ವರ್ಷದಲ್ಲಿ 365 ದಿನಗಳು ಕೂಡ ಬೇಡಿಕೆಯಲ್ಲಿರುವ ಪದಾರ್ಥಗಳು ಎಂದರೆ ಅದು ಆಹಾರ ಪದಾರ್ಥಗಳು ಆಗಿರುತ್ತವೆ ಮತ್ತು ಇವು ಎಂದೂ ಕೂಡ ಬೇಡಿಕೆ ಕಡಿಮೆ ಆಗದ ಮಾರ್ಕೆಟಿಂಗ್ ಸುಲಭವಾಗಿರುವ ಒಂದು ಕ್ಷೇತ್ರ ಎಂದರೆ ಅದು ಕೃಷಿಯೇ.
ದಾನ್ಯಗಳು, ತರಕಾರಿಗಳನ್ನು ಬೆಳೆಯುವುದರಿಂದ ಈ ರೀತಿ ಖಂಡಿತ ಲಾಭ ಇರುತ್ತದೆ ಇವುಗಳನ್ನು ಹೊರತುಪಡಿಸಿ ಆಹಾರ ಪದಾರ್ಥವಲ್ಲವಾದರೂ ಕೃಷಿಯಲ್ಲಿ ತಯಾರಿಸುವ ಮತ್ತೊಂದು ಪದಾರ್ಥಕ್ಕೂ ಕೂಡ ಇಷ್ಟೆ ಬೇಡಿಕೆ ಇದೆ. ಅವುಗಳು ಯಾವುದೆಂದರೆ ಹೂವುಗಳು, ಹೂವುಗಳನ್ನು ಔಷಧಿಗಾಗಿ ಸುಗಂಧ ದ್ರವ್ಯಗಳ ತಯಾರಿಕೆಗಾಗಿ ಮತ್ತು ಅಲಂಕಾರಕ್ಕಾಗಿ ಬಳಸಲಾಗುತ್ತದೆ ಹೀಗಾಗಿ ಹೂವಿನ ಕೃಷಿಯು ಕೂಡ ಇಷ್ಟೇ ಲಾಭದಾಯಕ.
ಹೂವು ಎನ್ನುವುದೇ ಒಂದು ಸುಮಧುರ ಭಾವನೆ ನಮ್ಮ ಎಲ್ಲಾ ನೆಗೆಟಿವಿಟಿಯನ್ನು ಕಡಿಮೆಗೊಳಿಸಿ ಮನಸ್ಸಿಗೆ ಮುದ ನೀಡುವುದು ಹೂವು. ಬಣ್ಣ ಬಣ್ಣದ, ರಂಗು ರಂಗಿನ ತರೇವಾರಿ ಹೂವುಗಳನ್ನು ನೋಡುತ್ತಿದ್ದರೆ ಮನಸ್ಸಿಗೆ ಏನೋ ಒಂದು ರೀತಿ ಸಮಾಧಾನ.
ಹೀಗಾಗಿ ಯಾವುದೇ ಶುಭ ಕಾರ್ಯವೇ ಆಗಲಿ ಹೂವು ಬೇಕೇ ಬೇಕು. ಇಂತಹ ಹೂಗಳಲ್ಲಿ ಗುಲಾಬಿ ಹೂವಿಗೆ ಇನ್ನೂ ಹೆಚ್ಚಿನ ಬೇಡಿಕೆ ಇದೆ. ಏಕೆಂದರೆ ಗುಲಾಬಿ ಹೂವು ಎಂದರೆ ಅದು ಪ್ರೀತಿ ಎನ್ನುವುದನ್ನು ಸೂಚಿಸುತ್ತದೆ ಇಂತಹ ಗುಲಾಬಿ ಹೂವನ್ನು ಮುಡಿಯುವುದರಿಂದ ಹಿಡಿದು ಡೆಕೋರೇಟ್ ಮಾಡುವುದಕ್ಕಾಗಿ ಗ್ರೀಟಿಂಗ್ ಕೊಡುವುದಕ್ಕಾಗಿ ಎಲ್ಲರೂ ಖರೀದಿಸುತ್ತಾರೆ.
ಹಾಗಾಗಿ ಗುಲಾಬಿ ಕೃಷಿ ಮಾಡಿದ ರೈತ ಆದಾಯ ಮಾಡುವುದರಲ್ಲಿ ಅದರಲ್ಲೂ ಡಚ್ ರೋಜ್ ಎನ್ನುವ ಈ ತಳಿಯನ್ನು ಬೆಳೆಯುವ ರೈತ ಸದಾ ಲಾಭದಲ್ಲಿ ಇರುವುದರಲ್ಲಿ ಅನುಮಾನವೇ ಇಲ್ಲ. ಹಾಗಾಗಿ ಇಂದು ಈ ಅಂಕಣದಲ್ಲಿ ಬೆಂಗಳೂರಿನ ಸಮೀಪದ ಮಾದೇಗೌಡ ಎನ್ನುವ ರೈತರ ಉದಾಹರಣೆಯೊಂದಿಗೆ ಈ ವಿಧಾನವನ್ನು ತಿಳಿಸುತ್ತಿದ್ದೇವೆ.
ತಮಗಿರುವ ಒಂದೂವರೆ ಎಕರೆಯಲ್ಲಿ ಸುಮಾರು 32 ಸಾವಿರಕ್ಕೂ ಹೆಚ್ಚಿನ ಡಚ್ ರೋಜ್ ಬೆಳೆದಿರುವ ಇವರು ಇದನ್ನು ಪಾಲಿ ಹೌಸ್ ಟೆಕ್ನಾಲಜಿಯಲ್ಲಿ ಬೆಳೆದಿದ್ದಾರೆ. ಇದಕ್ಕೆ ಕಾರಣ ಪಾಲಿ ಹೌಸ್ ನಲ್ಲಿ ಬೆಳೆಯುವ ಗುಲಾಬಿಗಳಿಗೆ ನೀರು ಕಡಿಮೆ ಬೇಡಿಕೆ ಇರುತ್ತದೆ, ಬೇಗ ಒಣಗುವುದಿಲ್ಲ.
ಓಪನ್ ಸ್ಪೇಸ್ ನಲ್ಲಿ ಬೆಳೆದವು ಹೆಚ್ಚು ನೀರು ಕೇಳುತ್ತವೆ ಹಾಗೆ ಬೇಗ ಒಣಗಿ ಹೋಗುತ್ತವೆ ಎನ್ನುವುದನ್ನು ಹೇಳುತ್ತಾರೆ ಜೊತೆಗೆ ಪಾಲಿಹೌಸ್ ಟೆಕ್ನಾಲಜಿ ಅಳವಡಿಸಿಕೊಳ್ಳಲು ಬಂಡವಾಳದ ಅವಶ್ಯಕತೆ ಇರುತ್ತದೆ ಇದಕ್ಕೆ ಕೃಷಿ ಇಲಾಖೆ ಸಂಪರ್ಕಿಸಿದರೆ ಸಬ್ಸಿಡಿ ಕೂಡ ಸಿಗುತ್ತದೆ ಎನ್ನುವುದರ ಮಾಹಿತಿಯನ್ನು ಕೂಡ ಇವರೇ ನೀಡುತ್ತಾರೆ.
ಇದೇ ರೀತಿ ಸರ್ಕಾರದಿಂದ ಸಿಕ್ಕ ಸೌಲಭ್ಯ ಉಪಯೋಗಿಸಿಕೊಂಡು ಇಂದು ಪ್ರತಿ ಸೀಸನ್ ಗೆ ಒಂದು ಎಕರೆಗೆ ಮೂರು ಲಕ್ಷಕ್ಕಿಂತ ಹೆಚ್ಚು ಆದಾಯ ಮಾಡುತ್ತಿದ್ದಾರೆ. ಇವರು ಹೇಳುವುದೇನೆಂದರೆ ಫೆಬ್ರವರಿ ತಿಂಗಳಿನಲ್ಲಿ ಪ್ರೇಮಿಗಳ ದಿನಾಚರಣೆ ಅಂಗವಾಗಿ ಖಂಡಿತವಾಗಿಯೂ ವಿಪರೀತ ಬೇಡಿಕೆ ಇರುತ್ತದೆ.
ಅದರಲ್ಲೂ ಕೆಂಪು ಡಚ್ ರೋಜ್ ಸದಾ ಬೇಡಿಕೆಯಲ್ಲಿ ಇರುತ್ತದೆ ನಾವು ಅವುಗಳನ್ನು ಹೆಚ್ಚು ಬೆಳೆದಿದ್ದೇವೆ ಇದನ್ನು ಹೊರತುಪಡಿಸಿ ಇನ್ನೂ 9 ಕಲರ್ ಗಳು ಇವೆ ಎಲ್ಲವನ್ನು ಸ್ವಲ್ಪ ಸ್ವಲ್ಪ ಬೆಳೆದಿದ್ದೇವೆ. ನಮ್ಮ ಅಕ್ಕ ಪಕ್ಕ ಸಮೀಪದ ರೈತರು ಬೆಳೆದಿದ್ದರೆ ಅವರ ಬಳಿಯೇ ಇನ್ಫರ್ಮೇಷನ್ ತೆಗೆದುಕೊಂಡು ಅವರು ಎಲ್ಲಿ ಖರೀದಿಸಿದರು ಅಲ್ಲಿಂದ ಕಸಿ ತಂದು ಬೆಳೆಸಿದರೆ ಉತ್ತಮ.
ನೀರಿನ ಪೂರೈಕೆ ಜೊತೆಗೆ ಕೀಟನಾಶಕ ಕ್ರಿಮಿನಾಶಕಗಳನ್ನು ಸಿಂಪಡಿಸಬೇಕಾಗುತ್ತದೆ.ಆದರೆ ಒಂದು ಬಾರಿ ಇನ್ವೆಸ್ಟ್ ಮಾಡಿದರೆ ಏಳು ವರ್ಷಕ್ಕಿಂತ ಹೆಚ್ಚು ವರ್ಷಗಳ ಕಾಲ ಇದೇ ಗಿಡದಲ್ಲಿ ಪ್ರತಿ 40 ದಿನಗಳಿಗೊಮ್ಮೆ ಇಳುವರಿ ಪಡೆಯಬಹುದು ಹಾಗಾಗಿ ಇದು ಲಾಭದಾಯಕ ಎಂದು ತಮ್ಮ ಅನುಭವವನ್ನು ಹೇಳುತ್ತಾರೆ. ಈ ವಿಚಾರವಾಗಿ ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ವಿಡಿಯೋವನ್ನು ಪೂರ್ತಿಯಾಗಿ ನೋಡಿ.