ನಮ್ಮ ಹಿಂದೂ ಪುರಾಣಗಳು ಅನೇಕ ಆಚಾರ-ವಿಚಾರ ಸಂಸ್ಕಾರಗಳ ಬಗ್ಗೆ ತಿಳಿಸಿದೆ. ನಮ್ಮಲ್ಲಿರುವ ಪ್ರತಿಯೊಂದು ಪುರಾಣವು ಬದುಕಿನ ಸಾರಾಂಶವನ್ನು ತಿಳಿಸಿ ಹೋಗಿದೆ. ಇದನ್ನು ಸರಿಯಾಗಿ ಅರ್ಥ ಮಾಡಿಕೊಂಡು ಅದೇ ರೀತಿ ಆ ಚೌಕಟ್ಟಿನೊಳಗೆ ನಡೆಸಿಕೊಂಡು ನಮ್ಮ ಬದುಕನ್ನು ಸಾರ್ಥಕ ಪಡಿಸಿಕೊಳ್ಳಬಹುದು. ಹಾಗಾಗಿ ಪ್ರತಿಯೊಬ್ಬರಿಗೂ ಈ ಮಾರ್ಗದರ್ಶನ ನೀಡುವುದಕ್ಕಾಗಿ ಪುರಾಣ ಗ್ರಂಥಗಳು ಇವೆ.
ಯಾವುದನ್ನು ಮಾಡಬೇಕು ಯಾವುದನ್ನು ಮಾಡಬಾರದು ಎನ್ನುವುದರ ಪ್ರತಿಯೊಂದರ ಹಿಂದೆಯೂ ಕೂಡ ಒಂದು ಬಲವಾದ ಕಾರಣ ಇದ್ದೇ ಇರುತ್ತದೆ. ಹಲವು ವಿಷಯಗಳಲ್ಲಿ ವೈಜ್ಞಾನಿಕ ಕಾರಣವೂ ಇತ್ತು ಎನ್ನುವುದು ಕೂಡ ಈಗ ಸಂಶೋಧನೆಗಳಲ್ಲಿ ಬಯಲಾಗಿದೆ. ಈ ರೀತಿ ಹಿಂದೂಗಳು ಬಲವಾಗಿ ನಂಬುವ ಒಂದು ಪುರಾಣ ಗರುಡ ಪುರಾಣ.
ಗರುಡ ಪುರಾಣದಲ್ಲಿ ಮನುಷ್ಯನ ಮರಣದ ವಿಷಯದ ಬಗ್ಗೆ ಹೆಚ್ಚು ತಿಳಿಸಲಾಗಿದೆ. ಹಾಗೆಯೇ ಗರುಡ ಪುರಾಣದಲ್ಲಿ ಮನುಷ್ಯನ ಆಯಸ್ಸು ಮಾಡುವ ತಪ್ಪಿನಿಂದ ಕಡಿಮೆ ಆಗಬಾರದು ಎನ್ನುವುದಾದರೆ ಕೆಲವೊಂದು ನಿಯಮಗಳನ್ನು ಪಾಲಿಸಬೇಕು ಎನ್ನುವುದು ಕೂಡ ಇದೆ. ನಮ್ಮ ದಿನನಿತ್ಯದ ಆಗು ಹೋಗಿನಲ್ಲಿ ನಮಗೆ ತಿಳಿದೋ ತಿಳಿಯದು ಅನೇಕ ಅನಾಹುತಗಳು ಆಗುತ್ತಾ ಇರುತ್ತವೆ.
ಕೆಲವೊಂದು ತಪ್ಪುಗಳನ್ನು ನಾವು ಇದುವರೆಗೆ ಗೊತ್ತಿಲ್ಲದೆ ಮಾಡಿರುತ್ತೇವೆ. ನೀವು ಕೂಡ ಏನಾದರೂ ನಿಮ್ಮ ಪ್ರತಿದಿನದ ಆಗುಹೋಗುಗಳಲ್ಲಿ ಈಗ ನಾವು ಹೇಳುವ ಈ ತಪ್ಪುಗಳನ್ನು ಮಾಡುತ್ತಿದ್ದರೆ ತಪ್ಪದೇ ಅದನ್ನು ತಿದ್ದುಕೊಳ್ಳಿ. ಯಾಕೆಂದರೆ ನೀವೇನಾದರೂ ಇಂತಹ ಕೆಲಸವನ್ನು ಮಾಡುತ್ತಿದ್ದರೆ ನಿಮ್ಮ ಆಯಸ್ಸು ಕಡಿಮೆ ಆಗಿ ನೀವು ಬೇಗ ಸಾವಿಗೆ ಹತ್ತಿರವಾಗುತ್ತೀರಿ. ಆದ್ದರಿಂದ ಈ ಬಗ್ಗೆ ಎಚ್ಚರ ವಹಿಸಿರಿ ಮತ್ತು ಇಂತಹ ಉಪಯುಕ್ತ ಮಾಹಿತಿಯನ್ನು ನಿಮ್ಮ ಕುಟುಂಬದವರು ಹಾಗೂ ಸ್ನೇಹಿತರ ಜೊತೆಗೂ ಕೂಡ ಹಂಚಿಕೊಳ್ಳಿ.
1. ಹಳಸಿದ ಮಾಂಸದ ಸೇವನೆ:– ಮಾಂಸವು ಸಾತ್ವಿಕ ಆಹಾರ ಅಲ್ಲದ ಕಾರಣ ಯಾರು ಕೂಡ ಮಾಂಸದ ಆಹಾರವನ್ನು ಒಪ್ಪುವುದಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಇದು ಸರ್ವೆ ಸಾಮಾನ್ಯ ಆಗಿ ಹೋಗಿರುವುದರಿಂದ ಆಹಾರ ಸರಪಳಿ ಸರಿದೂಗಿಸುವ ಕಾರಣದಿಂದಾದರೂ ಇದನ್ನು ಒಪ್ಪಿಕೊಳ್ಳಲೇಬೇಕು. ಆದರೆ ನೀವೇನಾದರೂ ಮಾಂಸಹಾರ ಸೇವನೆ ಮಾಡುತ್ತಿದ್ದರೂ ಹಳಸಿದ ಮಾಂಸವನ್ನು ಎಂದಿಗೂ ಸೇವನೆ ಮಾಡಬೇಡಿ. ಹಳಸಿದ ಮಾಂಸ ಸೇವನೆ ಮಾಡುವುದರಿಂದ ನೀವು ಅನೇಕ ರೋಗಗಳಿಗೆ ತುತ್ತಾಗುತ್ತೀರಿ ಆಗ ನಿಮ್ಮ ಆಯಸ್ಸು ಕ್ಷೀಣಿಸುತ್ತದೆ.
2. ರಾತ್ರಿ ಹೊತ್ತು ಮೊಸರು ಸೇವನೆ ಮಾಡುವುದು:- ಮೊಸರು ಸೇವನೆ ಮಾಡುವುದು ತಪ್ಪಲ್ಲ, ಕೆಲವರಿಗೆ ತಟ್ಟೆಯಲ್ಲಿ ಮೊಸರು ಇಲ್ಲದಿದ್ದರೆ ಅವರ ಊಟ ಪೂರ್ತಿ ಆಗುವುದೇ ಇಲ್ಲ. ಆದರೆ ನೀವು ಯಾವುದೇ ಕಾರಣಕ್ಕೂ ರಾತ್ರಿ ಅಥವಾ ಸೂರ್ಯಾಸ್ತದ ನಂತರ ಮೊಸರನ್ನು ಸೇವಿಸಬೇಡಿ. ನೀವು ಸೇವಿಸುವುದಾದರೆ ದಿನದ ಯಾವುದೇ ಸಮಯದಲ್ಲಿ ಬೇಕಾದರೂ ಮೊಸರನ್ನು ಸೇವಿಸಿ, ರಾತ್ರಿ ಹೊತ್ತು ಸೇವನೆ ಮಾಡಿದರೆ ನೀವು ಅನಾರೋಗ್ಯಕ್ಕೆ ತುತ್ತಾಗುತ್ತೀರಿ.
3. ಬೆಳಿಗ್ಗೆ ತಡವಾಗಿ ಏಳುವುದು:- ಬ್ರಾಹ್ಮಿ ಮುಹೂರ್ತದಲ್ಲಿ ಏಳುವುದರಿಂದ ನೈಸರ್ಗಿಕವಾಗಿ ಅನೇಕ ರೋಗಗಳು ಗುಣವಾಗುತ್ತವೆ. ಯಾಕೆಂದರೆ ಆಗ ಪರಿಸರ ಶುದ್ಧವಾಗಿರುತ್ತದೆ. ಆದ್ದರಿಂದ ತಡವಾಗಿ ಏಳುವುದು ಕೂಡ ನಮಗೆ ನಾವೇ ರೋಗ ತಂದುಕೊಂಡಂತೆ, ಜೊತೆಗೆ ತಡವಾಗಿ ಮಲಗುವುದು ಕೂಡ ನಮ್ಮ ಆಯಸ್ಸನ್ನು ನಾವೇ ಕಡಿಮೆ ಮಾಡಿಕೊಂಡಂತೆ ಈ ದುರಭ್ಯಾಸ ಇದ್ದರೆ ಇಂದೇ ಬಿಟ್ಟುಬಿಡಿ.
4. ಬೆಳಿಗ್ಗೆ ದೈಹಿಕ ಸಂಪರ್ಕದಿಂದ ದೂರವಿರಿ:- ಬೆಳಗಿನ ಸಮಯ ಯೋಗ, ದೇವರ ಧ್ಯಾನ, ವ್ಯಾಯಾಮ ಇವುಗಳಿಗೆ ಮೀಸಲು. ಇಂತಹ ಸಮಯದಲ್ಲಿ ಪ್ರಣಯದಿಂದ ಇರುವ ದಂಪತಿಗಳ ಆಯಸ್ಸು ಕ್ಷೀಣ ಆಗುತ್ತದೆ, ದೇಹ ದುರ್ಬಲವಾಗುತ್ತದೆ ಎಂದು ಪುರಾಣದಲ್ಲಿ ತಿಳಿಸಲಾಗಿದೆ.!