ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ – 2023ರ (Karnataka assembly electrion – 2023) ವೇಳೆ ಕಾಂಗ್ರೆಸ್ ಪಕ್ಷದ ಪ್ರಣಾಳಿಕೆಯಲ್ಲಿದ್ದ ಪಂಚಖಾತ್ರಿ ಯೋಜನೆಗಳಲ್ಲಿ (Congress party manifesto ) ಗೃಹಜ್ಯೋತಿ ಯೋಜನೆಯು (Gruhajyothi Scheme) ಮೊದಲನೇ ಯೋಜನೆಯಾಗಿ ಘೋಷಣೆಯಾಗಿತ್ತು.
ಅಂತೆಯೇ ಅಧಿಕ ಮತ ಬೆಂಬಲದೊಂದಿಗೆ ಅಧಿಕಾರ ಸ್ಥಾಪಿಸಿದ ಕಾಂಗ್ರೆಸ್ ಸರ್ಕಾರ ಜುಲೈ ತಿಂಗಳಿನಿಂದಲೇ ರಾಜ್ಯದಾದ್ಯಂತ ಬಾಡಿಗೆ ಮನೆಯಲ್ಲಿ ವಾಸಿಸುವ ಕುಟುಂಬಗಳು ಸೇರಿದಂತೆ ಎಲ್ಲಾ ಕುಟುಂಬಗಳಿಗೂ ಕೂಡ ಗೃಹಜ್ಯೋತಿ ಯೋಜನೆಯಡಿ ಉಚಿತ ವಿದ್ಯುತ್ ಸೌಲಭ್ಯ ನೀಡಿದೆ. ಗೃಹಜ್ಯೋತಿ ಯೋಜನೆಗೆ ಆಧಾರ್ ಕಾರ್ಡ್ ಮತ್ತು ಅವರ ಮನೆಯ ವಿದ್ಯುತ್ ಖಾತೆ ಸಂಖ್ಯೆ ಕೊಟ್ಟು ನೋಂದಾಯಿಸಿಕೊಂಡಿದ್ದವರು ಜುಲೈ ತಿಂಗಳ ಬಳಕೆಗೆ ಆಗಸ್ಟ್ ತಿಂಗಳಿಂದ ಶೂನ್ಯ ದರ ಕರೆಂಟ್ (Free electricity till 200 Unit) ಪಡೆದಿದ್ದಾರೆ.
ಕಳೆದ 12 ತಿಂಗಳಲ್ಲಿ ಕುಟುಂಬಗಳು ಬಳಸಿದ್ದ ಸರಾಸರಿ ವಿದ್ಯುತ್ ಬಳಕೆ ಮೇಲೆ 10% ಹೆಚ್ಚುವರಿ ವಿದ್ಯುತ್ ನೀಡಿ ಈ ಮಿತಿಯನ್ನು ಗರಿಷ್ಠ 200 ಯೂನಿಟ್ ವರೆಗೆ ನಿಗದಿಪಡಿಸಿದೆ. 200 ಯೂನಿಟ್ ಗಡಿಯನ್ನು ಮೀರಿದವರಿಗೆ ಗೃಹಜ್ಯೋತಿ ಯೋಜನೆಗೆ ನೋಂದಾಯಿಸಿಕೊಂಡಿದ್ದವರಾಗಿದ್ದರೆ ಹೆಚ್ಚುವರಿ ಬಳಕೆಗೆ ಮಾತ್ರ ಬಿಲ್ ನೀಡುತ್ತಿದೆ.
ಒಂದು ವೇಳೆ ಗೃಹಜ್ಯೋತಿ ಯೋಜನೆಗೆ ನೋಂದಾಯಿಸಿಕೊಳ್ಳದೆ ಇದ್ದವರು ಪೂರ್ತಿ ಬಿಲ್ ಕಟ್ಟಬೇಕಿದೆ. ಈ ಯೋಜನೆ ಅನುಕೂಲತೆಯನ್ನು ಕರ್ನಾಟಕದ ಕೋಟ್ಯಾಂತರ ಕುಟುಂಬಗಳು ಪಡೆಯುತ್ತಿವೆ ಆದರೆ ಈಗ ಯೋಜನೆಯಲ್ಲಿ ಒಂದು ಬದಲಾವಣೆ ಮಾಡಲಾಗಿದೆ.
ಅದೇನೆಂದರೆ ಈ ಹಿಂದೆಯೂ ಕೂಡ ಸರ್ಕಾರವು ಇಂತಹದೊಂದು ಘೋಷಣೆ ಮಾಡಿತ್ತು, ಯಾರೆಲ್ಲಾ ಹಳೆ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿದ್ದೀರಾ ಅವರು ಹಳೆಯ ಮೊತ್ತವನ್ನು ಪಾವತಿಸದೇ ಹೋದರೆ ಗೃಹಜ್ಯೋತಿ ಯೋಜನೆ ಪ್ರಯೋಜನ ಪಡೆಯಲು ಸಾಧ್ಯವಾಗುವುದಿಲ್ಲ. ಹಾಗಾಗಿ ತಪ್ಪದೆ ಈ ಕೂಡಲೇ ನಿಮ್ಮ ಬಾಕಿ ಇರುವ ಶುಲ್ಕಯನ್ನು ಕಟ್ಟಬೇಕು ಎಂದು ಆದೇಶ ನೀಡಿ ಅದಕ್ಕೆ ಸೆಪ್ಟೆಂಬರ್ 30ರಂದು ಅಂತಿಮ ದಿನಾಂಕ ಎಂದು ಹೇಳಿತ್ತು.
ಆದರೆ ಇನ್ನೂ ಕೂಡ ರಾಜ್ಯದ ಹಲವು ಭಾಗಗಳಲ್ಲಿ ಜನರ ನಿರ್ಲಕ್ಷದಿಂದ ಈ ಪ್ರಕ್ರಿಯೆ ಪೂರ್ತಿಗೊಂಡಿಲ್ಲ. ಅದರಲ್ಲೂ ಮಂಡ್ಯ (Mandya), ಕೊಡಗು (Kodagu), ಉತ್ತರ ಕನ್ನಡ (Uttara Kannada), ಚಾಮರಾಜನಗರ ಜಿಲ್ಲೆ (Chamarajanagar), ಮೈಸೂರು (Mysore) ಜಿಲ್ಲೆಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಹಳೆಯ ಬಾಕಿಯನ್ನು ಪಾವತಿಸಿದೆ ಉಳಿಸಿಕೊಂಡಿದ್ದಾರೆ.
ಇವರಿಗೆ ಸರ್ಕಾರ ಮತ್ತೊಂದು ಬಾರಿ ಎಚ್ಚರಿಕೆ ನೀಡಿದೆ. ಈ ಹಿಂದೆ ಹೇಳಿದಂತೆ ಯಾರೆಲ್ಲ ಹಳೆಯ ವಿದ್ಯುತ್ ಬಾಕಿ, ಉಳಿಸಿಕೊಂಡಿದ್ದೀರಾ ಅವರಿಗೆ ಮುಂದಿನ ತಿಂಗಳಿಂದ ಗೃಹಜ್ಯೋತಿ ಯೋಜನೆಯ ಸೌಲಭ್ಯ ಸಿಗುವುದಿಲ್ಲ. ಈ ಉಚಿತ ವಿದ್ಯುತ್ ಸೌಲಭ್ಯ ಪಡೆಯಬೇಕು ಎಂದರೆ ತಪ್ಪದೇ ಈ ಕೂಡಲೇ ಹಳೆಯ ಬಾಕಿಯನ್ನು ಪಾವತಿ ಮಾಡಬೇಕು ಎಂದು ಹೇಳಿದೆ.
ಈಗಾಗಲೇ ರಾಜ್ಯದಲ್ಲಿ ಬರ ಪರಿಸ್ಥಿತಿ ಎದುರಾಗಿತ್ತು ಕೆರೆ ಕಟ್ಟೆ ಜಲಾಶಯಗಳಲ್ಲಿ ನೀರಿಲ್ಲ, ಇದು ಪರೋಕ್ಷವಾಗಿ ವಿದ್ಯುತ್ ಉತ್ಪಾದನೆ ಮೇಲೂ ಪರಿಣಾಮ ಬೀರಿದೆ. ಈಗಾಗಲೇ ಸರ್ಕಾರ ರಾಜ್ಯದ ಜನತೆಗೆ ಗೃಹಜ್ಯೋತಿ ಉಚಿತ ವಿದ್ಯುತ್ ಘೋಷಣೆ ಮಾಡಿರುವುದರಿಂದ ವಿದ್ಯುತ್ ಸರಬರಾಜು ಕಂಪನಿಗಳು ಇದಕ್ಕೆ ಬೇಕಾದ ವಿದ್ಯುತ್ ಹೊಂದಿಸುವುದಕ್ಕೆ ಪರದಾಡುತ್ತಿದ್ದಾರೆ ಇದರ ನಡುವೆ ಹಳೆಯ ಬಾಕಿ ಕೂಡ ಜನರು ಹಾಗೆ ಉಳಿಸಿಕೊಂಡಿರುವುದು ಕಂಪನಿಗಳಿಗೆ ಅತಿ ದೊಡ್ಡ ನಷ್ಟವನ್ನು ಉಂಟು ಮಾಡುತ್ತಿದೆ. ಹಾಗಾಗಿ ಮತ್ತೊಮ್ಮೆ ಸರ್ಕಾರವು ಜನರಿಗೆ ಈ ಕುರಿತು ಎಚ್ಚರಿಕೆಯ ಸಂದೇಶ ನೀಡಿದೆ.