿ ದರದಲ್ಲಿ ಹೆಚ್ಚಿನ ಘಟಕ ವೆಚ್ಚಕ್ಕೆ ಸಾಲ ಸೌಲಭ್ಯ ಕೂಡ ಪಡೆಯಬಹುದು.
ಅರ್ಜಿ ಸಲ್ಲಿಸುವ ವಿಧಾನ:-
* ಆಯಾ ನಿಗಮಗಳ ಜಿಲ್ಲಾ ವ್ಯವಸ್ಥಾಪಕರ ಕಚೇರಿಗಳಲ್ಲಿ ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
* ಗ್ರಾಮ ಒನ್, ಬೆಂಗಳೂರು ಒನ್, ಕರ್ನಾಟಕ ಒನ್ ಕೇಂದ್ರಗಳಲ್ಲಿ ಸೇವಾ ಸಿಂಧು ಪೋರ್ಟಲ್ ಮೂಲಕ ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:- 29/11/2023
ಸಹಾಯವಾಣಿ ಸಂಖ್ಯೆ:- 9482-300-400