ರಾಜ್ಯದ ಎಲ್ಲಾ ಮಹಿಳೆಯರಿಗೆ ಗುಡ್ ನ್ಯೂಸ್ ಉದ್ಯೋಗಿನಿ ಯೋಜನೆಯಡಿ 3 ಲಕ್ಷ ಹಣ ಬಡ್ಡಿ ಇಲ್ಲದೆ ಸಾಲ ನೀಡುತ್ತಿದ್ದಾರೆ ಆಸಕ್ತ ಮಹಿಳೆಯರು ಕೂಡಲೇ ಅರ್ಜಿ ಸಲ್ಲಿಸಿ.!

 

ಇತ್ತೀಚಿನ ದಿನಗಳಲ್ಲಿ ಪುರುಷರಿಗೆ ಸಮಾನವಾಗಿ ಮಹಿಳೆಯರು ಕೂಡ ಎಲ್ಲಾ ಕ್ಷೇತ್ರದಲ್ಲೂ ಗುರುತಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ಸರ್ಕಾರಗಳು ಕೂಡ ಮಹಿಳೆಯರಿಗೆ ಸಾಕಷ್ಟು ಅನುಕೂಲತೆ ನೀಡುವ ಮೂಲಕ ಮಹಿಳೆಯರು ಆರ್ಥಿಕವಾಗಿ ಸಾಲಂಬಿಗಳಾಗಲು ಮತ್ತು ಸಮಾಜದಲ್ಲಿ ಅವರು ಸಹ ಗೌರವಯುತವಾಗಿ ಬದುಕುವಂತೆ ಮಾಡಲು ನೆರವಾಗುತ್ತಿದೆ.

ಇದರೊಂದಿಗೆ ಬ್ಯಾಂಕಿಂಗ್ ಕ್ಷೇತ್ರವು ಕೂಡ ಗ್ರಾಮೀಣ ಪ್ರದೇಶದ ಹಾಗೂ ಹಿಂದುಳಿದ ವರ್ಗದ ಮಹಿಳೆಯರಿಗೆ ಅವರ ಕೌಶಲ್ಯವನ್ನು ವೃದ್ಧಿ ಮಾಡಿಕೊಂಡು ಸ್ವಂತ ಉದ್ಯಮವನ್ನು ಸ್ಥಾಪಿಸಲು ಪ್ರೇರೇಪಿಸುತ್ತಿದೆ. ಇದಕ್ಕಾಗಿ ಸರ್ಕಾರವು ಜಾರಿಗೆ ತಂದಿರುವ ಉದ್ಯೋಗಿನಿ ಯೋಜನೆಯಡಿ ಮಹಿಳೆಯರಿಗೆ ಬಡ್ಡಿ ರಹಿತ ಸಾಲವನ್ನು ನೀಡುತ್ತಿದೆ. ಈ ಯೋಜನೆಗೆ ಪಂಜಾಬ್ ಮತ್ತು ಸಿಂಧ್ ಬ್ಯಾಂಕ್, ಸಾರಸ್ವತ್ ಬ್ಯಾಂಕ್ ಮತ್ತು ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮವು(KSWDC) ಬೆಂಬಲವನ್ನು ವ್ಯಕ್ತಪಡಿಸುತ್ತಿದೆ.

ಉದ್ಯೋಗಿನಿ ಯೋಜನೆ ನೆರವು ಪಡೆಯಲು ಮಹಿಳೆಯರಿಗೆ ಇರಬೇಕಾದ ಅರ್ಹತೆಗಳು:-

● ಗ್ರಾಮೀಣ ಮತ್ತು ಹಿಂದುಳಿದ ವರ್ಗದ ಮಹಿಳೆಯಾಗಿರಬೇಕು.
● ಕನಿಷ್ಠ 18 ವರ್ಷಗಳನ್ನು ಪೂರೈಸಿರಬೇಕು ಗರಿಷ್ಠ ಮಿತಿ ಈ ಹಿಂದೆ 45 ವರ್ಷಗಳಿತ್ತು ಈಗ ಅದನ್ನು 55 ವರ್ಷಕ್ಕೆ ಇಳಿಸಲಾಗಿದೆ.
● ವಾರ್ಷಿಕವಾಗಿ ಮಹಿಳೆಯ ಕುಟುಂಬದ ಆದಾಯದ ಮಿತಿಯು 1.5 ಲಕ್ಷದ ಒಳಗಿರಬೇಕು,
ವ್ಯಾಪಾರಕ್ಕಾಗಿ ಸಾಲ ಪಡೆಯುವವರು ಅವರೇ ವ್ಯಾಪಾರದ ಮಾಲೀಕರಾಗಬೇಕು.
● ಈ ಹಿಂದೆ ಯಾವುದಾದರೂ ಬ್ಯಾಂಕ್ ಗಳಲ್ಲಿ ಸಾಲ ಪಡೆದುಕೊಂಡು ಮರುಪಾವತಿ ಮಾಡದೆ ಡೀಫಾಲ್ಟರ್ ಆಗಿರಬಾರದು

ದಾಖಲೆಗಳು:

● ಅರ್ಜಿದಾರರ ಪಾಸ್ಪೋರ್ಟ್ ಅಳತೆಯ ಭಾವಚಿತ್ರಗಳು
● ಅರ್ಜಿದಾರರ ಆಧಾರ್ ಕಾರ್ಡ್
● ಜನನ ಪ್ರಮಾಣಪತ್ರ
● ಸರಿಯಾಗಿ ಭರ್ತಿ ಮಾಡಿದ ಉದ್ಯೋಗಿನಿ ಯೋಜನೆಯ ಅರ್ಜಿ ನಮೂನೆ
● ವಿಳಾಸ ಪುರಾವೆ
● ಆದಾಯದ ಪುರಾವೆ
● ಪಡಿತರ ಚೀಟಿ (BPL ಕಾರ್ಡ್ ಹೊಂದಿರಬೇಕು)
● ಜಾತಿ ಪ್ರಮಾಣಪತ್ರ
● ಬ್ಯಾಂಕ್ ಪಾಸ್‌ಬುಕ್‌ನ ವಿವರ
● ಬ್ಯಾಂಕ್/NBFC ಗೆ ಅಗತ್ಯವಿರುವ ಯಾವುದೇ ಇತರ ದಾಖಲೆ.

ಉದ್ಯೋಗಿನಿ ಯೋಜನೆಯ ಉದ್ದೇಶ ಹಾಗೂ ಪ್ರಯೋಜನಗಳು:-

● ಅರ್ಹ ಮಹಿಳಾ ಫಲಾನುಭವಿಗಳಿಗೆ ಯಾವುದೇ ಪಕ್ಷಪಾತ ಅಥವಾ ತಾರತಮ್ಯವಿಲ್ಲದೆ ಬಡ್ಡಿ ರಹಿತ ಸಾಲಗಳನ್ನು ನೀಡಿ ಸಹಾಯ ಮಾಡುವುದು
● ಬ್ಯಾಂಕ್‌ಗಳು ಮತ್ತು ಇತರ ಹಣಕಾಸು ಸಂಸ್ಥೆಗಳಿಂದ ಈ ಯೋಜನೆಯಡಿ ಸಾಲ ಪಡೆದು ಸ್ವಂತ ಉದ್ಯಮ ಆರಂಭಿಸಿ ಗಳಿಕೆಯನ್ನು ಹೊಂದಲಿ ಎನ್ನುವುದು.
● SC/ST ಅಥವಾ ಇತರ ವಿಶೇಷ ವರ್ಗಗಳ ಅಡಿಯಲ್ಲಿ ಬರುವ ಮಹಿಳೆಯರಿಗೆ ಹೆಚ್ಚಿನ ಮೊತ್ತದಲ್ಲಿ ಸಾಲ ಸೌಲಭ್ಯ ಒದಗಿಸುವುದು.

ಮಹಿಳೆಯರು ತಮ್ಮ ಕನಸಿನ ಸಾಕಾರಕ್ಕಾಗಿ ಖಾಸಗಿ ಸಾಲದಾತರು ಅಥವಾ ಇತರ ಹಣಕಾಸು ಸಂಸ್ಥೆಗಳಿಂದ ಹೆಚ್ಚಿನ ಬಡ್ಡಿಯ ಸಾಲವನ್ನು ಪಡೆದು ಸಮಸ್ಯೆಗೆ ಸಿಲುಕಿಕೊಳ್ಳುವುದನ್ನು ತಪ್ಪಿಸುವುದು.
● ಸಾಲ ನೀಡುವುದು ಮಾತ್ರವಲ್ಲದೆ ಉದ್ಯೋಗಿನಿ ಯೋಜನೆಯಡಿ ಸಾಲ ಪಡೆದ ಮಹಿಳೆಯರಿಗೆ ತರಬೇತಿಗಳನ್ನು ನೀಡುವ ಮೂಲಕ ಅವರ ಕೌಶಲ್ಯವು ಇನ್ನಷ್ಟು ಅಭಿವೃದ್ಧಿ ಆಗುವಂತೆ ಮಾಡುವುದು.

ಉದ್ಯೋಗಿನಿ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ:

● ಆನ್ಲೈನ್ ಮತ್ತು ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶವಿದೆ.
● ಈ ಮೇಲೆ ತಿಳಿಸಲಾದ ಎಲ್ಲಾ ದಾಖಲೆಗಳ ಪ್ರತಿ ಜೊತೆಗೆ ಹತ್ತಿರದಲ್ಲಿರುವ ಬ್ಯಾಂಕ್ ಶಾಖೆಗೆ ಭೇಟಿ ಕೊಟ್ಟು ಉದ್ಯೋಗಿನಿ ಯೋಜನೆಯಡಿ ಸಾಲ ಸೌಲಭ್ಯಕ್ಕೆ ಇರುವ ಅರ್ಜಿ ಫಾರಂ ಪಡೆದು ಅರ್ಜಿ ಸಲ್ಲಿಸುವುದು.
● ಆಫ್ಲೈನ್ನಲ್ಲಿ ಅರ್ಜಿ ಸಲ್ಲಿಸಲು ಇಚ್ಛಿಸುವವರು ಉದ್ಯೋಗಿನಿ ಯೋಜನೆಯಡಿ ಸಾಲ ನೀಡುವ ಬ್ಯಾಂಕ್ ಗಳ ಅಧಿಕೃತ ವೆಬ್ಸೈಟ್ ಗೆ ಹೋಗಿ ಆನ್ಲೈನ್ ನಲ್ಲಿ ಅರ್ಜಿ ಫಾರಂ ಭರ್ತಿ ಮಾಡಿ ಸಂಬಂಧಪಟ್ಟ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡಿ ಸಾಲ ಪಡೆಯುವುದು.

 

Leave a Comment

%d bloggers like this: