ಲಕ್ವಾ ಖಾಯಿಲೆ ಎನ್ನುವುದು ಇತ್ತೀಚೆಗೆ ಎಲ್ಲಾ ಕಡೆ ಕಾಡುತ್ತಿರುವ ಬಹುದೊಡ್ಡ ಸಮಸ್ಯೆ. ವೃದ್ಧರಿಗೆ ಮಾತ್ರವಲ್ಲದೆ ಯುವ ಜನತೆಗೂ ಕೂಡ ಈ ಲಕ್ವ ಕಾಯಿಲೆ ಕಾಡುತ್ತಿದೆ. ಮಹಿಳೆ ಪುರುಷ ಎನ್ನುವ ಭೇದವಲ್ಲದೆ ಎಲ್ಲರನ್ನೂ ಕೂಡ ದೈಹಿಕವಾಗಿ ಹೂನಾಗಿಸಿ ಬಿಡುವ ಈ ಖಾಯಿಲೆಗೆ ಆಸ್ಪತ್ರೆ ಔಷಧಿಯ ಚಿಕಿತ್ಸೆಗಿಂತ ನಾಟಿ ಚಿಕಿತ್ಸೆಯನ್ನು ಹೆಚ್ಚು ಜನರು ಸೂಚಿಸುತ್ತಾರೆ.
ಆದರೆ ಬಹಳ ಬೇಗ ಪರಿಣಾಮಕಾರಿಯಾಗಿ ಈ ಲಕ್ವರೋಗ ಗೂಣ ಆಗಬೇಕು ಎಂದರೆ ಈ ಖಾಯಿಲೆ ಬಗ್ಗೆ ಸಂಪೂರ್ಣ ತಿಳಿದುಕೊಂಡಿರುವ ವಂಶ ಪಾರಂಪರ್ಯದಿಂದ ಈ ಚಿಕಿತ್ಸೆ ಬಗ್ಗೆ ಗೊತ್ತಿರುವವರ ಬಳಿ ಹೋದರೆ ಉತ್ತಮ. ಉತ್ತರ ಕರ್ನಾಟಕದ ಮಹಿಳೆಯೊಬ್ಬರು ಈ ರೀತಿ ಚಿಕಿತ್ಸೆ ಕೊಡುತ್ತಿದ್ದಾರೆ. ಇವರ ಬಳಿ ಲಕ್ವಾ ಹೊಡೆದು ಮೂರು ದಿನಗಳಾದವರಿಂದ ಹತ್ತು ವರ್ಷದಿಂದ ಈ ಖಾಯಿಲೆಯಿಂದ ಬಳಲುತ್ತಿರುವವರು ಕೂಡ ಚಿಕಿತ್ಸೆಗಾಗಿ ಬರುತ್ತಾರೆ.
ಗುಲ್ಬರ್ಗ ಜಿಲ್ಲೆಯ ಚಿಂಚೋಳಿ ತಾಲೂಕಿನ ಕೆರೊಳ್ಳಿ ಗ್ರಾಮದ ನಾಟಿವೈದ್ಯ ನರಸಮ್ಮ ಈ ಕಾಯಿಲೆಗೆ ಔಷಧಿ ಕೊಡುವ ಮಹಿಳೆ ಇವರನ್ನು ಈ ಭಾಗದಲ್ಲಿ ಗುತ್ತೇದಾರ್ ಎಂದು ಕೂಡ ಕರೆಯುತ್ತಾರೆ. ನರಸಮ್ಮ ಅವರ ತಾಯಿ ಅಜ್ಜಿ, ಮುತ್ತಜ್ಜಿ ಹೀಗೆ ನಾಲ್ಕು ತಲೆಮಾರುಗಳಿಂದ ಇವರು ಲಕ್ವಾ, ಪಿಡಿಸು ಮತ್ತು ಮಹಿಳೆಯರ ಬಿಳಿ ಸೆರಗು ಸಮಸ್ಯೆಕ್ಕೆ ಔಷಧಿ ಕೊಡುತ್ತಾ ಬಂದಿದ್ದಾರೆ.
ಇವರ ಬಳಿ ಚಿಕಿತ್ಸೆಗೆಂದು ಬರುವವರು ಪರಿಣಾಮಕಾರಿಯಾಗಿ ಗುಣವಾಗಿರುವ ಬಗ್ಗೆ ಅನೇಕ ಉದಾಹರಣೆಗಳು ಇವೆ. ಇದರಿಂದ ನಾಡಿನ ಮೂಲೆ ಮೂಲೆಗಳಿಂದ ಹಾಗೂ ಹೊರ ರಾಜ್ಯಗಳಿಂದಲೂ ಕೂಡ ಇವರ ಬಳಿ ಚಿಕಿತ್ಸೆಗಾಗಿ ಬರುತ್ತಾರೆ. ಲಕ್ವಾ ಖಾಯಿಲೆಗೆ ಬಹಳ ಸರಳವಾದ ನಾಟಿ ಚಿಕಿತ್ಸೆ ಕೊಟ್ಟು ಇವರು ಗುಣ ಮಾಡುತ್ತಾರೆ.
ಲವಂಗ, ಮೆಣಸು, ಏಲಕ್ಕಿ, ಜೀರಿಗೆ, ರಸ ಕಪೂರ್, ಎವನ್, ಕಾಗದಬಂದ್, ನಾಗರಾಶಿ, ತಾನ್ ಮಖಾನ್ ಇವುಗಳ ಜೊತೆಗೆ ಕಾಡಿನಿಂದ ಹುಡುಕಿ ತಂದ ಗಿಡಮೂಲಿಕೆಗಳಿಂದ ಇವರು ಔಷಧಿಯನ್ನು ತಯಾರಿಸಿ ಉಂಡೆಗಳನ್ನಾಗಿ ಮಾಡಿಕೊಡುತ್ತಾರೆ. ಮೊದಲಿಗೆ ಲಕ್ವ ಹೊಡೆದ ತಕ್ಷಣ ಬರುವವರಿಗೆ 10 ದಿನಗಳಿಗೆ 20 ಉಂಡೆಗಳನ್ನು ಕೊಟ್ಟು ಕಳಿಸುತ್ತಾರೆ.
ಗುಣವಾದರೆ ಮಾತ್ರ ಮರಳಿ ಬನ್ನಿ ಎಂದು ಹೇಳಿ ಕಳಿಸುತ್ತಾರೆ. ಗುಣವಾದವರು ಮತ್ತೊಮ್ಮೆ ಬಂದರೆ ಮತ್ತೆ 10 ಉಂಡೆಗಳನ್ನು ಕೊಡುತ್ತಾರೆ. ಅಷ್ಟರಲ್ಲಿ ಅವರ ಖಾಯಿಲೆ ಸಂಪೂರ್ಣವಾಗಿ ಮೂರು ತಿಂಗಳ ಒಳಗೆ ಗುಣ ಆಗುತ್ತದೆ. 100 ವರ್ಷಕ್ಕಿಂತ ಹೆಚ್ಚಿನ ಸಮಯದಿಂದ ಈ ರೀತಿ ಸಮಸ್ಯೆಯಿಂದ ಬಳಲುತ್ತಿರುವವರು ಕನಿಷ್ಠ 4-5 ಬಾರಿ ಆದರೂ ಇವರ ಬಳಿ ಚಿಕಿತ್ಸೆಗೆ ಹೋಗಬೇಕಾಗುತ್ತದೆ.
ಆಹಾರದಲ್ಲಿ ಪಥ್ಯ ಸಹ ಇರುತ್ತದೆ. ಹಾಲು ಮೊಸರು ಬೆಣ್ಣೆ ತುಪ್ಪ ಈ ರೀತಿ ಹಾಲಿನಿಂದ ಮಾಡಿದ ಆಹಾರ ಪದಾರ್ಥಗಳನ್ನು ಸೇವಿಸಬಾರದು. ಆದರೆ ಮಾಂಸಾಹಾರಿ ಆಹಾರ ಪದಾರ್ಥಕ್ಕೆ ಯಾವುದೇ ಪಥ್ಯ ಇರುವುದಿಲ್ಲ. ಮೂಸಂಬಿ ಕಿತ್ತಳೆ ಸೇಬು ಈ ರೀತಿ ಹಣ್ಣಿನ ಸೇವನೆ ಮಾಡದೆ ಇರಲು ಸೂಚಿಸುತ್ತಾರೆ. ಜೊತೆಗೆ ಈ ಔಷಧಿ ತೆಗೆದುಕೊಂಡ ಮೇಲೆ ಕನಿಷ್ಠ ಮೂರು ತಿಂಗಳಾದರೂ ಅಥವಾ ಗುಣವಾಗುವವರೆಗೂ ಕೂಡ ಆಸ್ಪತ್ರೆ ಇಂಜೆಕ್ಷನ್ ಗಳನ್ನು ತೆಗೆದುಕೊಳ್ಳದೆ ಇರಲು ಸೂಚಿಸುತ್ತಾರೆ.
ಇವರೇ ಮಾಡಿದ ಚೂರ್ಣವನ್ನು ಕೂಡ ಕೊಡುತ್ತಾರೆ. ಇದನ್ನು ಅರಳಿ ಎಲೆ ಮೇಲೆ ಹಾಕಿ ಕಾವಲಿಯಲ್ಲಿ ಬಿಸಿ ಮಾಡಿ ಕಾಟನ್ ಬಟ್ಟೆಗೆ ಸುತ್ತಿಕೊಂಡು ಲಕ್ವ ಹೊಡೆದಿರುವ ಜಾಗಕ್ಕೆ ಮಸಾಜ್ ಮಾಡಲು ಹೇಳುತ್ತಾರೆ. ಇವರ ಈ ಚಿಕಿತ್ಸೆ ಬಗ್ಗೆ ಸಂಪೂರ್ಣ ಮಾಹಿತಿಗಾಗಿ ವಿಡಿಯೋವನ್ನು ಪೂರ್ತಿಯಾಗಿ ನೋಡಿ.