ರೈತರಿಗೆ 5 ಲಕ್ಷ ಶೂನ್ಯ ಬಡ್ಡಿ ದರದಲ್ಲಿ ಸಾಲ. ರಾಷ್ಟ್ರೀಕೃತ ಬ್ಯಾಂಕ್ ಮತ್ತು ಸಹಕಾರಿ ಬ್ಯಾಂಕ್ ಗಳಲ್ಲಿ ಸಾಲ ಸೌಲಭ್ಯ ದೊರೆಯಲಿದೆ ಇಂದೇ ಅರ್ಜಿ ಸಲ್ಲಿಸಿ.

ಕರ್ನಾಟಕ ರಾಜ್ಯದಾದ್ಯಂತ ಇರುವ ಎಲ್ಲಾ ರೈತರಿಗೆ ರಾಜ್ಯದ ಸಹಾಯಕ ಸಚಿವರಾಗಿರುವಂತಹ ಎಸ್ ಟಿ ಸೋಮಶೇಖರ್ ಅವರು ಭರ್ಜರಿ ಬಂಪರ್ ಗಿಫ್ಟ್ ನೀಡಿದ್ದಾರೆ. ಈ ಹಿಂದಿನ ಸರ್ಕಾರಗಳು ಈಗಾಗಲೇ ರೈತರ ಸಾಲಗಳನ್ನು ಮನ್ನಾ ಮಾಡಲಾಗಿದೆ. ಹಾಗೂ ಅದೇ ರೀತಿಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರವು ರೈತರಿಗಾಗಿಯೇ ಮೇಲಿಂದ ಮೇಲೆ ಹೊಸ ಯೋಜನೆಗಳನ್ನು ಜಾರಿಗೆ ತರುತ್ತಿದೆ. ರೈತರ ಆರ್ಥಿಕ ಸಬಲೀಕ ರಣ ಹಾಗೂ ಅಭಿವೃದ್ಧಿಯತ್ತ ಸಾಗುವಂತೆ ಅನೇಕ ಯೋಜನೆಗಳನ್ನು ಕೂಡ ಅನುಷ್ಠಾನಕ್ಕೆ ತರುವಂತೆ ಯೋಚನೆ ಮಾಡುತ್ತಿದೆ.

WhatsApp Group Join Now
Telegram Group Join Now

ಹಾಗೂ ಇದೇ ರೀತಿಯಲ್ಲೇ ಕರ್ನಾಟಕ ರಾಜ್ಯದ ಎಲ್ಲ ರೈತರಿಗೂ ಅನುಕೂಲಕರವಾಗು ವಂತೆ ಈ ಹಿಂದೆ ಕೂಡ ಪ್ರಧಾನಮಂತ್ರಿ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯನ್ನು ಕೂಡ ಜಾರಿಗೆ ತರಲಾಗಿತ್ತು. ಈ ಕಾರ್ಡ್ ನ ಅಡಿಯಲ್ಲಿ ದೇಶದ ಹಾಗು ನಮ್ಮ ಕರ್ನಾಟಕ ರಾಜ್ಯದಲ್ಲಿ ಪ್ರತಿಯೊಬ್ಬ ರೈತರು ಕೂಡ ಯಾವುದೇ ಬಡ್ಡಿದರ ಇಲ್ಲದೆ ಶೂನ್ಯ ಬಡ್ಡಿ ದರದಲ್ಲಿ ಮೂರು ಲಕ್ಷದವರೆಗೆ ಸಾಲ ಸೌಲಭ್ಯವನ್ನು ಪಡೆದುಕೊಂಡಿದ್ದಾರೆ.

ಹಾಗೂ ಅದೇ ರೀತಿಯಲ್ಲಿ ಈ ಹಿಂದೆ ಅಂದರೆ ಕಳೆದ ತಿಂಗಳು ಫೆಬ್ರವರಿಯಲ್ಲಿ ಮಂಡಿಸಿರುವಂತಹ ಬಜೆಟ್ ನಲ್ಲಿ ರಾಜ್ಯದ ಮುಖ್ಯ ಮಂತ್ರಿಗಳಾಗಿರುವಂತಹ ಬಸವರಾಜ್ ಬೊಮ್ಮಾಯಿ ಅವರು ಘೋಷಿಸಿರುವಂತೆ ರೈತರಿಗೆ ಒಂದು ರೂಪಾಯಿ ಕೂಡ ಬಡ್ಡಿ ಇಲ್ಲದೆಯೇ ಸಂಪೂರ್ಣ ಶೂನ್ಯ ಬಡ್ಡಿ ದರದಲ್ಲಿ 5 ಲಕ್ಷದ ವರೆಗೆ ಸಾಲ ಸೌಲಭ್ಯದ ಯೋಜನೆಯನ್ನು ಘೋಷಣೆ ಮಾಡಿದ್ದಾರೆ. ಕೇಂದ್ರ ಸರ್ಕಾರವು ಈಗಾಗಲೇ ಜಾರಿಗೆ ತಂದಿರುವಂತಹ ಪ್ರಧಾನ ಮಂತ್ರಿ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಲ್ಲಿ.

ಈಗಾಗಲೇ ನೀಡಲಾಗುತ್ತಿರುವ ರೈತರ ಶೂನ್ಯ ಬಡ್ಡಿ ದರದ ಸಾಲ ಸೌಲಭ್ಯಕ್ಕೆ ಮತ್ತಷ್ಟು ಪ್ರೋತ್ಸಾಹ ಸಿಕ್ಕಿದಂತಾಗಿದೆ. ನಮ್ಮ ಕರ್ನಾಟಕ ಸರ್ಕಾರದ ಸಹಕಾರ ಸಚಿವರಾಗಿರುವಂತಹ ಎಸ್ ಟಿ ಸೋಮಶೇಖರ್ ಹಾಗೂ ಮುಖ್ಯಮಂತ್ರಿಗಳು ಬಜೆಟ್ ನಲ್ಲಿ ಘೋಷಿಸಿರುವಂತಹ ಯೋಜನೆಗೆ ಪೂರಕವಾಗಿ ರಾಜ್ಯದ ಪ್ರತಿಯೊಬ್ಬ ರೈತರಿಗೂ ಕೂಡ 5 ಲಕ್ಷದ ವರೆಗೆ ಯಾವುದೇ ಬಡ್ಡಿ ಇಲ್ಲದೆಯೇ ಸಾಲ ಸೌಲಭ್ಯ ನೀಡಲು ಮಹತ್ವದ ಕ್ರಮಕ್ಕೆ ಮುಂದಾಗಿದ್ದಾರೆ.

ರಾಜ್ಯದ ಮುಖ್ಯಮಂತ್ರಿ ಗಳಾಗಿರುವಂತಹ ಬಸವರಾಜ್ ಬೊಮ್ಮಾಯಿ ಅವರು ಕಳೆದ ಫೆಬ್ರವರಿಯಲ್ಲಿ ಮಂಡಿಸಿರುವಂತಹ ಬಜೆಟ್ ನಲ್ಲಿ ರಾಜ್ಯದ ರೈತರಿಗೆ ಶೂನ್ಯ ಬಡ್ಡಿದರದ ಸಾಲ ಸೌಲಭ್ಯವನ್ನು ಮೂರು ಲಕ್ಷದಿಂದ 5 ಲಕ್ಷದವರೆಗೆ ಏರಿಕೆ ಮಾಡಲಾಗಿದ್ದು. ಪ್ರತಿಯೊಬ್ಬ ರೈತರು ಕೂಡ ಶೂನ್ಯ ಬಡ್ಡಿ ದರದಲ್ಲಿ ಮೇಲೆ ಹೇಳಿದಷ್ಟು ಹಣವನ್ನು ಸಾಲ ಸೌಲಭ್ಯವಾಗಿ ಪಡೆದುಕೊಳ್ಳ ಬಹುದಾಗಿದೆ.

ಈ ಬಗ್ಗೆ ಸಚಿವರಾಗಿರುವಂತಹ ಎಸ್ ಟಿ ಸೋಮಶೇಖರ್ ಅವರು ಮಾಧ್ಯಮಗಳಿಗೆ ಉತ್ತರಿಸಿ ಕರ್ನಾಟಕ ರಾಜ್ಯದ ಎಲ್ಲ ರೈತರು ಕೂಡ ಯಾವುದೇ ಬಡ್ಡಿ ಇಲ್ಲದಿಯೇ ಸುಮಾರು ಐದು ಲಕ್ಷದವರೆಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯ ಪಡೆದುಕೊಳ್ಳಬಹುದು ಎಂದು ಸ್ಪಷ್ಟತೆಯನ್ನು ನೀಡಿದ್ದಾರೆ. ಮತ್ತು ಔಷಧ ಸಿಂಪಡಣೆಗಾಗಿ ಖಾಸಗಿ ಸಾಲವನ್ನು ಮಾಡಿಕೊಳ್ಳುತ್ತಿದ್ದು ಇದರಿಂದ ರೈತರ ತುಂಬಾ ಸಂಕಷ್ಟವನ್ನು ಎದುರಿಸುತ್ತಿದ್ದಾರೆ.

ಇದನ್ನು ತಪ್ಪಿಸುವುದರಲ್ಲಿ ಮುಖ್ಯ ಗುರಿಯನ್ನು ಹೊಂದಲಾಗಿದೆ ಎಂದು ಹೇಳಿದ್ದಾರೆ. ಹಾಗಾಗಿ ರೈತರಿಗೆ ಪ್ರತಿ ವರ್ಷ 5 ಲಕ್ಷದವರೆಗೆ ಯಾವುದೇ ಬಡ್ಡಿದರ ಇಲ್ಲದೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಸೌಲಭ್ಯವನ್ನು ಒದಗಿಸಿಕೊಡಲಾಗಿದೆ ಎಂದು ಸೋಮಶೇಖರ್ ಅವರು ಸ್ಪಷ್ಟ ಪಡಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋ ಸಂಪೂರ್ಣವಾಗಿ ವೀಕ್ಷಿಸಿ.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now