5 ಲಕ್ಷ ಉಚಿತ.! ಆಯುಷ್ಮಾನ್ ಕಾರ್ಡ್ ಮೂಲಕ ಯಾವ ಯಾವ ಖಾಯಿಲೆಗೆ ಉಚಿತ ಚಿಕಿತ್ಸೆ ಪಡೆಯಬಹುದು ಎಂಬ ಸಂಪೂರ್ಣ ಮಾಹಿತಿ.!

 

WhatsApp Group Join Now
Telegram Group Join Now

ಕಳೆದ ವಾರವಷ್ಟೇ ಮಾನ್ಯ ಆರೋಗ್ಯ ಸಚಿವರಾದ ದಿನೇಶ್ ಗುಂಡುರಾವ್ (Health Minister Dinesh Gundurao) ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಕೂಡ ರಾಜ್ಯ ಸರ್ಕಾರದ ಈ ಕಾರ್ಯಕ್ರಮದ ವಿಚಾರವನ್ನು ಹಂಚಿಕೊಂಡಿದ್ದರು. ಅದೇನೆಂದರೆ, ರಾಜ್ಯ  ಸರ್ಕಾರವು ರಾಜ್ಯದ ಜನತೆಗಾಗಿ ಆರೋಗ್ಯ ಕರ್ನಾಟಕ (Arogya Karnataka) ಎಂಬ ಸಾರ್ವತ್ರಿಕ ಆರೋಗ್ಯ ರಕ್ಷಣಾ ಯೋಜನೆಯನ್ನು 2018 ರಲ್ಲಿ ಜಾರಿಗೆ ತಂದಿತ್ತು, ನಂತರ ಭಾರತ ಸರ್ಕಾರವು ಕೂಡ ಆಯುಷ್ಮಾನ್ ಭಾರತ್ ಯೋಜನೆಯನ್ನು (Ayushman Bharath Scheme) ಜಾರಿಗೊಳಿಸಿರುತ್ತು.

ಈ ಎರಡೂ ಯೋಜನೆಗಳ ಉದ್ದೇಶ, ವ್ಯಾಪ್ತಿಗಳಲ್ಲಿ ಸಾಮ್ಯತೆ ಇದ್ದ ಕಾರಣ ಈಗ ರಾಜ್ಯ ಸರ್ಕಾರವು ಎರಡೂ ಯೋಜನೆಗಳನ್ನು ಸಂಯೋಜಿಸಿ ಆಯುಷ್ಮಾನ್ ಭಾರತ್- ಆರೋಗ್ಯ ಕರ್ನಾಟಕ  (AB-ARK) ಎಂದು ಮರುನಾಮಕರಿಸಿ ಈ ಯೋಜನೆ ಮೂಲಕ ಸಿಗುತ್ತಿದ್ದ ಸೌಲಭ್ಯಗಳನ್ನು ಇನ್ನಷ್ಟು ಹೆಚ್ಚಿಸಿದೆ. ಮತ್ತು ಸ್ಮಾರ್ಟ್ ಆಯುಷ್ಮಾನ್ ಕಾರ್ಡ್ ಗಳನ್ನು ವಿತರಣೆ ಕೂಡ ಮಾಡುತ್ತಿದೆ ಶೀಘ್ರದಲ್ಲಿ ರಾಜ್ಯದ ಜನತೆ ಅದನ್ನು ಪಡೆದುಕೊಳ್ಳಬೇಕು ಎಂದು ಮಾಹಿತಿ ಹಂಚಿಕೊಂಡಿದ್ದರು.

ಈ ಆಯುಷ್ಮಾನ್ ಕಾರ್ಡ್ ನಿಂದ ಯಾವೆಲ್ಲ ಚಿಕಿತ್ಸೆ ಪಡೆಯಬಹುದು ಎನ್ನುವ ವಿಚಾರವನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ. BPL ಪಡಿತರ ಕಾರ್ಡ್ ಹೊಂದಿರುವ ವ್ಯಕ್ತಿ ಹಾಗೂ ಆತನ ಕುಟುಂಬವು ಮತ್ತು ರಾಷ್ರ್ಟೀಯ ಸ್ವಾಸ್ಥ್ಯ  ಭೀಮಾ ಯೋಜನೆಯಲ್ಲಿ ನೋಂದಾಯಿತವಾಗಿರುವ ಫಲಾನುವಿಯು ಒಂದು ವರ್ಷಕ್ಕೆ ರೂ 5.00 ಲಕ್ಷಗಳವರೆಗೆ
ಉಚಿತ ಚಿಕಿತ್ಸೆ  ಪಡೆಯಬಹುದಾಗಿದೆ.

ಜೊತೆಗೆ APL ಕಾರ್ಡುದಾರರು ಪಾವತಿ ಆಧಾರದ ಮೇಲೆ
ಸರ್ಕಾರಿ ಪ್ಯಾಕೇಜ್ ದರದ 30% ರಷ್ಟು ಚಿಕಿತ್ಸಾ ವೆಚ್ಚದ ಅನುಕೂಲತೆ ನೀಡಿ ಈ ವಿಚಾರದಲ್ಲೂ ಕೂಡ ಕರ್ನಾಟಕವೇ ಪ್ರಥಮ ಎನಿಸಿದೆ. APL ಕಾರ್ಡ್ ದಾರರಿಗೆ ವಾರ್ಷಿಕ ಮಿತಿ ಪ್ರತಿ ಕುಟುಂಬಕ್ಕೆ ರೂ.1.50 ಲಕ್ಷ ಇರುತ್ತದೆ. ಪಡಿತರ ಚೀಟಿ ಮತ್ತು ಆಧಾರ್ ಕಾರ್ಡ್  ಮತ್ತು ಆಯುಷ್ಮಾನ್ ಸ್ಮಾರ್ಟ್ ಕಾರ್ಡ್ ಹಾಜರುಪಡಿಸಿ  ಚಿಕಿತ್ಸೆಗಳನ್ನು ಪಡೆದುಕೊಳ್ಳಬಹುದು.

ಚಿಕಿತ್ಸೆಗಳು:-

* ಸಾಮಾನ್ಯ ದ್ವಿತೀಯ ಹಂತದ 291 ಚಿಕಿತ್ಸಾ ವಿಧಾನಗಳು
* ಕ್ಲಿಷ್ಟಕರ ದ್ವಿತೀಯ 254 ಚಿಕಿತ್ಸಾ ವಿಧಾನಗಳು
* ಹೃದಯರೋಗ
*  ಕ್ಯಾನ್ಸರ್
* ನರರೋಗ
* ಮೂತ್ರಪಿಂಡದ ಕಾಯಿಲೆ
* ನವಜಾತ ಶಿಶುಗಳ ಕಾಯಿಲೆ
* ಡೆಂಗ್ಯೂ
* ಚಿಕನ್ ಗುನ್ಯಾ
* ಮಲೇರಿಯಾ
* ಡಯಾಲಿಸಿಸ್
* ಮೊಣಕಾಲು ಸೊಂಟದ ಕಸಿ
* ಕಣ್ಣಿನ ಪೊರೆ.

ಮುಂತಾದ ತೃತೀಯ ಹಂತದ 900 ಚಿಕಿತ್ಸಾ ವಿಧಾನಗಳು ಹಾಗೂ 16 ತುರ್ತು ಚಿಕಿತ್ಸೆಗಳು ಮತ್ತು 36 ಉಪಚಿಕಿತ್ಸಾ ವಿಧಾನಗಳು ಸೇರಿ ಒಟ್ಟು 1650 ಚಿಕಿತ್ಸೆಗಳು ಲಭ್ಯವಿದೆ 169 ತುರ್ತು  ಚಿಕಿತ್ಸೆಗಳಿಗೆ ಯಾವುದೇ ರೆಫರಲ್ ಇಲ್ಲದೆ ನೇರವಾಗಿ ನೋಂದಾಯಿತ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಬಹುದು ಎನ್ನುವುದು ರಾಜ್ಯದ ಬಡ ಜನರ ಪಾಲಿಗೆ ಬಹಳ ಅನುಕೂಲಕರವಾಗಿದೆ.

ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯ (AB-ARK) ಕಾರ್ಡ್ ಪಡೆಯುವ ವಿಧಾನ:-

* ಸಾರ್ವಜನಿಕ ಆರೋಗ್ಯ ಸಂಸ್ಥೆಗಳಲ್ಲಿ ರೂ.10 ಶುಲ್ಕದೊಂದಿಗೆ ನೀಡಲಾಗುತ್ತದೆ.
* ಬೆಂಗಳೂರು ಒನ್, ಕರ್ನಾಟಕ ಒನ್ ಮತ್ತು ಸೇವಾ ಸೀಂಧು ಕೇಂದ್ರಗಳಲ್ಲಿ ರೂ. 35  ಶುಲ್ಕದೊಂದಿಗೆ ಕಾರ್ಡ್ ನೀಡಲಾಗುತ್ತದೆ.*  ಆಧಾರ್ ಕಾರ್ಡ್ ಮತ್ತು ಪಡಿತರ ಕಾರ್ಡ್ ಗಳನ್ನು ಹಾಜರು ಪಡಿಸಿ ಈ ಆರೋಗ್ಯ ಕಾರ್ಡ್ ಪಡೆಯಬಹುದು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

* ಹತ್ತಿರದ ಸರ್ಕಾರಿ ಆಸ್ಪತ್ರೆ, ತಾಲೂಕು ಆಸ್ಪತ್ರೆಗಳು
*  ಜಿಲ್ಲಾ ಆಸ್ಪತ್ರೆಗಳು
* ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗಳು,
* ಆಸ್ಪತ್ರೆಗಳಲ್ಲಿನ ಆರೋಗ್ಯ ಮಿತ್ರರು
* ಆರೋಗ್ಯ ಸಹಾಯವಾಣಿ 104,
ಟೋಲ್ ಫ್ರೀ ಸಂಖ್ಯೆ: 1800 425 8330

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now