ಈ ಹಿಂದೆ ರಾಜ್ಯದಲ್ಲಿ ಆಡಳಿತದಲ್ಲಿದ್ದ BJP ಸರ್ಕಾರವು ಜಾರಿಗೆ ತಂದ ವಿಶೇಷ ಯೋಜನೆಗಳಲ್ಲಿ ಲೇಬರ್ ಕಾರ್ಡ್ ಯೋಜನೆ ಕೂಡ ಒಂದು. ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಲೇಬರ್ ಕಾರ್ಡ್ ನೀಡುವ ಮೂಲಕ ಹತ್ತಾರು ಅನುಕೂಲತೆಗಳನ್ನು ಮಾಡಿಕೊಡಲಾಗಿದೆ.
ಲೇಬರ್ ಕಾರ್ಡ್ ಹೊಂದಿರುವವರಿಗೆ ಉಚಿತ ಪ್ರಯಾಣ, ಪಿಂಚಣಿ ವ್ಯವಸ್ಥೆ, ಆರೋಗ್ಯ ರಕ್ಷಣೆಗೆ ನೆರವು, ಹೆರಿಗೆ ಸೌಲಭ್ಯ, ಕಾರ್ಮಿಕರ ಮಕ್ಕಳಿಗೆ ಶೈಕ್ಷಣಿಕ ವಿದ್ಯಾರ್ಥಿ ವೇತನ, ಉಚಿತ ಶಾಲಾ ಕಿಟ್, ಕಾರ್ಮಿಕರಿಗೆ ಟೂಲ್ ಕಿಟ್, ಸೈಕಲ್ ವಿತರಣೆ ಇತ್ಯಾದಿ ಇತ್ಯಾದಿ ಹೆಸರಿಸಬಹುದು.
ಈ ಸುದ್ದಿ ಓದಿ:-ಸರ್ಕಾರದಿಂದ ಸಿಗಲಿದೆ 3 ಲಕ್ಷದವರೆಗೆ ಬಡ್ಡಿ ಇಲ್ಲದೆ ಸಾಲ.!
ಇವುಗಳ ಪಟ್ಟಿಗೆ ಸೇರುತ್ತದೆ ವಿವಾಹ ಸಹಾಯ ಧನ ಕೂಡ. ಅಂದರೆ ಕಾರ್ಮಿಕರು ತಮ್ಮ ಮದುವೆಗೆ ರೂ.50,000 ದವರೆಗೆ ಮಂಡಳಿಯಿಂದ ಸಹಾಯದನ ಪಡೆದುಕೊಳ್ಳಬಹುದು ಅಥವಾ ಈಗಾಗಲೇ ಮದುವೆ ಆಗಿದ್ದರೆ ತಮ್ಮ ಇಬ್ಬರು ಮಕ್ಕಳ ಮದುವೆಗೆ ಈ ಯೋಜನೆಯ ನೆರವು ಪಡೆಯಬಹುದು. ಇದಕ್ಕಾಗಿ ಎಲ್ಲಿ ಅರ್ಜಿ ಸಲ್ಲಿಸಬೇಕು? ಏನೆಲ್ಲಾ ಕಂಡಿಷನ್ ಗಳಿರುತ್ತವೆ? ಏನೆಲ್ಲಾ ದಾಖಲೆಗಳನ್ನು ಸಲ್ಲಿಸಬೇಕು? ಎನ್ನುವುದರ ವಿವರ ಹೀಗಿದೆ ನೋಡಿ.
ಯೋಜನೆಯ ಹೆಸರು:- ಮದುವೆ ಸಹಾಯಧನ / ಗೃಹಲಕ್ಷ್ಮಿ ಬಾಂಡ್
ಸಿಗುವ ನೆರವು – ರೂ.50,000
ಅರ್ಜಿ ಸಲ್ಲಿಸಲು ಇರುವ ಕಂಡೀಷನ್ ಗಳು:-
* ಕಾರ್ಮಿಕನು ಮಂಡಳಿಯಲ್ಲಿ ನೋಂದಾಯಿಸಿಕೊಂಡ ದಿನಾಂಕ ದಿಂದ ಮದುವೆ ಆಗುವ ದಿನಾಂಕದವರೆಗೆ ಒಂದು ವರ್ಷ ಸದಸ್ಯತ್ವವನ್ನು ಪೂರ್ತಿಗೊಳಿಸಿರಬೇಕು
* ನೋಂದಾಯಿತ ಕಾರ್ಮಿಕನು ಚನ್ನ ವಂತಿಕೆಯನ್ನು ಬಾಕಿ ಇಟ್ಟುಕೊಳ್ಳದೆ ಮಂಡಳಿಗೆ ಪಾವತಿಸಿರಬೇಕು.
ಈ ಸುದ್ದಿ ಓದಿ:-365 ದಿನವೂ ಬೇಡಿಕೆ, ನಿರಂತರ ಮಾರ್ಕೆಟ್, ಪ್ರತಿ ಸೀಜನ್ ನಲ್ಲಿ ಎಕರೆಗೆ 3 ಲಕ್ಷ ಆದಾಯ, ನೀಡುವ ಕೃಷಿ ಇದು.!
* ನೋಂದಾಯಿತ ಕಾರ್ಮಿಕನ ಮೊದಲ ಮದುವೆಗೆ ಅಥವಾ ಆತನ ಇಬ್ಬರು ಮಕ್ಕಳ ಮದುವೆಗೆ ಮಾತ್ರ ಅರ್ಜಿ ಸಲ್ಲಿಸಿ ಈ ಸಹಾಯಧನ ಪಡೆಯಲು ಸಾಧ್ಯ. ಒಂದುವೇಳೆ ಕುಟುಂಬದಲ್ಲಿ ಮತ್ತೊಬ್ಬ ಸದಸ್ಯ ಕೂಡ ಲೇಬರ್ ಕಾರ್ಡ್ ಹೊಂದಿದ್ದರೆ ಅದೇ ಮದುವೆಗಾಗಿ ಎರಡು ಬಾರಿ ಅರ್ಜಿ ಸಲ್ಲಿಸಲು ಅವಕಾಶವಿಲ್ಲ.
* ವಿವಾಹ ನಿಯಮದಡಿ ವಯಸ್ಸನ್ನು ಪೂರೈಸಿ ನಡೆದ ಮದುವೆಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ
* ಮದುವೆಯನ್ನು ರಿಜಿಸ್ಟರ್ ಮಾಡಿಸಬೇಕು (ವಿವಾಹ ನೋಂದಣಾಧಿಕಾರಿ ನೀಡಿದ ವಿವಾಹ ಪ್ರಮಾಣ ಪತ್ರವನ್ನು ಕೂಡ ಸಹಾಯಧನಕ್ಕಾಗಿ ಅರ್ಜಿ ಸಲ್ಲಿಸುವ ಸಮಯದಲ್ಲಿ ಲಗತ್ತಿಸಬೇಕು).
ಈ ಸುದ್ದಿ ಓದಿ:-ತವರಿನ ಆಸ್ತಿಯಲ್ಲಿ ಹೆಣ್ಣು ಮಕ್ಕಳಿಗೆ ಯಾವಾಗ ಭಾಗ ಸಿಗುವುದಿಲ್ಲ ಗೊತ್ತಾ.? ತಪ್ಪದೆ ಈ ಮಾಹಿತಿ ತಿಳಿದುಕೊಳ್ಳಿ.!
* ಸಹಾಯಧನದ 50% ಹಣವನ್ನು ವಧುವಿನ ಹೆಸರಿನಲ್ಲಿ ಮೂರು ವರ್ಷಗಳವರೆಗೆ ಠೇವಣಿ ಇಡಬೇಖಕು ಅಥವಾ ಬಾಂಡ್ ರೂಪದಲ್ಲಿ ಇಡಬೇಕು. ಉಳಿದ 50% ಹಣವನ್ನು ಫಲಾನುಭವಿ ಖಾತೆಗೆ ಜಮೆ ಮಾಡಲಾಗುತ್ತದೆ.
* ಮದುವೆಯಾದ ಆರು ತಿಂಗಳ ಒಳಗೆ ಅರ್ಜಿ ಸಲ್ಲಿಸಬೇಕು.
ಬೇಕಾಗುವ ದಾಖಲೆಗಳು:-
* ಫಲಾನುಭವಿ ನೋಂದಣಿಯಾಗಿ ಒಂದು ವರ್ಷ ಪೂರೈಸಿರುವ ಬಗ್ಗೆ ಪ್ರಮಾಣ ಪತ್ರ
* ವಂತಿಕೆಯನ್ನು ಸರಿಯಾಗಿ ಪಾವತಿಸಿರುವುದರ ಬಗ್ಗೆ ಹಿರಿಯ ಕಾರ್ಮಿಕ ನಿರೀಕ್ಷಕರಿಂದ ಪಡೆದ ಪ್ರಮಾಣ ಪತ್ರ
* ಉದ್ಯೋಗ ದೃಢೀಕರಣ ಪ್ರಮಾಣ ಪತ್ರ
* ಬ್ಯಾಂಕ್ ಪಾಸ್ ಬುಕ್ ವಿವರ
* ಮ್ಯಾರೇಜ್ ಇನ್ವಿಟೇಶನ್
* ಮ್ಯಾರೇಜ್ ಸರ್ಟಿಫಿಕೇಟ್
* ಮದುವೆ ಹೊರ ರಾಜ್ಯದಲ್ಲಿ ಆಗಿದ್ದರೆ ಅಫಿಡವಿಟ್
* ರೇಷನ್ ಕಾರ್ಡ್
* ವಧು ಹಾಗೂ ವರರ ಆಧಾರ್ ಕಾರ್ಡ್
* ಫೋಟೋ
* ಮೊಬೈಲ್ ಸಂಖ್ಯೆ
* ಇನ್ನಿತರ ಪ್ರಮುಖ ದಾಖಲೆಗಳು
ಅರ್ಜಿ ಸಲ್ಲಿಸುವ ವಿಧಾನ:-
* CSC ಕೇಂದ್ರಗಳಲ್ಲಿ ಅಥವಾ ಗ್ರಾಮ ಒನ್ / ಬೆಂಗಳೂರು ಒನ್ ಕೇಂದ್ರಗಳಲ್ಲಿ ಪೂರಕ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು * ಆಫ್ ಲೈನಲ್ಲಿ ಕೂಡ ಇಲಾಖೆ ಕಚೇರಿಗಳಿಗೆ ಭೇಟಿಯಾಗಿ ಅರ್ಜಿ ಸಲ್ಲಿಸಬಹುದು
* ಅರ್ಜಿ ಸಲ್ಲಿಸಿದ 60 ದಿನಗಳ ಒಳಗೆ ನಿಮ್ಮ ಅರ್ಜಿ ಪರಿಶೀಲನೆಯಾಗಿ ಅನುಮೋದನೆ ಆದ ನಂತರ ಹಣ ತಲುಪುತ್ತದೆ, ಹೆಚ್ಚಿನ ಮಾಹಿತಿಗಾಗಿ ಇಲಾಖೆ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ.