ದೇಶಾದ್ಯಂತ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ಪ್ರೀಮಿಯಂ ಸೆಮಿ ಹೈಸ್ವೀಡ್ ರೈಲಾಗಿ ಓಡಾಟ ಜೋರಾಗಿದೆ. ಕರ್ನಾಟಕದಲ್ಲೂ 4 ಮಾರ್ಗದಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ರೈಲು ಸಂಚಾರ ನಡೆಯುತ್ತಿದ್ದು.
ವಂದೇ ಭಾರತ್ ಎಕ್ಸ್‌ಪ್ರೆಸ್ ಅತ್ಯಾಧುನಿಕ ಪ್ರಯಾಣಿಕರ ಸೌಕರ್ಯಗಳನ್ನು ಹೊಂದಿರುವುದರಿಂದ ಮತ್ತು ರೈಲು ಬಳಕೆದಾರರಿಗೆ ವೇಗವಾದ, ಹೆಚ್ಚು ಆರಾಮದಾಯಕ ಮತ್ತು ಹೆಚ್ಚು ಅನುಕೂಲಕರ ಪ್ರಯಾಣದ ಅನುಭವವನ್ನು ನೀಡುವುದರಿಂದ ಕರ್ನಾಟಕದ ಲಕ್ಷಾಂತರ ಮಂದಿ ತಮ್ಮ ದಿನನಿತ್ಯದ ಚಟುವಟಿಕೆಗಳಿಗಾಗಿ ವಂದೇ ಮಾತರಂ ರೈಲಿನ ಪ್ರಯಾಣ ಬಯಸುತ್ತಿದ್ದಾರೆ.
ಸದ್ಯಕ್ಕೀಗ ಕರ್ನಾಟಕದಲ್ಲಿ
ಚೆನ್ನೈ – ಬೆಂಗಳೂರು – ಮೈಸೂರು
ಬೆಂಗಳೂರು – ಹುಬ್ಬಳ್ಳಿ – ಧಾರವಾಡ
ಹೈದರಾಬಾದ್ – ಬೆಂಗಳೂರು
ಮಂಗಳೂರು – ಗೋವಾ ನಡುವೆ ಈ ರೈಲು ಯಶಸ್ವಿಯಾಗಿ ಓಡಾಟ ನಡೆಸುತ್ತಿದ್ದು, ದೇಶದ ಮತ್ತೊಂದು ಪ್ರಮುಖ ನಗರಕ್ಕೆ ಮತ್ತು ಶೀಘ್ರದಲ್ಲಿ ಸಂಪರ್ಕ ಪಡೆದುಕೊಳ್ಳಲಿದೆ.
ಈ ಸುದ್ದಿ ಓದಿ:- ಕೇವಲ 5 ನಿಮಿಷದಲ್ಲಿ ಮೊಬೈಲ್ ಮೂಲಕವೇ ಅಪ್ಲೈ ಮಾಡಿ ನಿಮ್ಮ ವಾಹನದ HSRP ನಂಬರ್ ಪ್ಲೇಟ್ ಪಡೆಯಬಹುದು.!
ಕಳೆದ ಕೆಲವು ತಿಂಗಳ ಹಿಂದೆಯಷ್ಟೇ ಈ ನಿಟ್ಟಿನಲ್ಲಿ ಪ್ರಯೋಗವೊಂದು ನಡೆದು ಬೆಂಗಳೂರು – ಧಾರವಾಡ ನಡುವೆ ಸಂಚರಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲ್ ನ್ನು ಬೆಳಗಾವಿವರೆಗೆ ವಿಸ್ತರಣೆ ಮಾಡಲಾಗಿತ್ತು ಮತ್ತು ಈ ಮಾರ್ಗದಲ್ಲಿ ಪ್ರಾಯೋಗಿಕ ಸಂಚಾರವನ್ನು ಕೂಡ ನಡೆಸಲಾಗಿತ್ತು.
ಆದರೆ, ಯೋಜನೆ ಅಧಿಕೃತವಾಗಿ ಯಶಸ್ವಿಯಾಗುವುದು ಸ್ವಲ್ಪ ತಡವಾಗುತ್ತಿದ್ದು ರೈಲಿನ ಸಂಚಾರ ತಡವಾಗುತ್ತಿದೆ ಇದರ ಬಗ್ಗೆ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದ ಕುಂದಾನಗರಿ ಜನರ ಕೋ’ಪಕ್ಕೂ ಕಾರಣವಾಗಿದೆ ಆದರೆ ಈಗ ನೆರೆಯ ರಾಜ್ಯದ ಪ್ರಮುಖ ನಗರಕ್ಕೆ ಸಂಪರ್ಕ ಕಲ್ಪಿಸುವ ಹೊಸ ರೈಲು ಘೋಷಣೆ ಸ್ವಲ್ಪ ಸಮಾಧಾನ ತಂದಿದೆ.
ಈ ಸುದ್ದಿ ಓದಿ:- ರೈಲ್ವೆ ಇಲಾಖೆಯಲ್ಲಿ ಭರ್ಜರಿ ನೇಮಕಾತಿ, 9000 ಹುದ್ದೆಗಳಿಗೆ ಅರ್ಜಿ ಆಹ್ವಾನ ಆಸಕ್ತರು ಅರ್ಜಿ ಸಲ್ಲಿಸಿ.!
ಕೇಂದ್ರ ರೈಲ್ವೆ ಸಚಿವ ಅಶ್ವಿನ್ ವೈಷ್ಣವ್ ರವರು (Railway Minister Ashwin Vaishnav), ಬೆಳಗಾವಿ ಮತ್ತು ಪುಣೆ ಮಧ್ಯೆ ಬಹುನಿರೀಕ್ಷಿತ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರ ಆರಂಭಿಸಲು ತಾತ್ವಿಕ ಒಪ್ಪಿಗೆ ಕೊಟ್ಟಿದ್ದಾರೆ. ಈ ಬಗ್ಗೆ ಸಚಿವರಿಗೆ ಪತ್ರ ಬರೆದು ಈ ಮಾರ್ಗವಾಗಿ ವಂದೇ ಭಾರತ್ ಆರಂಭಿಸುವ ಬಗ್ಗೆ ರೈಲ್ವೆ ಸಚಿವಾಲಯಕ್ಕೆ ಮನವಿ ಮಾಡಿಕೊಂಡಿದ್ದ ರಾಜ್ಯಸಭಾ ಸಂಸದರಾದ ಈರಣ್ಣ ಕಡಾಡಿ (MP Eranna Kadadi) ಅವರಿಗೆ ಪತ್ರದ ಮೂಲಕ ಮಾಹಿತಿ ನೀಡಿದ್ದಾರೆ.
ಇದರ ಸಂಬಂಧವೀಗ ಬೆಳಗಾವಿ ಹಾಗೂ ಪುಣೆ ನಡುವಿನ ಹಳಿಗಳಲ್ಲಿ ವಿದ್ಯುದ್ದೀಕರಣ ಕಾಮಗಾರಿಯನ್ನು ನಡೆಸಲಾಗುತ್ತಿದೆ. ಅದು ಪೂರ್ತಿಯಾದ ಬಳಿಕ, ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಕಾರ್ಯ ನಡೆಸಲಿದೆ. ಬಲ್ಲ ಮೂಲಗಳ ಪ್ರಕಾರ, ವಿದ್ಯುದ್ದೀಕರಣ ಕೆಲಸಗಳು ಮುಗಿಯಲು ಕನಿಷ್ಠ 1 ವರ್ಷವಾಗಲಿದೆ ಎಂದು ಊಹಿಸಲಾಗಿದೆ.
ಈ ಸುದ್ದಿ ಓದಿ:- RTE Application 2024: ಉಚಿತ ಶಿಕ್ಷಣಕ್ಕೆ ಅರ್ಜಿ ಆಹ್ವಾನ, ಈ ದಿನಾಂಕದಿಂದಲೇ ಅರ್ಜಿ ಪ್ರಾರಂಭ, ಇಲ್ಲಿದೆ ಸಂಪೂರ್ಣ ಮಾಹಿತಿ.!
ಇವೆರೆಡು ಪ್ರಮುಖ ನಗರಗಳ ಮಧ್ಯೆ ನೇರವಾಗಿ ವಂದೇ ಭಾರತ್ ರೈಲು ಸೇವೆ ಆರಂಭವಾಗುವುದರಿಂದ ಇಲ್ಲಿನ ಜನರಿಗೆ ಸಾಕಷ್ಟು ಅನುಕೂಲವಾಗಿ ಪ್ರವಾಸೋದ್ಯಮ, ವ್ಯಾಪಾರ ಚಟುವಟಿಕೆಗಳು ವೃದ್ಧಿಸಲಿವೆ ಎನ್ನುವುದು ಇದರ ಮುಖ್ಯ ಕಾರಣವಾಗಿದೆ.
ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ವೈಶಿಷ್ಟತೆಯೇನೆಂದರೆ ಇವು ಸುರಕ್ಷತೆಯೊಂದಿಗೆ ಗಂಟೆಗೆ 130 ಕಿ.ಮೀ ಗರಿಷ್ಠ ವೇಗದಲ್ಲಿ ಸಂಚಾರ ನಡೆಸುವ ಸಾಮರ್ಥ್ಯ ಹೊಂದಿವೆ. ಈ ರೈಲುಗಳು ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿದ್ದು, ಆರಾಮದಾಯ ಆಸನ ವ್ಯವಸ್ಥೆ, ಸಂಪೂರ್ಣ ಹವಾ ನಿಯಂತ್ರಿತ ಬೋಗಿಗಳು, ವೈಫೈ, ಜೈವಿಕ ಶೌಚಾಲಯ, ಅಗ್ನಿ ನಿರೋಧಕ ಸಾಧನಗಳು ಮತ್ತು ಸ್ವಯಂ ಚಾಲಿತ ಬಾಗಿಲುಗಳನ್ನು ಹೊಂದಿವೆ.
ಈ ಸುದ್ದಿ ಓದಿ:- ಚಿನ್ನಾಭರಣಗಳನ್ನು ಖರೀದಿಸುವ ಮುನ್ನ ಈ ಸಂಗತಿಗಳನ್ನು ತಿಳಿದುಕೊಂಡಿರಬೇಕು, ಇಲ್ಲದಿದ್ರೆ ಮೋಸ ಹೋಗೋದು ಗ್ಯಾರಂಟಿ.!
ರೈಲ್ವೆ ಇಲಾಖೆಯು ಪ್ರಯಾಣಿಕರಿಗೆ ಕಡಿಮೆ ಖರ್ಚಿನಲ್ಲಿ ಉತ್ತಮ ಸೇವೆ ಒದಗಿಸಲು ಇತ್ತೀಚೆಗೆ ಅಮೃತ್ ಭಾರತ್ (Amrit Bharat) ರೈಲುಗಳನ್ನು ಕೂಡ ಆರಂಭಿಸಿದೆ. ಪ್ರಧಾನಿ ನರೇಂದ್ರ ಮೋದಿಯವರು (PM Narendra Modi) ಡಿಸೆಂಬರ್ 30 ರಂದು ಅಯೋಧ್ಯೆಯ ರೈಲು ನಿಲ್ದಾಣದಲ್ಲಿ ಮಾಲ್ಡಾ – ಬೆಂಗಳೂರು ಮತ್ತು ದೆಹಲಿ – ಅಯೋಧ್ಯೆ – ದರ್ಬಂಗಾ ಮಧ್ಯೆ ಸಂಚರಿಸುವ 2 ಅಮೃತ್ ಭಾರತ್ ರೈಲುಗಳಿಗೆ ಹಸಿರು ನಿಶಾನೆ ತೋರಿಸಿದರು.