ರೈತರಿಗೆ ಗುಡ್ ನ್ಯೂಸ್ ಟ್ರಾಕ್ಟರ್ ಖರೀದಿಗೆ ಸರ್ಕಾರದಿಂದ 5 ಲಕ್ಷ ಸಹಾಯಧನ, ಮೊಬೈಲ್ ನಿಂದಲೇ ಅರ್ಜಿ ಸಲ್ಲಿಸಿ.!

 

WhatsApp Group Join Now
Telegram Group Join Now

ಕೃಷಿ ದೇಶದ ಆರ್ಥಿಕತೆಯ ಬೆನ್ನೆಲುಬು ರೈತನು ದೇಶಕ್ಕೆಲ್ಲಾ ಅನ್ನ ನೀಡುವಂತಹ ಅನ್ನದಾತ. ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಕೃಷಿ ಕ್ಷೇತ್ರವು ಎಲ್ಲಾ ಕ್ಷೇತ್ರಗಳಿಂದಲೂ ಕೂಡ ಹೆಚ್ಚು ಪ್ರಾಮುಖ್ಯವಾದದ್ದು ಹಾಗಾಗಿ ಸರ್ಕಾರಗಳು ಕೂಡ ಕೃಷಿ ಕ್ಷೇತ್ರಕ್ಕೆ ಹೆಚ್ಚು ಮಹತ್ವ ನೀಡುತ್ತವೆ. ಪ್ರತಿಬಾರಿ ಬಜೆಟ್ ಮಂಡನೆಯಾದಾಗಲೂ ಕೂಡ ಕೃಷಿ ವಲಯಕ್ಕಾಗಿಯೇ ಒಂದು ದೊಡ್ಡ ಮೊತ್ತದ ಹಣವನ್ನು ಮೀಸಲಿಡಲಾಗಿರುತ್ತದೆ.

ಕೇಂದ್ರ ಸರ್ಕಾರದಿಂದ ಹಾಗೂ ರಾಜ್ಯ ಸರ್ಕಾರದಿಂದಲೂ ಕೂಡ ಪ್ರತ್ಯೇಕ ಯೋಜನೆಗಳು ರೈತನಿಗಾಗಿ ಜಾರಿಗೆ ಬರುತ್ತಿವೆ. ಬಿತ್ತನೆಬೀಜ, ರಸಗೊಬ್ಬರಗಳ ಖರೀದಿಯಲ್ಲಿ ಸಬ್ಸಿಡಿ ವಿಷಯದಿಂದ ಹಿಡಿದು ಆತನಿಗೆ ಬ್ಯಾಂಕ್ ನಲ್ಲಿ ಬಡ್ಡಿ ರಹಿತ ಸಾಲ ನೀಡುವುದು ಇನ್ನು ಮುಂತಾದ ಅನುಕೂಲತೆ ಮಾಡಿಕೊಟ್ಟು ಕೃಷಿ ಕ್ಷೇತ್ರವನ್ನು ಕೂಡ ಅಭಿವೃದ್ಧಿಪಡಿಸಲು ಶ್ರಮಿಸುತ್ತಿದೆ.

ಕೃಷಿಯಲ್ಲಿ ಆಧುನಿಕತೆ ಅಳವಡಿಸಿಕೊಂಡರೆ ರೈತ ಕಡಿಮೆ ಸಮಯದಲ್ಲಿ ಕಡಿಮೆ ಶ್ರಮದಲ್ಲಿ ಹೆಚ್ಚು ಲಾಭ ಮಾಡಬಹುದು ಹಾಗಾಗಿ ಸಾಧ್ಯವಾದಷ್ಟು ತಂತ್ರಜ್ಞಾನ ಹಾಗೂ ಯಂತ್ರೋಪಕರಣಗಳ ಬಳಕೆ ಕೃಷಿ ಕ್ಷೇತ್ರದಲ್ಲಿ ಹೆಚ್ಚಾಗಿಸಲು ಪ್ರಯೋಗಗಳು ನಡೆಯುತ್ತಲೇ ಇದೆ. ಈಗಾಗಲೇ ದೇಶದಲ್ಲಿ ಟ್ರಾಕ್ಟರ್ ಕೃಷಿ ಕ್ಷೇತ್ರಕ್ಕೆ ಎಷ್ಟು ಅನಿವಾರ್ಯವಾಗಿ ಹೋಗಿದೆ ಎಂದರೆ ಕೃಷಿ ಮಾಡುವ ಮುಂಚೆ ಜಮೀನನ್ನು ಉಳಿಮೆ ಮಾಡುವ ಕೆಲಸದಿಂದ ಹಿಡಿದು ಬೆಳೆದ ಬೆಳೆಯನ್ನು ರೈತ ಸಾಗಿಸುವವರೆಗೂ ಕೂಡ ಡಾಕ್ಟರ್ ನ ಅನುಕೂಲತೆ ಆತನಿಗೆ ಬೇಕೇ ಬೇಕು.

ಇಷ್ಟು ಪ್ರಮುಖ ಸಾಧನವಾಗಿರುವ ಟ್ರಾಕ್ಟರ್ ಅನ್ನು ಪ್ರತಿ ರೈತನು ಹೊಂದಬೇಕು ಎನ್ನುವ ಉದ್ದೇಶದಿಂದ ಕೇಂದ್ರ ಸರ್ಕಾರವು ಪಿಎಂ ಕಿಸಾನ್ ಟ್ರಾಕ್ಟರ್ ಯೋಜನೆ ಎನ್ನುವ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆ ಮೂಲಕ ರೈತರು ಟ್ರಾಕ್ಟರ್ ಖರೀದಿಗೆ 50%ರಷ್ಟು ಸಬ್ಸಿಡಿ ಪಡೆಯಬಹುದು. ಈ ಯೋಜನೆಗೆ ಅರ್ಜಿ ಸಲ್ಲಿಸಲು ಯಾರೆಲ್ಲ ಅರ್ಹರು, ಯಾವ ರೀತಿ ಅರ್ಜಿ ಸಲ್ಲಿಸಬೇಕು ಎನ್ನುವ ವಿವರವನ್ನು ಈ ಅಂಕಣದಲ್ಲಿ ತಿಳಿಸುತ್ತಿದ್ದೇವೆ.

ಪಿಎಂ ಕಿಸಾನ್ ಟ್ರಾಕ್ಟರ್ ಯೋಜನೆ ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು:-
● ಭಾರತೀಯನಾಗಿರುವ ರೈತನಿಗೆ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ
● ಪಿ.ಎಂ ಕಿಸಾನ್ ಟ್ಯಾಕ್ಟರ್ ಯೋಜನೆಗೆ ಅರ್ಜಿ ಸಲ್ಲಿಸುವ ಫಲಾನುಭವಿ ಹೆಸರಿನಲ್ಲಿ ಕೃಷಿ ಭೂಮಿ ಇರಬೇಕು, ಆತನು ಕೃಷಿಯಲ್ಲಿ ತೊಡಗಿಕೊಂಡಿರಬೇಕು
● 15 ವರ್ಷದಿಂದ 60 ವರ್ಷ ವಯಸ್ಸಿನ ಒಳಗಿನ ರೈತರು ಮಾತ್ರ ಅರ್ಜಿ ಸಲ್ಲಿಸಬಹುದು.
● ಅರ್ಜಿ ಸಲ್ಲಿಸುವ ರೈತನ ಕುಟುಂಬದ ಆದಾಯ ವಾರ್ಷಿಕವಾಗಿ ಒಂದೂವರೆ ಲಕ್ಷ ಮೀರಿರಬಾರದು
● ಈಗಾಗಲೇ ಅವರು ಟ್ರ್ಯಾಕ್ಟರ್ ಹೊಂದಿದ್ದರೆ ಅಂಥವರು ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುವುದಿಲ್ಲ.

ಪಿ.ಎಂ ಕಿಸಾನ್ ಟ್ರಾಕ್ಟರ್ ಯೋಜನೆಗೆ ಅರ್ಜಿ ಸಲ್ಲಿಸುವ ವಿಧಾನ:-
● ಆನ್ಲೈನ್ ಮೂಲಕ ಮತ್ತು ಆಫ್ಲೈನ್ ಮೂಲಕ ಕೂಡ ಈ ಯೋಜನೆಗೆ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಲಾಗಿದೆ.
ಆನ್ಲೈನ್ ಅಲ್ಲಿ ಅರ್ಜಿ ಸಲ್ಲಿಸುವವರು pmkisan.gov.in ಈ ಅಧಿಕೃತ ವೆಬ್ ಸೈಟ್ ಗೆ ಭೇಟಿಕೊಟ್ಟು ಅಜ್ಜಿ ಫಾರಂ ಭರ್ತಿ ಮಾಡಿ ಪೂರಕ ದಾಖಲೆಗಳನ್ನು ಸ್ಕ್ಯಾನ್ ಮಾಡಿ ಅಪ್ಲೋಡ್ ಮಾಡುವ ಮೂಲಕ ಮೊಬೈಲ್ ಅಥವಾ ಪರ್ಸನಲ್ ಕಂಪ್ಯೂಟರ್ನಲ್ಲಿ ಅರ್ಜಿ ಸಲ್ಲಿಸಬಹುದ.
● ಹತ್ತಿರದಲ್ಲಿರುವ CSC ಕೇಂದ್ರಕ್ಕೆ ಭೇಟಿಕೊಟ್ಟು ಈ ಬಗ್ಗೆ ಮಾಹಿತಿ ತಿಳಿದುಕೊಂಡು ಅರ್ಜಿ ಸಲ್ಲಿಸಬಹುದು.
● ಆಫ್ಲೈನಲ್ಲಿ ಅರ್ಜಿ ಸಲ್ಲಿಸುವವರು ಹತ್ತಿರದಲ್ಲಿರುವ ರೈತ ಸಂಪರ್ಕ ಕೇಂದ್ರದಲ್ಲಿ ಹೋಗಿ ವಿಚಾರಿಸಬಹುದು.
● ಅರ್ಜಿ ಸಲ್ಲಿಕೆ ಯಶಸ್ವಿಯಾಗಿ, ಅನುಮೋದನೆಯಾದರೆ ನಿಮ್ಮ ಖಾತೆಗೆ ಸಬ್ಸಿಡಿ ಹಣ ಜಮೆ ಆಗುತ್ತದೆ.

ಬೇಕಾಗುವ ದಾಖಲೆಗಳು:-
● ರೈತನ ಆಧಾರ್ ಕಾರ್ಡ್
● ಜಮೀನಿನ ಪಹಣಿ ಪತ್ರ
● ಬ್ಯಾಂಕ್ ಪಾಸ್ ಬುಕ್ ವಿವರ
● ಮೊಬೈಲ್ ಸಂಖ್ಯೆ
● ಆದಾಯ ಪ್ರಮಾಣ ಪತ್ರ
● ಟ್ರಾಕ್ಟರ್ ಖರೀದಿ ಮಾಡಿರುವ ದಾಖಲೆಗಳು
● ಇನ್ನಿತರ ಪ್ರಮುಖ ದಾಖಲೆಗಳು.

Leave a Comment

ಸರ್ಕಾರಿ ಯೋಜನೆ, ಸರ್ಕಾರಿ ಉದ್ಯೋಗಗಳು,ಮತ್ತು ಖಾಸಗಿ ಕಂಪನಿ ಉದ್ಯೋಗದ ಬಗ್ಗೆ ದೈನಂದಿನ ಮಾಹಿತಿಯನ್ನು ಪಡೆಯಲು ನಮ್ಮ Kannada Trend News WhatsApp ಗ್ರೂಪ್ ಮತ್ತು ಟೆಲಿಗ್ರಾಮ್ ಚಾನಲ್‌ಗೆ ಜಾಯಿನ್ ಆಗಿರಿ
WhatsApp Group Join Now
Telegram Group Join Now