ಕರ್ನಾಟಕ ರಾಜ್ಯ ಸರ್ಕಾರದ ವಿವಿಧ ನಿಗಮಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ಭರ್ತಿ ಮಾಡಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಅರ್ಜಿ ಆಹ್ವಾನ ಮಾಡಿದೆ. ಸರ್ಕಾರದ ಅಧೀನದಲ್ಲಿರುವ ನಾಲ್ಕು ನಿಗಮಗಳಲ್ಲಿ ಇರುವ ಉಳಿಕೆ ವೃಂದದ ಹುದ್ದೆಗಳು, ಕಲ್ಯಾಣ ಕರ್ನಾಟಕ ಹುದ್ದೆಗಳು ಮುಂತಾದ ಬ್ಯಾಕ್ ಲಾಗ್ ಹುದ್ದೆಗಳಲ್ಲಿ SDA, FDA ಸೇರಿದಂತೆ ಹಲವು ಪೋಸ್ಟ್ಗಳು ಖಾಲಿ ಇದ್ದು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಈ ಹುದ್ದೆಗಳಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಿ ಅಭ್ಯರ್ಥಿಗಳನ್ನು ಆಯ್ದುಕೊಳ್ಳುತ್ತಿದೆ.
ಹೀಗಾಗಿ ಕರ್ನಾಟಕದಾದ್ಯಂತ ಇರುವ ಎಲ್ಲಾ ಸರ್ಕಾರಿ ಉದ್ಯೋಗ ಆಕಾಂಕ್ಷಿಗಳಿಗೆ ಇದೊಂದು ಸದಾವಕಾಶವಾಗಿದೆ. ಆದ್ದರಿಂದ ಆಸಕ್ತರು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಹುದ್ದೆಯನ್ನು ಪಡೆದುಕೊಳ್ಳಬಹುದು. ಅರ್ಜಿ ಸಲ್ಲಿಸುವವರಿಗೆ ಅನುಕೂಲತೆ ಮಾಡಿಕೊಡುವ ಸಲುವಾಗಿ ಹುದ್ದೆಗಳಿಗೆ ಸಂಬಂಧಿಸಿದ ಹಲವು ಪ್ರಮುಖ ಅಂಶಗಳ ವಿವರವನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.
ಹುದ್ದೆಗಳು:- ಕರ್ನಾಟಕ ರಾಜ್ಯ ಸರ್ಕಾರದ ಹುದ್ದೆಗಳು.
ಪರೀಕ್ಷೆ ನಡೆಸುವ ಸಂಸ್ಥೆ:- ಕರ್ನಾಟಕ ಪರೀಕ್ಷಾ ಪ್ರಾಧಿಕಾರ
ಉದ್ಯೋಗ ಸ್ಥಳ:- ಕರ್ನಾಟಕದಾದ್ಯಂತ…
ಒಟ್ಟು ಹುದ್ದೆಗಳ ಸಂಖ್ಯೆ:- 670
ಇಲಾಖೆ:-
● ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ – 26 ಹುದ್ದೆಗಳು.
● ಆಹಾರ ಮತ್ತು ನಾಗರಿಕ ಸರಬರಾಜು ನಿಗಮ – 386 ಹುದ್ದೆಗಳು.
● ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ – 186 ಹುದ್ದೆಗಳು.
● ಮೈಸೂರು ಸೇಲ್ಸ್ ಇಂಟರ್ನ್ಯಾಷನಲ್ ಲಿಮಿಟೆಡ್ – 72 ಹುದ್ದೆಗಳು.
ಹುದ್ದೆಗಳ ವಿವರ:-
● ಕಲ್ಯಾಣ ಅಧಿಕಾರಿಗಳು – 12
● ಕ್ಷೇತ್ರ ನಿರೀಕ್ಷಕರು – 60
● ಪ್ರಥಮ ದರ್ಜೆ ಸಹಾಯಕರು (FDA) – 12
● ದ್ವಿತೀಯ ದರ್ಜೆ ಸಹಾಯಕರು (SDA) – 100
● ಸಹಾಯಕ ವ್ಯವಸ್ಥಾಪಕರು – 33
● ಖಾಸಗಿ ಸಲಹೆಗಾರ – 2
● ಗುಣಮಟ್ಟದ ಪರಿವೀಕ್ಷಕರು – 23
● ಹಿರಿಯ ಸಹಾಯಕ (ಖಾತೆಗಳು) – 33
● ಹಿರಿಯ ಸಹಾಯಕ – 57
● ಸಹಾಯಕ ವ್ಯವಸ್ಥಾಪಕರು (ತಾಂತ್ರಿಕ) – 4 (ಗ್ರೂಪ್ ಬಿ)
● ಸಹಾಯಕ ವ್ಯವಸ್ಥಾಪಕರು (ತಾಂತ್ರಿಕವಲ್ಲದ) – 2 (ಗ್ರೂಪ್ ಬಿ)
● ಖಾಸಗಿ ಕಾರ್ಯದರ್ಶಿ – 1 (ಗ್ರೂಪ್ ಸಿ)
● ಕಿರಿಯ ಸಹಾಯಕ – 263
● ಹಿರಿಯ ಸಹಾಯಕ (ತಾಂತ್ರಿಕ) – 4 (ಗ್ರೂಪ್ ಸಿ)
● ಹಿರಿಯ ಸಹಾಯಕ (ತಾಂತ್ರಿಕೇತರ) – 3 (ಗ್ರೂಪ್ ಸಿ)
● ಸಹಾಯಕ (ತಾಂತ್ರಿಕ) – 6 (ಗ್ರೂಪ್ ಸಿ)
● ಸಹಾಯಕ (ತಾಂತ್ರಿಕವಲ್ಲದ) – 6 (ಗ್ರೂಪ್ ಸಿ)
● ಮಾರಾಟ ಮೇಲ್ವಿಚಾರಕರು – 19
● ಸೇಲ್ಸ್ ಇಂಜಿನಿಯರ್ – 4
● ಅಕೌಂಟ್ಸ್ ಕ್ಲರ್ಕ್ – 6
● ಗುಮಾಸ್ತ – 14
● ಮಾರಾಟ ಪ್ರತಿನಿಧಿ – 6
ಶೈಕ್ಷಣಿಕ ವಿದ್ಯಾರ್ಹತೆ:-
ಆಯಾ ಹುದ್ದೆಗಳಿಗೆ ಅನುಸಾರವಾಗಿ ಮಾನ್ಯತೆ ಪಡೆದ ಯಾವುದೇ ಮಂಡಳಿ ಅಥವಾ ವಿಶ್ವವಿದ್ಯಾಲಯದಿಂದ 10ನೇ ತರಗತಿ, ದ್ವಿತೀಯ ಪಿಯುಸಿ, ಪದವಿ, ಸ್ನಾತಕೋತ್ತರ ಪದವಿ, ಇಂಜಿನಿಯರಿಂಗ್ ಪದವಿ ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ವೇತನ:- 52,650/-
ವಯೋಮಿತಿ:-
● ಕನಿಷ್ಠ 18 ವರ್ಷಗಳು
ಗರಿಷ್ಠ 35 ವರ್ಷಗಳು
● SC/ST ಪ್ರವರ್ಗ-1 ಅಭ್ಯರ್ಥಿಗಳಿಗೆ 5 ವರ್ಷಗಳ ಸಡಿಲಿಕೆ
● OBC ಅಭ್ಯರ್ಥಿಗಳಿಗೆ 3 ವರ್ಷಗಳ ಸಡಿಲಿಕೆ
ಅರ್ಜಿ ಶುಲ್ಕ:-
● ಆಯಾ ವರ್ಗಗಳಿಗೆ ಅನುಸಾರವಾಗಿ ಅರ್ಜಿ ಶುಲ್ಕವನ್ನು ವಿಧಿಸಲಾಗಿದೆ
● ಹಲವು ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪ್ರತಿಯೊಂದು ಹುದ್ದೆಗಳಿಗೂ ಅರ್ಜಿ ಶುಲ್ಕ ಪಾವತಿ ಮಾಡಬೇಕು
● ಇ-ಅಂಚೆ ಮೂಲಕ ಅರ್ಜಿ ಶುಲ್ಕವನ್ನು ಪಾವತಿ ಮಾಡಬೇಕು.
ಆಯ್ಕೆ ವಿಧಾನ:-
● ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್ ಸೈಟ್ ಗೆ ಹೋಗಿ ಅರ್ಜಿ ಸಲ್ಲಿಸಬೇಕು.
● ಅರ್ಜಿ ಸಲ್ಲಿಸಿದ ಎಲ್ಲಾ ಅಭ್ಯರ್ಥಿಗಳಿಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸ್ಪರ್ಧಾತ್ಮಕ ಪರೀಕ್ಷೆ ನಡೆಸುತ್ತದೆ.
● ಈ ಲಿಖಿತ ಪರೀಕ್ಷೆಯಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಸಂದರ್ಶನ ನಡೆಸಿ ದಾಖಲೆಗಳ ಪರಿಶೀಲನೆ ಮಾಡಿ ಹುದ್ದೆಗಳಿಗೆ ಭರ್ತಿ ಮಾಡುತ್ತದೆ.
ಪ್ರಮುಖ ದಿನಾಂಕಗಳು:-
● ಅರ್ಜಿ ಸಲ್ಲಿಸಲು ಆರಂಭ ದಿನಾಂಕ – 23.06.2023
● ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 22.07.2023