WhatsApp Group Join Now
Telegram Group Join Now

ಮನೆ ಕಟ್ಟುವುದು ಜೀವನದ ಬಹಳ ದೊಡ್ಡ ಪ್ರಾಜೆಕ್ಟ್. ತಮ್ಮ ತಮ್ಮ ಆಸಕ್ತಿ ಕನಸು ಹಾಗೂ ಬಜೆಟ್ ಗೆ ಅನುಗುಣವಾಗಿ ಜನರು ಮನೆ ನಿರ್ಮಿಸುತ್ತಾರೆ. ಆದರೆ ಮಾನವನ ಅತಿ ಮೂಲಭೂತ ಅವಶ್ಯಕತೆಗಳಲ್ಲಿ ಮನೆಯೂ ಕೂಡ. ಒಂದು ವೇಳೆ ನಮಗೆ ಸ್ವಂತ ಮನೆ ಇಲ್ಲದೆ ಇದ್ದಲ್ಲಿ ನಾವು ದುಡಿದ ಹಣದಲ್ಲಿ ಅತಿ ದೊಡ್ಡ ಭಾಗವನ್ನು ಮನೆಗೆ ಬಾಡಿಗೆ ಕಟ್ಟುವುದರಲ್ಲಿ ಕಳೆಯಬೇಕಾಗುತ್ತದೆ.

ಹಾಗಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ರತಿಯೊಬ್ಬರೂ ಕೂಡ ಸ್ವಂತ ಸೂರಿನಡಿಯಲ್ಲಿ ವಾಸಿಸುವಂತೆ ಆಗಬೇಕು ಎನ್ನುವ ಉದ್ದೇಶದಿಂದಾಗಿ ಹಲವಾರು ವಸತಿ ಯೋಜನೆಗಳನ್ನು ನಿರ್ಮಿಸಿದ್ದಾರೆ ಇದರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜಂಟಿಯಾಗಿ ನೆರವು ನೀಡುತ್ತಿರುವ ರಾಜೀವ್ ಗಾಂಧಿ ವಸತಿ ನಿಗಮ ಯೋಜನೆ (Rajiv Gandhi Housing Schemes) ಬಗ್ಗೆ ಈ ಲೇಖನದಲ್ಲಿ ಮಾಹಿತಿ ನೀಡಲು ಬಯಸುತ್ತಿದ್ದೇವೆ.

ಈ ಸುದ್ದಿ ಓದಿ:- ಅಮೆರಿಕಾದಲ್ಲಿ ಬೇಕಾದರೂ ಇದ್ದುಕೊಂಡು ತೋಟ ಕಂಟ್ರೋಲ್ ಮಾಡಬಹುದು, ಕಳ್ಳರು ಬಂದರೆ ಸಿಗ್ನಲ್ ಕೊಡುತ್ತೆ.!

ಯಾಕೆಂದರೆ ಈ ಯೋಜನೆಯಡಿ ಸ್ವಂತ ಮನೆ ನಿರ್ಮಾಣಕ್ಕೆ ಅರ್ಜಿ ಸಲ್ಲಿಸುವವರಿಗೆ ಬರೋಬ್ಬರಿ 6.5 ಲಕ್ಷ ನೆರವು ಸಿಗುತ್ತಿದೆ. ನಮ್ಮ ರಾಜ್ಯದಲ್ಲಿ 2000 ರಲ್ಲಿ ಅಧಿಕಾರದಲ್ಲಿದ್ದ ಸರ್ಕಾರವು ರಾಜೀವ್ ಗಾಂಧಿ ಹೌಸಿಂಗ್ ಕಾರ್ಪೊರೇಷನ್ ಲಿಮಿಟೆಡ್ ಅನ್ನು ರಚಿಸಿತು. ಈ ಯೋಜನೆಯ ಉದ್ದೇಶವೇ ರಾಜ್ಯದಲ್ಲಿ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ದುರ್ಬಲವಾಗಿರುವ ವರ್ಗಗಳಿಗೆ ಮನೆ ನಿರ್ಮಾಣ ಮಾಡಿ ಕೊಡುವುದು.

ಈಗ ಕೇಂದ್ರ ಮತ್ತು ರಾಜ್ಯ ಸರ್ಕಾರ ಜಂಟಿಯಾಗಿ ಈ ಯೋಜನೆಯಡಿ ನೆರವು ಒದಗಿಸುತ್ತಿವೆ. ಹಾಗೆಯೇ ಯೋಜನೆಯನ್ನು ಅನುಷ್ಠಾನಕ್ಕೆ ತರುವುದರಲ್ಲಿ ಕಟ್ಟಕಡೆಯ ಫಲಾನುಭವಿಗೂ ತಲುಪಿಸುವುದರಲ್ಲಿ ಪಾರದರ್ಶಕತೆ ಮತ್ತು ದಕ್ಷತೆಯನ್ನು ಉತ್ತೇಜಿಸುತ್ತದೆ. ಪ್ರತಿ ವರ್ಷವೂ ಈ ಯೋಜನೆಯಡಿ ಸಾವಿರಾರು ಕುಟುಂಬಗಳು ಸ್ವಂತ ಮನೆ ಆಸರೆ ಕಂಡುಕೊಳ್ಳುತ್ತಿವೆ.

ಈ ಸುದ್ದಿ ಓದಿ:- ರೇಷನ್ ಕಾರ್ಡ್ ಇದ್ದವರಿಗೆ ನ್ಯಾಯಬೆಲೆ ಅಂಗಡಿಯಲ್ಲಿ ಇನ್ಮುಂದೆ ಈ 46 ವಸ್ತು ಉಚಿತವಾಗಿ ಸಿಗಲಿದೆ, ಯಾವ್ಯಾವ ವಸ್ತು ನೋಡಿ.!

ಈಗ ಮತ್ತೊಮ್ಮೆ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮದ ವತಿಯಿಂದ ಪ್ರಧಾನಮಂತ್ರಿ ಆವಾಸ್ (ನಗರ) ವಸತಿ ಯೋಜನೆ ಅಡಿಯಲ್ಲಿ 52,189 ಮನೆಗಳನ್ನು ನಿರ್ಮಿಸಲಾಗುತ್ತಿದೆ. ಮನೆ ನಿರ್ಮಾಣದ ಅನುದಾನ ಲೆಕ್ಕಾಚಾರ ಸಮೇತವಾಗಿ ಸರ್ಕಾರವು ಮಾಹಿತಿ ನೀಡಿ ಅರ್ಜಿ ಆಹ್ವಾನ ಮಾಡಿದೆ. ಯಾರು ಅರ್ಜಿ ಸಲ್ಲಿಸಬಹುದು ಮತ್ತು ಇತ್ತೀಚೆಗೆ ಯೋಜನೆ ಅನುದಾನದ ಮೊತ್ತ ಹೆಚ್ಚಿಸಿರುವುದರಿಂದ ಆ ಪ್ರಕಾರವಾಗಿ ಎಷ್ಟು ಹಣ ಸಿಗುತ್ತಿದೆ? ಏನೆಲ್ಲಾ ದಾಖಲೆಗಳನ್ನು ಸಲ್ಲಿಸಬೇಕು? ಇತ್ಯಾದಿ ವಿವರ ಹೀಗಿದೆ ನೋಡಿ.

 ಅನುದಾನದ ಲೆಕ್ಕಾಚಾರ

* ಮನೆಯ ಒಟ್ಟು ವೆಚ್ಚ – ರೂ.7.5 ಲಕ್ಷ
* ಕೇಂದ್ರ ಸರ್ಕಾರದ ಸಹಾಯಧನ – ರೂ.3.5 ಲಕ್ಷ
* ರಾಜ್ಯ ಸರ್ಕಾರ ಭರಿಸಲಿರುವ ಹಣ – ರೂ. 3ಲಕ್ಷ
* ಫಲಾನುಭವಿಗಳು ಭರಿಸಬೇಕಾದ ಹಣ – ರೂ. 1ಲಕ್ಷ

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:

* ಪಡಿತರ ಚೀಟಿ
* ಜಾತಿ ಪ್ರಮಾಣ ಪತ್ರ
* ಆದಾಯ ಪ್ರಮಾಣ ಪತ್ರ
* ಬ್ಯಾಂಕ್ ಪಾಸ್ ಪುಸ್ತಕ
* ಆಧಾರ್ ಕಾರ್ಡ್
* ಪಾನ್ ಕಾರ್ಡ್
* ನಿವಾಸ ದೃಢೀಕರಣ ಪತ್ರ
* ಚಾಲ್ತಿಯಲ್ಲಿರುವ ಮೊಬೈಲ್ ಸಂಖ್ಯೆ
* ಇನ್ನಿತರ ಪ್ರಮುಖ ದಾಖಲೆಗಳು

 ಅರ್ಜಿ ಸಲ್ಲಿಸುವ ವಿಧಾನ:-

* ಈ ಯೋಜನೆಗೆ ಅರ್ಜಿ ಸಲ್ಲಿಸಿ ನೋಂದಾಯಿಸಿಕೊಳ್ಳಲು ಮೊದಲಿಗೆ ರಾಜೀವ್ ಗಾಂಧಿ ಹೌಸಿಂಗ್ ಕಾರ್ಪೊರೇಷನ್ ಲಿಮಿಟೆಡ್‌ನ ಅಧಿಕೃತ ವೆಬ್‌ಸೈಟ್‌ಗೆ ‌ ಭೇಟಿ ಕೊಡಬೇಕು
* ಮುಖಪುಟದಲ್ಲಿ ಅರ್ಜಿ ಸಲ್ಲಿಸಲು ಲಿಂಕ್ ಕಾಣುತ್ತದೆ
* ನೀವು ಅಗತ್ಯವಿರುವ ಎಲ್ಲಾ ವಿವರಗಳನ್ನು ಭರ್ತಿ ಮಾಡಬೇಕು, ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು
* ನೋಂದಾಯಿಸಿಕೊಳ್ಳುವಿಕೆ ಯಶಸ್ವಿ ಆದ ನಂತರ ರಸೀದಿ ಸಿಗುತ್ತದೆ ಇದನ್ನು ತಪ್ಪದೆ ಪಡೆದುಕೊಳ್ಳಬೇಕು.
* ಹೆಚ್ಚಿನ ಮಾಹಿತಿಗಾಗಿ ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now