Deprecated: strtolower(): Passing null to parameter #1 ($string) of type string is deprecated in /home/u302298408/domains/rishithepower.com/public_html/wp-content/plugins/taboola/simple_html_dom.php on line 712
ಕೃಷಿ ಕ್ಷೇತ್ರವು ನಮ್ಮ ದೇಶದ ಆರ್ಥಿಕತೆಯ ಬೆನ್ನೆಲುಬು. ಹಾಗಾಗಿ ರೈತರಿಗೆ ಹೆಚ್ಚಿನ ಆದ್ಯತೆ ಕೊಟ್ಟು ಅವರ ಆದಾಯವನ್ನು ದ್ವಿಗುಣಗೊಳಿಸುವಂತಹ ನಿಟ್ಟಿನಲ್ಲಿ ಹಲವಾರು ಕ್ರಮಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೈಗೊಂಡಿವೆ. ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ರೈತರಿಗೆ ಸಿಗುತ್ತಿರುವ ವಿವಿಧ ಯೋಜನೆಗಳ ಪಟ್ಟಿ ದೊಡ್ಡದಿದೆ.
ಇವುಗಳಲ್ಲಿ ಒಂದು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ (Kisan Credit Card Scheme). ಈ ಯೋಜನೆಯು ರೈತರಿಗೆ ಶೀಘ್ರವಾಗಿ ಕಡಿಮೆ ಬಡ್ಡಿದರದಲ್ಲಿ ಕೃಷಿ ಸಾಲವನ್ನು ಅನುಮೋದನೆ ಮಾಡುವಂತಹ ಯೋಜನೆಯಾಗಿದೆ. ಈ ಯೋಜನೆ ವಿಶೇಷತೆ ಎನು? ಹೇಗೆ ನೆರವು ಪಡೆಯಬಹುದು, ಇದಕ್ಕೆ ಅರ್ಜಿ ಸಲ್ಲಿಸುವುದು ಹೇಗೆ? ಏನೆಲ್ಲಾ ದಾಖಲೆಗಳು ಬೇಕಾಗುತ್ತದೆ? ಯಾರೆಲ್ಲ ಈ ಯೋಜನೆ ವ್ಯಾಪ್ತಿಗೆ ಬರುತ್ತಾರೆ ಇತ್ಯಾದಿ ವಿವರ ಹೀಗಿದೆ ನೋಡಿ…
ಈ ಸುದ್ದಿ ಓದಿ:- ಕರ್ನಾಟಕ ರೇಷ್ಮೆ ಇಲಾಖೆ ನೇಮಕಾತಿ, ವೇತನ 56,600/- ಆಸಕ್ತರು ಕೂಡಲೇ ಅರ್ಜಿ ಸಲ್ಲಿಸಿ.!
ಯೋಜನೆಯ ಹೆಸರು:- ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ
ಯೋಜನೆಯ ವಿಶೇಷತೆಗಳು:-
* ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ, ರೈತರಿಗೆ ಯಾವುದೇ ಖಾತರಿಯಿಲ್ಲದೆ 4% ಬಡ್ಡಿದರದಲ್ಲಿ ಸಾಲವನ್ನು ಪಡೆಯಬಹುದು
* ಕಿಸಾನ್ ಕ್ರೆಡಿಟ್ ಕಾರ್ಡ್ ಮೂಲಕ ಬೆಳೆ ವಿಮೆ ಕೂಡ ಮಾಡಿಸಬಹುದು
* ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ ಪಡೆದ ಸಾಲಕ್ಕೆ ವಾರ್ಷಿಕವಾಗಿ 7% ಬಡ್ಡಿದರ ಅನ್ವಯವಾಗುತ್ತದೆ. ಫಲಾನುಭವಿಯು ತನ್ನ ಸಾಲವನ್ನು 1 ವರ್ಷದೊಳಗೆ ಇತ್ಯರ್ಥ ಪಡಿಸಿದರೆ.ಬಡ್ಡಿದರದಲ್ಲಿ 3% ರಿಯಾಯಿತಿ ಮತ್ತು 2% ಸಬ್ಸಿಡಿಯನ್ನು ಪಡೆಯುತ್ತಾನೆ. ಆಗ ರೈತರಿಗೆ ಒಟ್ಟು ಶೇ.5ರಷ್ಟು ರಿಯಾಯಿತಿ ಸಿಕ್ಕಂತಾಗುತ್ತದೆ.
ಅರ್ಜಿ ಸಲ್ಲಿಸಲು ಅರ್ಹತೆಗಳು:-
* ರೈತನಿಗೆ ಕೃಷಿಯೋಗ್ಯ ಭೂಮಿ ಇದ್ದು ಆತ ಕೃಷಿ ಮಾಡುತ್ತಿರಬೇಕು
* ಒಂದು ವೇಳೆ ಸ್ವಂತ ಭೂಮಿ ಇಲ್ಲದೆ ಇದ್ದರೆ ಆದರೂ ಕೂಡ ಬೇರೆಯವರ ಜಮೀನನ್ನು ಪಡೆದು ಕೃಷಿ ಉತ್ಪಾದನೆಯಲ್ಲಿ ತೊಡಗಿಕೊಂಡಿದ್ದರೆ ಅಂತಹ ರೈತರು ಕೂಡ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ
* ರೈತರು ಮಾತ್ರವಲ್ಲದೆ ಮೀನುಗಾರಿಕೆ, ಹೈನುಗಾರಿಕೆ, ಪಶುಸಂಗೋಪನೆ, ಕುರಿ ಕೋಳಿ ಮೇಕೆ ಸಾಕಾಣಿಕೆ ಮುಂತಾದ ಕೃಷಿಗೆ ಅವಲಂಬಿತವಾದ ಉತ್ಪಾದನೆಯಲ್ಲಿ ತೊಡಗಿರುವಂತಹ ರೈತರು ಕೂಡ ಅರ್ಹರಾಗಿರುತ್ತಾರೆ
ಬೇಕಾಗುವ ದಾಖಲೆಗಳು:-
* ರೈತನ ಆಧಾರ್ ಕಾರ್ಡ್
* ಜಮೀನಿಗೆ ಸಂಬಂಧಪಟ್ಟ ದಾಖಲೆಗಳು ಒಂದು ವೇಳೆ ಜಮೀನು ಇಲ್ಲದೆ ಇದ್ದಲ್ಲಿ ಬೇರೆಯವರ ಜಮೀನನ್ನು ಗುತ್ತಿಗೆ ಪಡೆದುದಕ್ಕೆ ಸಂಬಂಧಿಸಿದ ಆಧಾರಗಳು
* ಪ್ಯಾನ್ ಕಾರ್ಡ್
* ಇತ್ತೀಚಿನ ಭಾವಚಿತ್ರ
* ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ
* ಇನ್ನಿತರ ಪ್ರಮುಖ ದಾಖಲೆಗಳು
ಅರ್ಜಿ ಸಲ್ಲಿಸುವ ವಿಧಾನ:-
* ಆನ್ಲೈನ್ ಮತ್ತು ಆಫ್ಲೈನ್ 2 ವಿಧಾನದಲ್ಲಿ ಕೂಡ ಅರ್ಜಿ ಸಲ್ಲಿಸಬಹುದು
* ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸುವವರು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ ಇರುವ ಬ್ಯಾಂಕ್ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ ಆನ್ಲೈನ್ ಅರ್ಜಿ ಸಲ್ಲಿಸಿ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ, ರೆಫರನ್ಸ್ ನಂಬರ್ ಮೂಲಕ ಸ್ಟೇಟಸ್ ಟ್ರಾಕ್ ಮಾಡಿ ಅಂತಿಮವಾಗಿ ಕಾರ್ಡ್ ಡೌನ್ಲೋಡ್ ಮಾಡಿ ಪಡೆದುಕೊಳ್ಳಬಹುದು.
ಈ ಸುದ್ದಿ ಓದಿ:- ಬೋರ್ವೆಲ್ ಕೊರೆಸುವ ರೈತರಿಗೆ, 101% ಪಕ್ಕಾ ನೀರು, USA, ಜಪಾನೀಸ್ ಟೆಕ್ನಾಲಜಿ ಬಳಸಿ ನೀರಿನ ಪಾಯಿಂಟ್ ಮಾಡಲಾಗುತ್ತದೆ.!
* ಆಫ್ಲೈನ್ನಲ್ಲಿ ಅರ್ಜಿ ಸಲ್ಲಿಸುವವರು ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ ಇರುವ ಬ್ಯಾಂಕ್ ಶಾಖೆಗೆ ಭೇಟಿ ನೀಡಿ ಬ್ಯಾಂಕ್ ವ್ಯವಸ್ಥಾಪಕರ ಬಳಿ ಅರ್ಜಿ ಫಾರಂ ಪಡೆದು ಅದನ್ನು ಸರಿಯಾದ ವಿವರಗಳನ್ನು ತುಂಬಿಸಿ ಪೂರಕ ದಾಖಲೆಗಳ ಜೊತೆ ಲಗತ್ತಿಸಬೇಕು
* ನಿಮ್ಮ ಮಾಹಿತಿ ಎಲ್ಲವೂ ಸರಿಯಾಗಿದ್ದರೆ 15 ದಿನಗಳ ಒಳಗೆ ಈ ಪ್ರೋಸೆಸ್ ಮುಗಿಯುತ್ತದೆ
* ಹೆಚ್ಚಿನ ಮಾಹಿತಿಗಾಗಿ ಸರ್ಕಾರದ ಅಧಿಕೃತ ವೆಬ್ ಸೈಟ್ ಗಳಿಗೆ ಭೇಟಿ ನೀಡಿ ಅಥವಾ ಹತ್ತಿರದಲ್ಲಿರುವ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ
ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ ಇರುವ ಬ್ಯಾಂಕ್ ಗಳು:-
* HDFC ಬ್ಯಾಂಕ್
* ಬ್ಯಾಂಕ್ ಆಫ್ ಇಂಡಿಯಾ
* ಆಕ್ಸಿಸ್ ಬ್ಯಾಂಕ್
* ಪಂಜಾಬ್ ನ್ಯಾಷನಲ್ ಬ್ಯಾಂಕ್
* ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
* ICICI ಬ್ಯಾಂಕ್
* ಬ್ಯಾಂಕ್ ಆಫ್ ಬರೋಡಾ
* ಇತ್ಯಾದಿ.