Deprecated: strtolower(): Passing null to parameter #1 ($string) of type string is deprecated in /home/u302298408/domains/rishithepower.com/public_html/wp-content/plugins/taboola/simple_html_dom.php on line 712
ಕೃಷಿ (Agriculture) ಈ ದೇಶದ ಬೆನ್ನೆಲುಬು, ರೈತ ಇಡೀ ಪ್ರಪಂಚಕ್ಕೆ ಆಹಾರ ನೀಡುವ ಅನ್ನದಾತ ಎಲ್ಲವೂ ಸತ್ಯ. ಆದರೆ ರೈತನಿಗೆ ಇರುವ ಕಷ್ಟ ಅಷ್ಟಿಷ್ಟಲ್ಲ. ಪ್ರತಿಯೊಂದು ಹಂತದಲ್ಲೂ ಕೂಡ ರೈತನಿಗೆ ಸವಾಲು ಇರುತ್ತದೆ. ಮಳೆ ಬರದೇ ಇದ್ದರೆ ಭೀಕರ ಬರ, ಮಳೆ ಹೆಚ್ಚಾದರೆ ಅತಿವೃಷ್ಟಿ ಬೆಳೆದ ಬೆಲೆಗೆ ಸರಿಯಾದ ಬೆಲೆ ಇಲ್ಲದೇ ಇರುವುದು, ಬೆಳೆ ಹಾನಿ ಆದರೆ ಸರಿಯಾದ ಸಮಕ್ಕೆ ಪರಿಹಾರ ಸಿಗದೇ ಇರುವುದು.
ಇದರ ನಡುವೆ ಸರ್ಕಾರಿ ಯೋಜನೆಗಳ ನೆರವು ಪಡೆದುಕೊಳ್ಳಲು ಮಧ್ಯವರ್ತಿಗಳ ಕಾಟ, ಜಮೀನಿಗೆ ಸಂಬಂಧಪಟ್ಟ ದಾಖಲೆ ಪತ್ರಗಳು ಸರಿ ಇರದೇ ಇರುವುದು, ಕುಟುಂಬದಲ್ಲಿ ಆಸ್ತಿ ಸಂಬಂಧವಾಗಿ ವ್ಯಾಜ್ಯಗಳಾಗಿ ರೈತರ ಅಮೂಲ್ಯ ಸಮಯ ಶಕ್ತಿ ಹಾಗೂ ಹಣ ವ್ಯರ್ಥ ಆಗುತ್ತಿರುವುದು ಇತ್ಯಾದಿ ಇತ್ಯಾದಿ ನೂರೆಂಟು ಸಮಸ್ಯೆಗಳ ನಡುವೆ ಅತಿ ದೊಡ್ಡ ಸಮಸ್ಯೆಯಾಗಿ ಇತ್ತೀಚಿನ ದಿನಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ರೈತರ ಮಕ್ಕಳಿಗೆ ಯಾರು ಹೆಣ್ಣು ಸಿಗದೆ ಇರುವುದು.
ಈ ಸುದ್ದಿ ಓದಿ:-ಇನ್ಮುಂದೆ ಈ ನಗರಕ್ಕೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು.!
ಇದು ಹೇಳುವುದಕ್ಕೆ ಬಹಳ ಸರಳವಾದ ವಿಚಾರ ಎನಿಸುತ್ತಿದ್ದರೂ ಕೂಡ ತಿರಸ್ಕರಿಸುವಷ್ಟು ಸಣ್ಣ ವಿಚಾರವೂ ಅಲ್ಲವೇ ಅಲ್ಲ. ಯಾಕೆಂದರೆ ಇಂದು ಕರ್ನಾಟಕದ ಪ್ರತಿ ಹಳ್ಳಿ ಹಳ್ಳಿಯಲ್ಲೂ ಕೂಡ ವಯಸು 45 ದಾಟಿದರೂ ಕೂಡ ರೈತರು ಎನ್ನುವ ಕಾರಣಕ್ಕಾಗಿ ಎಲ್ಲಿಯೂ ಹೆಣ್ಣು ಸಿಗದೆ ಮದುವೆ ಆಗದೆ ಉಳಿದಿರುವ ಯುವಜನತೆಯ ಗುಂಪೇ ಸಿಗುತ್ತದೆ ಈ ರೀತಿ ರೈತ ಮಕ್ಕಳ ಬಗ್ಗೆ ಅಸಡ್ಡೆಯ ಮನೋಭಾವ ಮೂಡುತ್ತಿರುವುದು ಆತಂಕದ ವಾತಾವರಣವನ್ನು ಸೃಷ್ಟಿಸಿದೆ.
ರೈತನ ಇತರ ಸಮಸ್ಯೆಗಳ ಪರಿಹಾರಕ್ಕಾಗಿ ಸರ್ಕಾರವು ಅನೇಕ ಯೋಜನೆಗಳ ಮೂಲಕ ನೆರವಾಗುತ್ತಿದೆ ನಿಜ. ಆದರೆ ರೈತರ ಮಕ್ಕಳಿಗೆ ಹೆಣ್ಣು ಸಿಗದೇ ಇರುವ ಕಾರಣಕ್ಕೆ ಪರಿಹಾರ ಏನು ಎನ್ನುವುದು ಮಾತ್ರ ಗೊಂದಲವಾಗಿಯೇ ಉಳಿದಿದೆ ಹಳ್ಳಿಗಳಲ್ಲಿ ಇರುವ ಕೃಷಿಯಲ್ಲಿ ತೊಡಗಿಕೊಂಡಿರುವ ಯುವಕರು ಕೈತುಂಬ ಕೆಲಸ ಹೊಂದಿದ್ದರು ಪಟ್ಟದಲ್ಲಿರುವವರಿಗಿಂತ ಹೆಚ್ಚಿಗೆ ಸಂಪಾದನೆ ಮಾಡಿ ಆಸ್ತಿ ಹೊಂದಿದ್ದು ಸಿರಿವಂತರಾಗಿದ್ದರು ಕೂಡ ಹೆಣ್ಣುಮಕ್ಕಳಿಗಿಂತ ಹೆಣ್ಣು ಮಕ್ಕಳನ್ನು ಹೆತ್ತಿರುವ ತಂದೆ ತಾಯಿಗೆ ರೈತರ ಮಕ್ಕಳಿಗೆ ಹೆಣ್ಣು ಕೊಡಲು ಮನಸ್ಸು ಮಾಡುತ್ತಿಲ್ಲ.
ಈ ಸುದ್ದಿ ಓದಿ:-ಕೇವಲ 5 ನಿಮಿಷದಲ್ಲಿ ಮೊಬೈಲ್ ಮೂಲಕವೇ ಅಪ್ಲೈ ಮಾಡಿ ನಿಮ್ಮ ವಾಹನದ HSRP ನಂಬರ್ ಪ್ಲೇಟ್ ಪಡೆಯಬಹುದು.!
ರೈತನನ್ನು ಅಳಿಯನನ್ನಾಗಿ ಮಾಡಿಕೊಳ್ಳಲು ಬಹಳ ಹಿಂದೇಟು ಹಾಕುತ್ತಿದ್ದಾರೆ. ಜನಸಾಮಾನ್ಯರಿಂದ ಈ ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ, ಹಾಗಾಗಿ ಈ ರೀತಿ ಹೆಣ್ಣು ಹೆತ್ತವರ ಮನ ಒಲಿಸುವ ಪ್ರಯತ್ನವನ್ನು ಸರ್ಕಾರವೇ ಮಾಡಬೇಕು ಎಂದು ರೈತ ಸಂಘಟನೆಯ ಮುಖ್ಯಸ್ಥರು ಮತ್ತು ಪ್ರತಿನಿಧಿಗಳು ಸಿಎಂ ಸಿದ್ದರಾಮಯ್ಯ (CM Siddaramaih) ಅವರಿಗೆ ಭೇಟಿಯಾಗಿ ಕನ್ಯಾ ಭಾಗ್ಯ (KanyaBhagya) ನೀಡುವಂತೆ ಮನವಿ ಮಾಡಿದ್ದಾರೆ.
ಹೆಣ್ಣು ಮಗಳು ರೈತನನ್ನು ಮದುವೆ ಆದರೆ ಆಕೆಗೆ 5 ಲಕ್ಷ ರೂಪಾಯಿ ಪ್ರೋತ್ಸಾಹ ಧನ ನೀಡುವುದಾಗಿ ಘೋಷಣೆ ಮಾಡಬೇಕು ಎಂದು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಇದೇ ವಾರದಲ್ಲಿ ರಾಜ್ಯ ಸರ್ಕಾರ ತನ್ನ ಬಹು ನಿರೀಕ್ಷಿತ 2024-2025ನೇ ಸಾಲಿನ ಬಜೆಟ್ ಕೂಡ ಮಂಡಿಸಲಿದೆ. ಈ ಸಂದರ್ಭದಲ್ಲಿ ಖಂಡಿತವಾಗಿಯೂ ರೈತರ ಪರವಾಗಿ ಯೋಜನೆಗಳು ಘೋಷಣೆ ಆಗಲಿದೆ ಅದರಲ್ಲಿ ಇದರ ಸಂಬಂಧಿತವಾಗಿ ಕೂಡ ಮುಖ್ಯಮಂತ್ರಿಗಳು ಮಾತನಾಡುತ್ತಾರೆ ಎಂದು ನಿರೀಕ್ಷಿಸಲಾಗುತ್ತಿದೆ.
ಈ ಸುದ್ದಿ ಓದಿ:-ರೈಲ್ವೆ ಇಲಾಖೆಯಲ್ಲಿ ಭರ್ಜರಿ ನೇಮಕಾತಿ, 9000 ಹುದ್ದೆಗಳಿಗೆ ಅರ್ಜಿ ಆಹ್ವಾನ ಆಸಕ್ತರು ಅರ್ಜಿ ಸಲ್ಲಿಸಿ.!
ಕರ್ನಾಟಕ ವಿಧಾನಸಭಾ ಚುನಾವಣೆ 2023ರ ಸಮಯದಲ್ಲಿ JDS ಪಕ್ಷವು ತನ್ನ ಪ್ರಣಾಳಿಕೆಯಲ್ಲಿ ರೈತ ಮಕ್ಕಳನ್ನು ವಿವಾಹವಾಗುವ ಹೆಣ್ಣು ಮಕ್ಕಳಿಗೆ 2 ಲಕ್ಷಕ್ಕೂ ಸಹ ಸಹಾಯಧನವನ್ನು ಘೋಷಿಸಿತ್ತು, ಈಗ ಮುಖ್ಯಮಂತ್ರಿಗಳು ಯಾವ ರೀತಿ ನಿರ್ಧಾರ ತೆಗೆದುಕೊಳ್ಳಲ್ಲಿದ್ದಾರೆ ಎನ್ನುವುದರತ್ತ ಎಲ್ಲರ ಚಿತ್ತ ಇದೆ. ಮುಂದೇನಾಗಲಿದೆ ಕಾದು ನೋಡೋಣ.