ಕರ್ನಾಟಕ ರಾಜ್ಯ ಸರ್ಕಾರವು (Karnataka Government) ರಾಜ್ಯದ ನಾಗರಿಕರಿಗಾಗಿ 5 ಗ್ಯಾರಂಟಿ ಯೋಜನೆಗಳನ್ನು (Gyarantee Scheme) ಘೋಷಿಸಿತ್ತು. ಆ ಪೈಕಿ ಶಕ್ತಿ ಯೋಜನೆ, ಅನ್ನಭಾಗ್ಯ, ಗೃಹಜ್ಯೋತಿ ಹಾಗೂ ಗೃಹಲಕ್ಷ್ಮಿ ಯೋಜನೆಗಳು ಜಾರಿಯಾಗಿದೆ. ಇವುಗಳಲ್ಲಿ ಗೃಹಲಕ್ಷ್ಮಿ ಯೋಜನೆಯು (Gruhalakshmi Scheme) ಹೆಚ್ಚು ಚರ್ಚೆಯಲ್ಲಿದೆ ಎಂದೇ ಹೇಳಬಹುದು.
ಯಾಕೆಂದರೆ ಗೃಹಲಕ್ಷ್ಮಿ ಯೋಜನೆಯ ಮೂಲಕ ಪಡಿತರ ಚೀಟಿ ಹೊಂದಿರುವ ಕುಟುಂಬದ ಮುಖ್ಯಸ್ಥೆಯು (head of the family) ಪ್ರತಿ ತಿಂಗಳು ಸರ್ಕಾರದಿಂದ 2,000ರೂ. ಸಹಾಯಧನವನ್ನು DBT ಮೂಲಕ ನೇರವಾಗಿ ಅವರ ಖಾತೆಗೆ ಪಡೆಯುತ್ತಾರೆ. ಹಣದುಬ್ಬರದಿಂದಾಗಿ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಿರುವುದರಿಂದ ಮಹಿಳೆಯ ಹಾಗೂ ಮಕ್ಕಳ ಪೌಷ್ಟಿಕತೆಗೆ ಕೊರತೆ ಆಗದಂತೆ ಕುಟುಂಬ ನಿರ್ವಹಣೆಗಾಗಿ ಈ ಹಣವನ್ನು ಮಹಿಳೆಯರು ಬಳಸಿಕೊಳ್ಳಲಿ ಎನ್ನುವುದು ಯೋಜನೆಯ ಉದ್ದೇಶವಾಗಿದೆ.
ಹೀಗಾಗಿ ಲಿಂಗ ಸಮಾನತೆ ಮತ್ತು ಮಹಿಳೆಯರ ಆರ್ಥಿಕ ಭದ್ರತೆ ಕಾಪಾಡುವ ಸಲುವಾಗಿ ಗೃಹಲಕ್ಷ್ಮಿ ಯೋಜನೆಯನ್ನು ಜಾರಿಗೆ ತರಲಾಗಿದೆ. ಗೃಹಲಕ್ಷ್ಮಿ ಯೋಜನೆಗೆ ನೋಂದಾಯಿಸಿಕೊಂಡಿದ್ದ 1.10 ಕೋಟಿ ಮಹಿಳೆಯರ ಪೈಕಿ 80%ರಷ್ಟು ಫಲಾನುಭವಿಗಳು ಆಗಸ್ಟ್ 30ರಂದು ಬಿಡುಗಡೆಯಾದ ಮೊದಲನೇ ಕಂತಿನ ಹಣ ಬಿಡುಗಡೆ ಸಮಯದಲ್ಲಿ ತಮ್ಮ ಖಾತೆಗಳಿಗೆ ಹಣ ಪಡೆದಿದ್ದರು.
ಇನ್ನುಳಿದ 20 % ಫಲಾನುಭವಿಗಳ ಬ್ಯಾಂಕ್ ಖಾತೆಯಲ್ಲಿ ಸಮಸ್ಯೆಯಾಗಿದ್ದ ಕಾರಣ ಹಾಗೂ ದಾಖಲೆಗಳಲ್ಲಿ ವ್ಯತ್ಯಾಸವಾಗಿರುವ ಕಾರಣ ಹಣ ಪಡೆಯಲು ಸಮಸ್ಯೆಯಾಗಿತ್ತು. ಇವುಗಳನ್ನು ತಿದ್ದುಪಡಿ ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟ ನಂತರ ಎರಡನೇ ಕಂತಿನ ಹಣ ಬಿಡುಗಡೆ ಆದಾಗ 90%ರಷ್ಟು ಫಲಾನುಭವಿಗಳಿಗೆ ಹಣ ತಲುಪಿದೆ.
ಅಂತಿಮವಾಗಿ ಮೂರನೇ ಕಂತಿನ ಹಣವನ್ನು ನೂರಕ್ಕೆ ನೂರರಷ್ಟು ಎಲ್ಲಾ ಫಲಾನುಭವಿಗಳ ಖಾತೆಗೂ ತಲುಪಿಸಬೇಕು ಎನ್ನುವ ಗುರಿಯನ್ನು ಸರ್ಕಾರ ಹೊಂದಿದೆ. ಇದಕ್ಕಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯು (KWCDD) ಪರಿಹಾರ ಮಾರ್ಗ ಕಂಡುಕೊಂಡಿದ್ದು ಪ್ರತಿ ಗ್ರಾಮ ಪಂಚಾಯಿತಿಗೂ ಆ ವ್ಯಾಪ್ತಿಗೆ ಬರುವ ಅಂಗನವಾಡಿ ಕಾರ್ಯಕರ್ತೆ ಸಹಾಯದಿಂದ ಇಲಾಖೆ ಅಧಿಕಾರಿಗಳು ಮನೆ ಮನೆಗೂ ಹೋಗಿ ಗೃಹಲಕ್ಷ್ಮಿ ಯೋಜನೆ ತಲುಪಲು ಆಗಿರುವ ಸಮಸ್ಯೆಯನ್ನು ಪರಿಹರಿಸಬೇಕು ಎನ್ನುವ ನಿರ್ಧಾರಕ್ಕೆ ಬಂದಿದೆ.
ಈ ಬಗ್ಗೆ ನವೆಂಬರ್ ಮೊದಲನೇ ವಾರದಲ್ಲಿ ನಡೆದ ಗೃಹಲಕ್ಷ್ಮಿ ಪ್ರಗತಿ ಪರಿಶೀಲನ ಸಭೆಯಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (Minister Lakshmi Hebbalkar) ಅವರು ಸೂಚನೆ ಕೊಟ್ಟಿದ್ದಾರೆ ಎನ್ನುವ ಮಾತು ಸಹ ಇದೆ. ಹಾಗಾಗಿ ಪ್ರತಿಯೊಬ್ಬರೂ ತಮಗೆ ಮೂರನೇ ಕಂತಿನ ಗೃಹಲಕ್ಷ್ಮಿ ಹಣ ಬಂದಿದೆಯೋ ಇಲ್ಲವೋ ಎನ್ನುವುದನ್ನು ತಿಳಿದುಕೊಳ್ಳುವುದು ಸೂಕ್ತ.
ಗೃಹಲಕ್ಷ್ಮಿ 3ನೇ ಕಂತಿನ ಹಣ ಪಡೆದವರಿಗೆ SMS ಸಂದೇಶ ಬರುತ್ತದೆ. ಒಂದು ವೇಳೆ ಸಂದೇಶ ಪಡೆಯಲು ಸಾಧ್ಯವಾಗದೇ ಇದ್ದವರು ನಿಮ್ಮ ಬ್ಯಾಂಕ್ ಶಾಖೆಗಳಿಗೆ ಭೇಟಿ ಕೊಟ್ಟು ಪಾಸ್ ಬುಕ್ ಚೆಕ್ ಮಾಡಿಸುವ ಮೂಲಕ ಹಣ ಬಂದಿದೆಯೇ ಇಲ್ಲವೇ ಎನ್ನುವ ಮಾಹಿತಿಯನ್ನು ತಿಳಿದುಕೊಳ್ಳಬಹುದು.
ಹಂತ ಹಂತವಾಗಿ ಸರ್ಕಾರ ಹಣ ಬಿಡುಗಡೆ ಮಾಡುತ್ತಿರುವುದರಿಂದ ನಿಮ್ಮ ಜಿಲ್ಲೆಗೆ ಹಣ ಬಿಡುಗಡೆ ಆಗಿದೆಯೇ ಎನ್ನುವುದನ್ನು ತಿಳಿದುಕೊಳ್ಳುವುದು ಕೂಡ ಮುಖ್ಯ. ಇಂದು ಸಹ ರಾಜ್ಯದ 26 ಜಿಲ್ಲೆ ಗೃಹಲಕ್ಷ್ಮಿ ಯೋಜನೆಯ ಹಣ ಜಮೆ ಆಗಿದೆ ಇಂದು ಯಾವೆಲ್ಲ ಜಿಲ್ಲೆಗಳ ಫಲಾನುಭವಿಗಳಿಗೆ ಹಣ ವರ್ಗಾವಣೆ ಆಗಿದೆ ಎನ್ನುವ ಪಟ್ಟಿ ಹೀಗಿದೆ ನೋಡಿ.
* ಬಾಗಲಕೋಟೆ
* ಬಿಜಾಪುರ
* ಗದಗ
* ಧಾರವಾಡ
* ಹಾವೇರಿ
* ಬೆಳಗಾವಿ
* ಬಳ್ಳಾರಿ
* ಬೀದರ್
* ಕಲ್ಬುರ್ಗಿ
* ಕೊಪ್ಪಳ
* ರಾಯಚೂರು
* ವಿಜಯನಗರ
* ಯಾದಗಿರಿ
* ಮೈಸೂರು
* ಮಂಡ್ಯ
* ಕೊಡಗು
* ಚಿಕ್ಕಮಗಳೂರು
* ಶಿವಮೊಗ್ಗ
* ಹಾಸನ
* ತುಮಕೂರು
* ಚಿತ್ರದುರ್ಗ
* ರಾಮನಗರ
* ಚಾಮರಾಜನಗರ
* ದಾವಣಗೆರೆ
* ಕೋಲಾರ
* ಚಿಕ್ಕಬಳ್ಳಾಪುರ