ಕೃಷಿಯಲ್ಲಿ (Agriculture) ಮಾಡುವ ರೈತರಿಗೆ (Farmers) ಉತ್ತಮ ಇಳುವರಿ ಮೂಲಕ ಆದಾಯ ಹೆಚ್ಚಾಗಬೇಕು ಎಂದರೆ ನೀರಿನ ವ್ಯವಸ್ಥೆ ಚೆನ್ನಾಗಿರಬೇಕು. ಮಳೆ ಆಶ್ರಿತ ಕೃಷಿ ಮಾಡುವ ರೈತರಿಗಿಂತ ತೋಟಗಾರಿಕೆ ಕೃಷಿ ಮಾಡುವ ರೈತರು ಹೆಚ್ಚು ಆದಾಯ ಮಾಡಬಹುದು ಮತ್ತು ಇದರಿಂದ ಉದ್ಯೋಗ ಸೃಷ್ಟಿಯು ಕೂಡ ಹೆಚ್ಚಾಗುತ್ತದೆ, ಆಹಾರ ಕೊರತೆಯನ್ನು ನೀಗಿಸಬಹುದು.
ಈ ಉದ್ದೇಶದಿಂದ ರೈತನ ಕೃಷಿ ಚಟುವಟಿಕೆಗೆ ಸರ್ಕಾರಗಳು ಕೂಡ ನೆರವಾಗುತ್ತಿವೆ ನಮ್ಮ ರಾಜ್ಯ ಸರ್ಕಾರ ಕೂಡ ರೈತರಿಗಾಗಿ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು ಇದೀಗ ಗಂಗಾ ಕಲ್ಯಾಣ ಯೋಜನೆಯಂತಹ (Ganga kalyana Scheme) ಯೋಜನೆಗಳ ಮೂಲಕ ಕೃಷಿ ಭೂಮಿಗಳಿಗೆ ನೀರಾವರಿ ಸೌಲಭ್ಯ ಕೂಡ ಒದಗಿಸಿಕೊಡುತ್ತಿದೆ.
ಗೃಹಲಕ್ಷ್ಮಿ ಯೋಜನೆಯ 2,000 ಸಹಾಯಧನ ಮಹಿಳೆಯರ ಖಾತೆಗೆ ವರ್ಗಾವಣೆ ಆಗಿದೆ.! ಈ ವಿಧಾನದಲ್ಲಿ ಚೆಕ್ ಮಾಡಿ ನೋಡಿ.!
ರಾಜ್ಯದಲ್ಲಿರುವ ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮಗಳು (Minority development Corporation) ಈ ಕಾರ್ಯಕ್ಕೆ ಕೈಜೋಡಿಸುತ್ತಿದ್ದು ಇದಕ್ಕಾಗಿ ಇರುವ ಮಾನದಂಡಗಳನ್ನು ಪೂರೈಸುವ ರೈತರುಗಳು ಅರ್ಜಿ ಸಲ್ಲಿಸಿ ಕೊಳವೆಬಾವಿ ಕೊರೆಸುವುದು, ಪಂಪ್ಸೆಟ್ ನಿರ್ಮಾಣ ಮತ್ತು ವಿದ್ಯುದ್ದೀಕರಣಕ್ಕೆ ಸರ್ಕಾರದಿಂದ ಸಹಾಯಧನ ಪಡೆಯಬಹುದು. ಈ ಯೋಜನೆಗೆ ಯಾರೆಲ್ಲಾ ಅರ್ಹರು? ಎಷ್ಟು ಸಹಾಯಧನ ಸಿಗುತ್ತದೆ? ದಾಖಲೆಗಳಾಗಿ ಏನು ಸಲ್ಲಿಸಬೇಕು? ಅರ್ಜಿ ಸಲ್ಲಿಸುವ ವಿಧಾನ ಹೇಗೆ? ಎಲ್ಲಿ ಅರ್ಜಿ ಸಲ್ಲಿಸಬೇಕು? ಎನ್ನುವ ವಿವರವನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ, ವಿವರವನ್ನು ತಿಳಿದುಕೊಳ್ಳಲು ಈ ಅಂಕಣವನ್ನು ಪೂರ್ತಿಯಾಗಿ ಓದಿ.
ಯೋಜನೆ ಹೆಸರು:- ಗಂಗಾ ಕಲ್ಯಾಣ ಯೋಜನೆ
ಸಹಾಯಧನ ನೀಡುತ್ತಿರುವ ನಿಯಮ:- ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತ
ಸಹಾಯಧನದ ಮೊತ್ತ :-
● ಬೆಂಗಳೂರು ಗ್ರಾಮಾಂತರ ಕೋಲಾರ ಚಿಕ್ಕಮಗಳೂರು ರಾಮನಗರ ಮತ್ತು ತುಮಕೂರು ಜಿಲ್ಲೆ ರೈತರುಗಳಿಗೆ 4 ಲಕ್ಷ ರೂ.
● ಉಳಿದ ಜಿಲ್ಲೆಯ ರೈತರಿಗಳಿಗೆ 3 ಲಕ್ಷ ರೂ.
ಇಂದಿನಿಂದ ಗ್ಯಾಸ್ ಸಿಲಿಂಡರ್ ಮೇಲೆ 400 ರೂಪಾಯಿ ಕಡಿತ ಕೇಂದ್ರ ಸರ್ಕಾರದಿಂದ ಅಧಿಕೃತ ಘೋಷಣೆ.!
ಅರ್ಜಿ ಸಲ್ಲಿಸಲು ಮಾನದಂಡಗಳು:-
● ಧಾರ್ಮಿಕ ಅಲ್ಪಸಂಖ್ಯಾತ ವರ್ಗಕ್ಕೆ ಸೇರಿದ ರೈತರು ಮಾತ್ರ ಅರ್ಜಿ ಸಲ್ಲಿಸಬಹುದು
● ಅರ್ಜಿ ಸಲ್ಲಿಸುವ ರೈತನ ಹೆಸರಿನಲ್ಲಿ ಕನಿಷ್ಠ 1.20 ಕುಂಟೆಯಿಂದ ಗರಿಷ್ಠ 5 ಎಕರೆವರೆಗೆ ಖುಷ್ಕಿ ಕೃಷಿ ಭೂಮಿ ಇರಬೇಕು.
● ಕೊಡಗು, ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಮತ್ತು ಹಾಸನ ಜಿಲ್ಲೆಗಳಲ್ಲಿ ಕನಿಷ್ಠ 1 ಎಕರೆ ಕೃಷಿ ಭೂಮಿ ಹೊಂದಿದ್ದರೂ ಅರ್ಜಿ ಸಲ್ಲಿಸಬಹುದು.
● ಕರ್ನಾಟಕದ ಖಾಯಂ ನಿವಾಸಿಗಳಾಗಿದ್ದು, ಸಣ್ಣ ಅಥವಾ ಅತಿ ಸಣ್ಣ ರೈತರಾಗಿರಬೇಕು.
● ಅರ್ಜಿದಾರನ ವಯಸ್ಸು 18 ರಿಂದ 55 ವರ್ಷದ ಒಳಗಿರಬೇಕು
● ಕುಟುಂಬದ ಆದಾಯವು ವಾರ್ಷಿಕವಾಗಿ 96,000 ಒಳಗಿರಬೇಕು
ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:-
● ರೈತನ ಆಧಾರ್ ಕಾರ್ಡ್
● ನಿವಾಸ ಧೃಡೀಕರಣ ಪತ್ರ
● ಆದಾಯ ಪ್ರಮಾಣ ಪತ್ರ
● ಜಾತಿ ಪ್ರಮಾಣ ಪತ್ರ
● ಸರ್ಕಾರದಿಂದ ನೀಡುವ ಸಣ್ಣ/ಅತಿ ಸಣ್ಣ ಹಿಡುವಳಿದಾರ ಪ್ರಮಾಣ ಪತ್ರ
● ಬ್ಯಾಂಕ್ ಪಾಸ್ ಬುಕ್ ವಿವರ
● ಭೂ ಕಂದಾಯ ಸಲ್ಲಿಸಿರುವ ರಶೀದಿ
● ಜಮೀನಿಗೆ ಸಂಬಂಧಿಸಿದ ಇನ್ನಿತರ ದಾಖಲೆ ಪತ್ರಗಳು
● ಸ್ವಯಂ ಘೋಷಣೆ ಪತ್ರ
● ಶ್ಯೂರಿಟಿ ನೀಡುವವರಿಂದ ಸ್ವಯಂ ಘೋಷಣೆ ಪತ್ರ
● ರೈತನ ಮೊಬೈಲ್ ಸಂಖ್ಯೆ
ವಾಣಿಜ್ಯ ತೆರಿಗೆ ಇಲಾಖೆ ನೇಮಕಾತಿಗೆ ಅರ್ಜಿ ಆಹ್ವಾನ ಆಸಕ್ತ ಅಭ್ಯರ್ಥಿಗಳು ತಪ್ಪದೆ ಅರ್ಜಿ ಸಲ್ಲಿಸಿ.! ವೇತನ 62,600/-
ಅರ್ಜಿ ಸಲ್ಲಿಸುವ ವಿಧಾನ:-
● ಮೇಲಿನ ಅರ್ಹತೆಗಳನ್ನು ಪೂರೈಸುವ ರೈತನ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.
● ಮೊದಲಿಗೆ ನೇರವಾಗಿ https://kmdconline.karnataka.gov.in/Portal/login ವೆಬ್ ಸೈಟ್ ಗೆ ಭೇಟಿ ಕೊಟ್ಟು ಯೋಜನೆಯ ಅರ್ಜಿ ಫಾರಂ ಭರ್ತಿ ಮಾಡಿ ಪೂರಕ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಬೇಕು.
● ಅರ್ಜಿ ಸಲ್ಲಿಕೆ ಪೂರ್ತಿಯಾದ ಬಳಿಕ ತಪ್ಪದೆ ಸ್ವೀಕೃತಿ ಪತ್ರವನ್ನು ಪಡೆದುಕೊಳ್ಳಬೇಕು. ಇದು ಮುಂದಿನ ದಿನಗಳಲ್ಲಿ ಅರ್ಜಿ ಸ್ಟೇಟಸ್ ಮಾಡಲು ಮತ್ತು ಇನ್ನಿತರ ಕೆಲಸಗಳಿಗೆ ಬೇಕಾಗುತ್ತದೆ.
● ಸೇವಾ ಸಿಂಧು ಕೇಂದ್ರಗಳಲ್ಲಿ ತೆರಳಿ ಕೂಡ ಅರ್ಜಿ ಸಲ್ಲಿಸಬಹುದು
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 30.09.2024
ಸಹಾಯವಾಣಿ ಸಂಖ್ಯೆ – 8277799990